Posts

Showing posts from January, 2019

ಗಂಡಸರಿಗೆ ಮಾತ್ರ

ನಾನೇನು ಜಾಸ್ತಿ ಓದಿದವನಲ್ಲ, ಆಸ್ತಿ ಅಂತಸ್ತು ಅಷ್ಟಕ  ಅಷ್ಟೆ , ಒಳ್ಳೆ ಆರೋಗ್ಯ ಇಲ್ಲ , ಹೇಳಿಕೊಳ್ಳುವಂತ ಸೌಂದರ್ಯ ಕೂಡಾ ಇಲ್ಲ. ಆದ್ರೂ ನನ್ ಬಗ್ಗೆ ನನಗೆ ವಿಪರೀತ ಹೆಮ್ಮೆ , ಒಂದು ಒಳ ಜಂಭ . ಯಾಕೆ ಗೊತ್ತಾ ? ಎಂತಹ ಸಂಧರ್ಬ ಬಂದರೂ ಅದಕ್ಕೆ ಅಡ್ಜಸ್ಟ್ ಆಗುವಂತ ಗುಣ ಇದೆ, I mean ಮಾನಸಿಕವಾಗಿ ತುಂಬ ಸದ್ರುಢ ನಾನು . ಉಕ್ಕೀಬರುವ ನಗುವನ್ನು ನಿಲ್ಲಿಸಬಲ್ಲೇ , ಹರಿಯುವ ಕಣ್ಣೀರು ತಡೇಯಬಲ್ಲೇ . ನನ್ನ ಕೆಲ ವಿಚಾರಗಳು ಕೇಳಿದರೆ ನೀವು ನಗಬಹುದು . ಸಣ್ಣ ಪುಟ್ಟದಕ್ಕೂ ನಾನ್ ಯೋಚನೆ ಮಾಡಿ ಅಳಲ್ಲ , ಯಾವತ್ತಾದರೂ ಅಳಬೇಕು ಅನಿಸಿದರೆ ಏನೇನೋ ನೆನಪು ಮಾಡಿಕೊಂಡು ಬಿಕ್ಕಿ ಬಿಕ್ಕಿ ಅಳ್ತೀನಿ , ಅದು 2-3 ನಿಮಿಷ ಅಷ್ಟೆ , ಅಮೇಲೆ ಮೈ ಮನ ಹಗುರ . ಹಾಗೆ ನಗುವು ಸಹ , ಕೆಲಸಕ್ಕೆ ಬಾರದ ಜೋಕ್ ಗಳಿಗೆಲ್ಲ ನಗಲ್ಲ , ನಗಬೇಕು ಅನಿಸಿದರೆ ಏನೇನೋ ಸಣ್ಣ ಪುಟ್ಟ ಫನ್ನೀ ಮೋಮೇಂಟ ನೆನೆಸಿಕೊಂಡು ನಗ್ತಿನಿ , ಅದೂ 2-3 ನಿಮಿಷ ಅಷ್ಟೇ , ಅಮೇಲೆ ಮತ್ತೆ ನನ್ ಜೊತೆ ನಾನು . ಇದು ಬರಿ ನಗು ಅಳುವಿನ ವಿಷಯ ಅಷ್ಟೇ ಅಲ್ಲ, ನನಗೆ  ಎದುರಾಗುವ ಪ್ರತಿ ಕ್ಷಣ , ಪ್ರತಿ ನಿಮಿಷ , ಪ್ರತಿ ದಿನ ಏನೆ ಬರಲಿ ಹೀಗೆ,  ನಾನು ಖುಷಿ ಪಡಬೇಕು ಅನಿಸಿದರೆ ಮುಗೀತು ಪ್ರತಿದಿನ ಹಬ್ಬ ನೆ . ಇನ್ನೂ ಸಿಂಪಲ್ ಆಗಿ ಹೇಳೋದಾದರೆ , ಬಿಜಾಪುರ ಗಣಪತಿ ಚೌಕನ ರೈಸ್ ಬಜಿ ನೂ ತಿಂದೀದೀನಿ, ಹೈದರಾಬಾದ್ ನ ಪ್ಯಾರಡೈಸ್ ಹೊಟೇಲ್ ನಲ್ಲಿ ಬಿರಿಯಾನಿ ನೂ ತಿಂದೀದೀನಿ . ಆದರೆ ಆ ಎರಡೂ ಘಳಿಗೆಯಲ್ಲಿ ಮುಖದ ಮ

