Posts

Showing posts from July, 2022

ವಾಟ್ಸಾಪ್ ಸ್ಟೇಟಸ್

ಈ ವಾಟ್ಸಾಪ್ ಸ್ಟೇಟಸ್ ಅನ್ನೋದು ಕೆಲವರಿಗಂತು  30x40 ಸೈಟ್ ನಷ್ಟೆ ಅಮೂಲ್ಯ ಮತ್ತು ಅನಿವಾರ್ಯವಾಗಿದೆ. ಕೆಲವೊಬ್ಬರು ತಮ್ಮ ಇಷ್ಟ ದೇವರ ಫೋಟೋ ಶೇರ್ ಮಾಡುತ್ತಾರೆ, ಕೆಲವರ ತಮ್ಮ ನೆಚ್ಚಿನ ನಟ ನಟಿಯರ ಫೋಟೋ ಅಥವಾ ವಿಡಿಯೋ ಶೇರ್ ಮಾಡುತ್ತಾರೆ, ಇನ್ನು ಕೆಲವರು ಸ್ಟೇಟಸ್ ಅಲ್ಲಿ ತಮ್ಮ ಭಾವನೆಗಳನ್ನು ಬರೆಯುವ ಮೂಲಕ ತಮ್ಮ ವೈರಿಗಳಿಗೆ ಅಥವಾ ತಮ್ಮ ಪ್ರೀತಿ ಪಾತ್ರರಿಗೆ ಏನೊ ಒಂದು ಸಂದೇಶ ರವಾನಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು, ಒಂದು ವಿಶೇಷವಾದ ಸ್ಥಳಕ್ಕೆ ಭೇಟಿ ಕೊಟ್ಟಾಗ ಆ ನೆನಪಿಗಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೇರ್ ಮಾಡ್ತಾರೆ, ಅಲ್ಲಿ ಸವಿದಂತ ವಿಶೇಷವಾದ ತಿಂಡಿ ತಿನಿಸುಗಳ ಬಗ್ಗೆ ಹಂಚಿಕೊಳ್ಳುತ್ತಾರೆ. ತಮ್ಮ ಪುಟ್ಟ ಮಕ್ಕಳಿಗೆ ವಿವಿದ ರೀತಿ ಅಲಂಕಾರ ಮಾಡಿ, ಬಗೆ ಬಗೆಯ ಭಂಗಿಯಲ್ಲಿ ಫೋಟೋ ತೆಗೆಸಿ, ಅದಕ್ಕೊಂದು ಚಂದನ ಹಾಡು ಜೋಡಿಸಿ ವಿಡಿಯೋ ಮಾಡಿ, ಸ್ಟೇಟಸ್ ಹಾಕೊದೆಂದರೆ ನಮ್ ಭಾರತಿ ಅಂತಹ ಎಳೆ ತಾಯಂದಿರಿಗೆ ಎಲ್ಲಿಲ್ಲದ ಖುಷಿ. ಇನ್ನು ಕೆಲವೊಬ್ಬರು ಸ್ಟೇಟಸ್ ಹಾಕ್ತಾರೆ ಅದಕ್ಕೂ ಅವರಿಗೂ ಸಂಬಂಧನೇ ಇರಲ್ಲ, ಎಲ್ಲರೂ ಹಾಕ್ತಾರೆ ನಮ್ದು ಒಂದಿರಲಿ ಅಂತ ಹಾಕ್ತಿರ್ತಾರೆ ಅಷ್ಟೇ. ವಾಟ್ಸಪ್ ಸ್ಟೇಟಸ್ ನ ವಾಸ್ತವ ಹೀಗಿರುವಾಗ, ಒಬ್ಬರು ಹಾಕಿದ ಒಂದು ವಾಟ್ಸಪ್ ಸ್ಟೇಟಸ್ ಯಿಂದ ಅವರ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬರೆಯೋಕೆ ಸಾಧ್ಯನಾ? ಅಥವಾ ಆ ಪ್ರಯತ್ನ ಎಷ್ಟು ಸರಿ? ಇತ್ತೀಚಿಗೆ ನನ್ ಜೀವನದಲ್ಲೇ ನಡೆದ ಒಂದ್ ಘಟನೆ ಹೇಳ್ತಿನಿ ಕೇಳಿ. ನಾನ

