ನಾಳೆ ಅವಳ ಎಂಗೇಜಮೆಂಟ್

ರವಿವಾರ ಡ್ಯೂಟಿ ಹಾಪ್ ಡೆ ಮದ್ಯಾಹ್ನ ಎರಡಕ್ಕೆ ಮುಗಿದಿತ್ತು, ಇನ್ನೇನು ಊಠ ಕ ಹೋಗಬೇಕು ಅನ್ನುವಷ್ಟರಲ್ಲಿ ಗಿರಿ call ಮಾಡಿದ. ದೋಸ್ತ್ ಎಲ್ಲಿ ಅದಿ ಅಂದ .
ಜಸ್ಟ್ ಡ್ಯೂಟಿ ಮುಗೀತು ಊಠ ಕ ಹೋಗ್ತಿದಿನಿ ಅಂದೆ .
ಸರಿ ಊಠ ಮಾಡಬೇಡ ಆಫೀಸ್ ಕಡೆ ಹೋಗೋಣ ಅಂದ .
ದೋಸ್ತ month end ನನ್ ಕಡೆ ಹೊಡದ್ರೂ ಐದ್ ಪೈಸೆ ಸಿಗಲ್ಲ ಮುಂದಿನ ವಾರ ಹೋಗೋಣ ಬಿಡು ಅಂದ್ರೂ ಕೇಳಲಿಲ್ಲ ಗಿರಿ .
ನನ್ ಕಡೆ ಅದಾವ ಬಾ ಅಂದ
ಇಷ್ಟ ದಿನ ಆತ ಕರೆಯುವಾಗ ಆತನ ಮಾತಲ್ಲಿ ಆರ್ಡರ್ ಇರ್ತಿತ್ತು ಆದರೆ ಇವತ್ತು ವಿನಂತಿ ಇದೆ ಅನಿಸ್ತು , ಒಲ್ಲೆ ಅನ್ನೋಕೆ ಮನಸಾಗಲಿಲ್ಲ .
ಸರಿ ಎಲ್ಲಿ ಬರಲಿ ಅಂದೆ
ವೆಸ್ಟ್ ಎಂಡ್ ಕಡೆ ಬಾ , ನಾನೂ ಹತ್ತು ನಿಮಿಷದಲ್ಲಿ ಅಲ್ಲಿ ಇರ್ತೀನಿ ಅಂದು call ಕಟ್ ಮಾಡಿದ .
ನನಗೆ ತುಂಬಾ ಇಷ್ಟ ಆಗೊ ನನ್ನಲ್ಲಿ ಇರೊ ಒಂದು ಗುಣ ಅಂದ್ರೆ ಯಾರದ್ರೂ ತಮ್ಮ ನೋವು ನಲಿವುಗಳ ಬಗ್ಗೆ ಹೇಳ್ತಿದ್ರೆ ಕೇರ್ಲೇಸ್ಸ ಮಾಡಲ್ಲ ತುಂಬಾ ಶ್ರೇದ್ದೇಯಿಂದ ಕೇಳ್ತೀನಿ , ನನಗೆ ತಿಳಿದಷ್ಟು ಸಮಧಾನ ಹೇಳ್ತೀನಿ , ಇಲ್ಲ ಅಂದ್ರೆ ಇಂಥವರನ್ನ ಮೀಟ್ ಆಗು ಅಂತ ಹೇಳಿ ಕಳಿಸ್ತೀನಿ , ಆದ್ರೆ ಯಾವತ್ತೂ ಅವರು ಹೇಳಿದರ ಕುರಿತು ಇನ್ನೊಬ್ಬರ ಮುಂದೆ ಹೇಳಿ ಗೇಲಿ ಮಾಡಿ ಅವರ ಭಾವನೆಗಳಿಗೆ ಧಕ್ಕೆ ತಂದಿಲ್ಲ .  ಆದ್ದರಿಂದನೆ ಒಬ್ಬ ಗೆಳೆಯ ತನ್ನ ಮೊದಲ ರಾತ್ರಿಯ ಅನುಭವ ಹೇಳಿ ನಗ್ತಾನೆ , ಒಬ್ಬ ಗೆಳತಿ(girl friend ಅಲ್ಲ) ರುತುಚಕ್ರದಲ್ಲಾದ ಏರು ಪೆರು ಹೇಳಿ ಆತಂಕಗೋಳ್ತಳೆ, ವೃದ್ಧನೊಬ್ಬ ನೋಡ್ ಸಿದ್ದು ನನ್ನ ಫೋಟೋ ಕೆ ನನ್ನ ಮಗ ಪೂಜೆ ಮಾಡಬೇಕಿತ್ತು ಆದ್ರೆ ಅವನ ಫೋಟೋ ಕೆ ನಾನ್ ಪೂಜೆ ಮಾಡೊ ಹಂಗ ಆಯ್ತು ಅಂತ ಕಣ್ಣೀರ ಹಾಕ್ತಾನೆ .