ಹೊಳೆಯುವ ಮಳೆಯ ಹನಿ ಕೊಳೆಯಾದಾಗ ?

ಮಳೆಗಾಲದ ಸಂಜೆ , ಮುಗಿಲುದ್ದಕ್ಕೂ ಹರಡಿಕೊಂಡ ಮೋಡಗಳು , ಆ ಮೋಡಗಳ ಮದ್ಯ ಮರೆಯಾದ ಕೆಂಪು ಸೂರ್ಯ , ಸೂರ್ಯನನ್ನು ಬಂಧಿಸಿದ ಖುಷಿಯಲ್ಲಿ ಬೀಗುತ್ತಿದ್ದ ಇಳಿ ಸಂಜೆಯ ತಿಳಿ ಬೆಳಕು , ಆಗಾಗ್ಗೆ ಮಿಂಚಿ ಮರೆಯಾಗುತ್ತಿದ್ದ ಮಿಂಚು , ಒಂದೆ ಸಮನೆ ಸುರಿಯುತ್ತಿದ್ದ ಮಳೆ , ಛಳಿಗೆ ಹೆದರದೆ ಮತ್ತಷ್ಟು ಗರಿಗೆದರಿ ನಿಂತ ಗಿಡಮರಗಳು , ಮೂಡಲು ತಯಾರಿ ಮಾಡಿಕೊಳ್ಳುತ್ತಿದ್ದ ಮಳೆಬಿಲ್ಲು , ಅಬ್ಬ ಎಂತಹ ರಮಣೀಯ ದೃಶ್ಯ ಹೇಳ್ತಾ ಹೋದರೆ ಮುಗೀಯೋದೇ ಇಲ್ಲ . ಇಂಥ ಅಪರೂಪವಾದ ಪ್ರಕೃತಿಯ ಸೌಂದರ್ಯ ಸವಿಯುತ್ತ,  ಬೆಚ್ಚನೆಯ ಕಾಪಿ ಹೀರುತ್ತ ಬಾಗಿಲಲ್ಲಿ ನಿಂತ ಆದಿತಿ ಯ ಮುಖದಲ್ಲಿ ಸಂತಸವಿರಲಿಲ್ಲ . ಏನೊ ಗಾಢವಾದ ಚಿಂತೆಯಲ್ಲಿ ತುಂಬ ಹೊತ್ತು ಮುಗಿಲಿನಿಂದ ಜಾರುತ್ತಿದ್ದ ಮುತ್ತಿನಂಥ  ಮಳೆ ಹನಿಗಳನ್ನೆ ದಿಟ್ಟಿಸುತ್ತ ನಿಂತಿದ್ದಳು . ಇದನ್ನ ಗಮನಿಸಿದ ಅವಳ ಅಮ್ಮ ಹತ್ತಿರ ಬಂದು , ಏನಮ್ಮ ಆದಿತಿ ಅಷ್ಟೊತ್ತಿನಿಂದ ಏನು ನೋಡ್ತಾ ನಿಂತಿದಿಯ ? ಎಂದಳು . ಏನಿಲ್ಲ ಅಮ್ಮ , ಮಳೆ ಹನಿ ನೋಡ್ತಾ ನಿಂತಿದ್ದೆ ಎಂದು ಉತ್ತರಿಸಿದಳು ಆದಿತಿ . ಏನು ಅಷ್ಟೊಂದು ಗಂಭೀರವಾಗಿ ನೋಡ್ತಿದೀಯ ಯಾವತ್ತೂ ಮಳೆ ಹನಿ ನೋಡೆ ಇಲ್ಲ ಅನ್ನೊ ಹಾಗೆ . ಹೌದು ಅಮ್ಮ,  ಇಷ್ಟು ದಿನ ಮೋಡದಿಂದ ಜಾರಿ ಭೂಮಿ ತಾಗುವ ಹೊಳೆವ ಹನಿಗಳನ್ನ ನೋಡ್ತಿದ್ದೆ . ಆದರೆ ಇವತ್ತು ಮಣ್ಣಲ್ಲಿ ಬಿದ್ದ ಹನಿ ತನ್ನ ಹೊಳಪನ್ನ ಕಳೆದುಕೊಂಡು , ಹಳ್ಳದ ಕೊಳೆಯ ನೀರಾಗಿ ಹರಿಯೋದನ್ನ ನೋಡ್ತಿದ್ದೆನೆ . ಅದರಲ್ಲಿ ಏನಮ್ಮ ಮಗಳೆ ವಿಶೇ

