Posts

Showing posts from March, 2019

ಎಸ್. ಎಚ್. ಲವರ್ - 2

ಥೂ ನಿಮ್ ನಜ್ಮಕ ಇಷ್ಟು ಅಂತ ಉಗದು ಆಚೆ ಬರ್ತಿದ್ದೆ , ಆತನ ಮೊಬೈಲ್ ನಲ್ಲಿ ನನ್ನ ಕೆಲ ಫೋಟೋ ಇದ್ದಿದ್ದು ನೆನಪಾಯಿತು . ವಾಪಸ್ ಹೋಗಿ ಅತನ ಕೈಯಲ್ಲಿದ್ದ ಮೊಬೈಲ್ ತಗೊಂಡು ನನ್ನೆಲ್ಲ ಫೋಟೋ ಡಿಲೀಟ್ ಮಾಡದೆ . ಏನೂ ಮಾತಾಡದೇ ಗಾಬರಿಯಾಗಿ ಕುಳಿತು ಬಿಟ್ಟಿದ್ದ , ಏಕೆಂದರೆ ಆತ ನನ್ನಿಂದ ಈ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ . ನನ್ನ ಮನಸಲ್ಲಿ ಆತನೇಡೇಗೇ ಇದ್ದ ಎಲ್ಲ ನೆನಪುಗಳನ್ನ ಆತ ಡಿಲೀಟ್ ಮಾಡಿದ್ದ , ಆತನ ಮೊಬೈಲ್ ನಲ್ಲಿದ್ದ ನನ್ನ ನೆನಪುಗಳನ್ನ ನಾನು ಡಿಲೀಟ್ ಮಾಡಿ ಲಾಡ್ಜ್ ರೂಮಿಂದ ಜೊತೆಗೆ ಅವನ ಬದುಕಿಂದ ಎದ್ದು ಹೊರ ಬಂದೆ . ಟಿವಿ ಪೇಪರಲ್ಲಿ , ರೇಪ್ & ಮರ್ಡರ್ ಆಸಿಡ್ ದಾಳಿಯಂತಹ ಸುದ್ದಿ ನೋಡಿದಾಗ ಸೌಂದರ್ಯ ಅನ್ನೋದು ಹೆಣ್ಣಿಗೆ ಶಾಪ ಅಂತ ಅನಿಸ್ತಿತ್ತು . ಆದ್ರೆ ಕುರೂಪ ಸಹಿತ ಶಾಪ ಅಂತ ಅವತ್ ಗೊತ್ತಾಯ್ತು. ಸಾರಿ ರಮ್ಯ , ಹಳೇದೆಲ್ಲ ನೆನಪಿಸಿ ನಿನಗೆ ಮತ್ತೆ . . . . ಇಟ್ಸ ಓಕೆ ಅಭಿ , ಸುಳ್ಳಿನ ಸೆಳೆತ ಸಿಹಿ ಅನ್ಸತ್ತೆ , ಸತ್ಯ ಕಹಿ ಅನ್ಸತ್ತೆ,  ಆದ್ರೂ ಕೊನೆಗ ಉಳಿಯೋದು ಕಹಿಯಾದ ಸತ್ಯ ನೆ ಅಲ್ವ ? ಸೊ,  ಸುಳ್ಳನ್ನ ನಂಬಿದಕ್ಕೇ ಇದೆಲ್ಲ ಸಹಿಸ್ಕೋಬೇಕು. ಹೂಂ ಅದೂ ನಿಜಾನೆ. ಹಾಂ ರಮ್ಯ,  ಒಂದ್ ಮಾತ್ ಕೇಳಬೇಕಿತ್ತು . ಏನ್ ಕೇಳು ? ಏನಿಲ್ಲ , , ಅಪ್ಪ ಮೊಬೈಲ್ ಕೋಡ್ಸಿಲ್ಲ ಅಂತ , ಫೇಸ್ ಬುಕ್ ಪೋಸ್ಟ್ ಗೆ ಯಾರೂ ಲೈಕ್ ಮಾಡಿಲ್ಲ ಅಂತ , ತೀರ ಇಂಥ ಸಣ್ಣ ಸಣ್ಣ ವಿಷಕ್ಕೇಲ್ಲ ಈಗಿನ ಹುಡುಗೀರು ಆತ್ಮಹತ್ಯೆ ಮಾಡ್ಕೊತಿದಾರೇ , ಆದ್

ಸೆಕೆಂಡ್ ಹ್ಯಾಂಡ್ ಲವರ್

ಸಂಜೆ ಐದರ ಸಮಯ , ಉದ್ಯಾನ ವನದ ತುಂಬ ಹರಡಿದ ಕೆಂಪು ಕಿರಣಗಳ ನಡುವೆ ಹಾರಾಡುವ ಹಕ್ಕಿಗಳು, ಹಕ್ಕಿಗಳ ರೆಕ್ಕೆಗಳ ಲಯಕ್ಕೆ ತಾಳ ಹಾಕುವ ತಂಗಾಳಿ , ಇಂತಹ ಅಹ್ಲಾದಕರವಾದ ವಾತವರಣ ಇದ್ದರೂ ಕಲ್ಲು ಬೆಂಚಿನ ಮೇಲೆ ಒಂಟಿಯಾಗಿ ಕುಳಿತ ಅಭಿ ಯ ಮುಖದಲ್ಲಿ ಕಾರ್ಮೋಡದ ಕತ್ತಲು ಆವರಿಸಿತ್ತು . ರಮ್ಯ ಳಿಗಾಗಿ ಮತ್ತು ಅವಳು ಹೊತ್ತು ತರುವ ಸಂದೇಶಕ್ಕಾಗಿ ಕಾಯುತ್ತಿದ್ದ . ನಿನ್ನೆ ಅವಳಿಗೆ ಲವ್ ಪ್ರಪೋಸ್ ಮಾಡಿದ್ದ , ಅವಳು ನಾಳೆ ಯೋಚನೆ ಮಾಡಿ ಹೇಳ್ತೀನಿ ಅಂದಿದ್ಲು .  ಓಡೋ ಕಾಲ ಜಾರಲೇಬೇಕು ಸಮಯ ಸರೀಯಲೇಬೇಕು ರಮ್ಯ ಬಂದ್ಲು . ಕುತೂಹಲ ದಲ್ಲಿ ಕೇಳಿದ ಅಭಿ ಏನ್ ಯೋಚನೆ ಮಾಡದೆ ?? ಹೂಂ , ಕಾಲ್ ಪಿಕ್ ಮಾಡೋಕೆ ಯಾಕ್ ಲೇಟು , ಮೆಸೇಜ್ ಗೆ ಯಾಕ್ ರಿಪ್ಲೈ ಮಾಡಿಲ್ಲ , ಸ್ಲೀವ್ ಲೆಸ್ಸ್ ಉಡಬೇಡ , ಹೇರ್ ಫ್ರೀ ಬಿಡಬೇಡ ಅಂತ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡಲ್ಲ ಅಂದ್ರೆ ಓಕೆ , ಇಲ್ಲ ಅಂದ್ರೆ ಇಲ್ಲ ಅಂದ್ಲು . ಮುಗುಳ್ನಕ್ಕ ಅಭಿ ಹೇಳಿದ ಅಯ್ಯೊ ಹುಚ್ಚಿ ಅದನೆಲ್ಲ ಅಬ್ಸರ್ವಮಾಡಿ ಅಷ್ಟಕ್ಕೇಲ್ಲ ತಲೆ ಕೆಡಿಸ್ಕೊಳ್ಳುವಷ್ಟು ಪೇಷನಸು  ಟೈಮು ಎರಡೂ  ನನಗಿಲ್ಲ . ನನಗ್ ಗೊತ್ತು ಈಗಾಗಲೇ ನೀನ್ ನೋಂದಿದಿಯ . ಮತ್ತೆ ನಿನ್ನ ನೋಯೀಸಲ್ಲ . ಏಳೇಳು ಜನ್ಮಕ್ಕೂ ನೀನ್ ಜೊತೆ ಇರ್ತೀನಿ ಅಂತ ಸಿನಿಮಾ ಡೈಲಾಗ್ ಎಲ್ಲ ಹೊಡಿಯಲ್ಲ ಬಟ್ ಸಿಕ್ಕಿರೋ ಈ ಜನ್ಮದಲ್ಲಿ  ಏಳೇಳು ಜನ್ಮಕ್ಕ ಆಗುವಷ್ಟು ಪ್ರೀತಿ ಕೊಡ್ತೀನಿ ಸರೀನಾ . ಏನ್ ಸರಿನೊ ಏನೊ . ಅವನೂ ಆವತ್ತು ಹೀಗೆ ಅಂದಿದ್ದ , ಎಂದು ಮೆ