Posts

Showing posts from 2020

ಪ್ರೇಮಕ್ಕಿಲ್ಲದ ಜಾತಿ ಕಾಮಕ್ಕುಂಟೆ ?

ಆಕೆ ನನಗೆ ಸುಮಾರು ಆರು ವರ್ಷದಿಂದ ಗೊತ್ತು. ಚಿಕ್ಕ ವಯಸ್ಸಲ್ಲಿ ಮದುವೆ ಆಗಿತ್ತು. ಕುಡುಕ ಗಂಡ, ವಗ್ಗದ ವಾತಾವರಣ. ಬದುಕಿನ ಬಗ್ಗೆ ತಾನು ಕಟ್ಟಿಕೊಂಡ ಕನಸುಗಳ ಕೊಲ್ಲಲು ಮನಸಾಗದೆ ತವರಿಗೆ ವಾಪಸ್ ಆಗಿದ್ದಳು. ಗಂಡನ ಮನೆಯಿಂದ ಜಗಳ ಮಾಡಿ ತವರಿಗೆ ವಾಪಸ್ ಆದವರನ್ನ ಯಾರೂ ರತ್ನಗಂಬಳಿ ಹಾಸಿ ಬರಮಾಡಿಕೊಳ್ಳಲ್ಲ. ಒಂದಿಷ್ಟು ಪ್ರಶ್ನೆ. ಯಾಕೆ? ಏನು? ಕೆಲ ಗಂಡಸರು ಹಾಗೆ ಅಡ್ಜಸ್ಟ್ ಮಾಡ್ಕೋಬೇಕು ಅನ್ನೋ ತರ್ಕಹಿನ ಸಲಹೆ. ಸ್ವಲ್ಪ ದಿನದ ನಂತರ ತಾಯಿ ಸುಮ್ಮನಾಗಬಹು. ಆಕೆನೂ ಒಂದ್ ಹೆಣ್ಣು. ಆಕೆಗೆ ಗೊತ್ತು, ಹೆಣ್ಣಿನ ಕಷ್ಟ ಸಂಕಟ, ಕನಸು ಕಣ್ಣೀರು, ಬಯಕೆ ಬೇಸರಿಕೆ,. ಕೆಲ ಗಂಡಸರು ನಡೆದುಕೊಳ್ಳುವ ರೀತಿ ನೀತಿ ಎಲ್ಲವನ್ನೂ ನೋಡಿಕೊಂಡು ಬಂದವಳು. ಅಮ್ಮ ಸುಮ್ಮನಾದಳು. ಆದ್ರೆ  ಅಪ್ಪನಿಗೆ ಮರ್ಯಾದೆಯ ಪ್ರಶ್ನೆ. ಆತನಿಗೆ ಮಗಳ ಕಷ್ಟ ಬೇಡ, ಕಣ್ಣೀರು ಬೇಡ. ಊರಲ್ಲಿ ಎರಡು ಜನ ಇಂಥವನ ಮಗಳು ಗಂಡನ ಬಿಟ್ಟು ಕೂತಿದ್ದಾಳೆ ಅಂತ ಅನ್ನಬಾರದು. ಅಪ್ಪ ದಿನ ಸಂಜೆ ಕುಡಿದು ಬಂದು ಶುರು ಮಾಡೋನು. ಹೋಗು ಗಂಡನ ಮನೆಗೆ, ಮರ್ಯಾದೆ ಪ್ರಶ್ನೆ. ದಿನ ಸಂಜೆ ಆದ್ರೆ ಇದೆ ರಗಳೆ ಮನೇಲಿ. ಹೋಗು ಅಂತ ಅಪ್ಪ, ಆತ ಸರಿಯಿಲ್ಲ ಹೋಗಲ್ಲ ಅಂತ ಮಗಳು. ಆಗ ಪರಿಚಯ ಆದವಳು ನನಗೆ. ಆಕೆ ಎದೆಯಲ್ಲಿ ದುಃಖ ಇತ್ತು, ನನ್ನೆದೆಯಲ್ಲಿ ಸಮಾಧಾನವಾಗಿ ಕೆರಳಿಸಿಕೊಳ್ಳೋ ಕಿವಿಗಳಿದ್ವು. ಆಗಾಗ ಕಾಲ್ ಮಾಡೋಳು, ಮನೆಯಲ್ಲಿ ನ ಜಗಳ, ಅಪ್ಪ ಬೈದ ಬೈಗುಳ, ಗಂಡನ ಮನೆಯಲ್ಲಿ ತನಗಾದ ಅನ್ಯಾಯ, ಎಲ್ಲ ಹೇಳೋಳು, ಅಳೋಳು

ಇದೆಲ್ಲವೂ ಪ್ರೀತಿ ನಾ ???