ಹಳೆ ಗರ್ಲ್ ಫ್ರೆಂಡ್ ನ್ನ ಬೈಬೇಡಿ ಪ್ಲೀಜ್

Image
" ಹಳೆ ಗರ್ಲ್ ಫ್ರೆಂಡ್ ನ್ನ ಬೈಬೇಡಿ " ಹೀಗೆ ಹೇಳಿದ ಜಗತ್ತಿನ ಮೊದಲ ಹುಡುಗ ಇರಬಹುದೆನೊ ನಾನು , ಯಾಕಂದ್ರೆ ಎಲ್ಲಿ ನೋಡಿದರಲ್ಲಿ ಎಲ್ಲ ಲವ್ ಫೇಲುವರ ಆದ ಹುಡುಗರ ಬಾಯಲ್ಲಿ ಬರೊ ಮಾತು ಅಂದ್ರೆ " ನನ್ನ ನಂಬಿಸಿ ಮೋಸ ಮಾಡದ್ಲು. ಬರ್ತಡೆ ಗೆ ಬಟ್ಟೆ ಕೊಡಿಸಿದಿನಿ , ಕಾಲೇಜ್ ಗೆ ಬುಕ್ಸ್ ಕೊಡಿಸಿದಿನಿ, ಕೇಳ್ದಾಗ ದುಡ್ಡ್ ಕೊಟ್ಟಿದೀನಿ, ಅವಳ ಫೇವರಿಟ್ ಹೀರೊ ಯಶ್ ಸಿನಿಮಾ ಫಸ್ಟ್ ಡೆ ಫಸ್ಟ್ ಶೋ ತೋರ್ಸಿದಿನಿ , ಹೆಸರಾಂತ ಹೋಟೆಲ್ ನಲ್ಲಿ ಡಿನ್ನರ್ ಗೆ ಕರ್ಕೊಂಡ್ ಹೋಗಿನಿ, ಇಷ್ಟ ದ ಪ್ಲೇಸ್ ಗೆ ಟ್ರಿಪ್ ಕರ್ಕೊಂಡ್ ಹೋಗಿದೀನಿ , ಹಾಕ್ಸಿರೋ ಮೊಬೈಲ್ ಕರೆನ್ಸಿ- ತಿನ್ಸಿರೋ ಪಾನಿ ಪೂರಿ ಲೆಕ್ಕ ಇಟ್ಟಿಲ್ಲ , ಇವಳಿಗಾಗಿ ಮನೇಲಿ ಜಗಳ ಮಾಡಿದೀನಿ , ಕೆಲ ಫ್ರೆಂಡ್ಸ್ ನ್ನ ದೂರ ಮಾಡ್ಕೊಂಡಿದಿನಿ, ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡಿದೀನಿ", ಆದ್ರು ನನ್ನ ಬಿಟ್ಟು ದೂರ ಆದ್ಲು. ಉಫ್ ಒಂದಾ ಎರಡಾ ಹೀಗೆ ಬೆಳೀತಾ ನೆ ಹೋಗತ್ತೆ ಪಟ್ಟಿ .  ಸಾಲದು ಅಂತ ತೀರ್ಥ ಬಿಟ್ಕೊಂಡಾಗ , ರ . . . ಮು . . . ಸು . . . ಅನ್ನೊ ಎಲ್ಲ ನಾಮವಿಶೇಷಣಗಳ ಪ್ರಯೋಗ ನೂ ಆಗತ್ತೆ . ಕಂಡ ಕಂಡವರ ಮುಂದೆ ಅವಳ ಕ್ಯಾರೆಕ್ಟರ್ ಸರ್ಟಿಫಿಕೇಟ್ ಗೆ ಹೊಸ ಭಾಷೆ ಬರೀತೀರಿ . ಇದೆಲ್ಲ ಎಷ್ಟು ಸರಿ ಫ್ರೆಂಡ್ಸ್ ? ತಪ್ಪಲ್ವ ? ನಿಮ್ಮ ಕೋಪ ತಾಪ ತಪ್ಪು ಅಂತ ನಾನ್ ಹೇಳ್ತಿಲ್ಲ , ಆದ್ರೆ ಅದಕ್ಕೊಂದು ನೆಲೆ ಬೇಕಲ್ಲ, ಅರ್ಥ ಬೇಕಲ್ಲ. ಬಟ್ಟೆ ಕೊಡ್ಸಿರಿ ಬುಕ್ ಕೋಡ್ಸಿರಿ , ಊಟ

ಆ ಮದುಮಗಳ ಖುಷಿ ನಿಮ್ಮದಾಗಲಿ.

Image
ಬೆಳಗ್ಗೆ ಮನೆ ಮುಂದೆ ಹೆಣ್ಣು ಮಕ್ಕಳು ರಂಗೋಲಿ ಹಾಕೊದನ್ನ ಹತ್ತಿರದಿಂದ ಇಲ್ಲ ಅಂದ್ರೂ ದೂರದಿಂದ ಆದ್ರೂ ಎಲ್ಲರೂ ನೋಡಿರ್ತಿರಿ. ಅಲ್ಲಿ ಗಮನಿಸಬೇಕಾದ ಒಂದು ವಿಷಯ ಏನು ಅಂದ್ರೆ ಮೊದಲು ಸಣ್ಣ ಸಣ್ಣ ಚುಕ್ಕಿಗಳನ್ನ ಇಡ್ತಾರೆ, ಆಮೇಲೆ ಒಂದನೊಂದು ಕೂಡಿಸಿದಾಗ ಅಲ್ಲಿ ಒಂದು ರಂಗೋಲಿಯ ಸುಂದರ ಚಿತ್ರ ಅರಳ್ತದೆ. ಹೀಗೆ ನಮ್ಮ ಬದುಕಲ್ಲೂ ದಿನಾಲೂ ಅನೇಕ ಸಣ್ಣ ಪುಟ್ಟ ಖುಷಿಗಳು ಎದುರಾಗ್ತವೆ, ನಾವು ಅವುಗಳನ್ನ ಒಂದುಗೂಡಿಸಿ ಸಂತೋಷ ಪಡುವಲ್ಲಿ ಎಡವುತ್ತೇವೆ. ಹೇಗೆ ಅಂತಿರಾ ?.. ಒಬ್ಬ ವಿದ್ಯಾರ್ಥಿ ಪರಿಕ್ಷೆ ಹತ್ತಿರ ಬರುತ್ತಿದ್ದಂತೆ ಫುಲ್ಲ್ ಸಿರಿಯಸ್ ಆಗಿ ಬಿಡ್ತಾನೆ, ಓದಿದ್ದೆ ಓದಿದ್ದು ಬರೆದಿದ್ದೆ ಬರೆದಿದ್ದು. ಯಾರಾದ್ರೂ ಕೇಳದ್ರೆ, ಮುಖ ಗಂಟ್ ಹಾಕಿಕೋಂಡು ಏ ಪರಿಕ್ಷೆ ಹತ್ತಿರ ಬಂತು ಮಾರಾಯ ಹೆಂಗಾಗುತ್ತೊ ಏನೋ ಅಂತಾನೆ. ಪರಿಕ್ಷೆ ಮುಗಿದ ಮೇಲೆ ಭೇಟಿಯಾಗಿ ಕೇಳಿ ಸ್ವಲ್ಪ ನಿರಾಳನಂತೆ ಕಂಡರೂ, ಮುಖದಲ್ಲಿ ರಿಸಲ್ಟ್ ಏನಗುತ್ತೊ ಏನೊ ಎಂಬ ಆತಂಕ ಹೊತ್ತು ನಿಂತಿರುತ್ತಾನೆ.  ಸರಿ ಆಮೇಲೆ ಅನ್ಕೊಂಡ ಹಾಗೆ ರಿಸಲ್ಟೂ ಬರ್ತದೆ, ಮುಂದೆ ನೌಕರಿ ಚಿಂತೆ. ಸಿರಿಯಸ್ ಆಗಿ ಓದೊದು ತಪ್ಪಲ್ಲ, ರಿಸಲ್ಟ್ ಗಾಗಿ ಕಾಯೋದು ತಪ್ಪಲ್ಲ, ನಾಳೆಯ ಬದುಕಿನ ಬಗ್ಗೆ ಯೋಚನೆ ಮಾಡೋದೂ ತಪ್ಪಲ್ಲ, ಆದರೆ ನಾಳೆಯ ಕನಸಿಗಾಗಿ ಕಲ್ಪನೆಗಾಗಿ ಈ ದಿನ ಸಿಗುವ ಖುಷಿಯನ್ನ ಬಲಿಕೋಡೋದಿದೆಯಲ್ಲ ಅದು ತಪ್ಪು. ಬದುಕು ಅಂದ್ರೆ ಬರಿ ಚಿಂತೆಗಳ ಸರಮಾಲೆ ಅಲ್ಲ, ನಡುವೆ ಸಣ್ಣ ಪುಟ್ಟ ಖುಷಿಗಳೂ ಎದುರಾಗ್ತ