ಗಿರಿ call ಮಾಡಿ ಇನ್ನೂ ಒಂಬತ್ತು ನಿಮಿಷ ಪೂರ್ತಿ ಮುಗಿದಿರಲಿಲ್ಲ ವೆಸ್ಟ್ ಎಂಡ್ ಬಾರ್ ಮುಂದೆ ಬೈಕ್ ನಿಲ್ಲಿಸಿ ಒಳಗೆ ಹೋಗಿ ಆತನಿಗೆ call ಮಾಡಬೇಕು ಅನ್ನೋವಷ್ಟರಲ್ಲಿ ಆತ ನನಗಿಂತ ಮುಂಚೆ ಬಂದು ಕಾಯ್ತಿದ್ದ. 
ಟೇಬಲ್ ಮುಂದೆ ಕೂಡುತ್ತಿದ್ದ ಹಾಗೆ
ದೋಸ್ತ್ ಎನ್ ಹೇಳಲಿ ಎಂದು ಕೇಳಿದ .
ನೀನು ಖುಷಿಯಲ್ಲಿ ಇದ್ರೆ ಬಿಯರ್ ಹೇಳು , ದುಃಖದಲ್ಲಿ ಇದ್ರೆ ವಿಸ್ಕಿ ಹೇಳು ಅಂದೆ ನಾನು.
ಅದಾದ ಎರಡು ನಿಮಿಷದಲ್ಲಿ 180ml ವಿಸ್ಕಿ 1ಲೀಟರ್ ಬಿಸ್ಲೇರಿ & ಎರಡು ಮಸಾಲಾ ಪಾಪಡ ಟೇಬಲ್ ಮೇಲೆ ಹಾಜರ.  ಗಿರಿ ದುಃಖದಲ್ಲಿ ಇದಾನೆ ಅಂತ ಗೊತ್ತಾಯ್ತು , ಆ ದುಃಖ ಏನು ಅಂತ ತಿಳ್ಕೊಳೋಕೆ  ಒಂದ್ ರೌಂಡ್ ಆಗೋ ವರೆಗೂ ಕಾಯಬೇಕು .  ಒಂದೊಂದೆ ಸಿಪ್ ಹೀರತೊಡಗಿದ ಗಿರಿ , ನಾನು ಸುಮ್ನೆ ಕೂತಿದ್ದೆ ಯಾಕಂದ್ರೆ ಆತ ಹೇಳೋದನ್ನ ಸರಿಯಾಗಿ ಕೇಳಬೇಕಲ್ಲ .
ಒಂದ್ ಗ್ಲಾಸ ಖಾಲಿ ಆದ ಮೇಲೆ ಗಿರಿಯ ಬಾಡಿ ಲಾಂಗ್ವೇಜ್ ಮಾತು ಎಲ್ಲ ಚೇಂಜ್ ಆಯ್ತು , ನಿಧಾನಕ್ಕೆ ಮಾತು ಶುರು ಮಾಡಿದ . 


ನಾಳೆ ಅವಳ ಎಂಗೇಜಮೆಂಟ್ ಅದ ಅಂದ .
ಯಾರದೊ? ಅಂದೆ ನಾನು ಕುತೂಹಲ ದಿಂದ.
ಅವನ ಬಾಯಿಂದ "ಆದಿತಿ" ಎಂಬ ಹೆಸರು ಬಂತು , ಜೊತೆಗೆ ಕಣ್ಣಿಂದ ಎರಡು ಹನಿ ನೀರು ಸಹ .
