Posts

Showing posts from January, 2018

ಭಕ್ತಿ ಇರಲಿ, ಭಯ ಬೇಡ.

ನಿನ್ನೆ ಸ್ನೇಹಿತನೊಬ್ಬ call ಮಾಡಿದ್ದ , ಪರಸ್ಪರ ಕುಶಲೋಪರಿ ವಿನಿಮಯದ ನಂತರ, ದೇವರ ಕುರಿತು ಒಂದು ಮಾತು ಕೇಳೋದಿತ್ತು ನಿನಗೆ ಅಂದ. ನಾ ಎನ್ ಶಾಣ್ಯಾ ಅದಿನೇಂತ ಕೇಳತೊ ಮಾರಾಯ ಅಂದೆ ನಾನು. ಏ ಹಂಗೇನಿಲ್ಲ, ನೀ ಅವೂ ಇವೂ ಪುಸ್ತಕಾ ಓದ್ತತಿ, ಮತ್ತ ಸಿದ್ದೇಶ್ವರ ಸ್ವಾಮೀಜಿ ಪ್ರವಚನಾನೂ ಸ್ವಲ್ಪ ಕೇಳ್ತೀ, ನಂಗ್ ಗೊತ್ತದ ಅದಕ್ಕ ಅಂದ. ಆಯ್ತು ಕೇಳಪ್ಪ ತಿಳಿದಸ್ಟ ಹೇಳ್ತೀನಿ ಅಂದೆ.       ಎನಿಲ್ಲ,  ವಾಟ್ಸಪ್ಪ ನಲ್ಲಿ ಈಗೊಂದು msg ಬಂದಿತ್ತು ದೇವರ ಕುರಿತಾಗಿ. ಈ msg ನ 10 ಜನರಿಗೆ ಕಳಿಸಿರಿ, 10 ನಿಮಿಷ ದಲ್ಲಿ ಒಳ್ಳೆ ಸುದ್ದಿ ಕೇಳ್ತೀರಿ ನೇಗ್ಲೇಕ್ಟ ಮಾಡದ್ರೆ ಕೇಡಾಗುತ್ತೇ ಅಂತ ಇದೆ, ನಿಜಾನಾ ? ಅಂದ . ನೋಡ್ ದೋಸ್ತ ನಡೆದ್ರ ದಾರಿ ಸಾಗ್ತದ ,  ದುಡದ್ರ ಹೊಟ್ಟಿ ತುಮ್ತದ, ಇಂಗ್ msg ಫಾರ್ವರ್ಡ್ ಮಾಡದ್ರ ಒಳ್ಳೇದು ಆಗಲ್ಲ ಕೆಟ್ಟದ್ದೂ ಆಗಲ್ಲ.  ಅಸ್ಟಕ್ಕು ಈ msg ನ ನಮ್ಮಂತಹ ಮನುಷ್ಯ ರೆಡಿ ಮಾಡಿದ್ದೆ ಹೊರತು , ಯಾವ ದೇವರು ಬಂದು ಹಿಂಗ ಹೇಳಿಲ್ಲ ಅಂದೆ . ಅದ್ರೂ ಅತನಿಗೆ ಸಮಾಧಾನ ಅಗಲಿಲ್ಲ . ಯಾಕೊ ಭಯಾ ಆಗಾತಾದೊ ಅಂದ . ದೇವರ ಮ್ಯಾಲ ಭಕ್ತಿ ಇರಬೇಕು , ಭಯ ಇರಬಾರದು . ಭಯಕ್ಕೂ ಭಕ್ತಿಗೂ ಭಾಳ ವ್ಯತ್ಯಾಸ ಅದ,  ಅದೆಲ್ಲ ಇರ್ಲಿ. T V ಒಳಗ ಒಂದು ಕಾರ್ಯಕ್ರಮ ಬರತಿತ್ತ ವೀಕೆಂಡ್ ವಿತ್ ರಮೇಶ್ ಅಂತ ನೋಡಿ ಇಲ್ಲ ಅಂದೆ . ಹೂಂ ನೋಡಿನಿ ಅಂದ . ನಾನೂ ಎನ್ ಜಾಸ್ತಿ ನೋಡಿಲ್ಲ ಕೆಲವೊಂದು ಎಪಿಸೋಡ್ ಅಸ್ಟೆ ನೋಡಿನಿ . ಅಲ್ಲಿ ಬಂದು ತಮ್ಮ ತಮ್ಮ ಅನುಭವ ಹ

