Posts

Showing posts from 2019

ಸ್ಟೂಡೆಂಟ್ ಲೈಫ್ ಇಜ್ ಗೋಲ್ಡನ್ ಲೈಫ್ ಅಂತೆ ನಿಜಾನಾ ??

 ದಿನಾಲೂ ನಮ್ಮ ಮಾತಿನ ಮದ್ಯ ಅದೆಷ್ಟೊ ಗಾದೆ ಮಾತುಗಳು ಮತ್ತು ನಾಣ್ಣುಡಿಗಳು ಹರಿದಾಡ್ತವೆ. ಕೆಲವೋಂದು ಪ್ರಾಸಬದ್ದವಾಗಿ ಚಂದ ಇರ್ತವೆ, ಇನ್ನೂ ಕೆಲವೋಂದು ಅವುಗಳ ಅರ್ಥದಿಂದ ಚಂದ ಇರ್ತವೆ. ಇನ್ನ್ ಕೆಲವೋಂದು ಫೆಮಸ್ಸಾದ ವ್ಯಕ್ತಿ ಬಾಯಿಂದ ಬಂದಿದುದರ ಪರಿಣಾಮವಾಗಿ ಚಂದ ಅನಿಸ್ತವೆ. ಆದ್ರೆ ಅವುಗಳಲ್ಲಿನ ಸತ್ಯಾಂಶ ಎಷ್ಟು ಅನ್ನೊದನ್ನ ನಾವ್ಯಾರು ನೋಡಲ್ಲ. ಹೀಗೆ ನನಗೆ ಸ್ವಲ್ಪ ಜಾಸ್ತಿ ನೆ ಕಾಡಿದ್ದು ಅಂದ್ರೆ ಈ student life is golden life ಅನ್ನೊ ಸಾಲು. ಯಾಕಾಗಿ ಹೀಗ್ ಅಂದ್ರು ಅಂತ ಗೊತ್ತಿಲ್ಲ. ಒಕೆ, ಯಾವುದೆ ಚಿಂತೆ ಇರಲ್ಲ ,ತರೊದು ಬರೊದು ಮನೆ ಉಸಾಬರಿ ಏನೂ ಇರಲ್ಲ . ಬರಿ ಊಣ್ಣೋದು ತಿನ್ನೋದು ಅಭ್ಯಾಸ ಮಾಡೋದು, ಆಠ ಆಡೋದು  ಅಷ್ಟೆ ಇರ್ತದಲ್ಲ ಹೀಗಾಗಿ ವಿದ್ಯಾರ್ಥಿ ಜೀವನವನ್ನ ಬಂಗಾರದ ಜೀವನಕ್ಕೆ ಹೋಲಿಸಿ ಮಾತಾಡಿರಬಹುದು. ಅದು ಯಾವಾಗ ನೀಜ ಅಂದ್ರೆ,,,  ಬೆಳಗ್ಗೆ ಅಮ್ಮ ಎಬ್ಬಿಸಿ, ಬ್ರಶ್ ಮಾಡಿಸಿ, ಬಿಸಿನೀರಿಂದ ಜಳಕ ಮಾಡಿಸಿ, ತಲೆ ಬಾಚಿ, ಇಷ್ಟವಾದ ತಿಂಡಿ ತಿನಿಸಿ, ಒಲ್ಲೆ ಒಲ್ಲೆ ಅಂದ್ರೂ ಮೇಲೆ ಒಂದ್ ಗ್ಲಾಸ್ ಹಾಲು ಕುಡಿಸಿ, ಮದ್ಯಾಹ್ನ್ ಊಠಕ್ಕೆ ಡಬ್ಬಿ ಕಟ್ಟಿ, ವ್ಯಾನ್ ನಲ್ಲಿ ಕೂಡಿಸಿ ಟಾಟಾ ಮಾಡಿ ಸ್ಕೂಲ್ ಗೆ ಕಳಿಸಿದಾಗ. ಮತ್ತೆ ಸ್ಕೂಲ್ ನಲ್ಲಿ ಮಿಸ್ಸ್ ಹೇಳೊ ಪಾಠ ಸಲಿಸಾಗಿ ಅರ್ಥ ಆಗಿ , ಪ್ರತಿ ಪರಿಕ್ಷೆ ಯಲ್ಲಿ ಉತ್ತಮ ಶೇಣಿಯಲ್ಲಿ ಪಾಸಾದಾಗ. ಹತ್ತನೆ ತರಗತಿಯಲ್ಲಿ ಉತ್ತಮ ಮಾರ್ಕ್ಸ್ ಬಂದಾಗ, ಇಷ್ಟವಾದ ಕಾಲೇಜ್ ನಲ್ಲಿ ಇಷ್ಟವಾ

