ಆರು ತಿಂಗಳ ಆಯಸ್ಸಿನ ಪ್ರೀತಿ..

ಇತ್ತೀಚಿಗೆ ಜಾಸ್ತಿ ಬರಿಯೋಕ ಆಗ್ತಿಲ್ಲ. ನನ್ನ ಬ್ಲಾಗ್ ಪೋಸ್ಟ್ ನ ಕೆಲ ರೆಗ್ಯುಲರ್ ಓದುಗರು ಆಗಾಗ ಕೇಳ್ತಿರ್ತಾರೆ, ತುಂಬ ದಿನ ಆಯ್ತು ಏನೂ ಬರದೇಯಿಲ್ಲ ಅಂತ. ಹಾಗೆ ಕೇಳ್ತಾರೆ ಅಂತ ಸುಮ್ನೆ, ಒಂದುರಲ್ಲಿ ಒಬ್ಬ ರಾಜ ಇದ್ದ... ಅಂತ ಏನೇನೋ ಬರಿಯೋಕ ನನಗಾಗಲ್ಲ. I mean ಖಾಲಿ ಪುಗ್ಸಟ್ಟೆ ಏನೇನೋ ಬರೆದು ಪೇಜ್ ತುಂಬಿಸೋದಕ್ಕಿಂತ, ನಮ್ಮ ಸುತ್ತ ಮುತ್ತ ನಡಿಯೋ ಘಟನೆಗಳ ಬಗ್ಗೆ ಅಥವಾ ನಮ್ಮ ಸುತ್ತಲಿನ ಪಾತ್ರಗಳ ಬಗ್ಗೆ ಬರೆದರೆ ಓದೋರಿಗೂ ಸ್ವಲ್ಪ್ ಇಂಟ್ರೆಸ್ಟ್ ಬರುತ್ತೆ ಅಂತ. ನನ್ನ ಹಳೆ ಪೋಸ್ಟ್ ಗಳನ್ನ ನೋಡಿ ನಿಮಗೆ ಗೊತ್ತಾಗತ್ತೆ, ಹತ್ತು ಪರ್ಸೆಂಟ್ ನಾಟಕಿಯತೆ ಅನಿಸಿದರೂ, ಮಿಕ್ಕ ತೊಂಬತ್ತು ಪರ್ಸೆಂಟ್ ನಮ್ಮ ಸುತ್ತ ಮುತ್ತು ನಡೆದ ಅಥವಾ ನಡೆಯುವ ಘಟನೆಗಳೆ. 
ಹಾಗೆ, ಈಗ ಇತ್ತೀಚಿಗೆ ನನ್ನ ಕಣ್ಣಳತೆ ದೂರದಲ್ಲೇ ಒಂದು ಪ್ರೇಮಕತೆ ನಡೆಯಿತು, ಅದರ ಕುರಿತು ಈ ಕಿರು ಲೇಖನ..

ಆತನ ಹೆಸರು ರವಿ ಅಂತ. ಇಪ್ಪತ್ತೈದರ ಆಸುಪಾಸಿನ ಹುಡುಗ. ನೋಡೋಕೆ ತಕ್ಕಮಟ್ಟಿಗೆ ಸುಂದರ, ಸಂಭಾವಿತ. ಡಿಫಾರ್ಮ ಮುಗಿದಿದೆ, ಹೆಸರಾಂತ ಮೆಡಿಕಲ್ ನಲ್ಲಿ ವರ್ಕ್ ಮಾಡ್ತಿದಾನೆ, ತಿಂಗಳ ಸಂಬಳದಲ್ಲಿ ಒಂದು ರೂಪಾಯಿಯೂ ಮುಟ್ಟದೆ ಅಮ್ಮನ ಕೈಲಿ ಕೊಡುವ ಮುಗ್ದ. ಹಳೆ ಸಿನಿಮಾ, ಹಳೆ ಹಾಡು, ಹಳೆ ಹೀರೋಗಳು ಅಂದ್ರೆ ಇಷ್ಟ. ಒಂಥರಾ ಡಿಫರೆಂಟ್ ಕ್ಯಾರೆಕ್ಟರ್ ಅಲಾ??  ನನಗೂ ಹಾಗೆ ಅನಿಸ್ತಿದೆ. ಓಕೆ ಮುಂದೆ ಓದಿ.

