ಒಬ್ಳೆ ಮಗಳು ಅಂತ ಮುದ್ದಿಂದ ಸಾಕಿದ್ವಿ

ನನ್ ಫ್ರೆಂಡ್ ಸವಿತಾ ಗೆ ಸ್ವಲ್ಪ ಹಣ ಕೊಟ್ಟಿದ್ದೆ,  ಒನ್ ಇಯರ್ ಮುಗೀತಾ ಬಂತು, ವಾಪಸ್ ಕೇಳಿರಲಿಲ್ಲ . ಮೊನ್ನೆ ನಂಗೆ ಅರ್ಜೆಂಟ್ ಇತ್ತು ಕೇಳೋಣ ಅಂತ ಬೆಳಗ್ಗೆ ಬೇಗ (ಮದ್ಯಾಹ್ನ ಡ್ಯೂಟೀ ಮೇಲೆ ಇರ್ತಾಳೆ ಅಂತ) ಕಾಲ್ ಮಾಡಿದ್ದೆ ರಿಸೀವ್ ಮಾಡಲಿಲ್ಲ . ಸುಮ್ಮನಾಗಿದ್ದೆ . ಮಾರನೆ ದಿನ ಅಂದ್ರೆ ನಿನ್ನೆ ಬೆಳಗ್ಗೆ ತಾನಾಗೆ ಕಾಲ್ ಮಾಡದ್ಲು. ರಿಸೀವ್ ಮಾಡದೆ .
ಸಾರಿ , ನಿನ್ನೆ ನೀ ಕಾಲ್ ಮಾಡಿದ್ದೆ ರಿಸೀವ್ ಮಾಡೋಕ್ ಆಗಲಿಲ್ಲ , ಮನೇಲಿ ಸ್ವಲ್ಪ ಪ್ರಾಬ್ಲಮ್ ಆಗಿದೆ ತುಂಬ ಜನ ಸೇರಿದ್ರು,  ಅಂದ್ಲು .
ಪ್ರಾಬ್ಲಮ್ಮಾ ? ಎನ್ ಪ್ರಾಬ್ಲಮ್ ಎಂದು ಕೇಳಿದೆ .
ನಮ್ ದೊಡಪ್ಪ ನ ಮಗಳು ಓಡಿ ಹೋಗಿದಾಳೆ ಅಂದ್ಲು .
ಏನು ? ಓಡಿ ಹೋಗೀದಾಳ ? ಯಾರ್ ಜೊತೆ ?
ಪಕ್ಕದ ಮನೆ ಹುಡುಗನ ಜೊತೆ .
ಅಯ್ಯೊ ದೇವರೆ , ಎಷ್ಟ್ ವಯಸ್ಸು ?
ಒಂದ್ ಇಪ್ಪತ್ತೈದು ಇರಬಹುದು .
ಹೌದಾ ? ಎನ್ ಕಲ್ತೀದ್ಲು ?
ಬಿ . ಏ . ಬಿಏಡ . ಮುಗಿದಿತ್ತು .
ಸರಿ,  ಡ್ಯೂಟೀ ಗಿ ಹೋಗ್ತಿದ್ರ ?
ಇಲ್ಲ , ಮನೇಲೇ ಇರ್ತಿದ್ಲು , ಮುಂದಿನ ವಾರ ಎಂಗೇಜಮೆಂಟ್ ಇತ್ತು ಬೇರೆ ಹುಡುಗನ ಜೊತೆ . ಅಷ್ಟರಲ್ಲೆ ಹಿಂಗ್ ಮಾಡದ್ಲು. ಪಾಪ ನಮ್ ಡೋಡಮ್ಮ ನ ನೋಡದ್ರೆ ಅಯ್ಯೊ ಅನ್ಸತ್ತೆ . ಇಬ್ಬರು ಅಣ್ಣಂದಿರು , ಒಬ್ಬಳೆ ತಂಗಿ . ಎಷ್ಟು ಮುದ್ದಿನಿಂದ ಸಾಕಿದ್ರು ಗೊತ್ತ ? ಇವರೆಲ್ಲ ಚಿಕ್ಕವರಿದ್ದಾಗ ನಮ್ ದೊಡಪ್ಪ ತಿರಕೋಂಡರು . ಇವರನ್ನ ಡೋಡ್ಡೋರ ಮಾಡಿ , ಸಾಕಿ ಸಾಲಿ ಕಲಿಸಲು ನಮ್ಮ ದೊಡಮ್ಮ ಪಟ್ಟ ಕಷ್ಟ ಅಷ್ಟಿಷ್ಟಲ್ಲ . ಇಬ್ಬರೂ ಅಣ್ಣಂದಿರು ಅವಳ ಮೇಲೆ ಪಂಚ ಪ್ರಾಣ , ತಂಗಿ ಮದುವೆ ಆಗೊ ವರೆಗೂ ನಮ್ ಮದುವೆ ಬೇಡ ಅಂತ ಹಾಗೆ ಇದ್ರು . ಅದ್ಯಾವದನ್ನ ಲೆಕ್ಕಿಸದೆ ಈಕೆ , , , , , . . . .
