Posts

Showing posts from August, 2021

ಆರು ತಿಂಗಳ ಆಯಸ್ಸಿನ ಪ್ರೀತಿ..

ಇತ್ತೀಚಿಗೆ ಜಾಸ್ತಿ ಬರಿಯೋಕ ಆಗ್ತಿಲ್ಲ. ನನ್ನ ಬ್ಲಾಗ್ ಪೋಸ್ಟ್ ನ ಕೆಲ ರೆಗ್ಯುಲರ್ ಓದುಗರು ಆಗಾಗ ಕೇಳ್ತಿರ್ತಾರೆ, ತುಂಬ ದಿನ ಆಯ್ತು ಏನೂ ಬರದೇಯಿಲ್ಲ ಅಂತ. ಹಾಗೆ ಕೇಳ್ತಾರೆ ಅಂತ ಸುಮ್ನೆ, ಒಂದುರಲ್ಲಿ ಒಬ್ಬ ರಾಜ ಇದ್ದ... ಅಂತ ಏನೇನೋ ಬರಿಯೋಕ ನನಗಾಗಲ್ಲ. I mean ಖಾಲಿ ಪುಗ್ಸಟ್ಟೆ ಏನೇನೋ ಬರೆದು ಪೇಜ್ ತುಂಬಿಸೋದಕ್ಕಿಂತ, ನಮ್ಮ ಸುತ್ತ ಮುತ್ತ ನಡಿಯೋ ಘಟನೆಗಳ ಬಗ್ಗೆ ಅಥವಾ ನಮ್ಮ ಸುತ್ತಲಿನ ಪಾತ್ರಗಳ ಬಗ್ಗೆ ಬರೆದರೆ ಓದೋರಿಗೂ ಸ್ವಲ್ಪ್ ಇಂಟ್ರೆಸ್ಟ್ ಬರುತ್ತೆ ಅಂತ. ನನ್ನ ಹಳೆ ಪೋಸ್ಟ್ ಗಳನ್ನ ನೋಡಿ ನಿಮಗೆ ಗೊತ್ತಾಗತ್ತೆ, ಹತ್ತು ಪರ್ಸೆಂಟ್ ನಾಟಕಿಯತೆ ಅನಿಸಿದರೂ, ಮಿಕ್ಕ ತೊಂಬತ್ತು ಪರ್ಸೆಂಟ್ ನಮ್ಮ ಸುತ್ತ ಮುತ್ತು ನಡೆದ ಅಥವಾ ನಡೆಯುವ ಘಟನೆಗಳೆ.  ಹಾಗೆ, ಈಗ ಇತ್ತೀಚಿಗೆ ನನ್ನ ಕಣ್ಣಳತೆ ದೂರದಲ್ಲೇ ಒಂದು ಪ್ರೇಮಕತೆ ನಡೆಯಿತು, ಅದರ ಕುರಿತು ಈ ಕಿರು ಲೇಖನ.. ಆತನ ಹೆಸರು ರವಿ ಅಂತ. ಇಪ್ಪತ್ತೈದರ ಆಸುಪಾಸಿನ ಹುಡುಗ. ನೋಡೋಕೆ ತಕ್ಕಮಟ್ಟಿಗೆ ಸುಂದರ, ಸಂಭಾವಿತ. ಡಿಫಾರ್ಮ ಮುಗಿದಿದೆ, ಹೆಸರಾಂತ ಮೆಡಿಕಲ್ ನಲ್ಲಿ ವರ್ಕ್ ಮಾಡ್ತಿದಾನೆ, ತಿಂಗಳ ಸಂಬಳದಲ್ಲಿ ಒಂದು ರೂಪಾಯಿಯೂ ಮುಟ್ಟದೆ ಅಮ್ಮನ ಕೈಲಿ ಕೊಡುವ ಮುಗ್ದ. ಹಳೆ ಸಿನಿಮಾ, ಹಳೆ ಹಾಡು, ಹಳೆ ಹೀರೋಗಳು ಅಂದ್ರೆ ಇಷ್ಟ. ಒಂಥರಾ ಡಿಫರೆಂಟ್ ಕ್ಯಾರೆಕ್ಟರ್ ಅಲಾ??  ನನಗೂ ಹಾಗೆ ಅನಿಸ್ತಿದೆ. ಓಕೆ ಮುಂದೆ ಓದಿ. ಅವತ್ತು ಮದ್ಯಾಹ್ನ ಎರಡು ವರೆಯಿಂದ ಮೂರ್ ಗಂಟೆ ಆಗಿರಬಹುದು, ಮೆಡಿಕಲ್ ಓನರ್ ಊ