ಹಣ್ಣಿನ ಕತಿ

ಒಂದು ಹಣ್ಣಿಗಿ ತಾನು ಗಿಡದಾಗ ಇರುವಸ್ಟು ದಿನಾನೂ ಗಿಡದ ಬೆಲೆ ಅದಕ್ಕ ಗೋತ್ತಿರಾಂಗಿಲ್ಲ. ಹಣ್ಣಾದ ಮರುಕ್ಷಣ ನಾ ಉದುರಿ ನೆಲಕ್ಕ ಬೀಳಬೇಕು, ಉಳಕೊಂತ -ಉಳಕೊಂತ  ಜಗತ್ತೆಲ್ಲ ಸುತ್ತಬೇಕು ಅಂತ ವಿಚಾರ ಮಾಡ್ತಿರ್ತದ. ಹಂಗ , ತನ್ನಿಚ್ಛೆಯಂಗ ಹಣ್ಣಾದ ಮರುಕ್ಷಣ ಗಿಡದಿಂದ ಜಾರಿ ನೆಲಕ ಬೀಳ್ತದ. ಬಿದ್ದ ಹಣ್ಣನ್ನ ಒಬ್ಬ ಬಂದು ಎತ್ತಿ, ಮೈಗಿ ಹತ್ತಿದ ಮಣ್ಣ ಒರಿಸಿ, ಒಂದು ಸ್ವಚ್ಛ ಬುಟ್ಯಾಗ ಇಟ್ಟ . ಹಣ್ಣಿಗಿ ಭಾಳ ಖುಷಿ ಆತು. ಆಮ್ಯಾಲ ಅಂವ ಹಣ್ಣಿನ ಬುಟ್ಟಿ ತಲಿ ಮ್ಯಾಲ ಹೊತ್ಕೊಂಡು ಸಿಟಿ ಮರ್ಕಟಿಗಿ ಬಂದ. ದಿನಾ ಅದೆ ಎಲಿ-ಹೂವ , ಗಾಳಿ -ಧೂಳ ನೋಡಿ ಬ್ಯಾಸ್ರಾಗೀತ್ತು ಹಣ್ಣಿಗಿ.  ಈ ದೊಡ್ಡ ಊರ, ಎತ್ತರ ಕಟ್ಟಡ ,  ನಮುನಿ - ನಮುನಿ ವಾಹನ, ಈ ಹೊಸಾ ಲೋಕ ನೋಡಿ ಭಾಳ ಅಂದ್ರ ಭಾಳ ಖುಷಿ ಆತು. ಗಿಡದಿಂದ ಜಾರಿ ಬಿದ್ದು ಛಲೊ ಮಾಡಿದ್ನೀ ಅಂತು . ಆತ ಮಾರುಕಟ್ಟೆಯಲ್ಲಿ ಮಾರಾಕ ಇಟ್ಟ. ಒಬ್ಬ ಗಿರಾಕಿ ಬಂದ , ಹತ್ತು ರೂಪಾಯಿ ಕೊಡ್ತೀನಿ ಕೊಡು ಅಂದ. ಮತ್ತೊಬ್ಬ ಬಂದ , ನಾ ಇಪ್ಪತ್ತು ಕೊಡ್ತೀನಿ ಕೊಡು ಅಂದ . ಹಣ್ಣಿಗಿ ಅಶ್ಚರ್ಯ, ಇವ್ರೆಲ್ಲಾ ನನಗ ಎಸ್ಟ್ ಕಿಮ್ಮತ ಕೊಡ್ತಾರಲ್ಲಾ ಅಂತ,  ಹಂಗ ಆನಂದ. ಮೂರನೇ ಗಿರಾಕಿ ಮೂವತ್ತು ರೂಪಾಯಿ ಕೊಟ್ಟು ಮನಿಗಿ ತಂದ. ಸಾಗವಾನಿ ಕಟಗಿದು ಡೈನಿಂಗ್ ಟೇಬಲ್ ಮ್ಯಾಲ, ಒಂದು ಬೆಳ್ಳಿ ಪ್ಲೇಟ್ ಒಳಗ ಈ ಹಣ್ಣಿಗಿ ಇಟ್ಟ . ಆ ಕ್ಷಣಕ್ಕ ಹಣ್ಣಿಗಿ ಆದ ಸಂತೋಷ ಹೇಳಾಕ ಅದಕ್ಕ ಪದಾನ ಇರ್ಲಿಲ್ಲ ,  ಅಟ್ಟು ಖುಷಿ ಪಟ್ಟತು, ಗಿಡಕ್ಕ ಮರೀತು .