ಸಿಂಪತಿಯ ಸ್ನೇಹ ಬೇಡ

ಮೊನ್ನೆ ಅಷ್ಟೆ ಎಲ್ಲರೂ ಸ್ನೇಹಿತರ ದಿನಾಚರಣೆ ಆಚರಿಸಿದಿರ. ಹತ್ರ ಇರೊರನ್ನ ಮೀಟ್ ಆಗಿ , ದೂರ ಇರೋರನ್ನ ದೂರವಾಣಿ ಅಥವ ಸಂದೇಶ ಮೂಲಕ ಶುಭಕೋರಿ ಆನಂದಿಸಿದಿರಿ. ನಿಮ್ಮ ಸ್ನೇಹ ಹೀಗೆ ಚಿರವಾಗಿರಲಿ ಎನ್ನುತ್ತ  ಸ್ನೇಹದ ಕುರಿತಾಗಿ ಒಂದೆರಡು ಮಾತಾಡಬೇಕೆನಿಸಿತು,  ಕೆಲ ವಿಷಯ ನಿಮ್ಮೊಂದಿಗೆ ಹಂಚಿಕೊಬೇಕೆನಿಸಿತು ಸೊ ಬೆಳೆಗ್ಗೆ ನೆ ಲ್ಯಾಪ್ ಟಾಪ್ ಆನ್ ಮಾಡ್ಕೊಂಡು ಕೂತ್ ಬಿಟ್ಟಿದಿನಿ. ಓಕೆ, ವಿಷಕ್ ಬರ್ತಿನಿ. ಸ್ನೇಹ ಅಂದ್ರೆ, ಭೂಮಿ ಆಕಾಶ್ , ಚುಕ್ಕಿ ಚಂದ್ರಮ, ಉಸರು ಪಸರು ಅನ್ನೊದಕ್ಕಿಂತ ಒಂಚುರು ಪ್ರ್ಯಾಕ್ಟಿಕಲ್ ಆಗಿ ನೋಡದ್ರೆ. ನಮಗೆ ಜೀವನದ ಅನೇಕ ಸಮಯ ಸಂದರ್ಭಗಳಲ್ಲಿ ಹೊಸ ಹೊಸ ಸ್ನೇಹಿತರು ಪರಿಚಯ ಆಗ್ತಾರೆ. ಮೊದಲನೆಯದಾಗಿ , ನಾವು ಚಿಕ್ಕವರಿದ್ದಾಗ ನಮ್ಮ ಮನೆ ಅಕ್ಕ ಪಕ್ಕದ ಓರಿಗೆ ಯವರು. ನಂತರ ಸ್ಕೂಲ್ ನಲ್ಲಿ ಒಂದಿಷ್ಟ್ ಜನರ ಸ್ನೇಹವಾಗ್ತದೆ. ಸ್ಕೂಲ್ ನಂತರ ಹೈಸ್ಕೂಲ್, ನಂತರ್ ಕಾಲೇಜ್, ಕೊನೆಗೆ ಕೆಲಸಕ್ಕೆ ಸೆರಿಕೊಂಡ ಆಫಿಸ್ ನಲ್ಲಿಯೂ ಕೆಲ ಜನರ ಸ್ನೇಹವಾಗ್ತದೆ. ಅಷ್ಟೆ ಯಾಕೆ  ಕಾಫಿ ಡೆ ಯಲ್ಲಿ, ಕ್ರಿಕೇಟ್ ಗ್ರೌಂಡ್ ಲ್ಲಿ, ಮಾರ್ಕೇಟ್ ಲ್ಲಿ, ಸಿನಿಮಾ ಹಾಲ್ ನಲ್ಲಿ, ಇಲ್ಲ ಯಾರದೊ ಮದುವೆ ಮುಂಜಿಯಂಥಹ ಕಾರ್ಯಕ್ರಮಗಳಿಗೆ ಹೋದಲ್ಲಿ. ಹೊಸ ಹೊಸ ಜನ ಪರಿಚಯ ಆಗ್ತಾರೆ, ಸಮಾನ ಮನಸ್ಕರಾದಲ್ಲಿ ಆ ಸ್ನೇಹ ಮುಂದಿವರೆಯಿತ್ತದೆ. ನಮ್ಮ ನೋವು ನಗುವಿನಂತಹ ಅನೇಕ ಭಾವನೆಗಳಿಗೆ ಸ್ಪಂದಿಸ್ತಾರೆ, ನಮ್ಮ ಕಷ್ಟ ಸುಖಕ್ಕ ಆಗ್ತಾರೆ. ಪ್ರತಿ ದಿನ ಮೀಟ್ ಆಗಿ ಮಾ