ಎಂದು ಸವಿತಾ ಸಣ್ಣ ಧ್ವನಿಯಲ್ಲಿ ಮಾತಾಡ್ತಿದ್ರೆ,  ನನ್ನ ಎದೆಯಲ್ಲಿ ಸಂಕಟದ ಜೊತೆಗೆ ಸಣ್ಣ ಸೋಜಿಗ. ಏನು ಅಂದ್ರೆ ,  ಇಪ್ಪತ್ತು ವರ್ಷದಿಂದ ಸಾಕಿದ ಅಪ್ಪ ಅಮ್ಮ , ಜೊತೆ ಬೆಳೆದ ಅಣ್ಣ ತಮ್ಮ , ತಂಗಿ ಅನ್ನೊ ಸಂಬಂಧಗಳನೆಲ್ಲ,  ಕೇವಲ ಎರಡು ಮೂರು ವರ್ಷದಿಂದ ಪರಿಚಯವಾದ ಒಬ್ಬ ಹುಡುಗನ ಸೆಳೆತ ಸಾಮೀಪ್ಯ ಕೊಂದು ಬಿಡುತ್ತದಾ ?
ಎಸ್,  ನಾನು ಇದಕ್ಕೆ ಪ್ರೀತಿ ಅನ್ನಲ್ಲ ಸೆಳೆತ ನೆ ಅನ್ನೋದು . ಅದ್ಯಾವ ಪುಣ್ಯಾತ್ಮ ಹೇಳಿದನೊ? ಪ್ರೀತಿ, ಪ್ರೇಮ, ಹೃದಯ, ಮಣ್ಣು ಮಸಿ ಅಂತ ನನಗ ಗೊತ್ತಿಲ್ಲ . ಅಕ್ಚುಲಿ ಹೇಳೋದಾದ್ರೆ ಈ ಪ್ರೀತಿಗೆ ಹೃದಯಕ್ಕೆ ಸಂಭಂದ ನೆ ಇಲ್ಲ. ಅದೊಂದು ದೇಹದಲ್ಲಿ ನಡೆಯುವ ರಸಾಯನಿಕ ಕ್ರಿಯೆಗಳ ಪ್ರತಿಕ್ರಿಯೆ ಅಷ್ಟೆ.  ಒಬ್ಬ ಹುಡುಗ ಅಥವ ಒಬ್ಬಳು ಹುಡುಗಿ ವಯಸ್ಸಿಗೆ ಬರುತ್ತಿದ್ದಂತೆ ಒಂದಿಷ್ಟು ಹಾರ್ಮೋನ್ ಗಳು ಉತ್ಪತ್ತಿ ಆಗ್ತವೆ , ಆ ಪರಿಣಾಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲ ಬದಲಾವಣೆಗಳು ಆಗ್ತವೆ , ಆ ಮಾನಸಿಕ ಬದಲಾವಣೆಗಳಲ್ಲಿ ಈ ವಿರುದ್ದ ಲಿಂಗದೇಡೆಗಿನ ಸೆಳೆತ ಕೂಡಾ ಒಂದು (ಅದಕ್ಕೆ ಈ ಸಿನಿಮಾ , ಸೀರಿಯಲ್ ನವರು ಉಪ್ಪು ಖಾರ ಬೆರೆಸಿ ತೋರಿಸಿ ಮತ್ತಷ್ಟು ದಾರಿ ತಪ್ಪೀಸುವಲ್ಲಿ  ಯಶಸ್ವಿಯಾಗ್ತಾರೆ) ಆ ಸೆಳೆತವೆ ಈ ಪ್ರೀತಿ ಗೀತಿ ಇತ್ಯಾದಿ ಎಲ್ಲ . ಅದನ್ನ ನಮ್ಮ ಹಿಡಿತಲ್ಲಿ ಇಟ್ಕೊಂಡ್ರೆ ಒಂದೊಳ್ಳೆ ಬಾಂಧವ್ಯ ಆಗ್ತದೆ. ಇಲ್ಲ,  ಅದರ ಹಿಡಿತದಲ್ಲಿ ನಾವು ಹೋದ್ರೆ ಹೀಗೆ ಮನೆ ಮುರಿಯೋ ವಸ್ತು ಆಗ್ತದೆ. ಅದು ಅವರವರ ಇಚ್ಛೆಗೆ ಬಿಟ್ಟಿದ್ದು. ಎಲ್ರೂ ಹೀಗೆ ಯೋಚನೆ ಮಾಡಿ ಅಂತ ನಾನ್ ಹೇಳ್ತಿಲ್ಲ , ಇದು ನನ್ನ ಅಭಿಪ್ರಾಯ ಅಷ್ಟೆ .
