Posts

Showing posts from November, 2018

ಲೇಡಿ ದೇವದಾಸ

ಬೈಕ್ ಮೇಲೆ ಹೊರಟಿದ್ದ ಶೇಖರನಿಗೆ ಜೇಬಲ್ಲಿದ್ದ ಮೊಬೈಲ್ ರಿಂಗ್ ಆದಂತೆ ಭಾಸವಾಯ್ತು. ಯಾರದಿರಬಹುದು ಅಂತ ಬೈಕ್ ಸೈಡ್ ಹಾಕಿ ನೋಡಿದರೆ,ನಂದಿನಿ ಕಾಲ್ ಮಾಡಿದ್ದಳು. ಮೀಟ್ ಆಗಿ ಹೋಗಿ ಇನ್ನೂ ಹತ್ತು ನಿಮಿಷ ಕಳೆದಿಲ್ಲ ಮತ್ಯಾಕೆ ಕಾಲ್ ಮಾಡಿದಳು ಅಂತ ಕಾಲ್ ರಿಸಿವ್ ಮಾಡಿ ಹಲೊ ಎಂದ. ಹಲೊ ಎಲ್ಲಿದಿಯಾ ? ಇನ್ನೂ ಮುಗಿದಿಲ್ವಾ ಮೆರುಣಗಿ ? ಬೇಗ್ ಹೊಗು ರೂಮ್ ಗೆ ಅಂದಳು ನಂದಿನಿ. ಇನ್ನೂ ಇಲ್ಲ, ನೀನು ಹೊದಿಯಾ ಮನೆಗೆ ? ಎಂಬ ಪ್ರಶ್ನೆ ಶೇಖರನದು. ಗಾಂಧಿ ಚೌಕ್  ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಅದಿನಿ, ಇನ್ನು ಬಸ್ ಬಂದಿಲ್ಲ ಎಂದು ಉತ್ತರಿಸಿದಳು. ಸರಿ, ಬೈಕ್ ತಗೊಂಡು ಬರ್ಲಾ ಡ್ರಾಪ್ ಮಾಡೋಕೆ ? ಬೇಡೆ, ಅದಕ್ಕಲ್ಲ ನಾನ್ ಕಾಲ್ ಮಾಡಿದ್ದು. ಏನಮ್ಮ ನಿನ್ ಕಿರಿ ಕಿರಿ ? ಸುಮಾರು ಅರ್ಧ ಗಂಟೆ ಜೊತೆಲೆ ಇದ್ದೆ ಒಂದೂ ಮತಾಡಲಿಲ್ಲ. ಕಣ್ಣಿಂದ ನೆಲೆದ ಮೆಲೆ ರಂಗೋಲಿ ಬಿಡಿಸಿದ್ದೆ ಆಯ್ತು. ಬಿಟ್ಟಸ್ಥಳ ತುಂಬಿರಿ ಅನ್ನೊ ಹಾಗೆ ನಾನ್ ಕೇಳಿದಕ್ಕ ಮಾತ್ರ ಉತ್ರ ಕೊಟ್ಟು ಸುಮ್ಮನಾಗ್ತಿದ್ದೆ, ಇಗ ನೋಡದ್ರೆ ಫೋನ್ ಮಾಡಿ ತಲೆ ತಿಂತಿಯಾ, ಬರಿ ಇದೆ ಅಗೊಯ್ತು ನಿಂದು. ನೀನ್ ಎದುರಿಗಿದ್ದಾಗ ಮಾತಾಡೊಕೆ ಭಯ, ಅದಕ್ಕೆ ಕಾಲ್ ಮಾಡದಾಗ ತಲೆ ತಿಂತಿನಿ. ನಾನೇನ್ ಹುಲಿನಾ ? ನಿಂಹನಾ ? ಭಯ ಪಡೋಕೆ. ತೂಕ ಮಾಡದ್ರೆ ಪಾವ್ ಕೇಜಿ ಇಲ್ಲ. ಐ ನೊ , ನೀನ್ ಪಾವ್ ಕೇಜಿ ಇಲ್ದೆ ಇರಬಹುದು. ಆದ್ರೆ ನಿನ್ ಮಾತಲ್ಲಿ-ಮನಸಲ್ಲಿ ನಿನ್ ವ್ಯೆಕ್ತಿತ್ವದಲ್ಲಿ ಒಂದ್ ವೇಟ್ ಇದೆ, ಅದಕ್ಕೆ ಭಯಾ

ನಾಳೆ ಅವಳ ಎಂಗೇಜಮೆಂಟ್

Image
ರವಿವಾರ ಡ್ಯೂಟಿ ಹಾಪ್ ಡೆ ಮದ್ಯಾಹ್ನ ಎರಡಕ್ಕೆ ಮುಗಿದಿತ್ತು, ಇನ್ನೇನು ಊಠ ಕ ಹೋಗಬೇಕು ಅನ್ನುವಷ್ಟರಲ್ಲಿ ಗಿರಿ call ಮಾಡಿದ. ದೋಸ್ತ್ ಎಲ್ಲಿ ಅದಿ ಅಂದ . ಜಸ್ಟ್ ಡ್ಯೂಟಿ ಮುಗೀತು ಊಠ ಕ ಹೋಗ್ತಿದಿನಿ ಅಂದೆ . ಸರಿ ಊಠ ಮಾಡಬೇಡ ಆಫೀಸ್ ಕಡೆ ಹೋಗೋಣ ಅಂದ . ದೋಸ್ತ month end ನನ್ ಕಡೆ ಹೊಡದ್ರೂ ಐದ್ ಪೈಸೆ ಸಿಗಲ್ಲ ಮುಂದಿನ ವಾರ ಹೋಗೋಣ ಬಿಡು ಅಂದ್ರೂ ಕೇಳಲಿಲ್ಲ ಗಿರಿ . ನನ್ ಕಡೆ ಅದಾವ ಬಾ ಅಂದ ಇಷ್ಟ ದಿನ ಆತ ಕರೆಯುವಾಗ ಆತನ ಮಾತಲ್ಲಿ ಆರ್ಡರ್ ಇರ್ತಿತ್ತು ಆದರೆ ಇವತ್ತು ವಿನಂತಿ ಇದೆ ಅನಿಸ್ತು , ಒಲ್ಲೆ ಅನ್ನೋಕೆ ಮನಸಾಗಲಿಲ್ಲ . ಸರಿ ಎಲ್ಲಿ ಬರಲಿ ಅಂದೆ ವೆಸ್ಟ್ ಎಂಡ್ ಕಡೆ ಬಾ , ನಾನೂ ಹತ್ತು ನಿಮಿಷದಲ್ಲಿ ಅಲ್ಲಿ ಇರ್ತೀನಿ ಅಂದು call ಕಟ್ ಮಾಡಿದ . ನನಗೆ ತುಂಬಾ ಇಷ್ಟ ಆಗೊ ನನ್ನಲ್ಲಿ ಇರೊ ಒಂದು ಗುಣ ಅಂದ್ರೆ ಯಾರದ್ರೂ ತಮ್ಮ ನೋವು ನಲಿವುಗಳ ಬಗ್ಗೆ ಹೇಳ್ತಿದ್ರೆ ಕೇರ್ಲೇಸ್ಸ ಮಾಡಲ್ಲ ತುಂಬಾ ಶ್ರೇದ್ದೇಯಿಂದ ಕೇಳ್ತೀನಿ , ನನಗೆ ತಿಳಿದಷ್ಟು ಸಮಧಾನ ಹೇಳ್ತೀನಿ , ಇಲ್ಲ ಅಂದ್ರೆ ಇಂಥವರನ್ನ ಮೀಟ್ ಆಗು ಅಂತ ಹೇಳಿ ಕಳಿಸ್ತೀನಿ , ಆದ್ರೆ ಯಾವತ್ತೂ ಅವರು ಹೇಳಿದರ ಕುರಿತು ಇನ್ನೊಬ್ಬರ ಮುಂದೆ ಹೇಳಿ ಗೇಲಿ ಮಾಡಿ ಅವರ ಭಾವನೆಗಳಿಗೆ ಧಕ್ಕೆ ತಂದಿಲ್ಲ .  ಆದ್ದರಿಂದನೆ ಒಬ್ಬ ಗೆಳೆಯ ತನ್ನ ಮೊದಲ ರಾತ್ರಿಯ ಅನುಭವ ಹೇಳಿ ನಗ್ತಾನೆ , ಒಬ್ಬ ಗೆಳತಿ(girl friend ಅಲ್ಲ) ರುತುಚಕ್ರದಲ್ಲಾದ ಏರು ಪೆರು ಹೇಳಿ ಆತಂಕಗೋಳ್ತಳೆ, ವೃದ್ಧನೊಬ್ಬ ನ