ಗಂಡ ಮತ್ತು ಬಾಯ್ ಫ್ರೆಂಡ್ ಗೆ ಇರೊ ವ್ಯತ್ಯಾಸ ?

ಒಬ್ಬಳು ಹುಡುಗಿ ಒಬ್ಬ ಹುಡುಗನನ್ನ ಮದುವೆ ಆಗೋವಾಗ ಸಾಮನ್ಯವಾಗಿ ಒಂದಿಷ್ಟು ಅಂಶಗಳ ಬಗ್ಗೆ ವಿಚಾರಿಸ್ತಾರೆ . ಮೊದಲನೆಯದು ಜಾತಿ ಒಂದೆ ಇರಬೇಕು , ಇದಾದ ಮೇಲೆ ಮುಂದಿನ ಪ್ರಕ್ರಿಯೆ ಶುರು . ಇಲ್ಲ ಅಂದ್ರೆ ಮತ್ತೆ ಹೊಸ ಹುಡುಕಾಟ . ಜಾತಿ ಸರಿ ಹೊಂದಿತು ಅಂತ ಇಟ್ಕೊಳ್ಳಿ , ಹುಡುಗ ಎಷ್ಟ್ ಕಲ್ತೀದಾನೇ ? ಎನ್ ಕೆಲ್ಸ ಮಾಡ್ತಾನೆ ? ಸಂಬಳ ಎಷ್ಟು ? ಇರೊ ಮನೆ ಸ್ವಂತ ನಾ ಬಾಡಿಗೆ ನಾ ? ಚೂರು ಪಾರು ಆಸ್ತಿ ಇದೆಯಾ ಇಲ್ವಾ ? ಆಸ್ತಿ ಇದ್ರೂ ಅದರಲ್ಲಿ ಪಾಲುದಾರರು (ಸಹೋದರ ಸಹೋದರಿಯರು) ಎಷ್ಟ್ ಜನ ? ಇವುಗಳಲ್ಲಿ ಹುಡುಗ ಓಕೆ ಅಂತ ಅನಿಸಿದರೆ ಸಾಕು . ಅವನು ಒಳ್ಳೆಯವನಾ ? ಕೆಟ್ಟವನಾ ? ಕಪ್ಪಗಿದಾನಾ ? ಕುಳ್ಳಗಿದಾನಾ ? ಅಷ್ಟೋಂದ್ ಲೆಕ್ಕಕ್ಕ ಬರಲ್ಲ, ತಕ್ಕಮಟ್ಟಿಗೆ ಲಕ್ಷಣವಾಗಿದ್ದು ನೋಡೋಕೆ ಅರೋಗ್ಯಪೂರ್ಣವಾದ ಗಂಡಸು ಅಂತ ಅನಿಸಿದರೆ ಸಾಕು ನಿಖಾ ಪಕ್ಕ . ಇಷ್ಟೇ ಅಲಾ ಗಂಡು ಹುಡುಕೋ ಪ್ರಕ್ರಿಯೆ ?. ಓಕೆ ಇದರಲ್ಲಿ ಯಾವುದೆ ತಪ್ಪಿಲ್ಲ . ಒಬ್ಬ ಮಗಳನ್ನ ಮುದ್ದಿನಿಂದ ಸಾಕಿ ಇನ್ನೊಂದ್ ಮನೆಗೆ ಜೀವನ ಸವೀಯೋಕೇ ಕಳೆಸುವಾಗ ಪ್ರತಿ ತಂದೆ ತಾಯಂದಿರು ಮತ್ತು ಮಗಳು ತಗೆದುಕೊಳ್ಳುವಂತ ಜಾಣ್ಮೆಯ ಮತ್ತು ಜವಾಬ್ದಾರಿಯುತ ನಿರ್ಧಾರಗಳು ಇವು. ಆದರೆ ನನಗೆ ಕನ್ಫೂಜನ್ ಮತ್ತು ಕ್ಯೂರಿಯಾಸಿಟಿ ಇರೋದು ಈ ಪ್ರೀತ್ಸೊ ಹುಡುಗ ಹುಡುಗಿಯರು , ಒಬ್ಬರನೊಬ್ಬರು ಒಪ್ಪಿಕೊಳ್ಳುವ ಪ್ರಕ್ರಿಯೆಯಲ್ಲಿ. ಹೌದು , ಒಬ್ಬ ಹುಡುಗ ಒಬ್ಬಳು ಹುಡುಗಿಯನ್ನ ಪ್ರಪೋಸ್ ಮಾಡಿದಾಗ , ಅವಳು ಮೇಲಿನ ಈ ಯ

ನಡು ರಸ್ತೆಯಲ್ಲಿ ಕೆಡವಿ ಚೂರಿ ಚುಚ್ಚಿದ

ಶುಕ್ರವಾರ ಸಂಜೆ ಹೊತ್ತಿಗೆ ಎಲ್ಲ ಆ ವೀಡಿಯೊ ವೈರಲ್ ಆಗಿತ್ತು , ಸ್ನೇಹಿತ ನೊಬ್ಬ ನನ್ನ ಮೊಬೈಲ್ ಗೂ ಕಳಿಸಿದ್ದ. ದೇವರಾಣೆ ಹೇಳ್ತೀನಿ wrong turn ಅನ್ನೊ ಭಯಾನಕ ಇಂಗ್ಲಿಷ್ ಸಿನಿಮಾ ನೋಡಿದಾಗೂ ನನಗಷ್ಟ ಭಯ ಆಗಿರಲಿಲ್ಲ . ಸಿನಿಮಾ ನೋಡುವಾಗ ಎಷ್ಟೇ ಕ್ರೂರ ದೃಶ್ಯ ವಾದರೂ ಒಂದು ಕ್ಷಣಕ್ಕೆ ಭಯ ಅನಿಸಿದರೆ , ಅಥವ ಅಯ್ಯೊ ಅನಿಸಿದರೆ ಇನ್ನೊಂದು ಕ್ಷಣಕ್ಕೆ ಅದು ನಿಜಾನೆನೊ ? ಸಿನಿಮಾ ಅದು ಅಂತ ಸುಮ್ಮನಾಗ್ತಿವಿ. ಆದ್ರೆ ಇದು ಕಥೆ ಅಲ್ಲ,  ಕಲ್ಪನೆ ಅಲ್ಲ,  ಸಿನಿಮಾ ಅಲ್ಲ, ಸತ್ಯ . ಎಲ್ಲೋ ದೂರದ ದೇಶದಲ್ಲಿ ನಡೇದದ್ದಲ್ಲ, ಇಲ್ಲೆ ನಮ್ಮ ಕರ್ನಾಟಕದ ಮಂಗಳೂರ ನಲ್ಲಿ ನಡೆದದ್ದು. ಹಾಡ ಹಗಲು , ನಡು ರಸ್ತೆ , ಇಪ್ಪತ್ತರ ತರುಣಿ ಅಸಹಾಯಕಳಾಗಿ ಅಂಗಲಾಚತೀದ್ದಾಳೆ, ಆತ ಛೇ ಬೆಡ ಬಿಡಿ ಮುಂದಿನದು ಹೇಳೋಕ್ ಆಗ್ತಿಲ್ಲ .   ಮೊದಲಿನಿಂದಲೂ ಒಂದ್ ಮಾತ್ ಇದೆ . ಗಂಡು ಮುಳ್ಳ ಇದ್ದ ಹಾಗೆ , ಹೆಣ್ಣು ಬಟ್ಟೆ ಇದ್ದ ಹಾಗೆ . ಬಟ್ಟೆ ಮುಳ್ಳಿನ ಮೇಲೆ ಬೀಳಲಿ , ಇಲ್ಲ ಮುಳ್ಳು ಬಟ್ಟೆ ಮೇಲೆ ಬೀಳಲಿ , ಹರೀಯೋದು ಬಟ್ಟೆನೇ . ಸೊ ಬಟ್ಟೆ ತನ್ನನ್ನ ತಾನು ಕಾಪಾಡಿಕೊಳ್ಳವ ಜಾಣ್ಮೆ ಮತ್ತು ತಾಳ್ಮೆ ಹೊಂದಿರಬೇಕು,  ಇಲ್ಲವಾದಾಗ ಈ ಥರದ ಅನಾಹುತಗಳು ಆಗ್ತವೆ . ಪ್ರೀತಿ,  ಮದುವೇಯಂಥ ವಿಷಯದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಮ್ಮಿಯೇ . ಯಾಕಂದ್ರೆ ಅವು ಒಂದೆರಡು ದಿನದ ಬಾಂಧವ್ಯಗಳಲ್ಲ , ಜೀವದ ಜೋಡಿಗಳು. ಒಬ್ಬ ಹುಡುಗ ಒಬ್ಬಳು ಹುಡುಗಿಗೆ ಪ್ರಪೋಸ್ ಮಾಡ್ತಾನೆ . ಆಕೆ , ನನಗೆ ಎರಡ್

ನಿರ್ಮಲ ಗೆ ಗಂಡು ಮಗು ಆಗಿತ್ತು .

