Posts

Showing posts from September, 2018

ಯಾರದು ಈ ತಪ್ಪು ?

Image
ತಪ್ಪು ನನ್ನದೊ ? ನಿನ್ನದೊ ? ತಿಳಿಯುತ್ತಿಲ್ಲ, ತಿಳಿದಾದರೂ ಏನು ಪ್ರಯೋಜನ, ಕಳೆದು ಹೋಗಿದೆ ಆ ಘಳಿಗೆ . ಈ ಮನ ಹೇಳುತ್ತಿದೆ ತಪ್ಪು ನಿನ್ನದೆ ಎಂದು. ನೀನೇಕೆ ಅಷ್ಟೊಂದು ಸಿಂಗರಿಸಿಕೊಂಡು ಮಲ್ಲಿಗೆ ಮುಡಿದು , ಮೆಲ್ಲಗೆ ಎದುರಾದೆ. ಎದುರಾದರೂ ಅಡ್ಡಿಯಿಲ್ಲ , ನೀ ನನ್ನ ನೋಡಬಾರದಿತ್ತು, ಮುಂಗುರುಳ ಮರೆಯಲ್ಲಿ ನಗಬಾರದಿತ್ತು.  ನಾನೇನು ಪರಮಹಂಸ ರ ಶಿಷ್ಯ ವಿವೇಕಾನಂದ ಅಲ್ಲ, ಕಲಿಗಾಲದ ಒಂದಂಶ , ಸೋತೆ ಆ ಗೆಜ್ಜೆ ತಾಳಕ್ಕೆ ಹೆಜ್ಜೆಗಳ ಲಯಕ್ಕೆ. ಒಂದು ಸಣ್ಣ ತಿರಸ್ಕಾರದಿಂದ ನೀನಾದರೂ ತಡೆಯಬಹುದಿತ್ತು, ಹುಚ್ಚು ಕುದುರೆ ಏರಿ ಹೊರಟ ನನ್ನ ಮನಸನ್ನ. ಅದು ಹೇಗೆ ಸಾದ್ಯ ಹೇಳು ? ನೀನೇನು ವೈರಾಗ್ಯಮೂರ್ತಿ ಅಕ್ಕ ಮಹಾದೇವಿ ಅಲ್ಲ , ರೆಕ್ಕೆ  ಬಲಿತ ಪಾರಿವಾಳ. ಚಡಪಡಿಸಿದೆ ನನ್ನ ನೋಟಕ್ಕಾಗಿ , ಒಡನಾಟಕ್ಕಾಗಿ , ಸಮೀಪಕ್ಕಾಗಿ , ಸಾಂಗತ್ಯಕ್ಕಾಗಿ. ಈಗೀಗ ಅನಿಸುತ್ತಿದೆ, ನಮ್ಮಿಬ್ಬರದೂ ತಪ್ಪು ಇತ್ತೆಂದು. ಜಾತಿಯ ಬೇಲಿ ದಾಟಿ ತಬ್ಬಿಕೊಂಡು ಕೂಡಬಾರದಿತ್ತು ಎಂದು , ಅಂಧಕಾರದ ಮಂಧ ಬೆಳಕಲ್ಲಿ ಕೈ ಕೈ ಹಿಡಿದು ನಡೆಯಬಾರದಿತ್ತು ಎಂದು. ಇರಲಿ ಬಿಡು, ನೋಯಬೇಡ-ನರಳಬೇಡ, ನಿಮ್ಮಪ್ಪ ನೆಟ್ಟ ಮರದ ನೆರಳಲ್ಲಿ ಹಾಯಾಗಿರು. ಮುಂದಿನ ಜನ್ಮದಲ್ಲಿ ಮತ್ತೆ ಹುಟ್ಟಿ ಪ್ರೀತಿಸಿಕೊಳ್ಳೋಣ ಜಾತಿ ಎಂಬ ಪದ ಸತ್ತಿದ್ದರೆ , ಇಲ್ಲವಾದರೆ ಇಲ್ಲ .                                     ಇಂತಿ ನಿನ್ನ ತಪ್ಪಿತಸ್ಥ                                         

ಸಹವಾಸ ದೋಷ ??

