ಆ ಮದುಮಗಳ ಖುಷಿ ನಿಮ್ಮದಾಗಲಿ.

ಬೆಳಗ್ಗೆ ಮನೆ ಮುಂದೆ ಹೆಣ್ಣು ಮಕ್ಕಳು ರಂಗೋಲಿ ಹಾಕೊದನ್ನ ಹತ್ತಿರದಿಂದ ಇಲ್ಲ ಅಂದ್ರೂ ದೂರದಿಂದ ಆದ್ರೂ ಎಲ್ಲರೂ ನೋಡಿರ್ತಿರಿ. ಅಲ್ಲಿ ಗಮನಿಸಬೇಕಾದ ಒಂದು ವಿಷಯ ಏನು ಅಂದ್ರೆ ಮೊದಲು ಸಣ್ಣ ಸಣ್ಣ ಚುಕ್ಕಿಗಳನ್ನ ಇಡ್ತಾರೆ, ಆಮೇಲೆ ಒಂದನೊಂದು ಕೂಡಿಸಿದಾಗ ಅಲ್ಲಿ ಒಂದು ರಂಗೋಲಿಯ ಸುಂದರ ಚಿತ್ರ ಅರಳ್ತದೆ. ಹೀಗೆ ನಮ್ಮ ಬದುಕಲ್ಲೂ ದಿನಾಲೂ ಅನೇಕ ಸಣ್ಣ ಪುಟ್ಟ ಖುಷಿಗಳು ಎದುರಾಗ್ತವೆ, ನಾವು ಅವುಗಳನ್ನ ಒಂದುಗೂಡಿಸಿ ಸಂತೋಷ ಪಡುವಲ್ಲಿ ಎಡವುತ್ತೇವೆ. ಹೇಗೆ ಅಂತಿರಾ ?..
ಒಬ್ಬ ವಿದ್ಯಾರ್ಥಿ ಪರಿಕ್ಷೆ ಹತ್ತಿರ ಬರುತ್ತಿದ್ದಂತೆ ಫುಲ್ಲ್ ಸಿರಿಯಸ್ ಆಗಿ ಬಿಡ್ತಾನೆ, ಓದಿದ್ದೆ ಓದಿದ್ದು ಬರೆದಿದ್ದೆ ಬರೆದಿದ್ದು. ಯಾರಾದ್ರೂ ಕೇಳದ್ರೆ, ಮುಖ ಗಂಟ್ ಹಾಕಿಕೋಂಡು ಏ ಪರಿಕ್ಷೆ ಹತ್ತಿರ ಬಂತು ಮಾರಾಯ ಹೆಂಗಾಗುತ್ತೊ ಏನೋ ಅಂತಾನೆ. ಪರಿಕ್ಷೆ ಮುಗಿದ ಮೇಲೆ ಭೇಟಿಯಾಗಿ ಕೇಳಿ ಸ್ವಲ್ಪ ನಿರಾಳನಂತೆ ಕಂಡರೂ, ಮುಖದಲ್ಲಿ ರಿಸಲ್ಟ್ ಏನಗುತ್ತೊ ಏನೊ ಎಂಬ ಆತಂಕ ಹೊತ್ತು ನಿಂತಿರುತ್ತಾನೆ.  ಸರಿ ಆಮೇಲೆ ಅನ್ಕೊಂಡ ಹಾಗೆ ರಿಸಲ್ಟೂ ಬರ್ತದೆ, ಮುಂದೆ ನೌಕರಿ ಚಿಂತೆ. ಸಿರಿಯಸ್ ಆಗಿ ಓದೊದು ತಪ್ಪಲ್ಲ, ರಿಸಲ್ಟ್ ಗಾಗಿ ಕಾಯೋದು ತಪ್ಪಲ್ಲ, ನಾಳೆಯ ಬದುಕಿನ ಬಗ್ಗೆ ಯೋಚನೆ ಮಾಡೋದೂ ತಪ್ಪಲ್ಲ, ಆದರೆ ನಾಳೆಯ ಕನಸಿಗಾಗಿ ಕಲ್ಪನೆಗಾಗಿ ಈ ದಿನ ಸಿಗುವ ಖುಷಿಯನ್ನ ಬಲಿಕೋಡೋದಿದೆಯಲ್ಲ ಅದು ತಪ್ಪು. ಬದುಕು ಅಂದ್ರೆ ಬರಿ ಚಿಂತೆಗಳ ಸರಮಾಲೆ ಅಲ್ಲ, ನಡುವೆ ಸಣ್ಣ ಪುಟ್ಟ ಖುಷಿಗಳೂ ಎದುರಾಗ್ತವೆ ಅವುಗಳನ್ನ ನಾವು ಗಮನಿಸುವುದೆಯಿಲ್ಲ. ಪರಿಕ್ಷೆ ಹತ್ತಿರದ ದಿನಗಳು ಅಂದ್ರೆ ಏನೆಲ್ಲ ಖುಷಿ ಎದುರಾಗ್ತವೆ ಗೊತಾ ? ಕ್ಲಾಸ್ ಗಳು ಮುಗಿದಿರ್ತವೆ , ಕಾಲೇಜ್ ಗೆ ಹೋಗೊದಿರೊಲ್ಲ ಅಂದ್ರೂ ನಲ್ಕಾರು ಜನ ಸ್ನೇಹಿತರು ಒಂದೆಡೆ ಸೇರ್ತಿರಿ, ಯಾರದೊ ಒಬ್ಬರ ಮನೆಯಲ್ಲಿ ಕಂಬೈನ್ಡ್ ಸ್ಟಡಿ ಅಂತ ಕೂಡ್ತಿರಿ. ಅವರದು ಯಾವ ಜಾತಿ ಅಂತ ನೋಡಲ್ಲ , ಅವರು ಬಡವರೊ ಶ್ರಿಮಂತರೊ ಲೆಕ್ಕಕ್ಕ ಬರಲ್ಲ, ಅಲ್ಲಿರೋದು ಒಂದು ನಿರ್ಮಲ ಸ್ನೇಹ ಅಷ್ಟೆ. ನಿಮಗೆ ತಿಳಿದಿದ್ದು ಇನ್ನೊಬ್ಬರಿಗೆ ತಿಳಿಸ್ತಿರಿ, ನಿಮಗೆ ತಿಳಿಯದ್ದು ಇನ್ನೊಬ್ಬರಿಂದ ಕೇಳಿ ತಿಳ್ಕೊತಿರಿ, ನಡು ನಡುವೆ ಸಣ್ಣ ಪುಟ್ಟ ಜೋಕ್ಸ್ ಗಳು ಹರಿದಾಡ್ತವೆ , ಕೊನೆಗೆ ಎಲ್ಲರೂ ಸೇರಿ ಅದು ಇದು ಎನ್ನೆದೆ ಇರುವಂತ ತಿಂಡಿಯನ್ನ ಖುಷಿಯಿಂದ ತಿಂದಿರ್ತಿರಿ. ಆ ದಿನ ಕಳೆದದ್ದೆ ಗೊತಾಗಲ್ಲ. ಸ್ವಲ್ಪ ಆತಂಕದಲ್ಲಿ ಪರಿಕ್ಷೆ ಬರೆದರೂ, ಕೊನೆಯ ದಿನ ಒಬ್ಬರಿಗೊಬ್ಬರು ಬಣ್ಣ ಎರಚಿ ಕುಣಿದಾಡ್ತಿರಿ. ಅದೆಲ್ಲ ಬಿಟ್ಟು, ಪರಿಕ್ಷೆ ಮುಗಿದು ರಿಸಲ್ಟ್ ಬಂದು ನೌಕರಿ ಬಂದ್ ಮೇಲೆ ನೆ ನಾನ್ ಖುಷಿ ಪಡ್ತಿನಿ ಅಂದ್ರೆ ಅದರ ನಡುವೆ ಬಂದು ಹೋಗೊ ಖುಷಿಗಳೆಲ್ಲ ವ್ಯೆರ್ಥ ಅಲ್ವಾ ?.