ಲಲಿತಾ

ಅದೊಮ್ಮೆ ಲಲೀತಕ್ಕ ಜೊತೆ ಚಾಟ್ ಮಾಡುವಾಗ , ಇರಲಿ ಅಕ್ಕ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತೆ, ನನಗೂ ಒಂದ್ ಕಾಲ ಬರ್ತದೆ ಅಂದೆ . ಅದಕ್ಕವಳು ನನಗೆ ಅತ್ತೆ ಆಗೊ ಯೋಗ ಇಲ್ಲ ಯಾಕಂದ್ರೆ ನನಗೆ ಗಂಡ ಮಕ್ಕಳು ಇಲ್ಲ ಅಂದ್ಲು . ಹೌದು ಲಲೀತಕ್ಕ ಗೆ ಇರೋದು ಒಂದ್ ಹೆಣ್ಣು ಮಗು ಅಷ್ಟೆ , ಅದಾದ ಮೇಲೆ ಗಂಡ ಹೆಂಡತಿ ನಡುವೆ ಒಂದು ಸಣ್ಣ ಕಲಹ ಆಗಿ ನಾಲ್ಕು ವರ್ಷದಿಂದ ಬೇರೆ ಬೇರೆ ಇರೊ ವಿಷ್ಯ ಒಮ್ಮೆ ಅಕ್ಕ ನೆ ನನ್ ಮುಂದೆ ಹೇಳಿದ್ರು . ನಾನೂ ನನಗೆ ಪರಿಚಯ ಇರೊ ಒಬ್ಬ ಸ್ವಾಮೀಜಿ ಹತ್ರ ಹೋಗಿ, ಗಂಡ ಹೆಂಡತಿ ಇಬ್ಬರು ಮತ್ತೆ ಕೂಡಿ ಇರೊ ಹಾಗೆ ಏನರೇ ಮಾಡಿ ಅಂದು ಒಂದು ಯಂತ್ರ ಮಾಡ್ಕೊಂಡ್ ತಂದು ಅಕ್ಕನ್ಗೇ ಕೊಟ್ಟಿದ್ದೇ. ಅದೂ ವರ್ಕೋಟ ಆಗಿರಲಿಲ್ಲ . ಒಬ್ಳೆ ಇರ್ತಿದ್ಲು ಆಗಾಗ ಕಷ್ಟ ಸುಖ ಹಂಚಿಕೊತೀದ್ಲು . ಈ ಅತ್ತೆ ವಿಷ್ಯ ಬಂದಾಗ ನಾನಂದೆ , ಗಂಡ ಮಕ್ಕಳು ಇಲ್ಲ ಅಂತ ಯಾಕಂತಿಯ ? ನಾನ್ ಇದ್ದೀನಲ್ಲ . ನಾಳೆಯಿಂದ ನಾನ್ ನಿನಗೆ ಅಕ್ಕ ಅನ್ನೊ ಬದಲು ಅಮ್ಮ ಅಂತೀನಿ ,  ನನ್ ಮದುವೆ ಆದಾಗ ನನ್ ಹೆಂಡತಿ ನಿನಗೆ ಸೊಸೆ ಆಗ್ತಾಳೆ , ಸಿಂಪಲ ನಿನ್ ಅತ್ತೆ ಆಗ್ತೀಯ ಅಂದೆ, ಸಣ್ಣ ದ್ವನಿಯಲ್ಲಿ ನಕ್ಕು ಸುಮ್ಮನಾಗಿದ್ಲು.  ಒಂಟಿಯಾಗಿ ಇರ್ತಿದ್ರೂ ಸಂಯಮ ಮತ್ತು ಶಿಸ್ತಿನ ಹೆಣ್ಣು ಮಗಳು . ನನ್ನ ಗಮನಕ್ಕೆ ಬಂದ ಹಾಗೆ ಯಾವತ್ತೂ ಅಳತೆ ಮೀರಿ ನಡೆದವಳಲ್ಲ. ಅವಳಿಗೆ ವಿಪರೀತ ಪುಸ್ತಕ ಓದೊ ಹುಚ್ಚು ,  ಪುಸ್ತಕ ಕೊಂಡು ಓದುವಷ್ಟು ಅರ್ಥಿಕವಾಗಿ ಸದ್ರುಢಳಲ್ಲ. ನಂದು ಲೈಬ್ರರಿ ಕಾ

ವಾಟ್ಸ್ ಅಪ್ &ಇಂಟರ್ನೆಟ್ ಇರದೆ ಇರಬಹುದಾ ?

