Posts

Showing posts from February, 2019

ನಿಮ್ಮವರೇ ನಿಮ್ಮಿಂದ ದೂರಾದರೆ ?

ಒಂದೆ ಜಾತಿ ಅಲ್ಲ , ಒಂದೆ ಕುಲ ಅಲ್ಲ. ಹೈಟು ವೇಟು ಒಂದ್ ಕಡೆ ಇರಲಿ ಬಣ್ಣ ಭಾವನೆ ಕೂಡಾ ಒಂದಲ್ಲ . ಜೀವನದ ಯಾವುದೋ ಒಂದು ಘಳಿಗೆ ಲಿ ಆತ ಅಥವಾ ಅವಳು ಜೊತೆ ಆಗತಾನೆ(ಳೆ). ಇಷ್ಟನೊ ಕಷ್ಟನೊ ಹೋಂದಿಕೋತಿರಿ, ಕಷ್ಟ ಸುಖ ಹಂಚಿಕೋತಿರಿ , ನಿಮಗರಿವಿಲ್ಲದಂತೆ ಒಂದು ಸ್ನೇಹ ಬಲಿತು ಬಿಡುತ್ತದೆ . ಅಚಾನಕ್ಕಾಗಿ ಆದ ಪರಿಚಯ ಅನಿವಾರ್ಯ ಅಗಿ ಬಿಡ್ತದೆ.  ಅದು ಸರಿಯೋ ? ತಪ್ಪೊ ? ಕ್ಯಾಲ್ಕುಲೇಷನ್ ಕೂಡಾ ಮಾಡೋಕ್ ಹೋಗಲ್ಲ ನೀವು.  ಯಾಕಂದ್ರೆ,  ಯಾವ ಕಲ್ಮಶ ಇಲ್ಲದ ಒಂದಿಷ್ಟು ತಿಳಿಯಾದ ಆತ್ಮಾನಂದ ನೀಮ್ಮೇದೇಯಲ್ಲಿ ತೇಲುತ್ತಿರುತ್ತದೆ . ನೀವದನ್ನ ಬಯಸಿಲ್ಲ,  ಬೇಕು ಅಂತ ಆರ್ಡರ್ ಮಾಡಿಲ್ಲ ತಾನಾಗೆ ಬಂದ ಉಡುಗೊರೆ . ಬೇಡ ಎನ್ನಲು ಹೇಗೆ ಸಾದ್ಯ .ಬಯಸದೆ ಬಂದ ಖುಷಿಯನ್ನ ಸವಿಯುವ ಭರದಲ್ಲಿ ಅದಕ್ಕೆ ದಾಸರಾಗ್ತಿರಿ, ಸೋಲ್ತೀರೀ , ಕೊನೆಗೊಂದಿನ ಬಿಟ್ಟಿರಲಾಗದ ಭಾವಕ್ಕೆ ಸೆರೆಯಾಗ್ತಿರಿ . ಅವರ ಮಾತು , ಅವರ ನಗು , ಅವರ ಸಾಮೀಪ್ಯ , ಅವರ ಸಾಂತ್ವನ , ಎಲ್ಲವಕ್ಕೂ ಅಡಿಕ್ಟ್ ಆಗ್ತೀರೀ . ಎಲ್ಲಿಯವರೇಗೇ ಅಂದರೆ , ದಿನಕ್ಕೆ ಒಮ್ಮೆಯಾದರೂ ಅವರೊಡನೆ ಮಾತಾಡಬೇಕು , ತಮಾಷೆ ಮಾಡಿ ನಗಾಡಬೇಕು, ಇರೊ ಸಣ್ಣ ಪುಟ್ಟ ನೋವೆಲ್ಲ ಹೇಳಿ ಅವರ ಸಾಂತ್ವನದ ನುಡಿಯಲ್ಲಿ ಹಗುರಾಗಬೇಕು, ಕೊನೆ ಪಕ್ಷ ಏನರೇ ಒಂದು ತಪ್ಪು ಮಾಡಿ ಅವರ ಕಡೆಯಿಂದ ಬೈಸಿಕೊಂಡರೂ ಪರವಾಗಿಲ್ಲ , ದಿನಕ್ಕೆ ಒಮ್ಮೆಯಾದರೂ ಅವರ ಸಾಮೀಪ್ಯ ಸಾಧಿಸಬೇಕು ಅನ್ನೊವರೆಗೂ. ಮೊದ ಮೊದಲು ಎಲ್ಲ ಸರಾಗವಾಗಿಯೇ ನಡಿಯುತ್ತಿರುತ್ತದೆ

