ಒಂದು ಬಿಯರ್ ನ ಕಥೆ
ಸ್ವಲ್ಪ ಮಟ್ಟಿಗೆ ನಾನು ಒಳ್ಳೆ ಹುಡುಗ, ಬಟ್ ತೀರಾ ಅಷ್ಟೊಂದು ಪ್ಯೂರ್ ಅಲ್ಲ. ಯಾಕಂದ್ರೆ ಈಗಿನ ಕಾಲದ ಒಬ್ಬ ಸಾಮಾನ್ಯ ಹುಡುಗ ಹೆಂಗಿರ್ತಾನೋ ಹಾಗೆ ಇದೀನಿ ನಾನೂ.
ಉದಾಹರಣೆ ಹೇಳೋದಾದರೆ, ಕಣ್ಮುಂದೆ ಯಾರಾದ್ರೂ ಸುಂದರವಾಗಿರೋ ಹುಡುಗಿ ಹಾಯ್ದು ಹೋದ್ರೆ, ದೋಸ್ತ್ ಏನ್ ಮಸ್ತ್ ಅದಾಳ ಲೆ ಅನ್ನೋದು. ದಿನಕ್ಕೊಂದು ಸಿಗರೇಟ್, ವಾರಕ್ಕೊಂದ್ ಬಿಯರು, ವರ್ಷಕ್ಕೊಂದ್ IPL. ಆಯ್ತಲ್ಲ ಇನ್ನೇನ್ ಬೇಕು. ಪುಣ್ಯ ಗುಟಕಾ ತಂಬಾಕು ಒಂದ್ ಆಗಿ ಬರಲ್ಲ. ಇಲ್ಲ ಅಂದ್ರೆ ಇಷ್ಟೊತ್ತಿಗೆ ದಂತಪಂಕ್ತಿಗಳೆಲ್ಲ ತಮ್ಮ ಬಿಳಿ ಬಣ್ಣ ಕಳ್ಕೊಂಡು ಕೆಂಪಗಾಗಿ ಬಿಟ್ಟಿರೋವು.
ಈ ವಯಸ್ಸಲ್ಲಿ ನಾವು ಮಾಡುವ ಈ ಮೇಲಿನ ಎಲ್ಲ ಸಾಧನೆಗಳು ಕೆಲವೊಬ್ಬರಿಗೆ ಗೊತ್ತಿರ್ತವೆ, ಇನ್ ಕೆಲವೊಬ್ಬರಿಗೆ ಗೊತ್ತಾಗದ ಹಾಗೆ ನಾವು ಮೆಂಟೇನ್ ಮಾಡ್ಕೊಂಡ ಬಂದಿರ್ತೀವಿ. ಯಾಕಂದ್ರೆ ಅವರ ಕಂಡ್ರೆ ಸ್ವಲ್ಪ ಭಯ ಭಕ್ತಿ ಗೌರವ.
ಹೀಗೆ ನಾನು ಭಯ ಭಕ್ತಿಯಿಂದ ಗೌರವಿಸುವ ಕೆಲವೇ ಕೆಲವು ಜನಗಳಲ್ಲಿ ನಮ್ ಗೋಪಾಲ ಅಣ್ಣ ಅವರೂ ಒಬ್ಬರು. ಅಣ್ಣ ಇದೇನೂ expect ಮಾಡಲ್ಲ. ಬಟ್ ಕೆಲವೊಬ್ಬರ ವ್ಯಕ್ತಿತ್ವ ಹೆಂಗಿರ್ತದೆ ಅಂದ್ರೆ, ಅವರನ್ನ ನೋಡಿದರೇನೇ ನಮ್ಮಲ್ಲಿರೋ ಆ ಒಂದು ಗೌರವ ಭಾವ ಆಚೆ ಬಂದ್ ಬಿಡ್ತದೆ.
ಇನ್ನು ವಿಷಯಕ್ ಬರೋದಾದರೆ. ಅವತ್ತು ರಾತ್ರಿ ಎಂಟು ಇಲ್ಲ ಎಂಟುವರೆ ಗಂಟೆ ಆಗಿರಬಹುದು, ಲ್ಯಾಬ್ ನಲ್ಲಿದ್ದೆ. ಗೋಪಾಲ ಅಣ್ಣ ಅವರಿಂದ ಕಾಲ್ ಬಂತು. ನಾನು ಎಂದಿನಂತೆ ಕಾಲ್ ರಿಸೀವ್ ಮಾಡಿ, ಹಲೋ ರಿ ಅಣ್ಣ ಅಂದೆ.
ಎಲ್ಲಿ ಅದಿರಿ ? ಅಂದ್ರು.
ಅಣ್ಣ, ಇಲ್ಲೇ ಲ್ಯಾಬ್ ಲ್ಲೆ ಅದಿನಿ ರಿ ಅಂದೆ.
ಸರಿ, ಎರಡ್ Budweiser Magnum (ಬಿಯರ್) ಇವೆ ಆಮೇಲೆ ಬಂದ್ ತಗೊಂಡ ಹೋಗ್ರಿ ಅಂದ್ರು.