ಕತ್ತೆಗೆ ಎನ್ ಗೊತ್ತು ಕಸ್ತೂರಿಯ ಸುವಾಸನೆ , ಅದು ಪ್ರೀತೀನೆ ಸಿದ್ದು ಅಂತ ನೀವ್ ವಾದೀಸೋದಾದರೆ. ಓಕೆ ಫೈನ್ .
ಅಷ್ಟೋಂದ್ ದೊಡ್ಡ ಹೃದಯ ನಿಮ್ಮದಿದ್ರೆ , ಆ ಹೃದಯ ದಲ್ಲಿ ಪ್ರೀತಿ ಉಕ್ಕಿ ಹರೀತೀದ್ರೆ, ಪ್ರೀತಿ ಮಾಡೋಕೆ ತೆಳ್ಳಗೆ ಬೆಳ್ಳಗೆ ಇರೋಳೆ ಬೇಕಾ ? ಯಾಕೆ ಕಪ್ಪಗೆ ಕುಳ್ಳಗೆ ಇರೋಳ ಮೇಲೆ ಪ್ರೀತಿ ಹುಟ್ಟಲ್ಲ ?
ಇನ್ನೂ, ಒಬ್ಬಳು ಹುಡುಗಿ ಒಬ್ಬ ಹುಡುಗನ್ನ ಇಷ್ಟ ಪಡಬೇಕು ಅಂದ್ರೆ ಆತನಲ್ಲಿ ಅಂದ ಚಂದ , ಹೈಟು ವೇಟು ಇರಬೇಕು ಅಂತಿಲ್ಲ . ಹೈಸ್ಕೂಲ್ ನಲ್ಲಿ,  ಬುದ್ದಿವಂತ ವಿಧ್ಯಾರ್ಥಿ ಆನಿಸಿಕೊಂಡರೆ ಸಾಕು.  ಕಾಲೇಜ್ ನಲ್ಲಿ,  ಒಳ್ಳೆ ಡ್ರೆಸ್ಸಿಂಗ್ ಸೇನ್ಸ & ಓಡಾಡೋಕ ಒಂದ್ ಬೈಕ್ ಇದ್ರೆ ಸಾಕು. ಇನ್ನೂ ಪ್ರೊಫೆಷನಲ್ ನಲ್ಲಿ, ಕಷ್ಟ ಪಟ್ಟು ದುಡಿದು ದುಡ್ಡು ಕೂಡಿ ಹಾಕಿ ಸಂಸಾರ ಸಾಗಿಸೊ ಜಾಣ್ಮೆ ಇದ್ರೆ ಸಾಕು, ಪೋರ್ಗಿ ಪಡ್ಲ.  ಇದರಲ್ಲೇನ ಬಂತು ಪ್ರೀತಿ ಬದನೆಕಾಯಿ. ಒಂದು ಸೆಳೆತ , ಸ್ವಾರ್ಥ , ಸೆಕ್ಯುರಿಟಿ ಬಿಟ್ರೆ ಮತ್ತೇನಿಲ್ಲ . ಅದಕ್ಕೆ ಪ್ರೀತಿ ಪ್ರೇಮ ಅನ್ನೊ ಮುಖವಾಡ ಅಷ್ಟೆ .
ಹೀಗೆ ನನ್ನ ಯೋಚನಾ ಲಹರಿಯಲ್ಲಿ ನಾನ್ ವಿಹರಿಸ್ತಿದ್ದೇ.
ಹಲೋ , , ಏನಾಯ್ತು ? ಯಾಕ್ ಮಾತಾಡ್ತಿಲ್ಲ ಅಂದ್ಲು ಸವಿತಾ .