ನಾನಾಗ ಮಹಾಂತ ಲ್ಯಾಬ್ ನಲ್ಲಿ ಡ್ಯೂಟೀ ಮಾಡ್ತಿದ್ದೆ . ಸಂಜೆ ಐದು ಇಲ್ಲ ಐದುವರೆ ಆಗಿರಬಹುದು , ಅಪ್ಪ ಕಾಲ್ ಮಾಡಿ , ನಿರ್ಮಲ ಗೆ ಸಾಸನೂರ ಬಾಯಿ ದವಾಖಾನಿ ಗಿ ಕರ್ಕೊಂಡ್ ಬಂದಾರಂತ ಹೋಗಿ ಭೆಟ್ಟಿ ಆಗಿ ಬಾ ಅಂದ. ಯಾಕೆ ಏನು ಅಂತ ಅಪ್ಪ ನೂ ಏನೂ ಹೇಳಲಿಲ್ಲ , ನಾನೂ ಏನೂ ಕೇಳಲಿಲ್ಲ , ಕಾಲ್ ಕಟ್ ಆಯ್ತು . ಇಪ್ಪತ್ತು ರೂಪಾಯಿ ದು ಒಂದ್ ಬ್ರೆಡ್ ಪಾಕೆಟ್ ತಗೊಂಡು ನನ್ನ ಅಟ್ಲಾಸ್ ಸೈಕಲ್ ಹ್ಯಾಂಡಲ್ ಗೆ ಸಿಕ್ಕಿಸಿ , ಪೈಡಲ ತುಳಿದೆ . ತುಂಬ ಸ್ಪೀಡ್ ಆಗೆ ಓಡ್ತಿತ್ತು ಸೈಕಲ್ ಸಾಸನೂರ ಹಾಸ್ಪಿಟಲ್ ಕಡೆ.  ನನಗಿಂತಲೂ ಹೆಚ್ಚಿನ ದುಗುಡ ಧಾವಂತ ಸೈಕಲ್ ಗೆ ಇತ್ತೇನೊ . ಒಮ್ಮೆಲೆ ನಾನಷ್ಟ ಗಾಬರಿಯಾಗಲೂ ಒಂದು ಕಾರಣ ಇತ್ತು . ನಿರ್ಮಲ ಬೇರೆ ಯಾರೂ ಅಲ್ಲ ನನ್ನ ಸ್ವಂತ ಸೋದರ ಮಾವನ ಮಗಳು. ಬರಿ ಮಾವನ ಮಗಳಾಗಿದ್ರೇ ಇಷ್ಟೊಂದ್ ಆತಂಕಪಡುವ ಆವಶ್ಯಕತೆ ಇರ್ತಿರಲಿಲ್ಲ ನನಗೆ , ಆದ್ರೆ  ಈಗೆ ಎರಡು ವರ್ಷಗಳ ಹಿಂದೆ ನನ್ನ ಜೊತೆ ಮದುವೆ ಪಿಕ್ಸ ಆಗಿದ್ದ ಹುಡುಗಿ, ಸೊ ಏನಾಯ್ತು ಯಾಕೆ ಅಂತ ಗಾಬರಿ ಸಹಜ ಅಲ್ವಾ ? ಅವತ್ತು ಸಂಜೆ ಎಲ್ರೂ ಒಟ್ಟಿಗೆ ಕೂತು ಊಟ ಮಾಡ್ತಿದ್ವಿ . ಅವ್ವ ಕೇಳದಳು, ನಿರ್ಮಲ ಬಗ್ಗೆ ನಿನ್ನ ಅಭಿಪ್ರಾಯ ಏನು ಅಂತ . ಸಡನ್ ಆಗಿ ನನಗೆ ಗೊತ್ತಾಗಲಿಲ್ಲ . ಯಾಕಮ್ಮ ಏನಾಯ್ತು ಅಂದೆ . ಅದೆ ನೀನ್ ಮದುವೆ ವಿಚಾರ . ನೀನ್ ಹೂಂ ಅಂದ್ರೆ , ಅಣ್ಣನ ಜೊತೆ ಮಾತಾಡ್ತಿನಿ ಅಂದ್ಲು ಅವ್ವ . ನಾನು ಆಗಾಗ ಜಾತ್ರೆ ನಿಮಿತ್ತ ಅವ್ವನ ಜೊತೆ ನಿರ್ಮಲ ಅವರ ಊರಿಗೆ ಹೋಗ್ತಿದ್ದೆ

ನಾನು ದೇವರಂತ ಮನುಷ್ಯ ನಾ ??

