Posts

Showing posts from November, 2019

ಸ್ಟೂಡೆಂಟ್ ಲೈಫ್ ಇಜ್ ಗೋಲ್ಡನ್ ಲೈಫ್ ಅಂತೆ ನಿಜಾನಾ ??

 ದಿನಾಲೂ ನಮ್ಮ ಮಾತಿನ ಮದ್ಯ ಅದೆಷ್ಟೊ ಗಾದೆ ಮಾತುಗಳು ಮತ್ತು ನಾಣ್ಣುಡಿಗಳು ಹರಿದಾಡ್ತವೆ. ಕೆಲವೋಂದು ಪ್ರಾಸಬದ್ದವಾಗಿ ಚಂದ ಇರ್ತವೆ, ಇನ್ನೂ ಕೆಲವೋಂದು ಅವುಗಳ ಅರ್ಥದಿಂದ ಚಂದ ಇರ್ತವೆ. ಇನ್ನ್ ಕೆಲವೋಂದು ಫೆಮಸ್ಸಾದ ವ್ಯಕ್ತಿ ಬಾಯಿಂದ ಬಂದಿದುದರ ಪರಿಣಾಮವಾಗಿ ಚಂದ ಅನಿಸ್ತವೆ. ಆದ್ರೆ ಅವುಗಳಲ್ಲಿನ ಸತ್ಯಾಂಶ ಎಷ್ಟು ಅನ್ನೊದನ್ನ ನಾವ್ಯಾರು ನೋಡಲ್ಲ. ಹೀಗೆ ನನಗೆ ಸ್ವಲ್ಪ ಜಾಸ್ತಿ ನೆ ಕಾಡಿದ್ದು ಅಂದ್ರೆ ಈ student life is golden life ಅನ್ನೊ ಸಾಲು. ಯಾಕಾಗಿ ಹೀಗ್ ಅಂದ್ರು ಅಂತ ಗೊತ್ತಿಲ್ಲ. ಒಕೆ, ಯಾವುದೆ ಚಿಂತೆ ಇರಲ್ಲ ,ತರೊದು ಬರೊದು ಮನೆ ಉಸಾಬರಿ ಏನೂ ಇರಲ್ಲ . ಬರಿ ಊಣ್ಣೋದು ತಿನ್ನೋದು ಅಭ್ಯಾಸ ಮಾಡೋದು, ಆಠ ಆಡೋದು  ಅಷ್ಟೆ ಇರ್ತದಲ್ಲ ಹೀಗಾಗಿ ವಿದ್ಯಾರ್ಥಿ ಜೀವನವನ್ನ ಬಂಗಾರದ ಜೀವನಕ್ಕೆ ಹೋಲಿಸಿ ಮಾತಾಡಿರಬಹುದು. ಅದು ಯಾವಾಗ ನೀಜ ಅಂದ್ರೆ,,,  ಬೆಳಗ್ಗೆ ಅಮ್ಮ ಎಬ್ಬಿಸಿ, ಬ್ರಶ್ ಮಾಡಿಸಿ, ಬಿಸಿನೀರಿಂದ ಜಳಕ ಮಾಡಿಸಿ, ತಲೆ ಬಾಚಿ, ಇಷ್ಟವಾದ ತಿಂಡಿ ತಿನಿಸಿ, ಒಲ್ಲೆ ಒಲ್ಲೆ ಅಂದ್ರೂ ಮೇಲೆ ಒಂದ್ ಗ್ಲಾಸ್ ಹಾಲು ಕುಡಿಸಿ, ಮದ್ಯಾಹ್ನ್ ಊಠಕ್ಕೆ ಡಬ್ಬಿ ಕಟ್ಟಿ, ವ್ಯಾನ್ ನಲ್ಲಿ ಕೂಡಿಸಿ ಟಾಟಾ ಮಾಡಿ ಸ್ಕೂಲ್ ಗೆ ಕಳಿಸಿದಾಗ. ಮತ್ತೆ ಸ್ಕೂಲ್ ನಲ್ಲಿ ಮಿಸ್ಸ್ ಹೇಳೊ ಪಾಠ ಸಲಿಸಾಗಿ ಅರ್ಥ ಆಗಿ , ಪ್ರತಿ ಪರಿಕ್ಷೆ ಯಲ್ಲಿ ಉತ್ತಮ ಶೇಣಿಯಲ್ಲಿ ಪಾಸಾದಾಗ. ಹತ್ತನೆ ತರಗತಿಯಲ್ಲಿ ಉತ್ತಮ ಮಾರ್ಕ್ಸ್ ಬಂದಾಗ, ಇಷ್ಟವಾದ ಕಾಲೇಜ್ ನಲ್ಲಿ ಇಷ್ಟವಾ