ಇದೆಲ್ಲವೂ ಪ್ರೀತಿ ನಾ ???

ತುಂಬ ದಿನಗಳ ನಂತರ ಎಲ್ರಿಗೂ  ಹಾಯ್, & ಮನೆಯಲ್ಲಿ ಇರಿ ಕರೋನ ಮಹಾಮಾರಿಯನ್ನ ತಡೆಗಟ್ಟಿ  .
ಖಾಲಿ ಕೂತಿದ್ದೆ . ಒಂದ್ ವಿಷಯದ ಬಗ್ಗೆ ನಿಮ್ ಜೊತೆ ಹಂಚಿಕೊಬೆಕು ಅನಿಸ್ತು , ಅದೆ ಪ್ರೀತಿ ಮತ್ತು ಅದರ ರೀತಿ .
ಯಾರನ್ನೇ ಆಗಲಿ ಯಾರೇ ಇಷ್ಟ ಪಡಬೇಕು ಅಂದ್ರೆ ಅಲ್ಲೊಂದು ಅವಶ್ಯಕತೆ ಇದ್ದೆ ಇರ್ತದೆ . ಸುಮ್ನೆ ಯಾರೋ ಯಾರನ್ನೋ ಇಷ್ಟ ಪಡಲ್ಲ. ಇನ್ನೂ ಸ್ವಲ್ಪ ಬಿಡಿಸಿ ಹೇಳೋದ್ ಆದ್ರೆ . ಒಂದ್ ಉದಾಹರಣೆ . ನಾಲ್ಕಾರು ಜನ ವಯಸ್ಸಿನ ಹುಡುಗರು ಮಾತಾಡ್ತಾ ಕುಳಿತಿರತಾರೆ. ಅಲ್ಲಿ ಅವರವರ ಇಷ್ಟದ ಹುಡುಗಿಯರ ಬಗ್ಗೆ ಮಾತು ಬರೋದು ಸರ್ವೇ ಸಾಮಾನ್ಯ . ಆಗ ಒಬ್ಬ , ದೋಸ್ತ್ ಎನ್ ಅದಾಳ ಆಕಿ ನೌನ. ನೋಡಿದ್ರ ತಲಿ ಗಿರ್ರ್ ಅನ್ನತ್ತ.  ಎನ್ ಕಲರ್ ,  ರನ್ ಸ್ಟ್ರಕ್ಟರ್ , ಪ್ರೀತಿ ಅಂತ ಮಾಡಿದ್ರ ಅಕಿನ ಮಾಡ್ತಿನಿ ನೋಡು ಅಂತಾನ. ಕಾಲೇಜ್ ಮುಗಿದು ಮದುವೆ ಹೊಸ್ತಿಲಲ್ಲಿ ನಿಂತ ನಾಲ್ಕಾರು ಜನ ಹುಡುಗಿಯರು ಮಾತಾಡ್ತ ಕುಳಿತಾಗ. ಒಬ್ಳು ಹುಡುಗಿ , ಒಬ್ಬ ಪರಿಚಯಸ್ತ ಹುಡುಗನ ಹೆಸರು ಹೇಳುತ್ತ. ಆತ ನೋಡೋಕೆ ತಕ್ಕಮಟ್ಟಿಗೆ ಇದ್ರೂ , ಜಾಣ . ಒಳ್ಳೆ ನೌಕರಿ ಇದೆ , ಯಾವುದೇ ಕೆಟ್ಟ ಹವ್ಯಾಸ ಇಲ್ಲ , ಸಂಭಾವಿತ ಸಹಿತ , ಫ್ಯಾಮಿಲಿ ಹಿನ್ನೆಲೆ ಕೂಡ ಪರವಾಗಿಲ್ಲ. ಅತನ ಅಮ್ಮ ಇಲ್ಲ . ಇರೋದು ಅವರಪ್ಪ ಆತ ಅಷ್ಟೇ . ಆತನಿಗೆ ಒಬ್ಳು ಅಕ್ಕ ಇದಾಳೆ ಅವಳದು ಮದುವೆ ಆಗಿದೆ ಎನ್ ತೊಂದ್ರೆ ಇಲ್ಲ . ಆತ ಅಂದ್ರೆ ನನಗೆ ಇಷ್ಟ , ಆತ ಹೂಂ ಅಂದ್ರೆ ಅವನನ್ನೇ ಮದುವೆ ಆಗ್ತೀನಿ , ಲೈಫ್ ಸೂಪರ್ ಆಗಿರತ್ತೆ ಅಲಾ ಅಂತ ಮುಗುಳ್ನಗುತ್ತ ಹುಬ್ಬು ಹಾರಿಸ್ತಾಳೆ. ಇದೆಲ್ಲ ಅವೀವಾಹೀತರ ಪ್ರೀತಿ ಆದ್ರೆ , ವಿವಾಹಿತರ ಪ್ರೀತಿ ಕೂಡಾ ಇದೆ ಗೊತ್ತ ನಿಮಗೆ ?
