Posts

Showing posts from December, 2018

ಪುಸ್ತಕವೆಂಬ ಪಂಚಾಮ್ರುತ

Image
ದೆಶ ಸುತ್ತಬೇಕು ಕೋಶ ಓದಬೇಕು ಅಂತ ಒಂದ್ ಮಾತಿದೆ, ಏಕೆ ಗೊತಾ ? ನಾವು ಇದ್ದಲ್ಲೆ ಇದ್ರೆ ಒಂದೆ ಜನಾಂಗ, ಒಂದೆ ಸಮಾಜ, ಒಂದೆ ಇತಿಹಾಸ, ಒಂದೆ ಆಚರಣೆ, ಒಂದೆ ಭಾಷೆ ಒಂದೆ ವೆಷದ ಕುರಿತು ಅರಿವಿರ್ತದೆ. ಆದ್ರೆ ದೇಶ ಸುತ್ತಿದ್ರೆ ಹೋಸ ಜನ, ಹೋಸ ಭಾಷೆ ಹೋಸ ವೇಷ, ಹೋಸ ಇತಿಹಾಸ ಹೋಸ ಆಚರಣೆ, ಒಂದೆ ಮಾತಲ್ಲಿ ಹೇಳೊದಾದ್ರೆ ನಾವು ಹೋಸ ಜಗತ್ತಿಗೆ ತೆರೆದುಕೋಳ್ತಿವಿ. ದೇಶ ಸುತ್ತೋದು ಎಲ್ರಿಗೂ ಸಾದ್ಯವಾಗ್ಲಿಕ್ಕಿಲ್ಲ, ಯಾಕಂದ್ರೆ ಇಚ್ಚಾಶಕ್ತಿಯ ಕೊರತೆ ಇರಬಹುದು, ಆರೊಗ್ಯ ಸಮಸ್ಯ ಇರಬಹುದು, ಹಣಕಾಸಿನ ತೊಂದರೆ ಇರಬಹುದು, ಇಲ್ಲ ಮನೆಯಲ್ಲಿ ಒಪ್ಪದಿರಬಹುದು. ಆದ್ರೆ ಪುಸ್ತಕ ಓದೊಕೆ ಎಲ್ಲರಿಂದ ಸಾದ್ಯವಿದೆ, ಓದೊ ಹವ್ಯಾಸ ಒಂದಿದ್ರೆ. ದೇಶ ಸುತ್ತೋದ್ರಿಂದ ಆಗುವ ಎಲ್ಲ ಉಪಗೋಗಗಳು ವಿವಿಧ ಭಾಗಗಳ, ಹಲವಾರು ಲೇಖಕರ ವಿಧ ವಿಧ ಪುಸ್ತಕ ಓದೊದ್ರಿಂದ ಆಗ್ತವೆ. ಒಂದೊಳ್ಳೆ ಪುಸ್ತಕ ಜೊತೆಯಿದ್ರೆ ಒಬ ಒಳ್ಳೆ ಗೆಳೆಯ ಜೊತೆಯಿದ್ದ ಹಾಗಂತೆ.ಹೇಳಿದ್ದೆ ಹೇಳದ್ರೆ ಒಬ್ಬ ಗೆಳೆಯ ಬೋರ್ ಆಗಬಹುದು, ಮಾತಡಿದ್ದೆ ಮಾತಾಡದ್ರೆ ಒಬ್ಬ ಗೆಳತಿ ಬೋರ್ ಆಗಬಹುದು. ಹೇಗೆ ಗೊತ್ತಾ ? ಒಬ್ಬಳು ಸುಂದರಿಯ ಮೇಲೆ ಲವ್ವಾಗಿರುತ್ತದೆ. ಮೊದಲಿನ ಹಾಗೆ ಚಿಟಿ ಬರೆದು ಪುಟ್ಟ ಮಕ್ಕಳ ಕೈಗೆ ಕೊಟ್ಟು, ಉತ್ತರಕ್ಕಾಗಿ ದಿನಗಟ್ಟಲೆ ಕಾಯುವ ಜಮಾನ ಇದಲ್ಲ. 4ಜಿ ಜನರೇಶನ್ ತುಂಬಾ ಸ್ಪೀಡ್. ಹೊತ್ತು ನೋಡಿ ಹತ್ತು ನಂಬರ್ ಡೈಲ್ ಮಾಡಿದರೆ  ಸಾಕು, ಅವಳ ಧ್ವನಿ ನಿಮ್ಮ ಕಿವಿಗೆ ನಿಮ್ಮ ಧ್ವನಿ ಅವಳ ಕಿವಿಗೆ. ಆ