ಒಂದು ಬಿಯರ್ ನ ಕಥೆ

ಸ್ವಲ್ಪ ಮಟ್ಟಿಗೆ ನಾನು ಒಳ್ಳೆ ಹುಡುಗ, ಬಟ್ ತೀರಾ ಅಷ್ಟೊಂದು ಪ್ಯೂರ್ ಅಲ್ಲ. ಯಾಕಂದ್ರೆ ಈಗಿನ ಕಾಲದ ಒಬ್ಬ ಸಾಮಾನ್ಯ ಹುಡುಗ ಹೆಂಗಿರ್ತಾನೋ ಹಾಗೆ ಇದೀನಿ ನಾನೂ. ಉದಾಹರಣೆ ಹೇಳೋದಾದರೆ, ಕಣ್ಮುಂದೆ ಯಾರಾದ್ರೂ ಸುಂದರವಾಗಿರೋ ಹುಡುಗಿ ಹಾಯ್ದು ಹೋದ್ರೆ, ದೋಸ್ತ್ ಏನ್ ಮಸ್ತ್ ಅದಾಳ ಲೆ ಅನ್ನೋದು. ದಿನಕ್ಕೊಂದು ಸಿಗರೇಟ್, ವಾರಕ್ಕೊಂದ್ ಬಿಯರು, ವರ್ಷಕ್ಕೊಂದ್ IPL. ಆಯ್ತಲ್ಲ ಇನ್ನೇನ್ ಬೇಕು. ಪುಣ್ಯ ಗುಟಕಾ ತಂಬಾಕು ಒಂದ್ ಆಗಿ ಬರಲ್ಲ. ಇಲ್ಲ ಅಂದ್ರೆ ಇಷ್ಟೊತ್ತಿಗೆ ದಂತಪಂಕ್ತಿಗಳೆಲ್ಲ ತಮ್ಮ ಬಿಳಿ ಬಣ್ಣ ಕಳ್ಕೊಂಡು ಕೆಂಪಗಾಗಿ ಬಿಟ್ಟಿರೋವು. ಈ ವಯಸ್ಸಲ್ಲಿ ನಾವು ಮಾಡುವ ಈ ಮೇಲಿನ ಎಲ್ಲ ಸಾಧನೆಗಳು ಕೆಲವೊಬ್ಬರಿಗೆ ಗೊತ್ತಿರ್ತವೆ, ಇನ್ ಕೆಲವೊಬ್ಬರಿಗೆ ಗೊತ್ತಾಗದ ಹಾಗೆ ನಾವು ಮೆಂಟೇನ್ ಮಾಡ್ಕೊಂಡ ಬಂದಿರ್ತೀವಿ. ಯಾಕಂದ್ರೆ ಅವರ ಕಂಡ್ರೆ ಸ್ವಲ್ಪ ಭಯ ಭಕ್ತಿ ಗೌರವ. ಹೀಗೆ ನಾನು ಭಯ ಭಕ್ತಿಯಿಂದ ಗೌರವಿಸುವ ಕೆಲವೇ ಕೆಲವು ಜನಗಳಲ್ಲಿ ನಮ್ ಗೋಪಾಲ ಅಣ್ಣ ಅವರೂ ಒಬ್ಬರು. ಅಣ್ಣ ಇದೇನೂ expect ಮಾಡಲ್ಲ. ಬಟ್ ಕೆಲವೊಬ್ಬರ ವ್ಯಕ್ತಿತ್ವ ಹೆಂಗಿರ್ತದೆ ಅಂದ್ರೆ, ಅವರನ್ನ ನೋಡಿದರೇನೇ ನಮ್ಮಲ್ಲಿರೋ ಆ ಒಂದು ಗೌರವ ಭಾವ ಆಚೆ ಬಂದ್ ಬಿಡ್ತದೆ.  ಇನ್ನು ವಿಷಯಕ್ ಬರೋದಾದರೆ. ಅವತ್ತು ರಾತ್ರಿ ಎಂಟು ಇಲ್ಲ ಎಂಟುವರೆ ಗಂಟೆ ಆಗಿರಬಹುದು, ಲ್ಯಾಬ್ ನಲ್ಲಿದ್ದೆ. ಗೋಪಾಲ ಅಣ್ಣ ಅವರಿಂದ ಕಾಲ್ ಬಂತು. ನಾನು ಎಂದಿನಂತೆ ಕಾಲ್ ರಿಸೀವ್ ಮಾಡಿ, ಹಲೋ ರಿ ಅಣ್ಣ ಅಂದೆ. ಎಲ್ಲಿ ಅ