ಹಲೊ , ಏನಿಲ್ಲ . ಪಕ್ಕದ ಮನೆ ಹುಡುಗನ ಜೊತೆ ಓಡಿ ಹೋಗಿದಾಳೆ ಅಂದ್ರೆ , ಇದು ಒಂದೆರಡು ದಿನದ ಪ್ರೊಸೆಸ್ ಅಲ್ಲ . ಕಮ್ಮಿ ಅಂದ್ರೂ ಎರಡ್ ವರ್ಷ ಬೇಕು ಅವರು ಇಷ್ಟೊಂದ್ ಬಲೀಬೇಕು ಅಂದ್ರೆ, ಒಂದ್ ಕಣ್ಣ್ ಇಡೋದಲ್ವ  ?
ಹೂಂ , ಮೊದಲಿಗೆ ಗೊತ್ತಾಗಲಿಲ್ಲ . ಇತ್ತೀಚೆಗೆ ಡೌಟ್ ಬಂದು ಬೇರೆ ಮದುವೆ ತಯಾರಿ ಮಾಡ್ತಿದ್ವಿ,  ಅಂದ್ಲು. 
ಸರಿ , ಹೋಗಿದಾಳೆ ಆಯ್ತು . ಬಲವಂತ ದಿಂದ ಯಾರನ್ನೂ ಕಟ್ಟಿ ಹಾಕೋಕೆ ಆಗಲ್ಲ . ಸುಮ್ಮನೆ ಇದ್ದು ಬಿಡಿ ಅಂದೆ ನಾನು .
ಅಷ್ಟ ಆಗಿದ್ರೆ , ಪೀಡೆ ತೊಲಗಿತು ಅಂತ ನಾವೂ ಸುಮ್ಮ ಈರ್ತಿದ್ವಿ . ಹೋಗೋದಲ್ಲದೆ ನಮ್ಮ ದೊಡಮ್ಮ  ಮತ್ತೆ ಅಣ್ಣಂದಿರ ಮೇಲೆ ಕಂಪ್ಲೇಟ್  ಕೊಟ್ಟೀದಾಳೇ .
ಕಂಪ್ಲೇಟ್ ಕೊಟ್ಟೀದಾಳ ? ಏನಂತ ?
ನನಗೆ ನನ್ನ ಕುಟುಂಬದಿಂದ ಪ್ರಾಣ ಭಯಯಿದೆ ರಕ್ಷಣೆ ಕೊಡಿ ಅಂತ .
ಹೌದಾ , ಹೆಂಗೆ ಮುಂದೆ ?
ಎಲ್ರನ್ನೂ ಪೊಲೀಸ್ ಸ್ಟೇಷನ್ ಗೆ ಕರೆದೀದ್ರು. ಅವಳೂ ಬಂದಿದ್ದಲಂತೆ. ನಿನ್ನ ವಿಚಾರ ಏನು ಅಂತ ಪೊಲೀಸ್ ರು ಕೇಳ್ದ್ರೆ . ನನಗೆ , ಅಮ್ಮ ಅಣ್ಣ ಯಾರೂ ಬೇಡ , ನಾನು ಅವನನ್ನ ಪ್ರೀತಿಸಿದಿನಿ ಅವನ ಜೊತೆನೇ ಇರ್ತೀನಿ ಅಂದ್ಲಂತೇ . ಪಾಪ ನಮ್ ದೊಡಮ್ಮ ಕಣ್ಣಲ್ಲಿ ನೀರ್ ತುಂಬಿಕೊಂಡು ನಿಂತಿದ್ರೆ , ಒಂದ್ ಮಾತೂ ಆಡದೆ ನೋಡಿ ನೋಡದಂತೆ ಹೋದಲಂತೆ. ಅಮ್ಮ ಅಣ್ಣಂದಿರ ಬೆಲೆ ಅಕಿಗೆ ಈಗ ಗೊತ್ತಾಗಲ್ಲ , ಮುಂದೆ ಗೊತ್ತಾಗ್ತದೆ, ಎನ್ನುತ್ತ ಬೇಜಾರಲ್ಲಿ ಮಾತು ಮುಗಿಸಿದಳು ಸವಿತಾ .