ಆದಿತಿ ನಮ್ಮಿಬ್ಬರಿಗೂ ಆರು ವರ್ಷದಿಂದ ಪರಿಚಯ ಇರೊ ಹುಡುಗಿ. ಬೊಲ್ಡ್ & ಬ್ಯೂಟಿಫುಲ್ ಎಂಬುದರ ಸಮನಾರ್ಥಕ ಪದ ಅವಳು. ಅವಳ ಉಡುಗೆ ತೊಡುಗೆಯಲ್ಲಿ ಶ್ರೀಮಂತಿಕೆ ಕಂಡರೂ ಮಾತು ಮಾತ್ರ ಮೃದು . ಒಳ್ಳೆ ಸ್ನೇಹ ಜೀವಿ . ಆಗಾಗ ನನ್ ಜೊತೆ watsapp chat ಮಾಡೋವಾಗ ತನ್ನ ಕನಸಿನ ಬಗ್ಗೆ ನಾಳೆಯ ಬದುಕಿನ ಬಗ್ಗೆ ಮಾತಾಡ್ತಿದ್ದಳೆ ಹೊರತು ಒಂದೇ ಒಂದು  ಫಾಲ್ತು ಮಾತಾಡ್ತಿರಲಿಲ್ಲ. ಬದುಕಿನ ಬಗ್ಗೆ ತುಂಬ ಕನಸು ಹೊತ್ತ ದೂರ ದೃಷ್ಟಿಯ  ಹುಡುಗಿ . ಈ ಪ್ರೀತಿ ಪ್ರೇಮ ಎಂಬ ಮರ ಸುತ್ತೋ ಆಟ ಯಾವಾಗಿಂದ  ಅಂತ ನನಗೆ ಅರ್ಥ ಆಗಲಿಲ್ಲ . ಯಾವಾಗಿಂದ ಗುರುವೆ ಇದೆಲ್ಲ ಅಂತ ಗಿರಿ ಕಡೆ ನೋಡಿ ಹುಬ್ಬು ಹಾರಿಸಿದೆ ನಾನು .
ಈಗೆ ಎರಡು ವರ್ಷದಿಂದ ಅಂತ ತಲೆ ತಗ್ಗಿಸಿದ ಆತ . ಇದೇನ್ ದೊಡ್ಡ ಮ್ಯಾಟರ್ ಗಿರಿ ಇದಕ್ಯಾಕೆ ಪಾವ ಲೀಟರ್ ಕಣ್ಣೀರು 180ml ವಿಸ್ಕಿ ಖರ್ಚ ಮಾಡಬೇಕು ? ನಾನ್ ಮಾತಾಡ್ಲಾ ಆದಿತಿ ಜೊತೆ ? ಅವಳೇನು ನಂಗೆ ಹೊಸಬಳು ಅಲ್ಲ . ಮೊನ್ನೆ ರಾಖಿ ಹಬ್ಬದ ದಿನಾ wats app ನಲ್ಲಿ ರಾಖಿ ಕಳಿಸಿ wish ಮಾಡಿದಾಳೆ , ಇಷ್ಟ ದಿನ ಫ್ರೆಂಡ್ ಆಗಿದ್ದ ನೀನು ಭಾವ ಆಗ್ತೀಯ ಅಷ್ಟೆ ಅಂದು ನಕ್ಕೆ ನಾನು .
ಬೇಡ ಇದೇನೂ ಹೇಳಬೇಡ ಅವಳಿಗೆ , ಯಾಕಂದ್ರೆ ನಾನೆ ಇನ್ನೂ ಅವಳಿಗೆ ಪ್ರಪೋಸ್ ಮಾಡಿಲ್ಲ . ಆದ್ರೆ ಒಂದ್ ಮಾತ್ರ ಸತ್ಯ, ನಾನು ಅವಳನ್ನ ಎಷ್ಟು ಪ್ರೀತಿಸ್ತೀನೊ ಅದರ ಹತ್ತರಷ್ಟು ಅವಳು ನನ್ನ ಪ್ರೀತಿಸ್ತಾಳೆ ಅಂದ.