ಇದೆ ಅದ್ಹೇಗೆ ಅಂತ ಹೇಳ್ತೀನಿ ಕೇಳಿ .
ವಯಸ್ಸು ಮೀರಿದ ಗಂಡ , ನಡುವಯಸ್ಸಿನ ಹೆಂಡತಿ , ಇಬ್ಬರಿಗೂ ಮಾನಸಿಕವಾಗಿಯೂ ದೈಹಿಕವಾಗಿಯೂ ತಾಳು ಮೇಳಿಲ್ಲ , ಹೊಂದಾಣಿಕೆಯಿಲ್ಲ . ನಿತ್ಯ ಸಂಸಾರದಲ್ಲಿ ಸಾಮರಸ್ಯವಿಲ್ಲ . ಹೀಗಿರುವಾಗ ಆ ಹೆಂಡತಿಗೆ ಎದುರು ಮನೆಯಲ್ಲಿರೋ ಹರೆಯದ ಹುಡುಗನ ಮೇಲೆ ಪ್ರೀತಿ ಉಂಟಾಗ್ತದೆ. ಮೊದ ಮೊದಲು ಕಣ್ಣು ಸನ್ನೆಲಿ ಮಾತಾಡೋರು, ದಿನ ಕಳೆದಂತೆ ಗಂಡ ಮನೇಲಿ ಇಲ್ಲದಾಗ ಇಬ್ಬರೂ ಭೇಟಿ ಆಗ್ತಾರೆ,  ಕಷ್ಟ ಸುಖ ಮಾತಾಡ್ತಾರೆ . ಮುಂದೊಂದು ದಿನ ಇಬ್ಬರಲ್ಲಿ ಒಬ್ಬರು , ನಿನ್ ಅಂದ್ರೆ ನನಗೆ ತುಂಬ ಇಷ್ಟ , ನಿನ್ನನ್ನ ನಾನು ತುಂಬ ಪ್ರೀತಿಸ್ತಿದಿನಿ , ನಿನ್ನ ಬಿಟ್ಟು ಇರೋಕ ಆಗಲ್ಲ ಅಂದ ಬಿಡ್ತಾರೆ. ಅಲ್ಲೊಂದು ಹೊಸ ಪ್ರೇಮಕಥೆ ಶುರು. ಹೀಗೆ ತುಂಬ ತರಹದ ಪ್ರೇಮಗಳನ್ನ ನಾನ್ ನೋಡಿದೀನಿ. ಹೇಳ್ತಾ ಹೋದ್ರೆ KGF part 1,2 ಥರ ಇದನ್ನೂ ಸಹ ಹತ್ತಾರು ಪಾರ್ಟ್ ಬರೀಬೇಕ ಆಗತ್ತೆ.  ಲಾಸ್ಟ್ ಇನ್ನೊಂದ್ ತರಹದ ಪ್ರೀತಿ ಹೇಳಿ ಮುಗೀಸ್ತೇನೆ.
