Posts

Showing posts from May, 2021

ಕೊಬ್ಬರಿ ಉಂಡಿ ಕತಿ

ಆಗ ನಾನು ಆರನೇ ತರಗತಿ ಯಲ್ಲಿ ಓದುತ್ತಿರಬಹುದು. ವಿಜಯಪುರದ ಹರಳಯ್ಯ ಹಾಸ್ಟೆಲ್ ನಲ್ಲಿದ್ದೆ. ಊರಿಂದ ಯಾರಾದರೂ ಬಂದರೆ ಬುತ್ತಿ ಕಟ್ಟಿ ಕಳಿಸೋರು. ರೊಟ್ಟಿ ಪಲ್ಯ, ಉಂಡಿ ಚುಡಾ ಹೀಗೆ ಚಿಕ್ ಮಕ್ಕಳಿಗೆ ಏನ್ ಬೇಕು ಅದೆಲ್ಲ. ಅದರಲ್ಲಿ ನಮ್ ಮಮ್ಮಿ ಕೊಬ್ಬರಿ ಉಂಡಿ ಮಾಡ್ತಿದ್ರು ಹಾಗೆ ಅದು ನನ್ ಫೆವರಿಟ್ ಕೂಡ. ಮನೆಯಲ್ಲಿ ಸ್ವಲ್ಪ ಕೊಬ್ಬರಿ ಜಮಾ ಆದರೆ ಅದನ್ನೇ ಕುಟ್ಟಿ ಸಕ್ಕರೆ ಬೆರೆಸಿ, ಉಂಡಿ ಕಟ್ಟಿ ಕಳಿಸೋರು. ಅವತ್ತು ಸಂಜೆ ಸುಮಾರು ಐದು ಗಂಟೆ ಆಗಿರಬಹುದು ಹಾಸ್ಟೆಲ್ ನಲ್ಲಿ ಒಂದು ಉಂಡಿ ತಗೊಂಡು ತಿಂತಾ ಕೂತಿದ್ದೆ. ನಮ್ಮೂರಿನವನೆ ಆದ ಒಬ್ಬ ಹುಡುಗ ನೋಡಿ ಬೇಡಿದ. ಅರ್ಧ ಉಂಡಿ ಕೊಟ್ಟೆ, ತಿಂದ. ಆತನಿಗೂ ರುಚಿ ಅನಿಸಿರಬಹು, ಆತ ನನ್ ಉಂಡಿ ಖರೀದಿಸಲು ಮುಂದಾದ. Sorry ಆತನ ಹೆಸರು ನೆನಪಿಲ್ಲ, ಬಟ್ ಅವನ ಅಡ್ಡೆ ಹೆಸರು ಬಾಳಗಿ ಅನ್ಸತ್ತೆ. ಆಗ್ ಚಿಕ್ ಮಕ್ಳು ನಾವು, ವೆವಹಾರ ಮಾಡೋಕೆ ದುಡ್ಡೇಲ್ಲಿಂದ ಬರತ್ತೆ. ಆತನ ಹತ್ರ ಒಂದು ಚಂದನೆಯ ಸ್ಕೂಲ್ ಬ್ಯಾಗ್ ಇತ್ತು, ನನಗೆ ಆಗ್ ಬ್ಯಾಗ್ ಇರಲಿಲ್ಲ, ಪ್ಲಾಸ್ಟಿಕ್ ಚೀಲದಲ್ಲಿ ಪುಸ್ತಕ್ ಇಡ್ತಿದ್ದೆ. ಆಗ ಅವನು, ನಿನಗೆ ನನ್ ಬ್ಯಾಗ್ ಕೊಡ್ತೀನಿ, ನಿನ್ನ ಎಲ್ಲ ಕೊಬ್ಬರಿ ಉಂಡಿ ಕೊಡ್ತೀಯಾ ಅಂದ. ತಕ್ಷಣಕ್ಕೆ ನನಗೆ ಖುಷಿ ಆಯ್ತು. ಬಡೂರು ನಾವು, ಆಗ ದುಡ್ಡ ಕೊಟ್ಟು ಅಂತ ಬ್ಯಾಗ್ ತಾಳ್ಳೋಕೆ ಆಗ್ತಿರಲಿಲ್ಲ, ಸಿಕ್ಕಿದ್ದೇ ಚಾನ್ಸು ಅಂತ ಹುಂ ಅಂದೆ. ನನ್ ಹತ್ರ ಐದಾರು ಉಂಡಿ ಇದ್ದು ಕೊಟ್ಟೆ, ಆತ ತನ್ನ ಬ್ಯಾಗ್ ಖಾಲಿ ಮ