ನನಗೊಬ್ಬ ಸ್ನೇಹಿತನಿದ್ದಾನೆ ಶಿವು ಅಂತ, ಸ್ವಲ್ಪ ವಿಚಿತ್ರ ವ್ಯೆಕ್ತಿ. ಯಾರ್ ಜೊತೆನೂ ಜಾಸ್ತಿ ಬೆರೆಯಲ್ಲ ಜಾಸ್ತಿ ಮಾತಾಡಲ್ಲ,ತಾನಾಯ್ತು ತನ್ನ ಪ್ರಪಂಚ ಆಯ್ತು ಅಂತ ಇದ್ದ ಬಿಡ್ತಾನೆ. ಮನೆಮುಂದೆ ಚಂದನೆಯ ರಂಗೋಲಿ ಹಾಕಿದ್ರೆ ದಾಟಿ ಹೋಗ್ತನೆ ಅಪ್ಪಿ ತಪ್ಪಿಯೂ ಅದನ್ನ ತುಳಿಯಲ್ಲ, ಅರಳಿರೊ ಹುವನ್ನ ಯಾವತ್ತೂ ಕಿಳಿಲ್ಲ, ಬಿದಿಯಲ್ಲಿ ಹೊಗೊ ನಾಯಿ ಮರಿಗೆ ಕನಸಲ್ಲೂ ಒಂದ್ ಕಲ್ಲಿಂದ ಹೊಡೆದವನಲ್ಲ, ಹೀಗಿರುವಾಗ ಮನುಷ್ಯರನ್ನ ನೊಯಿಸೋದು ದೂರದ ಮಾತು. ಸಂಭಾವಿತ ಸಭ್ಯಸ್ತ ಅಷ್ಟೆ ಮೂಡಿ ಮನುಷ್ಯ. ಕೆಲವೊಮ್ಮೆ ಮೊಬೈಲ್ ಆಫ್ ಮಡ್ಕೊಂಡು ಹೋದ ಅಂದ್ರೆ ವಾರ ಗಟ್ಟಲೆ ಯಾರ ಸಂಪರ್ಕಕ್ಕೂ ಸಿಗಲ್ಲ. ಹಿಗಿದ್ದವನು ಮೊನ್ನೆ ಬರೊಬ್ಬರಿ ಒಂದ್ ತಿಂಗಳು ವಾಟ್ಸ್ ಆಪ್ ನಲ್ಲಿ ಕಾಣಿಸಲಿಲ್ಲ, ಫೆಸ್ ಬುಕ್ ನಲ್ಲಿ ಸುಳಿವಿಲ್ಲ, ಕಾಲ್ ಮಾಡಿದ್ರೆ ರಿಂಗ್ ಆಗ್ತಿರಲಿಲ್ಲ ,ಅಪ್ಪಿ ತಪ್ಪಿ ರಿಂಗ್ ಆದ್ರೂ ರಿಸಿವ್ ಮಾಡ್ತಿರಲಿಲ್ಲ. ಒಂದ್ ತಿಂಗಳ ನಂತರ ಭೇಟಿಯಾದ. ನಾನವನಿಗೆ, ಎಲ್ಲಿ ಹೋಗಿದ್ದೆ ? ಹೇಗಿದ್ದೆ ? ಏನ್ ಮಾಡ್ತಿದ್ದೆ ? ಎನೂ ಕೇಳಲಿಲ್ಲ. ನಾನ್ ಕೇಳಿದ್ದು ಒಂದೆ ಮಾತು, ಅಲ್ಲೊ ಮಾರಾಯ ಇಂಟರ್ನೆಟ್ ವಾಟ್ಸ್ ಆಪ್ ಇರದೆ ತಿಂಗಳು ಗಟ್ಟಲೆ ಹೇಗ್ ಇರ್ತಿಯ ? ಅಂತ. ನೀಜಾ ಅಲ್ವಾ ? ಇವತ್ತಿನ ದಿನ ಸಣ್ಣೋರು ದೊಡ್ಡೋರು , ಗಂಡು ಹೆಣ್ಣು ಅನ್ನದೆ ಎಲ್ಲರಿಗೂ ಮೊಬೈಲ್ ಎಷ್ಟು ಇಂಪಾರ್ಡೆಂಟ್ ಇದೆ ಅಂತ. ಡ್ರಗ್ಸ್ ಗಿಂತಲೂ ಇದಕ್ಕೆ ಅಡಿಕ್ಟ್ ಆಗಿದಿವಿ. ಅಂಥದ್ರಲ್ಲಿ ಈತ ಒಂದೋಂದು ತಿಂ