ತುಂಬ ದಿನಗಳ ನಂತರ ಎಲ್ರಿಗೂ  ಹಾಯ್, & ಮನೆಯಲ್ಲಿ ಇರಿ ಕರೋನ ಮಹಾಮಾರಿಯನ್ನ ತಡೆಗಟ್ಟಿ  . ಖಾಲಿ ಕೂತಿದ್ದೆ . ಒಂದ್ ವಿಷಯದ ಬಗ್ಗೆ ನಿಮ್ ಜೊತೆ ಹಂಚಿಕೊಬೆಕು ಅನಿಸ್ತು , ಅದೆ ಪ್ರೀತಿ ಮತ್ತು ಅದರ ರೀತಿ . ಯಾರನ್ನೇ ಆಗಲಿ ಯಾರೇ ಇಷ್ಟ ಪಡಬೇಕು ಅಂದ್ರೆ ಅಲ್ಲೊಂದು ಅವಶ್ಯಕತೆ ಇದ್ದೆ ಇರ್ತದೆ . ಸುಮ್ನೆ ಯಾರೋ ಯಾರನ್ನೋ ಇಷ್ಟ ಪಡಲ್ಲ. ಇನ್ನೂ ಸ್ವಲ್ಪ ಬಿಡಿಸಿ ಹೇಳೋದ್ ಆದ್ರೆ . ಒಂದ್ ಉದಾಹರಣೆ . ನಾಲ್ಕಾರು ಜನ ವಯಸ್ಸಿನ ಹುಡುಗರು ಮಾತಾಡ್ತಾ ಕುಳಿತಿರತಾರೆ. ಅಲ್ಲಿ ಅವರವರ ಇಷ್ಟದ ಹುಡುಗಿಯರ ಬಗ್ಗೆ ಮಾತು ಬರೋದು ಸರ್ವೇ ಸಾಮಾನ್ಯ . ಆಗ ಒಬ್ಬ , ದೋಸ್ತ್ ಎನ್ ಅದಾಳ ಆಕಿ ನೌನ. ನೋಡಿದ್ರ ತಲಿ ಗಿರ್ರ್ ಅನ್ನತ್ತ.  ಎನ್ ಕಲರ್ ,  ರನ್ ಸ್ಟ್ರಕ್ಟರ್ , ಪ್ರೀತಿ ಅಂತ ಮಾಡಿದ್ರ ಅಕಿನ ಮಾಡ್ತಿನಿ ನೋಡು ಅಂತಾನ. ಕಾಲೇಜ್ ಮುಗಿದು ಮದುವೆ ಹೊಸ್ತಿಲಲ್ಲಿ ನಿಂತ ನಾಲ್ಕಾರು ಜನ ಹುಡುಗಿಯರು ಮಾತಾಡ್ತ ಕುಳಿತಾಗ. ಒಬ್ಳು ಹುಡುಗಿ , ಒಬ್ಬ ಪರಿಚಯಸ್ತ ಹುಡುಗನ ಹೆಸರು ಹೇಳುತ್ತ. ಆತ ನೋಡೋಕೆ ತಕ್ಕಮಟ್ಟಿಗೆ ಇದ್ರೂ , ಜಾಣ . ಒಳ್ಳೆ ನೌಕರಿ ಇದೆ , ಯಾವುದೇ ಕೆಟ್ಟ ಹವ್ಯಾಸ ಇಲ್ಲ , ಸಂಭಾವಿತ ಸಹಿತ , ಫ್ಯಾಮಿಲಿ ಹಿನ್ನೆಲೆ ಕೂಡ ಪರವಾಗಿಲ್ಲ. ಅತನ ಅಮ್ಮ ಇಲ್ಲ . ಇರೋದು ಅವರಪ್ಪ ಆತ ಅಷ್ಟೇ . ಆತನಿಗೆ ಒಬ್ಳು ಅಕ್ಕ ಇದಾಳೆ ಅವಳದು ಮದುವೆ ಆಗಿದೆ ಎನ್ ತೊಂದ್ರೆ ಇಲ್ಲ . ಆತ ಅಂದ್ರೆ ನನಗೆ ಇಷ್ಟ , ಆತ ಹೂಂ ಅಂದ್ರೆ ಅವನನ್ನೇ ಮದುವೆ ಆಗ್ತೀನಿ , ಲೈಫ್ ಸೂಪರ್

ಆಕೆ ಅಂದ್ರೆ ಗೌರವ , ಯಾಕೆ ಗೊತ್ತಾ ?