ಹೌದು ಅಪ್ಪ ಅಮ್ಮನ ಅಣ್ಣಂದಿರ ಪ್ರೀತಿ ಎಂಥದ್ದು ಅಲ್ವಾ . ಮಗು ಹುಟ್ಟೊ ಮುಂಚೆ ಅಮ್ಮ ಅದಕೊಂದು ಹೆಸರ ಇಡ್ತಾಳೆ. ಮಗಳು ಹುಟ್ಟುತ್ತಿದ್ದಂತೇ ಅಪ್ಪ LIC ಮಾಡಸ್ತಾನೇ , ಅವಳ ಓದಿಗೆ ಮದುವೆಗೆ ಸಹಾಯ ಆಗಲಿ ಅಂತ . ತಂಗಿ ಮದುವೆ ಆಗೊ ವರೆಗೂ ನಾನ್ ಮದುವೆ ಒಲ್ಲೆ ಅಂತಾನೆ ಅಣ್ಣ . ನಾನ್ ಜಾಸ್ತಿ ಸುತ್ತಿ ಬಳಸಿ ಮಾತಾಡಲ್ಲ,  ತವರಿನ ಪ್ರೀತಿ ಬಗ್ಗೆ ಒಂದೆ ಮಾತಲ್ಲಿ ಹೇಳೋದಾದರೆ , ಗಂಡ ಹೆಂಡತಿ ನಾವು ಹೊಂದಾಣಿಕೆ ಯಿಂದ ಇಲ್ಲ , ಅವಳು ನನಗೆ ಬೇಡ ಅಂತ ದಿನ ನಿತ್ಯ ಅದೆಷ್ಟು ಡೈವೋರ್ಸ್ ಕೇಸ್ ಗಳು  ಧಾಕಲಾಗ್ತವೆ . ಆದ್ರೆ ನಮ್ ಮಗಳು ನಮ್ ಜೊತೆ ಹೊಂದಾಣಿಕೆಯಿಂದ ಇಲ್ಲ ಅವಳನ್ನ ಮನೆ ಯಿಂದ ಹೊರ ಹಾಕ್ತೀವಿ ಅಂತ ಜಗತ್ತಿನಾದ್ಯಂತ  ಯಾವುದಾದರೂ  ಕೋರ್ಟ್ ನಲ್ಲಿ ಒಂದೆ ಒಂದ್ ಕೇಸ್ ಧಾಕಲಾಗಿದೆಯಾ ? ಚಾನ್ಸೇ ಇಲ್ಲ . 
ಹುಚ್ಚು ಹುಡುಗೀರು .
ಸರಿ , ಪೊಲೀಸ್ ಸ್ಟೇಷನ್ ನಲ್ಲಿ ಗಲಾಟೆ ಆಯ್ತಾ ಅಂತ ಕೇಳದೆ .
ಗಲಾಟೆ ಏನಿಲ್ಲ , ಅವಳಿಗೆ ನಾವ್ ಬೇಡ ಅಂದ್ರೆ ನಮಗೂ ಅವಳು ಬೇಡ , ನಮ್ಮಿಂದ ಅವಳಿಗೆ ಯಾವುದೇ ರೀತಿ ತೊಂದ್ರೆ ಆಗಲ್ಲ ಅಂತ ಸೈ ಮಾಡಿ ಬಂದೀದಾರೆ .
ಮತ್ತೆ ಮುಂದೆ ಹೇಗೆ ? ಅಂತ ಕೇಳಿದೆ ನಾನು ಕುತೂಹಲದಿಂದ .
ಹೇಗೆ ಅಂದ್ರೆ , , ಸ್ಟೇಷನ್ ಇಂದ ಬಂದ ಮೇಲೆ ಮನೇಲಿ ಇದ್ದ ಅವಳ ಎಲ್ಲ ವಸ್ತು ಹೊರಗಡೆ ತಗೆದು ಸುಟ್ಟು , ಸ್ನಾನ ಮಾಡಿಯೇ ಮನೆ ಒಳಗ ಬಂದ್ರು ಎಲ್ಲರು . ಅಂದಳು ಸವಿತಾ .
ವಾಪಸ್ ಎನ್ ಕೇಳಬೇಕು ಗೊತ್ತಾಗಲಿಲ್ಲ ನನಗೆ , ಸುಮ್ಮನಾದೆ . . . . . . .
ಸಿದ್ದು ತಾಂಬೆ.

Comments

  1. ಹುಚ್ಚು ಜಗತ್ತು..

    ReplyDelete
  2. Grand Junction Casino Hotel - MapyRO
    Grand Junction Casino Hotel in 제주도 출장안마 Grand Junction, MI. 16.5 mi (18 안동 출장샵 km) 김포 출장샵 from Grand 삼척 출장마사지 Junction Casino and 문경 출장마사지 30.1 mi (44.8 km) from Harrah's.

    ReplyDelete

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