ಬಿ ಹ್ಯಾಪಿ

ಬೈಕ್ ನಂಬರ ಪ್ಲೇಟ್ ಮೇಲೆ ಬರೆದಂತ ಚುಟುಕು ಸಾಲುಗಳನ್ನ, ಆಟೊ ಹಿಂದೆ ಬರೆದ ಭಗ್ನಪ್ರೇಮ ನಿವೇದನೆಗಳನ್ನ,  ಸಿಟಿ ಬಸ್ ನಲ್ಲಿ ಬರೆದ ಗಾದೆ ಮಾತುಗಳನ್ನ,  ಅಚ್ಚರಿಯಿಂದ ನೋಡೋದು ಈಸ್ಟ್ ಆದವನ್ನ ಬರೆದು ಇಟ್ಕೊಳ್ಳೋದು, ಮೊದಲಿನಿಂದಲೂ ಅದೊಂದು ಹವ್ಯಾಸ . ಇತ್ತೀಚೆಗೆ ನನಗೆ ತುಂಬಾ ಸೆಳಿತಿರೋದು ಈ ವಾಟ್ಸ್ಆಪ್ status ಗಳು . ಕೆಲವೊಂದು ಸ್ಪೂರ್ತಿದಾಯಕ ಆಗಿರ್ತವೆ , ಕೆಲವೊಂದು funny ಯಾಗೀರ್ತವೆ, ಇನ್ನೂ ಕೆಲವು ವಿಷಾದಮಯವಾಗೀರ್ತವೆ . ಅವರ status ಓದಿದರೆ ಅವರ ಸದ್ಯದ ಮನಸ್ತಿತಿ (ನೋವು ಅಥವಾ ನಲಿವು) ಅರಿಯಬಹುದು . ಹತ್ತು ಜನರಲ್ಲಿ ಆರು ಜನ ಈ ವಿಷಾದಮಯವಾದ status ಗಳೆ ಇಟ್ಟಿರ್ತಾರೆ,  ಪಾಪ ಅನ್ಸತ್ತೆ . ಈ ಹತ್ತು ಜನರಲ್ಲಿ ನಾಲ್ಕು ಜನ ಮಾತ್ರ ಖುಷಿಯಾಗಿರೋದಾ ? ಉಳಿದ ಆರು ಜನಕ್ಕೆ ನಗಲಾರದಂತಹ ನೋವುಗಳಿವೆಯಾ  ಅಂತ ಹುಡುಕಿದರೆ,  ಜಗತ್ತಿನಲ್ಲಿ ಇರದ ಸಮಸ್ಯೆ ಏನೂ ಇರುವುದಿಲ್ಲ . ಮೊನ್ನೆ ನನ್ನ ಗೆಳೆಯನೊಬ್ಬನ status ಓದಿದೆ. ಸಂಬಂಧ ಗಳಿಗೆ ಬೆಲೆಯಿಲ್ಲ ಎಲ್ಲರೂ ನಾಟಕ ಆಡ್ತಾರೆ ಅನ್ನೊ ಅರ್ಥದಲ್ಲಿತ್ತು. call ಮಾಡಿ, ಯಾಕ್ಲೇ ಎನ್ ಆಯ್ತು ಅಂದೆ . ಅಕಿ ದಿನಾ ಮುಂಜಾನೆ 8ಕ್ಕ good morning ವಿಶ್ ಮಾಡ್ತಿದ್ಲು,  ಈವತ್ತ 10 ಗಂಟೆ ಆದ್ರೂ msg ಬಂದಿಲ್ಲ ಅಂದ. ಅದಕ್ಯಾಕ ಅಸ್ಟ ತೆಲಿ ಕೆಡಸ್ಕೊಂಡಿಲೆ. ಮನೇಲಿ ಏನೊ ಕೆಲ್ಸ ಇರ್ಬೋದು , mobile ಚಾರ್ಜ ಇರ್ಲೀಕೀಲ್ಲ, ಇಲ್ಲಾಂದ್ರೆ net ಖಾಲಿ ಅಗೀರ್ಬೋದು. ಎಲ್ಲನೂ ಸರಿ ಇದ್ದೂ ನಿನಗೆ msg