ಅಲ್ಲೋ ದೋಸ್ತ ಎರಡ್ ವರ್ಷದಿಂದ ಪ್ರೀತಿಸ್ತೀನಿ ಅಂತೀ ,ಇನ್ನೂ ಅವಳಿಗೆ ಪ್ರಪೋಸ್ ಮಾಡಿಲ್ಲ ಅಂತೀ, ನಾನಾದರೂ ಹೇಳ್ತೀನಿ ಅಂದ್ರೆ ಅದಕ್ಕೂ ಬೇಡ ಅಂತೀ , ಮತ್ತ ನನಗಿಂತ ಅವಳು ಹತ್ತು ಪಟ್ಟ ಪ್ರೀತಿಸ್ತಾಳ ಅಂತೀ , ನೌನ "ಪ್ರೀತಿ ಏಕೆ ಭೂಮಿ ಮೇಲಿದೆ" ಪ್ರೇಮ್ ಗಿಂತ ವಜ್ಜಿ ಆದಿಪಾ ನೀ. ನೀ ಅಕಿಗಿ ಹೇಳಿಲ್ಲ , ಅಕಿ ನಿನಗ ಹೇಳಿಲ್ಲ , ಅಕಿ ನಿನಗ ಪ್ರೀತಿಸ್ತಾಳ ಅಂತ ಹೆಂಗ ಅನಕೋಂದೋ ? ನನ್ volume ಸಹಜವಾಗಿ ಸ್ವಲ್ಪ ಜೋರ್ ಆಯ್ತು . ಪಕ್ಕದ ಟೇಬಲ್ ನವರು ಒಂದು ಕ್ಷಣ ವಿಚಿತ್ರವಾಗಿ ನಮ್ ಕಡೆ ನೋಡಿ ಮತ್ತೆ ತಮ್ಮ ಅಮೃತ ಪಾನದಲ್ಲಿ ಮಗ್ನರಾದರು. sorry ಅಂತ ಅವರಿಗೆಲ್ಲ ಕೈ ಮಾಡಿ volume ಸ್ವಲ್ಪ ಕಡಿಮೆ ಮಾಡ್ಕೊಂಡೆ.
ಏನೊ ದೋಸ್ತ, ನೀ ಕವಿ ಅದಿ ಎಲ್ಲ ನಿನಗ ಅರ್ಥ ಆಗ್ತದ ಅಂತ ಹೇಳಿದ್ರ , ನೀನೆ ಹಿಂಗ ಅಂತಿಯಲ್ಲ. ಡೇಲಿ wats app chat ಮಾಡ್ತಾಳ , ಎರಡ ದಿನಕೋಮ್ಮ call ಮಾಡಿ ಮಾತಾಡ್ತಾಳ, ಕುಡಿತ ಸಿಗರೇಟ್ ಒಳ್ಳೇದಲ್ಲ ಬೀಟ್ ಬಿಡು ಅಂತಾಳ, ಮತ್ತ ವೇಟ್ ಜಾಸ್ತಿ ಆಗ್ತಿದೆ ಬೆಳಗ್ಗೆ ವಾಕಿಂಗ್ ಮಾಡು ಅಂತಾಳ, ಇದೆಲ್ಲ ಪ್ರೀತಿ ಅಲ್ಲೇನು ಅಂದ ಗಿರಿ .
its ok ಗಿರಿ ನೀ ಹೇಳೋದು ಸರಿ , ಬಟ್ ಅವಳು ತೋರಿಸೋ ಪ್ರೀತಿಗೂ ನೀನು ಊಹಿಸಿರೋ ಪ್ರೀತಿಗೂ ತುಂಬಾ ವೆತ್ಯಾಸ ಇದೆ . ಪರಿಚಯಸ್ತ ಅಂತ ಮೆಸೇಜ್ ಮಾಡಿರಬಹುದು , ಫ್ರೆಂಡ್ ಅಂತ call ಮಾಡಿ ಮಾತಾಡಿರಬಹುದು , & ರೋಡಲ್ಲಿ ಯಾರೊ stand ತಗಿದೆ ಬೈಕ್ ಓಡಿಸ್ತಾ ಇದ್ರೆ ಓವರ್ಟೇಕ ಮಾಡಿ stand ತಗಿರಿ ಅಂತ ಹೇಳ್ತಿವಿ. ರೋಡಲ್ಲಿ ಹೋಗೋ ಯಾರ್ ಬಗ್ಗೇನೋ ಇಷ್ಟು ಕೇರ್ ತಗೊಳ್ಳುವಾಗ , ಪರಿಚಯಸ್ತನಾದ ನಿನ್ನ ಬಗ್ಗೆ ಅವಳು ಕೇರ್ ಮಾಡೋದ್ರಲ್ಲಿ ಅಂಥ ವಿಷೇಷ ಏನಿದೆ ? ಅದು ಜಸ್ಟ್ ಮಾನವೀಯತೆ ಅಷ್ಟೆ .