ನಾಲ್ಕು ವರ್ಷಗಳ ಹಿಂದೆ ನಾನು ಶೋಭಾ ನರ್ಸಿಂಗ್ ಹೊಂ ನಲ್ಲಿ ಡ್ಯೂಟಿ ಮಾಡ್ತಿದ್ದೆ . ಅವತ್ತು ಬೆಳಗ್ಗೆ ಹತ್ತು ಗಂಟೆ ಆಗಿರಬಹುದು ಸಹೋದರಿ ಪ್ರಿಯಾ ಳಿಂದ (ಹೆಸರು ಬದಲಿಸಲಾಗಿದೆ) ಕಾಲ್ ಬಂತು. ಅಣ್ಣ ಮೇಡಮ್ ಅವರು OPD ಗೆ ಎಷ್ಟೊತ್ತಿಗೆ ಬರ್ತಾರ ಅಂತ ಕೇಳಿದಳು. ಅದು ಗೈನಿಕ ಹಾಸ್ಪಿಟಲ್ ಹೀಗಾಗಿ ಯಾರಿಗೆ ? ಏನು ? ಯಾಕೆ ? ಅಂತ ಏನೂ ಕೇಳದೆ , ಹನ್ನೆರಡ ಗಂಟೆಗೆ ಬರ್ತಾರ ಅಂದೆ. ಸರಿ ಅಣ್ಣ ಅಂತ ಕಾಲ್ ಕಟ್ ಮಾಡದ್ಲು. ಮದ್ಯಾಹ್ನ ಒಂದ್ ಗಂಟೆ ಅಯ್ತು , ಲ್ಯಾಬ್ ನಲ್ಲಿ ಕೂತಿದ್ದೆ . ಪ್ರಿಯಾ ಬಂದ್ಲು , ಬಾ ಕೂತ್ಕೋ ಅಂದೆ . ಎದುರಿನ ಕುರ್ಚಿ ಮೇಲೆ ಕುಳಿತು , ನನಗೆ ತೋರ್ಸಾಕ ಬಂದಿದ್ದೆ ಅಣ್ಣ ಅಂದ್ಲು . ಹೌದಾ ಅಂದು ಸುಮ್ಮನಾದೆ. ಕೆಲವೊಬ್ಬರು ನನ್ನ ಜೊತೆ ಎಲ್ಲವನ್ನ ಮುಕ್ತವಾಗಿ ಹಂಚಿಕೋತಾರೆ. ಹೀಗೆ  ಸ್ವಾತಂತ್ರ್ಯ ಇದೆ ಅಂತ ನಾನು ಅಗತ್ಯ ಮೀರಿ ಯಾವುದನ್ನೂ ಕೇದಕಲ್ಲ , ಅವರು ಹೇಳಿದನ್ನ ನಿಷ್ಟೆಯಿಂದ ಕೇಳತೆನೆ. ಪ್ರಿಯಾ ಮಾತಿಗೆ ಹೌದಾ ಎಂದು ಸುಮ್ಮನಾದೆ . ಮತ್ತೆ ಅವಳೆ ಮಾತು ಮುಂದುವರೆಸಿ, ಅಣ್ಣ ನನಗೀಗ ಮೂರ್ ತಿಂಗಳು, ನನಗೆ ತೋರ್ಸೋಕ ಬಂದಿದ್ದೆ ಮೇಡಮ್ ಕಡೆ ಎಂದು ಸ್ವಲ್ಪ ಮುಜುಗರದಿಂದ ತಲೆ ಕೆಳಗೆ ಮಾಡಿ ಕೂತಳು. ಏನೂ ಹೇಳದೆ ಸುಮ್ಮನೆ ಕುಳಿತೆ . ಯಾಕೆ ಅಂದ್ರೆ , ಪ್ರಿಯಾ ಬಗ್ಗೆ ನನಗೆ ಇರೊ ಪ್ರಾಥಮಿಕ ಮಾಹಿತಿ ಪ್ರಕಾರ , ಆಕೆಗೆ ಚಿಕ್ಕ ವಯಸಲ್ಲೇ ಇಷ್ಟವಿಲ್ಲದ ಮದುವೆ ಆಗಿದೆ . ಯಾವುದೊ ಕಾರಣಕ್ಕೆ ಗಂಡನ ಮನೇಲಿ ಸಮಸ್ಯೆ ಆಗಿ ಆಚೆ ಬಂದಿದ್ದಾಳ