ಅವತ್ತು ಮದ್ಯಾಹ್ನ ಎರಡು ವರೆಯಿಂದ ಮೂರ್ ಗಂಟೆ ಆಗಿರಬಹುದು, ಮೆಡಿಕಲ್ ಓನರ್ ಊಟಕ್ ಹೋಗಿದ್ರು. ಮೆಡಿಕಲ್ ನಲ್ಲಿ ರವಿ ಒಬ್ಬನೆ ಇದ್ದ. ಈಕಡೆ ಮುಖ ಮಾಡಿ ಸ್ಟಾಕ್ ಚೆಕ್ ಮಾಡ್ತಿದ್ದ, ಹಿಂದಗಡೆಯಿಂದ ಯಾರೋ ಹಲೋ ಸರ್ ಅಂತ ಕರೆದಂಗ್ ಆಯ್ತು. ಯಾರು ಅಂತ ತಿರುಗಿ ನೋಡ್ತಾನೆ, ಹುಡುಗಿ ನಿಂತಿದ್ದಾಳೆ. ಸಿಂಪಲ್ ಸ್ಯಾಂಡಲ್, ತಿಳಿಗುಲಾಬಿ ಚೂಡಿ, ಬಲಗೈಯಲ್ಲಿ ಹೋಳಿಯೊ ಒಂದ್ ಬಳೆ, ಎಡಗೈಯಲ್ಲಿ ಹಳೆಯ ವಾಚು, ಕೊರಳಲ್ಲಿ ಅದೇ ತಿಳಿಗುಲಾಬಿ ವೇಲ್ ಅದಕ್ಕೆ ಕಡುಗೆಂಪು ಬಾರ್ಡರ್, ಮುದ್ದಾದ ಮುಖ, ನೀಟಾಗಿ ತೀಡಿರೋ ಹುಬ್ಬುಗಳ ನಡುವೆ ನಗುತಿರೋ ಸಣ್ಣ ಬಿಂದಿ, ಹೈಟು ವೇಟು ನೋಡಿದರೇನೇ ಗೊತ್ತಾಗ್ತಿತ್ತು ಆಕೆ 20 ರಿಂದ 25 ವಯಸ್ಸಿನವಳು ಅಂತ. ಮುಖದಲ್ಲಿ ಸ್ವಲ್ಪ್ ಸಂಕೋಚದ ಭಾವ ತುಂಬಿದ್ರು, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಅನ್ನುವಂತ ಲಕ್ಷಣವಾದ ಹುಡುಗಿ.
ಹೇಳಿ ಯಾವ ಟ್ಯಾಬ್ಲೆಟ್ ಬೇಕಿತ್ತು ಎಂದ ರವಿ.
Sorry ಸರ್, ಟ್ಯಾಬ್ಲೆಟ್ ಅಲ್ಲ. ನಿಮ್ಮಲ್ಲಿ ಕೆಲಸ ಖಾಲಿ ಇದೆಯೇನೋ ಅಂತ ಕೇಳೋಕ್ ಬಂದಿದ್ದೆ ಅಂದ್ಲು ಮೆಲು ಧ್ವನಿಯಲ್ಲಿ.
ರವಿ ನೂ ಸ್ವಲ್ಪ ಸಂಕೋಚ ಸ್ವಭಾವದ ಹುಡುಗ, ಜಾಸ್ತಿ ಮಾತಾಡೋಕೆ ಮುಜುಗರ.
ಓನರ್ ಇಲ್ಲ, ಊಟಕ್ ಹೋಗಿದ್ದಾರೆ, ಸಾಯಂಕಾಲ ಬನ್ನಿ ಸಿಗ್ತಾರೆ ಮೀಟ್ ಆಗಿ ಮಾತಾಡಿ  ಅಂದ.
If you dont mind ಸರ್, ಮನೆ ಸ್ವಲ್ಪ ದೂರ ಇದೆ. ಪದೆ ಪದೆ ಬರೋಕ್ ಆಗಲ್ಲ. ನೀಮ್ ನಂಬರ್ ಕೊಡಿ, ಸಾಯಂಕಾಲ ನಿಮಗೆ ಕಾಲ ಮಾಡ್ತೀನಿ, ಓನರ್ ಸರ್ ಗೆ ಕೇಳಿ ಹೇಳಿ ಅಂದ್ಲು. ತುಟಿಯಲ್ಲಿ ಒತ್ತಾಯದ ನಗುವಿತ್ತು.
ಸರಿ ನಂಬರ್ ತಗೊಳ್ಳಿ 9341......
ಸಾಯಂಕಾಲ ಕಾಲ್ ಮಾಡಿ. ಕೇಳಿ ಹೇಳ್ತಿನಿ.
Ok thank you ಸರ್ ಅಂತ ಹೊರಟಳು.
ಒಂದು ಕ್ಷಣ ಅವಳನ್ನೇ ನೋಡುತ್ತಾ ನಿಂತ ರವಿ. ಬೆನ್ನು ದಾಟಿ ಚಾಚಿಕೊಂಡ ನಿಳ ಜಡೆಯೊಂದಿಗೆ, ನೀಟಾದ ನಡಿಗೆ ಸಾಗ್ತಾಯಿತ್ತು.