ಹಾಗಾದರೆ ಅದು ಪ್ರೀತಿ ಅಲ್ಲ ಅಂತೀಯಾ ಎಂದು ಪ್ರಶ್ನಿಸಿದ ಗಿರಿ .
ಅಲ್ಲ ಮರಾಯ , ನೀನು ಏನೇನೋ ಉಹಿಸ್ಕೋಬೇಡ . ಅವಳ ಬಗ್ಗೆ ನಿನಗಿಂತ ನನಗೆ ಚನ್ನಾಗಿ ಗೊತ್ತು . ಸಾಮಾನ್ಯ ಹುಡುಗಿಯರ ಹಾಗೆ ನಾಚ್ಕೋದಿಲ್ಲ ಅವಳು . ನಿಜವಾಗಲೂ ನಿನ್ನ ಮೇಲೆ ಆ ಥರ ಫೀಲಿಂಗ್ಸ್ ಇದ್ರೆ , ಮುಂಡೇದೆ ನಿನ್ ಅಂದ್ರೆ ನಂಗೆ ಇಷ್ಟ ಮದುವೆ ಆಗೋಣವಾ ? ಅಂತ ಡೈರೆಕ್ಟ್ ಆಗಿ ಕೇಳ್ತೀದ್ದಳು. ಅದನೆಲ್ಲ ಬಿಟ್ಟು,  ಪಾದ ಮುಚ್ಚೋವರೆಗೂ ಸೀರೆ ಉಟ್ಕೊಂಡು ಜಡೆ ತುಂಬ ಮಲ್ಲಿಗೆ ಮುಡಿಕೊಂಡು , ನೋಡೋಕ ಬಂದಿರೊ ಗಂಡಿನ ಎದಿರು ಹಿ ಅಂತ ಕಾಫಿ ಹಿಡ್ಕೊಂಡು ನಿಲ್ಲೋ ದರ್ದು ಏನಿತ್ತು ಅವಳಿಗೆ .
ಹಾಗಂತಿಯಾ ?
ಹೂಂ . ನೋಡ್ ದೋಸ್ತ ಚಾಟಿಂಗ್ ಟಾಕಿಂಗ್ ಕೇರಿಂಗ ಪ್ರೀತಿ ಅಂತ ತಿಳ್ಕೊಂಡು ಸುಮ್ನೆ ಟೆನ್ಸ ಆಗಬೇಡ . ಒಂದು ವೇಳೆ ನೀನು ಅವಳನ್ನ ಅಷ್ಟು ಪ್ರೀತಿಸ್ತಿಯ ಅಂತ ಅಂದ್ರೆ ಪ್ರಪೋಸ್ ಮಾಡು . ಆಗ್ತಿರೋದು ಎಂಗೇಜಮೆಂಟ್ , ಮದುವೆ ಅಲ್ವಲ್ಲ ಎಂದೆ .
ಈ ಪ್ರಪೋಸ್ ಎಲ್ಲ ಬ್ಯಾಡ ದೋಸ್ತ. ವಿದ್ಯ ಬುದ್ದಿ , ಅಂದ ಚಂದ , ಆಸ್ತಿ ಅಂತಸ್ತು ಯಾವ ಎಂಗಲನಲ್ಲೂ ನಾನು ಅವಳಿಗೆ ತಕ್ಕ ಜೋಡಿ ಅಲ್ಲ, ಎನ್ನುತ್ತ ತನ್ನ ಪಾಲಿನ ಕೊನೆ ಗುಟುಕು ಮುಗಿಸಿ ಗ್ಲಾಸ್ ಕೆಳಗಿಟ್ಟ ಗಿರಿ .
ನಿನ್ ಪ್ರೀತಿ ನ ಅವಳಿಗೆ ಹೇಳಲ್ಲ ಅಂದ್ರ,  ಮತ್ಯಾಕ ಈ ಪರಿ  ತ್ರಾಸ್ ಮಾಡ್ಕೊಳ್ಳಕತ್ತಿಯೋ ಭೈ ಅಂದೆ .