ಜಿಂದಗಿ ಏಕ್ ನಶೆ ಹೈ

Image
ದೇವರು ನನಗ ಕೊಟ್ಟೀರೊ ಒಂದ್ ವರ ಏನು ಅಂದ್ರೆ ನೈಟ್ ಟ್ಯಾಬ್ಲೆಟ್ ತಗೊಳಿಲ್ಲ ಅಂದ್ರೆ ನಿದ್ದೆ ಬರಲ್ಲ. ಆದ್ರೂ ಕೆಲವೊಮ್ಮೆ  ಊಠ ಸರಿ ಆಗಿಲ್ಲ ಅಂದ್ರೆ, ಟೈಮ್ ಮೀರದ್ರೆ, ಇಲ್ಲ ಬೇರೆ ಊರಿಗೆ ಹೊಗಿದ್ರೆ ಮಿಸ್ಸ್ ಅಗತ್ತೆ. ಅವತ್ತು ಮಿನಿಮಮ್ ಬೆಳಗಿನ ಜಾವ ಮೂರರವರೆಗೆ ನಂದೆ ರಾತ್ರಿ. ಹಾಗೆ ನಿದ್ದೆ ಬರ್ತಿಲ್ಲ ಅಂತ ಯಾರಿಗೂ ಕಾಲ್ ಮಾಡಿ ಮೆಸೆಜ್ ಮಾಡಿ ತಲೆ ತಿನ್ನಲ್ಲ. ಕೆಲವು ಪುಸ್ತಕಗಳಿವೆ,ಯೊಗರಾಜ್ ಭಟ್ಟರ  "ಮನಸಾರೆ" ದಂಥಹ ಸಿನಿಮಾಗಳಿವೆ, ನನ್ನದೆ ಆದ ಕೆಲ ನಗು ಅಳುವುಗಳೊಂದಿಗೆ ಇತ್ತಿಚೆಗೆ ಒಂದ್ ಮೀನು ಸಹ ಜೋತೆಯಾಗಿದೆ, ಸೊ ರಾತ್ರಿ ಸದ್ದಿಲ್ಲದೆ ಸತ್ತು ಹೋಗ್ತದೆ. ಇದೆಲ್ಲ ನಾನು ಯಾರದೊ ಸಿಂಪತಿಗೋಸ್ಕರ ಹೇಳ್ತಿಲ್ಲ, ಕಾರಣ ಇಷ್ಟೆ ಇವತ್ತೂ ಟ್ಯಾಬ್ಲೆಟ್ ಮಿಸ್ಸ್ ಆಗಿದೆ. ಮತ್ತೆ ಮನಸಾರೆ ಫಿಲಮ್ ನೋಡದೆ, ಮೀನಿನ ಜೊತೆ ಆಟ ಆಡದೆ, ಒಂದ್ ನಾಲ್ಕಾರ್ ಪುಟ ಪುಸ್ತಕನೂ ಓದದೆ, ಬಟ್ ಮೂರ್ ಗಂಟೆ ಆಯ್ತು ನಿದ್ದೆ ಬರ್ತಿಲ್ಲ. ಒಂದ್ ಬ್ಲಾಗ್  ಪೋಸ್ಟ್ ಬರೆದ್ರೆ ಆಯ್ತು ಅಂತ ಲ್ಯಾಪ್ ಟಾಪ್ ತಕ್ಕೋಂಡ್ ಕೂತಿದಿನಿ. ಪುರಾಣ ಸಾಕು ವಿಷ್ಯಕ್ ಬರ್ತಿನಿ ಓಕೆ . ಐ ಪಿ ಎಲ್ ಮ್ಯಾಚ್ ನಡಿದಿರ್ತದೆ, ಫಸ್ಟ್ ಬ್ಯಾಟಿಂಗ್ ನವರು 140 ಇಲ್ಲ್ 160 ರನ್ ಗೆ ಆಲ್ ಔಟ್ ಆದ್ರೆ , ಸೆಕೆಂಡ್ ಬ್ಯಾಟಿಂಗ್ ನವರು ಅರಾಮಾಗಿ ಹೊಡಿತಾರೆ, ಗೆಲ್ತಾರೆ. ನೋಡೊಕೆ ಎನ್ ಕಿಕ್ ಇರ್ತದೆ ಹೇಳಿ. ಅದೆ , ಫಸ್ಟ್ ಬ್ಯಾಟಿಂಗನವರು 180 ಕ್ರಾಸ್ ಮಾಡಿ , ಸೆಕೆಂಡ್ ಬ್ಯಾಟಿಂಗನವರ