ಸಂಜೆ ಆರ್ ಗಂಟೆ ಆಗ್ತಾಯಿತ್ತು. ರವಿ ಯ ಫೋನ್ ರಿಂಗಣಿಸಿತು. ನೋಡಿದ, ಹೊಸ ನಂಬರ್. ಕಾಲ್ ರೀಸಿವ್ ಮಾಡಿ, ಹಲೋ ಯಾರು ಅಂದ.
ಸರ್, ನಾನು ರೇವತಿ ಅಂತ. ಮದ್ಯಾಹ್ನ ನೀಮ್ ಮೆಡಿಕಲ್ ಗೆ ಕೆಲಸ ಕೇಳ್ಕೊಂಡ ಬಂದಿದ್ದೆ. ಕೇಳಿ ಹೇಳ್ತಿನಿ ಅಂದಿದ್ರಿ. ಏನಾಯ್ತು ಸರ್? ಅಂದ್ಲು.
Sorry ರಿ. ಅದು ಏನಾಯ್ತು ಅಂದ್ರೆ. ಅಷ್ಟೊಂದು ವರ್ಕ್ಲೋಡ್ ಇಲ್ಲ. ಎಕ್ಸ್ಟ್ರಾ ಸ್ಟಾಫ್ ಬೇಡ ಅಂದ್ರು ಓನರ್, ಅಂದ.
ನೀಮ್ ಹತ್ರ ಇಲ್ಲ ಅಂದ್ರೂ, ನಿಮ್ಮ ಅಕ್ಕ ಪಕ್ಕದ ಹಾಸ್ಪಿಟಲ್ ನಲ್ಲಿ ಎಲ್ಲಿಯಾದ್ರೂ ಇದ್ರೆ ಕೇಳಿ ಹೇಳಿ ಸರ್ ಪ್ಲೀಸ್ its emergency.
ಹೊಸಬರ ಜೊತೆ ಅಷ್ಟೊಂದು ಮಾತಾನಾಡದ ರವಿ, ಆಕೆ ಚಂದನೆಯ ಹುಡುಗಿ ಅಂತಾನೋ ಅಥವಾ ಕಷ್ಟ ಹೇಳ್ತಿದಾಳೆ ಆಂತಾನೋ, ಅವಳೊಂದಿಗೆ ಮಾತು ಮುಂದುವರೆಸಿದ.
ಅಲ್ರಿ ಯುನಿಫಾರ್ಮ್ ಹಾಕಿ, ನೀಟಾಗಿ ತಲೆ ಬಾಚಿ, ಈಕಡೆ ಒಂದು ಈಕಡೆ ಒಂದು ಜಡೆ ಕಟ್ಟಿ, ಹೆಗಲಿಗೆ ಒಂದ್ ಬ್ಯಾಗ್ ಹಾಕದ್ರೆ ಹೈಸ್ಕೂಲ್ ಹುಡುಗಿ ಥರ ಕಾಣ್ತಿರ. ಇಷ್ಟ ಚಿಕ್ಕ ವಯಸ್ಸಲ್ಲಿ ನಿಮಗ್ಯಾಕೆ ರಿ ದುಡಿಮೆ ಸಂಬಳ ಎಲ್ಲ. ಇನ್ನೂ ಸ್ವಲ್ಪ ವರ್ಷ ಆರಾಮಾಗಿ ಇರೋದ್ ತಾನೆ, ಮುಂದೆ ದುಡಿಯೋದ್ ಇದ್ದೆ ಇದೆ ಅಂದ.