ಅವಳಿಗೆ ಹೇಳದೆ,  ನನಗೆ ಕೇಳದೆ , ನನ್ನೊಳಗೆ ಅವಳ ಬಗ್ಗೆ ಈ ರೀತಿ ಭಾವನೆಗಳು  ಹುಟ್ಟಿದವು. ಅವಳಿಗೆ ಹೇಳೊ ಧೈರ್ಯ ಆಗಲಿಲ್ಲ , ಹಾಗಂತ ಅದನ್ನ ಮನಸಲ್ಲಿ ಇಟ್ಕೊಂಡು ಕುಡೋಕು ಆಗಲಿಲ್ಲ . ನಾಳೆ ಅವಳ ಎಂಗೇಜಮೆಂಟ್ ಅನ್ನೊದನ್ನ ತಿಳಿದು ಮತ್ತಷ್ಟು ಹಿಂಸೆ ಅನಿಸ್ತು . ಯಾರ್ ಮುಂದೆ ಆದ್ರೂ ನಮ್ ಕಷ್ಟ ಹೇಳ್ಕೊಂಡರೆ ಮನಸು ಹಗುರ ಆಗ್ತದ ಅಂತ.  ಅದಕ್ಕೆ ನಿನ್ನ ಮುಂದೆ ಎಲ್ಲ ಹೇಳಿ ಅತ್ತೆ . ಮನಸ್ಸು ಸ್ವಲ್ಪ ಹಗುರ ಆಯ್ತು . sorry ನಿನಗೆ ತೊಂದ್ರೆ ಕೊಟ್ಟೆ ಎಂದ ಗಿರಿಯ ಮಾತಲ್ಲಿ ಸತ್ಯವಿತ್ತು.
its ok ಗಿರಿ , ಅದಕೇಲ್ಲ sorry ಯಾಕೆ . ಒಂಟಿ ಕಾಲಲ್ಲಿ ನಿಂತು ತಪಸ್ಸು ಮಾಡಬಹುದೆ ವಿನಹ ಮುಂದೆ ಸಾಗೋಕೇ ಆಗಲ್ಲ . ಹಾಗೆ ಕೈ ಕೈ ಸೇರಿದರೆನೆ ಚಪ್ಪಾಳೆ , ಹೃದಯ ಹೃದಯ ಬೇರತರೆ ಪ್ರೀತಿ . ಕನಸು ಕಲ್ಪನೆ ಯಿಂದ ಹೊರಗೆ ಬಾ , ವಾಸ್ತವವನ್ನ ಒಪ್ಪಿಕೊ. ಆದಿತಿ ನನಗೂ ಫ್ರೆಂಡು ನಿನಗೂ ಫ್ರೆಂಡು ಅವಳ ನಾಳಿನ ಬದುಕು ಹಸಿರಾಗಿರಲಿ ಅಂತ ವಿಶ್ ಮಾಡೋಣ ಏನಂತೀಯ ಎಂದೆ .
ok ಎಂಬಂತೆ ಹೆಬ್ಬೆಟ್ಟು ತೋರಿಸಿ ಮುಗುಳ್ನಕ್ಕ ಗಿರಿ .
ಅವಾಗ ನನ್ನ ಪಾಲಿನ ರಾಮರಸವನ್ನ ಹಿಗ್ಗಿನಿಂದ ಹಿರಿ ಹೊರ ಬಂದೆ .
ಒನ್ ವೆ ಲವ್ ಮಾಡ್ತಿರೋ ನನ್ನೆಲ್ಲ ಮಿತ್ರರಿಗೆ ಒಂದು ವಿನಂತಿ . ಅವಳು ಒಪ್ಕೊತಾಳೋ ಬಿಡ್ತಾಳೋ ಎರಡನೆಯದು,  ಮೊದಲು ನಿಮ್ಮ ಭಾವನೆಗಳನ್ನ ಅವಳ ಎದುರು ಹೇಳಿ ಹಗುರಾಗಿ , ಮನಸಲ್ಲೇ ಇಟ್ಕೊಂಡ್ ಕೊರಗಬೇಡಿ . .
by gn ನಿಮ್ಮ ಸ್ನೇಹಿತ ಸಿದ್ದು      
  

Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