ನಾನು ದೇವರಂತ ಮನುಷ್ಯ ನಾ ??

ನಾನಾಗೇ ಪೊಲೀಸ್ ಸ್ಟೇಷನ್ ಗೆ ಹೋಗಿ ಒಂದ್ ಕೊಲೆ ಮಾಡಿದೀನಿ ನನ್ನ ಅರೆಸ್ಟ್ ಮಾಡಿ ಸರ್ ಅಂತ  ಅಂದ್ರೂ , ಕಾಮಿಡಿ ಮಾಡಬೇಡ ಹೋಗು ಗುರು ಅಂತ ಪೊಲೀಸ್ ನವರು ವಾಪಸ್ ಕಳಿಸ್ತಾರೆ . ಅಂತಹ ಒಂದ್ ಮುಗ್ಧತೆ ಕೊಟ್ಟಿದಾನೆ ಭಗವಂತ ನನ್ ಮುಖದ ಮೇಲೆ . ಕೆಲವೊಮ್ಮೆ ಆ ಮುಗ್ಧತೆ ವರವಾದರೇ ಇನ್ನು ಕೆಲವೊಮ್ಮೇ ಶಾಪವಾಗಿ ಕಾಡತ್ತೆ . ಹೇಗೆ ಅಂತೀರಾ ? ಕೇಳಿ .
ಕುಡಿತ ಸಿಗರೇಟ್ ನಂತಹ ವಯೋಸಹಜ ತಪ್ಪುಗಳು ನಾನು ಮಾಡಿದರೂ ಅದನ್ನ ಯಾರೂ ನಂಬಲ್ಲ. ಏ ಆತನ ಬಗ್ಗೆ ಗೊತ್ತು ನಮಗೆ , ತುಂಬ ಒಳ್ಳೆ ಹುಡುಗ ಆತ ಅಂತಾರೆ . ಕೆಲವರು ಇನ್ನೂ ಒಂದ್ ಹೆಜ್ಜೆ ಮುಂದೆ ಹೋಗಿ "ದೇವರಂತ ಮನುಷ್ಯ ಸಿದ್ದು" ಅಂತಾರೆ . ಇಂತಹ ಸಂದರ್ಭದಲ್ಲಿ ಮುಖದ ಮೇಲಿನ ಮುಗ್ಧತೆ ವರ ಅನ್ಸತ್ತೆ . ಇನ್ನೂ ಶಾಪ ಯಾವಾಗ ಆಗತ್ತೆ ಅಂದ್ರೆ, ಕಣ್ಮುಂದೆ ಬೆಣ್ಣಿ ಇದ್ರೂ ಬೆಂಕಿ ಸುಮ್ನಿರೋ ಸಂದರ್ಭ ಬಂದಾಗ . ಹೇಗೆ ಅಂತೀರಾ , ಮುಂದಿದೆ ವಿವರಣೆ . . .
ಆಗ ನಾನು ಪಿಯುಸಿ ಸೆಕೆಂಡ್ ಏರ್ ಇರ್ಬೋದು , ನಿಗಿ ನಿಗಿ ಕೆಂಡದಂಥ ವಯಸ್ಸು . ಅದೊಮ್ಮೆ ದೂರದ ಸಂಭಂದಿ ಯೊಬ್ಬರ ಮನೆಗೆ ಹೋಗಿದ್ದೆ . ಆತ ಸಂಭಂಧದಲ್ಲಿ ಮಾವ ಆಗಬೇಕು . ಆ ಏಪ್ಪನಿಗೇ ಐದು ಜನ ಹೆಣ್ಣು ಮಕ್ಕಳು , ಇಬ್ಬರು ಗಂಡು ಮಕ್ಕಳು . ಮೊದಲ ಇಬ್ಬರ ಮದುವೆ ಆಗಿತ್ತು , ಮೂರನೆಯವಳು 10th ಇದ್ದಳು ಅನ್ಸತ್ತೆ ಮಿಕ್ಕವರು ಇನ್ನೂ ಸ್ವಲ್ಪ ಚಿಕ್ಕವರು. ಪಿಯುಸಿ ಅಂದ್ರೆ ನಾನಾಗ ಸ್ವಲ್ಪ ಬೆಳ್ಳಗೆ ಗುಂಡಗೆ ಮಸ್ತ್ ಆಗೆ ಇದ್ದೆ , ಮಾವನ ಮೂರನೆ ಮಗಳು ಸುತ್ತ ಸುಳಿಯೊಕೇ ಶುರು ಮಾಡಿದಳು . ಏನರೇ ನೆಪ ಮಾಡಿ ಬಂದು ಮಾತಾಡ್ಸೋದು , ಎನ್ ಕೆಲ್ಸ ಕಾರ್ಯ ಇಲ್ಲ ಅಂದ್ರು ಹಾಲಲ್ಲಿ ಆ ಕಡೆಯಿಂದ ಈಕಡೆ , ಈಕಡೆ ಯಿಂದ ಆಕಡೆ ಸುತ್ತಾಡೊದು , ನೀಟಾಗಿ ಡ್ರೆಸ್ಸ ಮಾಡ್ಕೊಳ್ಳೋದು , ನಗಾಡೋದು, ಒಂದೆ ಮಾತಲ್ಲಿ ಹೇಳಬೇಕಾದರೆ ಹಸಿ ವಯಸ್ಸಿನ ಬೀಸಿ ರಕ್ತದ ಹುಡುಗಿರು ಎನ್ ಮಾಡ್ತಾರೋ ಅದೆಲ್ಲ . ಅವಳು ಏನೆಲ್ಲ ಆಟ ಆಡದ್ರು ನಾನ್ ಮಾತ್ರ ನೋಡಿ ನೋಡ್ದಂಗೆ ಕಲ್ಲು ಮೂರ್ತಿ ಥರ ಸುಮ್ನೆ ಕೂಡಬೇಕಾಗಿತ್ತು , ಹಾಗೆ ಕೂತಿದ್ದೆ ಸಹ. ಯಾಕೆ ಗೊತ್ತಾ ? ನಾನ್ ಆ ಮನೆ ಒಳಗೆ ಕಾಲ ಇಡ್ತಿದಂಗೆ ನನ್ ಕಿವಿಗೆ ಬಿದ್ದ ಮೊದಲ ಮಾತೆ "ಸಿದ್ದು ತುಂಬ ಒಳ್ಳೆಯವನು ದೇವರಂತ ಮನುಷ್ಯ " ಅಂತ.
ಸಂಜೆ ಊಟಾ ಮುಗಿಸಿ,  ಮನೆ ಮುಂದೆ ಇರೊ ಕಟ್ಟಿ ಮೇಲೆ ತಣ್ಣನೆ ಗಾಳಿಗೆ ಮೈಯೊಡ್ಡಿ ಕೂತಿದ್ದೆ . ಅವಳೂ ಊಟ ಮುಗಿಸಿ ಬಂದ್ಲು ಪಕ್ಕ ಕೂತಳು. ಮಧ್ಯಾಹ್ನ ಎನ್ ಮಾಡದರೂ ಒಂದ್ ಮಾತ್ ಆಡಿಲ್ಲ , ಈಗ ನೋಡೋಣ ಅಂತ ಬಂದಿದ್ಲು ಅನ್ಸತ್ತೆ .
ಊಟಾ ಆಯ್ತಾ ಅಂದ್ಲು .
ನಾನು ಹೂಂ ಆಯ್ತು ಅಂದು ಸುಮ್ಮನಾದೆ . ನಿಂದು ಆಯ್ತಾ ಅಂತ ವಾಪಸ್ ಅವಳಿಗೆ ಕೇಳಲೇಯಿಲ್ಲ .
ಅಮೇಲೆ ಅವಳೆ ಮಾತು ಶುರು ಮಾಡಿದಳು. ಅವರ ಊರ ಬಗ್ಗೆ,  ಮನೆ ಬಗ್ಗೆ ,  ಹೈಸ್ಕೂಲ್ ಬಗ್ಗೆ , ಹೈಸ್ಕೂಲ್ ಫ್ರೆಂಡ್ಸ್ ಬಗ್ಗೆ , ಟೀಚರ್ ಬಗ್ಗೆ ಮಾತಾಡದಳು.  ಪಟ ಪಟ ಅಂತ ಪಟಾಕಿ ಸಿಡಿದ ಹಾಗೆ ಅವಳ ಮಾತುಗಳು.  ಆದ್ರೆ ವ್ಯತ್ಯಾಸ ಇಷ್ಟೇ ಪಟಾಕಿ ಸದ್ದು ಕಿವಿಗೆ ಕರ್ಕಶ , ಇವಳ ಮಾತು ಕಿವಿಗೆ ಹಿತ. ಅವಳು ಮಾತಾಡ್ತೀರಬೇಕಾದರೆ ಅವಳನ್ನೇ ನೊಡ್ತಾ ಕೂತಿದ್ದೆ . ಮಾತಿಗೆ ತಕ್ಕ ಹಾಗೆ ಬದಲಾಗೋ ಧ್ವನಿ , ಮುಖಭಾವ , ಏರಿಳಿಯೋ ಹುಬ್ಬು , ಆಕಡೆ ಈಕಡೆ ಅಲ್ಲಾಡ್ಸೋ ಕತ್ತು , ಗಾಳಿಗೆ ಮುಖಕ್ಕೆ ಮುತ್ತಿಕೊಳ್ಳುವ ಮುಂಗುರುಳು , ಕಿರುಬೆರಳಿನಿಂದ ಅವನ್ನ ಸರಿಸುವ ಪರಿ ಎಲ್ಲ ನೋಡೋದೆ ಒಂದ್ ಚಂದ . ನೀನ್ ಚಂದ ಇದ್ದೀಯ , ತುಂಬ ಚನ್ನಾಗಿ ಮಾತಾಡ್ತೀಯ ಅಂತ ಹೇಳಬೇಕು ಅನ್ಕೋತಿದ್ದೇ ಮತ್ತೆ ಸುಮ್ಮನಾಗ್ತಿದ್ದೇ, ಅದೆ ದೇವರಂತ ಮನುಷ್ಯ ಡೈಲಾಗ್ ನೆನಪಾಗೋದು. ನಾವಿಬ್ರೂ ಮಾತು ನಗು ಕೆಲ ಸಣ್ಣ ಪುಟ್ಟ ಚೇಷ್ಟೆಗಳಲ್ಲಿ ತೊಡಗಿದ್ದರೂ ಅವರ ಮನೆಯವರು ಯಾರೂ ಏನೂ ತಲೆ ಕೆಡಿಸ್ಕೋತೀರಲೀಲ್ಲ , ಯಾಕಂದ್ರೆ ಅವರಿಗೆ ಅವರ ಮಗಳಿಗಿಂತ ನನ್ ಮೇಲೆ ನಂಬಿಕೆ ಜಾಸ್ತಿ. ಸೊ ಅವರ ಮನೇಲಿ ಮೂರ್ ದಿನ ಇದ್ರೂ , ಅವಳ ಎಲ್ಲ ಕೀಟಲೆ ಗಳ ನೋಡಿ ಒಂದೆ ಒಂದ್ ಕಮೆಂಟ್ ಮಾಡದೆ ಎದ್ದ ಬಂದಿದ್ದೆ . ಅವರ ನಂಬಿಕೆಗಾಗಿ ಆ ಒಂದ್ ಮಾತಿಗಾಗಿ . ತುಂಬ ಕಷ್ಟ ಮಾರ್ರೆ, ಆಗ್ಲೇ ಮುಗ್ಧತೆ ಶಾಪ ಅನ್ಸಿದ್ದು. ಈಗ ನೆನಸಿಕೊಂಡರೆ ನಗು ಬರುತ್ತೆ ಒಳ್ಳೆ ಫಜೀತಿ ಅಂತ. ಇಂತಹ ಅನೇಕ ಘಟನೆಗಳಾಗಿವೆ ಇದೊಂದು ಉದಾಹರಣೆ ಅಷ್ಟೇ .
ಕೊನೆ ಮಾತು , . ವಯೋಸಹಜ ಎಲ್ಲ ಆಶೆಗಳೂ ನನ್ನಲ್ಲಿವೆ ಆದ್ರೆ ಒಂದ್ ಖುಷಿ ವಿಚಾರ ಎನ್ ಅಂದ್ರೆ , ಅವುಗಳ ಹಿಡಿತದಲ್ಲಿ ನಾನಿಲ್ಲ , ನನ್ನ ಹಿಡಿತದಲ್ಲಿ ಅವು ಇವೆ . ನಾನ್ ದೇವರಲ್ಲ ರಿ , ಸಾಮಾನ್ಯ ಮನುಷ್ಯ . ಕೆಲವೊಮ್ಮೆ ದೇವರ ಅಸ್ತಿತ್ವದ ಬಗ್ಗೆ ನಾನೇ  ಅನುಮಾನ ಪಡ್ತೀನಿ , ಅಂತದ್ರಲ್ಲಿ ನಾನೇಲ್ಲಿಂದ ದೇವರಾಗ್ಲಿ ? ಚಾನ್ಸೇ ಇಲ್ಲ !
ಆಕ್ಚ್ಯುಯಲೀ ಹೇಳೊದಾದರೆ ಈ ಸಮಾಜಕ್ಕೆ , ಸಮಾಜದ ಸ್ವಾಸ್ಥ್ಯ ಕ್ಕೆ  ದೇವರಿಗಿಂತ ಒಳ್ಳೆ ಮನಸ್ಸೀರೋ ಮನುಷ್ಯ ರ ಅವಶ್ಯಕತೆ ತುಂಬ ಇದೆ. ಸೊ ದೇವರಾಗದೆಯಿದ್ರೂ, ಯಾರಿಗೂ ನೋಯಿಸದ, ಇನ್ನೊಬ್ಬರಿಗೆ ಕೆಡಕು ಬಯಸದ , ಕರುಣೆ ಕಾಳಜಿಯುಳ್ಳ ಒಳ್ಳೆ ಮನುಷ್ಯ ರಾಗಿ ಬದುಕೋಕೆ ಟ್ರೈ ಮಾಡೋಣ.  ಏನಂತೀರಿ ?

ಸಿದ್ದು . ತಾಂಬೆ .

Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