Posts

Showing posts from August, 2019

ಸಿಂಪತಿಯ ಸ್ನೇಹ ಬೇಡ

ಮೊನ್ನೆ ಅಷ್ಟೆ ಎಲ್ಲರೂ ಸ್ನೇಹಿತರ ದಿನಾಚರಣೆ ಆಚರಿಸಿದಿರ. ಹತ್ರ ಇರೊರನ್ನ ಮೀಟ್ ಆಗಿ , ದೂರ ಇರೋರನ್ನ ದೂರವಾಣಿ ಅಥವ ಸಂದೇಶ ಮೂಲಕ ಶುಭಕೋರಿ ಆನಂದಿಸಿದಿರಿ. ನಿಮ್ಮ ಸ್ನೇಹ ಹೀಗೆ ಚಿರವಾಗಿರಲಿ ಎನ್ನುತ್ತ  ಸ್ನೇಹದ ಕುರಿತಾಗಿ ಒಂದೆರಡು ಮಾತಾಡಬೇಕೆನಿಸಿತು,  ಕೆಲ ವಿಷಯ ನಿಮ್ಮೊಂದಿಗೆ ಹಂಚಿಕೊಬೇಕೆನಿಸಿತು ಸೊ ಬೆಳೆಗ್ಗೆ ನೆ ಲ್ಯಾಪ್ ಟಾಪ್ ಆನ್ ಮಾಡ್ಕೊಂಡು ಕೂತ್ ಬಿಟ್ಟಿದಿನಿ. ಓಕೆ, ವಿಷಕ್ ಬರ್ತಿನಿ. ಸ್ನೇಹ ಅಂದ್ರೆ, ಭೂಮಿ ಆಕಾಶ್ , ಚುಕ್ಕಿ ಚಂದ್ರಮ, ಉಸರು ಪಸರು ಅನ್ನೊದಕ್ಕಿಂತ ಒಂಚುರು ಪ್ರ್ಯಾಕ್ಟಿಕಲ್ ಆಗಿ ನೋಡದ್ರೆ. ನಮಗೆ ಜೀವನದ ಅನೇಕ ಸಮಯ ಸಂದರ್ಭಗಳಲ್ಲಿ ಹೊಸ ಹೊಸ ಸ್ನೇಹಿತರು ಪರಿಚಯ ಆಗ್ತಾರೆ. ಮೊದಲನೆಯದಾಗಿ , ನಾವು ಚಿಕ್ಕವರಿದ್ದಾಗ ನಮ್ಮ ಮನೆ ಅಕ್ಕ ಪಕ್ಕದ ಓರಿಗೆ ಯವರು. ನಂತರ ಸ್ಕೂಲ್ ನಲ್ಲಿ ಒಂದಿಷ್ಟ್ ಜನರ ಸ್ನೇಹವಾಗ್ತದೆ. ಸ್ಕೂಲ್ ನಂತರ ಹೈಸ್ಕೂಲ್, ನಂತರ್ ಕಾಲೇಜ್, ಕೊನೆಗೆ ಕೆಲಸಕ್ಕೆ ಸೆರಿಕೊಂಡ ಆಫಿಸ್ ನಲ್ಲಿಯೂ ಕೆಲ ಜನರ ಸ್ನೇಹವಾಗ್ತದೆ. ಅಷ್ಟೆ ಯಾಕೆ  ಕಾಫಿ ಡೆ ಯಲ್ಲಿ, ಕ್ರಿಕೇಟ್ ಗ್ರೌಂಡ್ ಲ್ಲಿ, ಮಾರ್ಕೇಟ್ ಲ್ಲಿ, ಸಿನಿಮಾ ಹಾಲ್ ನಲ್ಲಿ, ಇಲ್ಲ ಯಾರದೊ ಮದುವೆ ಮುಂಜಿಯಂಥಹ ಕಾರ್ಯಕ್ರಮಗಳಿಗೆ ಹೋದಲ್ಲಿ. ಹೊಸ ಹೊಸ ಜನ ಪರಿಚಯ ಆಗ್ತಾರೆ, ಸಮಾನ ಮನಸ್ಕರಾದಲ್ಲಿ ಆ ಸ್ನೇಹ ಮುಂದಿವರೆಯಿತ್ತದೆ. ನಮ್ಮ ನೋವು ನಗುವಿನಂತಹ ಅನೇಕ ಭಾವನೆಗಳಿಗೆ ಸ್ಪಂದಿಸ್ತಾರೆ, ನಮ್ಮ ಕಷ್ಟ ಸುಖಕ್ಕ ಆಗ್ತಾರೆ. ಪ್ರತಿ ದಿನ ಮೀಟ್ ಆಗಿ ಮಾ