Posts

Showing posts from November, 2020

ಪ್ರೇಮಕ್ಕಿಲ್ಲದ ಜಾತಿ ಕಾಮಕ್ಕುಂಟೆ ?

ಆಕೆ ನನಗೆ ಸುಮಾರು ಆರು ವರ್ಷದಿಂದ ಗೊತ್ತು. ಚಿಕ್ಕ ವಯಸ್ಸಲ್ಲಿ ಮದುವೆ ಆಗಿತ್ತು. ಕುಡುಕ ಗಂಡ, ವಗ್ಗದ ವಾತಾವರಣ. ಬದುಕಿನ ಬಗ್ಗೆ ತಾನು ಕಟ್ಟಿಕೊಂಡ ಕನಸುಗಳ ಕೊಲ್ಲಲು ಮನಸಾಗದೆ ತವರಿಗೆ ವಾಪಸ್ ಆಗಿದ್ದಳು. ಗಂಡನ ಮನೆಯಿಂದ ಜಗಳ ಮಾಡಿ ತವರಿಗೆ ವಾಪಸ್ ಆದವರನ್ನ ಯಾರೂ ರತ್ನಗಂಬಳಿ ಹಾಸಿ ಬರಮಾಡಿಕೊಳ್ಳಲ್ಲ. ಒಂದಿಷ್ಟು ಪ್ರಶ್ನೆ. ಯಾಕೆ? ಏನು? ಕೆಲ ಗಂಡಸರು ಹಾಗೆ ಅಡ್ಜಸ್ಟ್ ಮಾಡ್ಕೋಬೇಕು ಅನ್ನೋ ತರ್ಕಹಿನ ಸಲಹೆ. ಸ್ವಲ್ಪ ದಿನದ ನಂತರ ತಾಯಿ ಸುಮ್ಮನಾಗಬಹು. ಆಕೆನೂ ಒಂದ್ ಹೆಣ್ಣು. ಆಕೆಗೆ ಗೊತ್ತು, ಹೆಣ್ಣಿನ ಕಷ್ಟ ಸಂಕಟ, ಕನಸು ಕಣ್ಣೀರು, ಬಯಕೆ ಬೇಸರಿಕೆ,. ಕೆಲ ಗಂಡಸರು ನಡೆದುಕೊಳ್ಳುವ ರೀತಿ ನೀತಿ ಎಲ್ಲವನ್ನೂ ನೋಡಿಕೊಂಡು ಬಂದವಳು. ಅಮ್ಮ ಸುಮ್ಮನಾದಳು. ಆದ್ರೆ  ಅಪ್ಪನಿಗೆ ಮರ್ಯಾದೆಯ ಪ್ರಶ್ನೆ. ಆತನಿಗೆ ಮಗಳ ಕಷ್ಟ ಬೇಡ, ಕಣ್ಣೀರು ಬೇಡ. ಊರಲ್ಲಿ ಎರಡು ಜನ ಇಂಥವನ ಮಗಳು ಗಂಡನ ಬಿಟ್ಟು ಕೂತಿದ್ದಾಳೆ ಅಂತ ಅನ್ನಬಾರದು. ಅಪ್ಪ ದಿನ ಸಂಜೆ ಕುಡಿದು ಬಂದು ಶುರು ಮಾಡೋನು. ಹೋಗು ಗಂಡನ ಮನೆಗೆ, ಮರ್ಯಾದೆ ಪ್ರಶ್ನೆ. ದಿನ ಸಂಜೆ ಆದ್ರೆ ಇದೆ ರಗಳೆ ಮನೇಲಿ. ಹೋಗು ಅಂತ ಅಪ್ಪ, ಆತ ಸರಿಯಿಲ್ಲ ಹೋಗಲ್ಲ ಅಂತ ಮಗಳು. ಆಗ ಪರಿಚಯ ಆದವಳು ನನಗೆ. ಆಕೆ ಎದೆಯಲ್ಲಿ ದುಃಖ ಇತ್ತು, ನನ್ನೆದೆಯಲ್ಲಿ ಸಮಾಧಾನವಾಗಿ ಕೆರಳಿಸಿಕೊಳ್ಳೋ ಕಿವಿಗಳಿದ್ವು. ಆಗಾಗ ಕಾಲ್ ಮಾಡೋಳು, ಮನೆಯಲ್ಲಿ ನ ಜಗಳ, ಅಪ್ಪ ಬೈದ ಬೈಗುಳ, ಗಂಡನ ಮನೆಯಲ್ಲಿ ತನಗಾದ ಅನ್ಯಾಯ, ಎಲ್ಲ ಹೇಳೋಳು, ಅಳೋಳು