1
2
3
ಮೂರ್ ಸೆಕೆಂಡ್ ನಾನ್ ಏನೂ ಮಾತಾಡಲೆಯಿಲ್ಲ. ಆ ಗ್ಯಾಪ್ ಲ್ಲೆ ತಲೆಯಲ್ಲಿ ಒಂದ್ ಓಡ್ತು, ನೋಡ್ ಅಪ್ಪಿ ಕುಡಿತಕ್ಕೆ ಸಂಬಂಧಪಟ್ಟ ನಿನ್ನ ಕೆಲ ಸಾಹಸ ಸಾಧನೆಗಳು, ಅಣ್ಣನಿಗೆ ಗೊತ್ತಿಲ್ಲ ಅನ್ನೋದು ನಿನ್ನ ಭಾವನೆಯಾಗಿತ್ತು. ಆದ್ರೆ ಅವರಿಗೆ ಗೊತ್ತಿರೋದ್ರಿಂದಾನೆ ನಿನಗೆ ಡೈರೆಕ್ಟ ಆಗಿ ಆಫರ್ ಮಾಡಿದ್ದಾರೆ. ಈಗ ಹಾಗಿಲ್ಲ ಹೀಗಿಲ್ಲ ಅಂತ ಡ್ರಾಮಾ ಮಾಡೋದೆಲ್ಲ ವೇಸ್ಟು ಹುಂ ಅಂದ್ ಬಿಡು ಅಂತ.
ಹುಂ ರಿ ಅಣ್ಣ ಎಲ್ಲಿ ಬರ್ಲಿ ರಿ ಅಂದೆ.
ಇಲ್ಲೇ ನಮ್ ಫ್ರೆಂಡ್ ಪ್ರಶಾಂತ್ ಅಂಗಡಿ ಗೆ ಬರ್ರಿ, ಇಲ್ಲೇ ಫ್ರಿಜ್ ಅಲ್ಲಿ ಅದಾವ. ಅಂದ್ರು.
ಸರಿ ಅಂತ ಹೋಗಿ ತಗೊಂಡ ಬಂದು ನಮ್ ಲ್ಯಾಬ್ ಫ್ರಿಜ್ ಲ್ಲಿ ಇಟ್ಟೆ. ಮುಂದೆ ಮಾಡೋದೇನು. ಆಗ ನಾನು ಕಳೆದ ಮೂರ್ ತಿಂಗಳಿಂದ ಡ್ರಿಂಕ್ಸ್ ಮಾಡಿರಲಿಲ್ಲ, ನಾನ್ ವೆಜ್ ತಿಂದಿರಲಿಲ್ಲ, ಬ್ಲೂ ಫಿಲ್ಮ್ ನೋಡಿರಲಿಲ್ಲ, ಹುಡುಗೀರ ಬಗ್ಗೆ ಅಸಭ್ಯವಾಗಿ ಮಾತಾಡಿರಲಿಲ್ಲ. ಯಾಕಂದ್ರೆ ಆಗ ನಾನು ಒಂದ್ you tube ಚಾನೆಲ್ ನೋಡ್ಕೊಂಡು "ಕುಂಡಲಿನಿ ಧ್ಯಾನ" ಪ್ರಾಕ್ಟೀಸ್ ಮಾಡ್ತಿದ್ದೆ. ಆದ್ಯಾತ್ಮಿಕ ದಾರಿ ಮತ್ತು ಅನುಭಗಳ ಬಗ್ಗೆ ಹಂಚ್ಕೋಬಾರದು ಅಂತಾರೆ. ಆದ್ರೆ ಆ ಧ್ಯಾನ ಮಾಡೋದು ಮುಂದೆ ಕಾರಣಾoತರಗಳಿಂದ ನಿಂತೋಯ್ತು, ಅದಕ್ಕೆ ಹೇಳ್ತಿದೀನಿ.
ಸದ್ಯ ಕುಡಿಯೋ ಹಾಗಿಲ್ಲ. ತುಟ್ಟಿ ಮಾಲು ಹಾಳ್ ಮಾಡೋ ಹಾಗೂ ಇಲ್ಲ. ಏನ್ ಮಾಡೋದು ಅನ್ನೋವಷ್ಟರಲ್ಲಿ
ನಮ್ ಫ್ರೆಂಡ್ ಶ್ರೀಧರ್ ನೆನಪಾದ್ರು. ಅವರಿಗೆ ಕಾಲ್ ಮಾಡಿ ಎರಡ್ ಬಿಯರ್ ಇವೆ ಬನ್ನಿ ಅಂತ ಕಾಲ್ ಮಾಡದೆ. ಅವರು ಖುಷಿಯಿಂದ ಬಂದು ಅದೆ ಖುಷಿಯಿಂದ ತಗೊಂಡ ಹೋದ್ರು.
ಇದು, ಒಂದು ಬಿಯರ್ ನ ಕಥೆ.. ಇನ್ನೂ ಬೇರೆ ಬೇರೆ ಥರದ ಹತ್ತು ಹಲವಾರು ಕಥೆಗಳಿವೆ. ಸಿಗೋಣ ಮತ್ತೆ.
By... ನಿಮ್ಮ ಸಿದ್ದು ತಾಂಬೆ.
Comments
Post a Comment