ನೀವ್ ಹೇಳಿದೆನೋ ನಿಜ ಸರ್. ಆದ್ರೆ ನನ್ ಹಣೆಬರಹ ಯಾಕ ಕೇಳ್ತಿರಾ. KGF ಸಿನಿಮಾದಲ್ಲಿ ರಾಕೀಭಾಯ್ ತಾಯಿಯ ವಿಷಯದಲ್ಲಿ ಅನಂತ್ ನಾಗ ರವರ ಒಂದು ಡೈಲಾಗ್ ಇದೆಯಲ್ಲ. ಹದಿನಾಲ್ಕನೆ ವರ್ಷಕ್ಕೆ ಮದುವೆ, ಹದಿನೈದನೆ ವರ್ಷಕ್ಕೆ ಮಗು, ಜೀವನ ಪೂರ್ತಿ ಕಷ್ಟಗಳಲ್ಲೇ ಬಂದ ಆಕೆಗೆ ಇಪ್ಪತ್ತೈದನೆ ವರ್ಷಕ್ಕೆ ಸಾವು ಅವಳನ್ನ ಹುಡಿಕಿಕೊಂಡು ಬಂದಿತ್ತು ಅಂತ. ನನಗೆ ಕ್ಯಾನ್ಸರ್ ಒಂದ್ ಆಗಿಲ್ಲ ಸರ್, ಮಿಕ್ಕಿದೆಲ್ಲ ಸೇಮ್ ಸಿಚುಯೇಷನ್.
ಅಂದ್ರೆ? ರವಿ ಧ್ವನಿಯಲ್ಲಿ ಆಶ್ಚರ್ಯವಿತ್ತು.
ಯಾರಾದ್ರೂ ತನ್ನ ಕಷ್ಟ ಕೇಳದ್ರೆ ಸಾಕು ಅಂತ ಕಾಯುವಂತಿದ್ದ ರೇವತಿ ಮಾತು ಮುಂದುವರೆಸಿದಳು.
ಸರ್ ತೀರ ಚಿಕ್ಕ ವಯಸ್ಸಲ್ಲೇ ಮದುವೆ ಆಯ್ತು. ಹಸಿ ವಯಸ್ಸು, ಬಿಸಿ ಭಾವ. ಏನಾಗ್ತಿದೆ ಅಂತ ಅರ್ಥ ಮಾಡ್ಕೊಳ್ಳೋಕಾಗದ ಮನಸ್ಥಿತಿಯಲ್ಲಿರುವಾಗಲೇ ಮಗು. ಒಂದ್ ಕಡೆ ಅಸಹ್ಯ, ಒಂದ್ ಕಡೆ ಆನಂದ, ಇರಲಿ ಪ್ರಕೃತಿ ನಿಯಮ ಅಂತ ಮಗುವನ್ನ ಅಪ್ಪಿ ಮುದ್ದಾಡ್ತಿದ್ದೆ. ಮದುವೆ ಆಯ್ತು, ಮಗು ಆಯ್ತು, ಅಷ್ಟೇನಾ ಜೀವನ? ಈ ಪ್ರೋಸೆಸ್ ಗೆ ಒಂದರಿಂದ ಎರಡು ವರ್ಷ ಸಾಕು. ಮುಂದೆ ದೂರ ದೂರ ಸಾಗಬೇಕು ಅಲ್ವಾ?. ಆ ದೂರದ ಪಯಣಕ್ಕೆ ದುಡ್ಡು ಆಸ್ತಿ ಅಂತಸ್ತಿಗಿಂತ ಪರಸ್ಪರರಲ್ಲಿ ನಂಬಿಕೆ ಬೇಕು, ವಿಶ್ವಾಸ ಬೇಕು. ಒಬ್ಬರ ಕಂಡ್ರೆ ಒಬ್ಬರಲ್ಲಿ ಪ್ರೀತಿ ಬೇಕು, ಗೌರವ ಬೇಕು. ನಗು ಅಳುವಿನಲ್ಲಿ ಪಾಲು