ಒಬ್ಳೆ ಮಗಳು ಅಂತ ಮುದ್ದಿಂದ ಸಾಕಿದ್ವಿ

ನನ್ ಫ್ರೆಂಡ್ ಸವಿತಾ ಗೆ ಸ್ವಲ್ಪ ಹಣ ಕೊಟ್ಟಿದ್ದೆ,  ಒನ್ ಇಯರ್ ಮುಗೀತಾ ಬಂತು, ವಾಪಸ್ ಕೇಳಿರಲಿಲ್ಲ . ಮೊನ್ನೆ ನಂಗೆ ಅರ್ಜೆಂಟ್ ಇತ್ತು ಕೇಳೋಣ ಅಂತ ಬೆಳಗ್ಗೆ ಬೇಗ (ಮದ್ಯಾಹ್ನ ಡ್ಯೂಟೀ ಮೇಲೆ ಇರ್ತಾಳೆ ಅಂತ) ಕಾಲ್ ಮಾಡಿದ್ದೆ ರಿಸೀವ್ ಮಾಡಲಿಲ್ಲ . ಸುಮ್ಮನಾಗಿದ್ದೆ . ಮಾರನೆ ದಿನ ಅಂದ್ರೆ ನಿನ್ನೆ ಬೆಳಗ್ಗೆ ತಾನಾಗೆ ಕಾಲ್ ಮಾಡದ್ಲು. ರಿಸೀವ್ ಮಾಡದೆ . ಸಾರಿ , ನಿನ್ನೆ ನೀ ಕಾಲ್ ಮಾಡಿದ್ದೆ ರಿಸೀವ್ ಮಾಡೋಕ್ ಆಗಲಿಲ್ಲ , ಮನೇಲಿ ಸ್ವಲ್ಪ ಪ್ರಾಬ್ಲಮ್ ಆಗಿದೆ ತುಂಬ ಜನ ಸೇರಿದ್ರು,  ಅಂದ್ಲು . ಪ್ರಾಬ್ಲಮ್ಮಾ ? ಎನ್ ಪ್ರಾಬ್ಲಮ್ ಎಂದು ಕೇಳಿದೆ . ನಮ್ ದೊಡಪ್ಪ ನ ಮಗಳು ಓಡಿ ಹೋಗಿದಾಳೆ ಅಂದ್ಲು . ಏನು ? ಓಡಿ ಹೋಗೀದಾಳ ? ಯಾರ್ ಜೊತೆ ? ಪಕ್ಕದ ಮನೆ ಹುಡುಗನ ಜೊತೆ . ಅಯ್ಯೊ ದೇವರೆ , ಎಷ್ಟ್ ವಯಸ್ಸು ? ಒಂದ್ ಇಪ್ಪತ್ತೈದು ಇರಬಹುದು . ಹೌದಾ ? ಎನ್ ಕಲ್ತೀದ್ಲು ? ಬಿ . ಏ . ಬಿಏಡ . ಮುಗಿದಿತ್ತು . ಸರಿ,  ಡ್ಯೂಟೀ ಗಿ ಹೋಗ್ತಿದ್ರ ? ಇಲ್ಲ , ಮನೇಲೇ ಇರ್ತಿದ್ಲು , ಮುಂದಿನ ವಾರ ಎಂಗೇಜಮೆಂಟ್ ಇತ್ತು ಬೇರೆ ಹುಡುಗನ ಜೊತೆ . ಅಷ್ಟರಲ್ಲೆ ಹಿಂಗ್ ಮಾಡದ್ಲು. ಪಾಪ ನಮ್ ಡೋಡಮ್ಮ ನ ನೋಡದ್ರೆ ಅಯ್ಯೊ ಅನ್ಸತ್ತೆ . ಇಬ್ಬರು ಅಣ್ಣಂದಿರು , ಒಬ್ಬಳೆ ತಂಗಿ . ಎಷ್ಟು ಮುದ್ದಿನಿಂದ ಸಾಕಿದ್ರು ಗೊತ್ತ ? ಇವರೆಲ್ಲ ಚಿಕ್ಕವರಿದ್ದಾಗ ನಮ್ ದೊಡಪ್ಪ ತಿರಕೋಂಡರು . ಇವರನ್ನ ಡೋಡ್ಡೋರ ಮಾಡಿ , ಸಾಕಿ ಸಾಲಿ ಕಲಿಸಲು ನಮ್ಮ ದೊಡಮ್ಮ ಪಟ್ಟ ಕಷ್ಟ ಅಷ್ಟಿಷ್