ಸ್ನೇಹ ಮತ್ತು ಪ್ರೀತಿ

ಮನುಷ್ಯ ಸಂಘ ಜೀವಿ, ಒಂಟಿಯಾಗಿ ಇರಲಾರ . ಹುಟ್ಟಿನಿಂದ ಸಾಯುವವರೆಗೂ ಪ್ರತಿಯೊಂದು ಹಂತದಲ್ಲಿ ಒಬ್ಬೊಬ್ಬರು ಬಂದು ಜೊತೆ ಆಗ್ತಾರೆ . ಹುಟ್ಟಿದ ಕೂಸಿಗೆ ಎತ್ತಿ ಆಡಿಸುವ ಎರಡು ಕೈ ಎಸ್ಟು ಮುಖ್ಯನೊ , ಸತ್ತಾಗ ಹೊತ್ತು ಸಾಗುವ ನಾಲ್ಕು ಹೆಗಲೂ ಅಸ್ಟೆ ಮುಖ್ಯ. ಸರ್ವ ಸಂಘ ಪರಿತ್ಯಾಗಿ ಎನಿಸಿಕೊಂಡು, ಗುಡಿ ಗುಂಡಾರ - ಗಿರಿ ಶಿಖರ ಗಳ ಮದ್ಯ ಒಂಟಿಯಾಗಿ ತಪಸ್ಸನ್ನ ಆಚರಿಸುವ ಸನ್ಯಾಸಿಗಳಿಗೂ, ಅವರು ನಂಬಿದ ತತ್ವ ಸಿದ್ದಾಂತ ಜೊತೆ ಇರುತ್ತದೆ ವಿನಃ  ಅವರೂ ಸಹ ಒಂಟಿಯಲ್ಲ . ಕಾಳಿದೇವಿ ಯೇ ನನ್ನ ತಾಯಿ ಎಂದ ಪರಮ ಹಂಸರ ಹಾಗೆ ,  ಚೆನ್ನ ಮಲ್ಲಿಕಾರ್ಜುನ ನೆ ನನ್ನ ಪತಿ ಎಂದ ಅಕ್ಕ ಮಹಾದೇವಿ ಯ ಹಾಗೆ .
                    ನೀವೊಬ್ಬರೇ ಯವುದೋ ಒಂದು ದೂರದ ಊರಿಗೆ ಹೋಗೋದಿದೆ , ನಾಲ್ಕಾರು ಗಂಟೆಯ ಪ್ರಯಾಣ , ಬಸ್ಸಿನಲ್ಲಿ ನಿಮ್ಮ ಪಕ್ಕ ಕುಳಿತ ವ್ಯಕ್ತಿ ಅಪರಿಚಿತ. ಹಾಗಂತ ಎಸ್ಟು ಹೊತ್ತು ಸುಮ್ಮನೆ ಕೂಡುತ್ತಿರಿ ? ಹತ್ತು ನಿಮಿಷ , ಇಪ್ಪತ್ತು ನಿಮಿಷ , ಅಬ್ಬಬ್ಬಾ ಅಂದ್ರೆ ಅರ್ಧಾ ಗಂಟೆ . ನೀವು ಯಾವ ಊರಿಗೆ ಹೊರಟಿದ್ದೀರಿ ? ಅಂತ ನಿಧಾನಕ್ಕೆ ಶುರುವಾಗುತ್ತೇ ಮಾತು.