ಹೊದ ವಾರ ಶಾಸ್ತ್ರಿ ಮಾರ್ಟೇಟ ನಲ್ಲಿ ರೇಖಾ ಆಂಟಿ ಮತ್ತು ಅವರ ಮಗ ಮಹೇಶ ಭೇಟಿ ಆಗಿದ್ರು. ಹೀಗೆ ಮಾತಾಡ್ತಾ, ಸಿದ್ದು ಮಹೇಶ ಗ ನೀನರೆ ಸ್ವಲ್ಪ ಹೇಳು ನನ್ ಮಾತ ಒಟ್ಟ ಕೇಳಲ್ಲ, ಓದೋದಿಲ್ಲ ಬರಿಯೋದಿಲ್ಲ, ಬರಿ ದೋಸ್ತ ರ ಜೋಡಿ ತಿರಗ್ತಾನ, ನಾಲ್ಕ ವರ್ಷ ಆಯ್ತು ಪಿಯುಸಿ ಪಾಸ್ ಅಗಿಲ್ಲ ಅಂತ ಅಂದ್ರು. ಮಹೇಶ ನ ಬಗ್ಗೆ ನನಗೆ ಸ್ವಲ್ಪ ಗೊತ್ತು , ಒಬ್ಬನೆ ಮಗ ಅಂತ ಮುದ್ದಿನಿಂದ ಬೆಳಿಸಿದಾರ, ಇತ್ತೀಚೆಗೆ ಸಿಗರೇಟ್ ಕುಡಿತ ಎಲ್ಲ ಕಲ್ತಿದಾನೆ. ಏನರೆ ಸ್ವಲ್ಪ ಹೇಳಬೇಕು ಅನ್ಕೊಂಡೆ ಆದರೆ ನಾನೆ ಇನ್ನೂ ಒಳ್ಳೆ ಪೋಜಿಷನನಲ್ಲಿ ಇಲ್ಲ ಅವನಿಗಿ ಎಲ್ಲಿ ಬುದ್ದಿ ಹೇಳೋದು ಅಂತ ಸುಮ್ಮನಾಗಿ,  ಮಾತು ಬದಲಿಸಿ ಕುಶಲೋಪರಿ ಕೇಳಿ ಕಳಿಸಿದೆ. ಆದರೆ ನನಗೆ ಕಾಡಿದ್ದು ರೇಖಾ ಆಂಟಿ ಹೇಳಿದ ಆ ಮಾತು. ಏನಂದ್ರೆ ಮುಂಚೆ ಮಹೇಶ ಹಿಂಗ ಇರಲಿಲ್ಲ ಆ ಉಡಾಳ ಹುಡುಗರ ಜೋಡಿ ಕೂಡಿ ಹಿಂಗ ಆಗ್ಯಾನ ಅಂತ ಅಂದಿದ್ದು.                     ಒಬ್ಬ ಹುಡುಗ ಇದ್ದಕ್ಕಿದ್ದ ಹಾಗೆ ಬದಲಾಗೊದನ್ನ, ಕೆಲ ಅಪಾಯಕಾರಿ ವ್ಯಸನಗಳಿಗೆ ದಾಸನಾಗೋದನ್ನ ಆತನ ಸ್ವಯಮ್ಕ್ರುತ ಅಪರಾಧ ಅಂತ ಯಾವ ತಂದೆ ತಾಯಿನೂ ಒಪ್ಪೋದಿಲ್ಲ. ಏ ನಮ್ಮ ಹುಡುಗ ಮೊದಲ ಹಿಂಗ ಇರಲಿಲ್ಲ ರಿ , ಆತನ ಸ್ನೇಹಿತರ ವಲಯ ಸರಿಯಿಲ್ಲ , ಆತ ಬೆಳೀತಿರೋ ಪರಿಸರ ಸರಿಯಿಲ್ಲ ಅದಕ್ಕೆ ಹೀಗಾಗಿದ್ದಾನೆ ಅಂತ ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ತಾವು ದೂರ ಸರಿದು ಬಿಡುತ್ತಾರೆ.  ಈ ಮಾತು ಎಸ್ಟರ ಮಟ್ಟಿಗೆ ಸತ್ಯ ? ಒಬ್ಬ ವ್ಯಕ್ತಿ ಏನರೆ ಸಾಧಿಸೋಕೆ ಅಥವಾ ದ