ಬೇಕು. ಸಂತೋಷದಿ ನಕ್ಕು,  ನೋಂದಾಗ ಸಂತೈಸುವ ಹೆಗಲು ಬೇಕು. ಸಪ್ತಪದಿ ಎಂಬ ಏಳು ಹೆಜ್ಜೆಗಳೊಂದಿಗೆ ಜೊತೆಯಾದ ನಾನು, ಕೊನೆ ಹೆಜ್ಜೆವರೆಗೂ ಜೊತೆಯಾಗಿರ್ತೀನೆ ಎಂಬ ಭರವಸೆ ಬೇಕು.
ಆ ಭರವಸೆ ನನ್ನಲ್ಲಿ ಆತ ತುಂಬ ದಿನ ಉಳಿಸಲಿಲ್ಲ. ಇಷ್ಟು ಮಾತು ಮುಗಿಸುವ ವೇಳೆಗೆ ರೇವತಿಯ ಧ್ವನಿ ಸಣ್ಣಾಗಿತ್ತು.
ಅಂದ್ರೆ ನಿಮಗೆ ಮದುವೆ ಆಗಿ, ಒಂದ್ ಮಗೂ ಕೂಡ ಇದೇನಾ?
ರವಿ ಪ್ರಶ್ನೆ ಪೂರ್ತಿ ಮಾಡುವ ಮುಂಚೆನೇ ಉತ್ತರಿಸಲು ಆರಂಭಿಸಿದಳು ರೇವತಿ.
ಹೌದು ಸರ್. ಕೆಲ ಹೆಣ್ಣು ಮಕ್ಕಳು ವಯಸ್ಸಿಗೆ ಬಂದು ವರ್ಷಗಳೇ ಕಳೆದರೂ ಮದುವೆ ಆಗಲ್ಲ, ಮದುವೆ ಆದರೂ ಕೆಲವರಿಗೆ ಬೇಗ ಮಕ್ಕಳಾಗಲ್ಲ. ನಾನ್ ಬಯಸೋ ಮುಂಚೆಯೇ ದೇವರು ನನಗೆ ಮದುವೆ ಭಾಗ್ಯ ತಂದಿದ್ದ, ವರ್ಷ ಕಳೆಯುವ ಹೊತ್ತಿಗೆ ಮಗೂ ಕೂಡ. ಆದ್ರೆ ಗಂಡ ಮಾತ್ರ,, ಮುಂದಿನ ಮಾತು ನುಂಗಿ ಸುಮ್ಮನಾದಳು.
ಅಲ್ಲಾರಿ,. ಮದುವೆ, ಗಂಡ, ಮಗು ಒಳ್ಳೆ ಹಾಲಿನಂತ ಸಂಸಾರ ಅಲ್ವಾ. ಮತ್ತೇನ್ ಪ್ರಾಬ್ಲಮ್?
ನೀವ್ ಅಂದಂಗೆ ಹಾಲಿನಂತ ಸಂಸಾರ ನೆ ಸರ್. ಆದ್ರೆ ಆ ಹಾಲಿನಲ್ಲಿ ಸ್ವಲ್ಪ ಸಂಶಯದ ಹುಳಿ ಬಿದ್ದು, ಆ ಹಾಲು ಬೇಗನೆ ಒಡೆದು ಹೋಯ್ತು ಸರ್.
Sorry ಅರ್ಥ ಆಗ್ಲಿಲ್ಲ ಎಂಬ ಮತ್ತೊಂದು ಪ್ರಶ್ನೆ ರವಿಯಿಂದ.