ಆಕೆ ನಡುವಯಸ್ಸಿನ ಹೆಂಗಸು , ಗಂಡ ಮಕ್ಕಳು , ಆಸ್ತಿ ಅಂತಸ್ತು , ಎಲ್ಲ ಸಿರಿ ಸಂಪತ್ತು ಇದೆ . ದೈಹಿಕವಾಗಿ ಮಾನಸಿಕವಾಗಿ ಯಾವುದಕ್ಕೂ ಏನೂ ಕೊರತೆಯಿಲ್ಲ . ಆದ್ರೆ ಆಕೆಗೆ ಸಾಮಾಜಿಕವಾಗಿ ಬೆಳೆಯುವ , ಹೆಸರು ಮಾಡುವ ಆಶೆ ಇರ್ತದೆ . ಆಗ ಸಾಮಜಿಕವಾಗಿ ಮುಂಚೂಣಿಯಲ್ಲಿರುವ ನಾಯಕರ ಮೇಲೆ ಲವ್ವಾಗ್ತದೆ (ಕ್ಷಮೆ ಇರಲಿ ಎಲ್ಲ ಸಾಮಾಜಿಕ ಕಾರ್ಯಕರ್ತೆಯರು ಹೀಗೆ ಅಂತಲ್ಲ) .
ನೋಡಿದಿರಲ್ಲ , ಪ್ರೀತಿ ಮತ್ತು ಅದರ ರೀತಿಗಳ ಬಗ್ಗೆ . ಪ್ರತಿಯೊಬ್ಬರ ಪ್ರೀತಿಯ ಹಿಂದೆ ಒಂದ್ ಹಸಿವು(ಅವಶ್ಯಕತೆ) ಇರ್ತದೆ , ಸುಮ್ನೆ ಯಾರನ್ನೂ ಯಾರೂ ಪ್ರೀತ್ಸಲ್ಲ .
ಕೆಲವೊಬ್ಬರು ಮಾನಸಿಕ ಹಸಿವಿನಿಂದ ಪ್ರೀತಿಸ್ತಾರೆ , ಕೆಲವೊಬ್ಬರು ದೈಹಿಕ ಹಸಿವಿನಿಂದ ಪ್ರೀತಿಸ್ತಾರೆ , ಕೆಲವೊಬ್ಬರು ಆರ್ಥಿಕ ಹಸಿವಿನಿಂದ ಪ್ರೀತಿಸ್ತಾರೆ , ಇನ್ನ ಕೆಲವೊಬ್ಬರು ಸಾಮಾಜಿಕ ಸ್ಥಾನ ಮಾನಗಳ ಹಸಿವಿನಿಂದ ಪ್ರೀತಿಸ್ತಾರೆ . ಯಾರ್ ಏನೆ ಮಾಡಲಿ , ಹೆಂಗೆ ಬದುಕಲಿ , ಅದು ಅವರ ವಯಕ್ತಿಕ , ನನ್ನದೇನೂ ಅಬ್ಯಂತರ ಇಲ್ಲ . ಆದ್ರೆ ಇವೆಲ್ಲವಕ್ಕೂ ಪ್ರೀತಿ ಅಂತಾನೆ ಕರಿತಾರಲ್ಲ , ಅದೆ ನನ್ನ ಸಂಕಟ .

ನಿಜವಾದ,  ನಿಸ್ವಾರ್ಥ ಪ್ರೀತಿ ಯಾವುದು ? ಆದಷ್ಟು ಬೇಗ ಮತ್ತೆ ಸಿಗ್ತೀನಿ ಅದರ ಬಗ್ಗೆ ಮಾತಾಡ್ತೀನಿ .
ಅಲ್ಲಿಯವರೆಗೂ by , gn .  take care .
ನಿಮ್ಮ . . ಸಿದ್ದು ತಾಂಬೆ .

Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ವಾಟ್ಸ್ ಅಪ್ &ಇಂಟರ್ನೆಟ್ ಇರದೆ ಇರಬಹುದಾ ?