ಲವ್ ಈಸ್ ಬ್ಲೈಂಡ್ (kannada article)

Image
ಮೊನ್ನೆ watsapp chat ಮಾಡುವಾಗ ತಂಗಿಯೋಬ್ಬಳು ಇಟ್ಟಿರೋ ಅಪರೂಪದ  dp ಯೊಂದು ಕಣ್ಣಿಗೆ ಬಿತ್ತು . ಆ photo ದಲ್ಲಿನ ಬರಹ ಹೀಗಿತ್ತು . love is blind ಅಂತಾರೆ ಏನಕ್ಕೆ ಗೊತ್ತಾ ? ನಮ್ಮ ಮುಖ ನೋಡುವ ಮುಂಚೆಯೇ ಅಮ್ಮ ನಮ್ಮನ್ನ ಪ್ರೀತಿಸಲು ಶುರು ಮಾಡಿರುತ್ತಾಳೆ ಅದು ಪ್ರೀತಿ ಅಂದ್ರೆ ..     ಅಂತ  ಪಕ್ಕದಲ್ಲೋಂದು ಮುದ್ದಾದ ಮಗುವನ್ನ ತಬ್ಬಿಕೊಂಡ,  ಅಸ್ಟೆ ಮುದ್ದಾದ ತಾಯಿಯ ಚಿತ್ರ .ಮತ್ತೆ ಮತ್ತೆ ನೋಡಿದೆ ,  ಹಾಗೆ ಸೂಪರ್ dp ಅಂತ ಆ ತಂಗಿಗೆ msg ಮಾಡಿದೆ . ಎಸ್ಟು ಅದ್ಭುತ ಅಲ್ಲವಾ ತಾಯಿಯ ಮಮತೆ ಮಮಕಾರ ? ತನ್ನ ಹೊಟ್ಟೆಯಲ್ಲಿ ಮಗುವೊಂದು ಮೂಡಿದರ ಸಣ್ಣ ಸೂಚನೆ ಸಿಕ್ಕ ಮರುಕ್ಷಣ ,  doctor ರಲ್ಲಿಗೆ  ಓಡಿ ಹೋಗುತ್ತಾಳೆ . doctor ಕನ್ಫರ್ಮ ಮಾಡಿ ಕಂಗ್ರೊಜುಲೇಶನ್ಸ ಹೇಳಿದಾಗ              ಆಡು ಮಕ್ಕಳ ನೊಡಿ ಬೇಡಿತ ನನ ಜೀವ               ಕೇಳಿದ್ದನೇನ ಶೀವರಾಯ ಹೊಟ್ಯಾಗ                ಮುಡಿದನೆನ ಮಗರಾಯ ಏಂಬ ಜನಪದ ತ್ರಿಪದಿ ಯಂತೆ ಅವಳಿಗಾಗೋ ಆನಂದ ಹೇಳ ತೀರದು . ಅವತ್ತಿನಿಂದ ಅವಳು ತಿನ್ನುವ ಪ್ರತಿಯೊಂದು ತುತ್ತು ಅನ್ನ ,  ಸೇವಿಸುವ ಔಷಧಿ ,  ಹಾಗೆ ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ,  ಎಲ್ಲವೂ ಕಾಣದ ಆ ಕಂದನಿಗಾಗಿ . ಆ ಕರುಳ ಬಳ್ಳಿ ಕಪ್ಪಾಗಿದೆಯೋ  ಬೆಳ್ಳಗಿದೇಯೋ ,  ಕುಂಟಿದೇಯೋ ಕುರುಡಿದೇಯೋ ? ಊ ಹೂಂ ಒಂದೂ ಗೊತ್ತಿಲ್ಲ . ಗೊತ್ತಿರುವುದು ಇಸ್ಟೇ ,  ತನ್ನ ಮಗು , ತಾನದಕ್ಕೆ ನೀಡಬಹುದಾದ ಬೆ