ಸರ್ ಅದು,. ಹತ್ತಿರದ ಸಂಬಂಧಿಕರಲ್ಲೆ ನನ್ ಮದುವೆ ಆಯ್ತು. ನನ್ ಗಂಡ ನನಗಿಂತ ಹತ್ತು ವರ್ಷ ಹಿರಿಯ. ಆಗಿದ್ದ ಆಯ್ತು ಅಂತ ಹೊಂದಿಕೊಂಡಿದ್ದೆ. ಮಗು ಆದ ನಂತರ ಅದರ ಲಾಲನೆ ಪಾಲನೆ ಯಲ್ಲಿ ಬಿಜಿ ಆದ ಮೇಲೆ, ಮಗು ಒಂದು ಹಂತಕ್ಕೆ ಬೆಳೆಯೋವರೆಗೂ ಗಂಡನ ಕಡೆ ಸ್ವಲ್ಪ ಗಮನ ಕಡಿಮೆ ಆಗೋದು ನಿಜಾನೆ. ಇದು ಎಲ್ಲ ಹೆಂಗಸರ ವಾಸ್ತವ ಕೂಡ ಹೌದು. ಆದ್ರೆ ಇದ್ದಕ್ಕಿಂದ್ದಂತೆ ಒಂದು ದಿನ ರಾತ್ರಿ ಕುಡಿದು ಬಂದು ಇದೆ ವಿಷಯ ಇಟ್ಕೊಂಡು ಜಗಳ ತಗೆದ. ಎಂದು ಸುಮ್ಮನಾದಳು ರೇವತಿ. ಮುಂದಿನ ಎಲ್ಲವನ್ನೂ ಹೇಳಲು ಆಕೆಗೆ ಮುಜುಗರ, ಹಿಂಜರಿಕೆ,.
ಆದ್ರೆ ಅರ್ಧ ಕಥೆ ಕೇಳಿದ ರವಿಗೆ ಮುಂದೇನು ಎಂದು ತಿಳಿದುಕೊಳ್ಳುವ ಹಂಬಲ. ಹಂಬಲ ಅನ್ನೋದಕ್ಕಿಂತ ಪಾಪ ಇನ್ನೂ ಚಿಕ್ ವಯಸ್ಸು ಏನಾಗಿರಬಹು ಎಂಬ ಕನಿಕರ.
ಏನಂತೆ ಆತನ ಪ್ರಾಬ್ಲಮ್ಎಂದ ರವಿ.


Comments

  1. 1xBet korean players v uk v rieger - Legalbet.co.kr
    In a case 1xbet partenaire that is not clear, all that information is necessary to verify that the player has cheated or cheated.

    ReplyDelete

Post a Comment

Popular posts from this blog

ಲವ್ ಈಸ್ ಬ್ಲೈಂಡ್ (kannada article)

ಐತಾರ ಸಂತಿ (ಕಿರು ಲೇಖನ)