ನಾನಾಗೇ ಪೊಲೀಸ್ ಸ್ಟೇಷನ್ ಗೆ ಹೋಗಿ ಒಂದ್ ಕೊಲೆ ಮಾಡಿದೀನಿ ನನ್ನ ಅರೆಸ್ಟ್ ಮಾಡಿ ಸರ್ ಅಂತ  ಅಂದ್ರೂ , ಕಾಮಿಡಿ ಮಾಡಬೇಡ ಹೋಗು ಗುರು ಅಂತ ಪೊಲೀಸ್ ನವರು ವಾಪಸ್ ಕಳಿಸ್ತಾರೆ . ಅಂತಹ ಒಂದ್ ಮುಗ್ಧತೆ ಕೊಟ್ಟಿದಾನೆ ಭಗವಂತ ನನ್ ಮುಖದ ಮೇಲೆ . ಕೆಲವೊಮ್ಮೆ ಆ ಮುಗ್ಧತೆ ವರವಾದರೇ ಇನ್ನು ಕೆಲವೊಮ್ಮೇ ಶಾಪವಾಗಿ ಕಾಡತ್ತೆ . ಹೇಗೆ ಅಂತೀರಾ ? ಕೇಳಿ . ಕುಡಿತ ಸಿಗರೇಟ್ ನಂತಹ ವಯೋಸಹಜ ತಪ್ಪುಗಳು ನಾನು ಮಾಡಿದರೂ ಅದನ್ನ ಯಾರೂ ನಂಬಲ್ಲ. ಏ ಆತನ ಬಗ್ಗೆ ಗೊತ್ತು ನಮಗೆ , ತುಂಬ ಒಳ್ಳೆ ಹುಡುಗ ಆತ ಅಂತಾರೆ . ಕೆಲವರು ಇನ್ನೂ ಒಂದ್ ಹೆಜ್ಜೆ ಮುಂದೆ ಹೋಗಿ "ದೇವರಂತ ಮನುಷ್ಯ ಸಿದ್ದು" ಅಂತಾರೆ . ಇಂತಹ ಸಂದರ್ಭದಲ್ಲಿ ಮುಖದ ಮೇಲಿನ ಮುಗ್ಧತೆ ವರ ಅನ್ಸತ್ತೆ . ಇನ್ನೂ ಶಾಪ ಯಾವಾಗ ಆಗತ್ತೆ ಅಂದ್ರೆ, ಕಣ್ಮುಂದೆ ಬೆಣ್ಣಿ ಇದ್ರೂ ಬೆಂಕಿ ಸುಮ್ನಿರೋ ಸಂದರ್ಭ ಬಂದಾಗ . ಹೇಗೆ ಅಂತೀರಾ , ಮುಂದಿದೆ ವಿವರಣೆ . . . ಆಗ ನಾನು ಪಿಯುಸಿ ಸೆಕೆಂಡ್ ಏರ್ ಇರ್ಬೋದು , ನಿಗಿ ನಿಗಿ ಕೆಂಡದಂಥ ವಯಸ್ಸು . ಅದೊಮ್ಮೆ ದೂರದ ಸಂಭಂದಿ ಯೊಬ್ಬರ ಮನೆಗೆ ಹೋಗಿದ್ದೆ . ಆತ ಸಂಭಂಧದಲ್ಲಿ ಮಾವ ಆಗಬೇಕು . ಆ ಏಪ್ಪನಿಗೇ ಐದು ಜನ ಹೆಣ್ಣು ಮಕ್ಕಳು , ಇಬ್ಬರು ಗಂಡು ಮಕ್ಕಳು . ಮೊದಲ ಇಬ್ಬರ ಮದುವೆ ಆಗಿತ್ತು , ಮೂರನೆಯವಳು 10th ಇದ್ದಳು ಅನ್ಸತ್ತೆ ಮಿಕ್ಕವರು ಇನ್ನೂ ಸ್ವಲ್ಪ ಚಿಕ್ಕವರು. ಪಿಯುಸಿ ಅಂದ್ರೆ ನಾನಾಗ ಸ್ವಲ್ಪ ಬೆಳ್ಳಗೆ ಗುಂಡಗೆ ಮಸ್ತ್ ಆಗೆ ಇದ್ದೆ , ಮಾವನ ಮೂರನೆ ಮಗ