ನಾನ್ ಕಂಡ ಹಾಗೆ ಪ್ರತಿಯೊಂದು ಕ್ಷಣವನ್ನ ಸವಿಯುವ, ಎಂಜಾಯ್ ಮಾಡುವ , ಜೀವವೊಂದಿದ್ರೆ ಅದು ಮದುಮಗಳು.  (ಹೊರಗಡೆ ಎಲ್ಲೂ ಪ್ರಿತಿ ಪ್ರೇಮ ಅಂತ ತಲೆ ಕೆಡಿಸ್ಕೊಂಡಿಲ್ಲ ಅಂದ್ರೆ) ನಾಳೆ ಗಂಡಿನವರು ನೋಡೋಕೆ ಬರ್ತಿದಾರೆ ಅಂದ್ರೆ ಆ ಕ್ಷಣದಿಂದಲೆ  ಶುರು ಅವಳ ಸಂಭ್ರಮ. ತನಗೆ ಒಪ್ಪುವಂತ ದ್ರೆಸ್ಸ್ ರೆಡಿ ಮಾಡ್ಕೊಂಡು , ತಕ್ಕನಾದ ಹೇರ್ ಸ್ಟೈಲ್ ಪ್ರ್ಯಾಕ್ಟಿಸ್ ಮಾಡಿ, ತನಗೆ ಸೂಟ್ ಆಗುವಂತ ವಡವೆ ಇದ್ದಿಲ್ಲ ಅಂದ್ರೂ ಫ್ರೆಂಡ್ಸ್ ಕಡೆ ಇಸ್ಕೊಂದ್ ಬಂದು, ರಾತ್ರಿನೆ ಎಲ್ಲ ಹೊಂದಿಸಿ ಇಟ್ಕೊಂಡು, ಬೇಳಗ್ಗೆ ಅವರು ಬರುವ ಹೊತ್ತಿಗೆ ರೆಡಿ ಆಗಿ ನಾಚಿಕೆ ತುಂಬಿದ ಮುಖದಲ್ಲಿ ಒಂದು ಮುಗುಳ್ನಗೆ ಧರಿಸಿ ಎದುರಿಗೆ ನಿಂತ್ ಬಿಡ್ತಾಳೆ. ದೇವರ ದಯೆ ಪರಸ್ಪರರ ಒಪ್ಪಿಗೆ ಮುಗಿದು ಮದುವೆ ಡೇಟ್ ಪಿಕ್ಸ್ ಆದ್ರೆ ಮುಗಿತು, ಆ ಖುಷಿ ಇಮ್ಮಡಿಗೊಳ್ತದೆ.  ಮದುವೆ ಇನ್ನೂ ವರ್ಷ್ ಆರ್ ತಿಂಗಳ ಇರುವಾಗ್ಲೆ ಆಕೆ ಹೊಸದೋಂದು ಅನುಭವಕ್ಕೆ  ತೆರೆದುಕೊಳ್ತಾಳೆ . ಏನು ಅಂದ್ರೆ , ನಾನ್ ಮದುವೆ ದಿನ ಯಾವ್ ಥರ್ ಬಟ್ಟೆ ಊಟ್ಕೊಬೇಕು, ಯಾವ್ ಥರ್ ಒಡವೆ ಮಾಡಿಸ್ಬೇಕು, ಯಾವ್ ಯಾವ್ ಸ್ನೇಹಿತರಿಗೆ ಇನ್ವೈಟ್ ಮಾಡ್ಬೇಕು ಅನ್ನೊದರ ಹೀಡಿದು ಮದುವೆ ಹಿಂದಿನ ದಿನ ನಾನು ಯಾವ ಥರ ಮೆಹಂದಿ ಬಿಡಿಸ್ಕೊಬೇಕು ಅನ್ನೊವರೆಗೂ ಸಿದ್ದತೆ ಶುರುವಾಗ್ತದೆ. ಮದುವೆ ತಿಂಗಳೊಪ್ಪತ್ತ್ ಇರುವಾಗಂತೂ ಯಾರಿಗೂ ಪುರುಸೊತ್ತ್ ಇರೊದಿಲ್ಲ. ಬಟ್ಟೆ ಖರಿದಿ , ಒಡವೆ ಖರಿದಿ, ಲಗ್ನ್ ಪತ್ರಿಕೆ ಹಂಚೊದು, ದೇವರ ಕಾರ್ಯ, ಹಿಗೆ ಬಿಡುಲ್ಲದ ವೇಳಾಪಟ್ಟಿಯಿದ್ದರೂ , ಈ ಕ್ಷಣ ಮತ್ತೆಂದೂ ನನ್ನ ಬಾಳಲ್ಲಿ ಮರಳಿ ಬರೊದಿಲ್ಲ ಎಂಬಂತೆ ಪ್ರತಿಯೊಂದರಲ್ಲೂ ಅತಿ ಶ್ರೆದ್ದೆಯಿಂದ ಭಾಗವಹಿಸ್ತಾಳೆ, ಪ್ರತಿಯೊಂದರಲ್ಲಿ ಸಿಗುವ ಸವಿಯನ್ನ ಸವಿತಾಳೆ. ಮದುವೆಯಾಗಿ ಹೊಗುವಾಗ, ಹಡೆದ ಅಪ್ಪ ಅಮ್ಮ, ಆಡಿದ ಅಂಗಳ, ಜೊತೆ ಬೆಳೆದೆ ತಮ್ಮ ತಂಗಿ, ಜೀವದಂತ ಗೆಳತಿಯರನ್ನ ಬಿಟ್ಟು ಹೊರಡುವ ನೆಪವಾಗಿ ಕಣ್ಣಲ್ಲಿ ನೀರು ಬಂದರೂ, ಹೊಸ ಜೀವನದ ಖುಷಿಯ ಆಶೆಯಲ್ಲೆ ಗಂಡನ ಮನೆಯ ಹೊಸ್ತಿಲ ತುಳಿಯುತ್ತಳೆ.
ಹುಡುಗ ಎಂಥವನೊ ಏನೊ ? ನಾಳೆಯ ನನ್ನ ಜೀವನ ಹೆಂಗೊ ಏನೊ ಅಂತ ಕೆಲಸಕ್ಕೆ ಬಾರದ ಆಲೊಚನೆಯಲ್ಲಿ ಮುಳುಗಿದರೆ, ಆ ಮದುವೆಯ ಖುಷಿ ಸವಿಯಲು ಆಕೆಯಿಂದ ಸಾದ್ಯವಾಗ್ತಿತ್ತಾ ? ಇಲ್ಲ ಅಲ್ವ ?. ಕಷ್ಟ ಮನುಷ್ಯನಿಗೆ ಬರದೆ ಮರಕ್ಕ ಬರ್ತದಾ ? ಜೀವನ ಅಂದ ಮೇಲೆ ಸೋಲು ಗೆಲುವು , ನೋವು ನಲಿವು ಎಲ್ಲ ಇದ್ದಿದ್ದೆ . ಆದರೆ ಅದರ ನಡುವೆ ಬಂದು ಹೋಗುವ ಸಣ್ಣ ಪುಟ್ಟ ಖುಷಿಗಳನ್ನ ಸೇರಿಸಿದಾಗಲೆ ಬದುಕೊಂದು ಚಂದನೆಯ ರಂಗೋಲಿಯಂತೆ ರೂಪುಗೊಳ್ಳುವುದು . ಈ ದಿನ, ಈ ಕ್ಷಣ ಮತ್ತೆಂದೂ ನಮ್ಮ ಬಾಳಲ್ಲಿ ಮರಳೊದಿಲ್ಲ,ಅದನ್ನ ಸವಿಯೋಣ , ಸಂಭ್ರಮಿಸೋಣ, ಅದು ಸಾದ್ಯವಾಗೋದು ಆ ಮದುಮಗಳ ಮನಸ್ಥಿತಿ ಧರಿಸಿದಾಗ ಮಾತ್ರ. ಕಾಣದ ನಾಳೆಗಾಗಿ ಕೈಲಿರೊ ಈ ದಿನವನ್ನ ಕೊಲ್ಲೊದು ಎಷ್ಟು ಸರಿ ?  ಆಲ್ ದಿ ಬೆಷ್ಟ್ ಆ ಮದುಮಗಳ ಖುಷಿ ನಿಮ್ಮದಾಗಲಿ. 
ನಿಮ್ಮ ಸ್ನೇಹಿತ ಸಿದ್ದು ತಾಂಬೆ .  

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