Posts

Showing posts from February, 2018

ಸ್ನೇಹ ಮತ್ತು ಪ್ರೀತಿ

ಮನುಷ್ಯ ಸಂಘ ಜೀವಿ, ಒಂಟಿಯಾಗಿ ಇರಲಾರ . ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ಹಂತದಲ್ಲಿ ಒಬ್ಬೊಬ್ಬರು ಬಂದು ಜೊತೆ ಆಗ್ತಾರೆ . ಹುಟ್ಟಿದ ಕೂಸಿಗೆ ಎತ್ತಿ ಆಡಿಸುವ ಎರಡು ಕೈ ಎಸ್ಟು ಮುಖ್ಯನೊ , ಸತ್ತಾಗ ಹೊತ್ತು ಸಾಗುವ ನಾಲ್ಕು ಹೆಗಲೂ ಅಸ್ಟೆ ಮುಖ್ಯ. ಸರ್ವ ಸಂಘ ಪರಿತ್ಯಾಗಿ ಎನಿಸಿಕೊಂಡು, ಗುಡಿ ಗುಂಡಾರ - ಗಿರಿ ಶಿಖರ ಗಳ ಮದ್ಯ ಒಂಟಿಯಾಗಿ ತಪಸ್ಸನ್ನ ಆಚರಿಸುವ ಸನ್ಯಾಸಿಗಳಿಗೂ, ಅವರು ನಂಬಿದ ತತ್ವ ಸಿದ್ದಾಂತ ಜೊತೆ ಇರುತ್ತದೆ ವಿನಃ  ಅವರೂ ಸಹ ಒಂಟಿಯಲ್ಲ . ಕಾಳಿದೇವಿ ಯೇ ನನ್ನ ತಾಯಿ ಎಂದ ಪರಮ ಹಂಸರ ಹಾಗೆ ,  ಚೆನ್ನ ಮಲ್ಲಿಕಾರ್ಜುನ ನೆ ನನ್ನ ಪತಿ ಎಂದ ಅಕ್ಕ ಮಹಾದೇವಿ ಯ ಹಾಗೆ .                     ನೀವೊಬ್ಬರೇ ಯವುದೋ ಒಂದು ದೂರದ ಊರಿಗೆ ಹೋಗೋದಿದೆ , ನಾಲ್ಕಾರು ಗಂಟೆಯ ಪ್ರಯಾಣ , ಬಸ್ಸಿನಲ್ಲಿ ನಿಮ್ಮ ಪಕ್ಕ ಕುಳಿತ ವ್ಯಕ್ತಿ ಅಪರಿಚಿತ. ಹಾಗಂತ ಎಸ್ಟು ಹೊತ್ತು ಸುಮ್ಮನೆ ಕೂಡುತ್ತಿರಿ ? ಹತ್ತು ನಿಮಿಷ , ಇಪ್ಪತ್ತು ನಿಮಿಷ , ಅಬ್ಬಬ್ಬಾ ಅಂದ್ರೆ ಅರ್ಧಾ ಗಂಟೆ . ನೀವು ಯಾವ ಊರಿಗೆ ಹೊರಟಿದ್ದೀರಿ ? ಅಂತ ನಿಧಾನಕ್ಕೆ ಶುರುವಾಗುತ್ತೇ ಮಾತು.      ಹೀಗೆ ಬೆಸೆದುಕೊಳ್ಳುವ ಪುಟ್ಟ ಸ್ನೇಹ , ನಿಮ್ಮ ಊರು ಕೇರಿ , ವಿದ್ಯಾಭ್ಯಾಸ ಹವ್ಯಾಸ , ನೌಕರಿ ಸಂಬಳ, ಮದುವೆ ಆಗಿದ್ದರೆ ಮನೆ ಮಕ್ಕಳ ವರೆಗೂ ಮಾತು ಸಾಗುತ್ತದೆ . ಈ ರೀತಿ ಹುಟ್ಟುವ ಸ್ನೇಹಗಳಿಗೆ ಗಂಡು ಹೆಣ್ಣು , ಜಾತಿ ಮತ , ಆಸ್ತಿ ಅಂತಸ್ತು ಯಾವುದೂ ಬೇಕಾಗಿಲ್ಲ. ಬೇಕಿರುವುದು ವಿಶ