     ಹೀಗೆ ಬೆಸೆದುಕೊಳ್ಳುವ ಪುಟ್ಟ ಸ್ನೇಹ , ನಿಮ್ಮ ಊರು ಕೇರಿ , ವಿದ್ಯಾಭ್ಯಾಸ ಹವ್ಯಾಸ , ನೌಕರಿ ಸಂಬಳ, ಮದುವೆ ಆಗಿದ್ದರೆ ಮನೆ ಮಕ್ಕಳ ವರೆಗೂ ಮಾತು ಸಾಗುತ್ತದೆ . ಈ ರೀತಿ ಹುಟ್ಟುವ ಸ್ನೇಹಗಳಿಗೆ ಗಂಡು ಹೆಣ್ಣು , ಜಾತಿ ಮತ , ಆಸ್ತಿ ಅಂತಸ್ತು ಯಾವುದೂ ಬೇಕಾಗಿಲ್ಲ. ಬೇಕಿರುವುದು ವಿಶ್ವಾಸದಿಂದ ಮಾತಾಡುವ ತುಟಿ, ಶ್ರೇದ್ದೇಯಿಂದ ಕೇಳಿಸಿಕೊಳ್ಳುವ ಕಿವಿ ಅಸ್ಟೆ. ಅಸ್ಟು ದೂರ ಒಬ್ಬನೆ ಹೇಗ್ ಹೋಗೊದು ಬೋರಾಗುತ್ತದೆಂದು ,  ಫೋನ್ ನಲ್ಲಿ ಹೊಸಾ ಮೂವಿ ಡೌನ್ಲೋಡ್ ಮಾಡ್ಕೊಂಡು ಏರ್ ಫೋನ್ ಕಿವಿಗೆ ಸಿಕ್ಕಿಸಿಕೊಂಡು ಬಸ್ ಹತ್ತಿದ ನಿಮಗೆ , ನೀವು ಇಳಿಯುವ ನಿಲ್ದಾಣ ಬಂದಾಗ ಅರೆ ಎಸ್ಟ್ ಬೇಗ ಬಂತು ಊರು ಅನಿಸುತ್ತದೆ . ಅದು ಒಂದು ಬಂಧ ಭಾಂಧವ್ಯಕ್ಕೀರುವ ತಾಕತ್ತು . ಆ ಸಂಬಧಕ್ಕೆ ಏನೆಂದು ಹೆಸರು ಕೊಡುತ್ತೀರಿ ? ಜೊತೆಯಾದ ಖುಷಿ - ದೂರಾದ ವಿಷಾದದ ಹೊರತು ಏನೂ ತೋಚುವುದಿಲ್ಲ ಮನಸ್ಸಿಗೆ .
         ಅದೆ ರೀತಿ_ ನಾವು ಕಲಿಯುವ ಶಾಲೆ ಕಾಲೇಜು ಗಳಲ್ಲಿ , ಸಿನಿಮಾ ಟಿಕೇಟಿಗಾಗಿ ನಿಂತ ಸಾಲಿನಲ್ಲಿ, ಕಾಯಿಪಲ್ಲೆ ಕಿರಾಣಿ ತರಲು ಹೋದ ಮಾರ್ಕೇಟ ನಲ್ಲಿ , ನಾವು ನಿತ್ಯ ದುಡಿಯುವ ಕಂಪನಿ ಕಚೇರಿ ಗಳಲ್ಲಿ ಅದೇಸ್ಟು ಜನ ಅಪರಿಚಿತರು ಪರಿಚಿತರಾಗ್ತಾರೇ . ಸುಖ ದುಃಖ ಗಳನ್ನ ಹಂಚಿಕೊಳ್ತರೆ , ಅನುವು ಆಪತ್ತಿಗಿ ಆಗ್ತಾರೆ , ಆಕಸ್ಮಿಕವಾಗಿ ಬಂದವರು ಅನಿವಾರ್ಯವಾಗ್ತಾರೆ . ಅಂತಹ ಸ್ನೇಹ ಸಂಬಂಧಗಳಿಗೆ ಏನೆಂದು ಹೆಸರು ಕೊಡ್ತೀರಿ ? ನೊ ಚಾನ್ಸ್, ಒಂದು ಕಂಪರ್ಟ ಫೀಲ್ ಹೊರತು ಏನನ್ನೂ ಹೊಳೆಯುವುದಿಲ್ಲ .
           ಆದರೆ ನಾನಿಲ್ಲಿ ಹೇಳೋಕೆ ಹೊರಟಿರೋ ವಿಷಾದದ ಸಂಗತಿ ಏನಂದ್ರೆ , ಅದನ್ನ ನೋಡುವ ಕೆಲ ನೀಚ ಜನ ಒಂದೊಂದು ಬಂಧಕ್ಕೇ ಒಂದೊಂದು ಹೆಸರಿಡುತ್ತಾರೆ .  ಹುಡುಗ ಹುಡುಗ ಹತ್ತಿರವಾದರೆ ಸ್ನೇಹ , ಹುಡುಗ ಹುಡುಗಿ ಹತ್ತಿರವಾದರೆ ಪ್ರೀತಿ ,  ಅಂಕಲ್ ಆಂಟಿ ಹತ್ತಿರವಾದರೆ ಅನೈತಿಕ ಸಂಬಂಧ ಅಂತ . ಥೂ ನಿಮ್ ಬಾಯಿಗೆ ಹುಳ ಬೀಳ.  ಯಾಕೆ ಅವರಲ್ಲಿ ಅಕ್ಕ ತಮ್ಮ ಕಾಣಲ್ಲ ? ಯಾಕೆ ಅವರಲ್ಲಿ ಅಣ್ಣ ತಂಗಿ ಕಾಣಲ್ಲ ? ಯಾಕೆ ಅವರಲ್ಲಿ ಒಂದು ಮಧುರ ಸ್ನೇಹ ಕಾಣಲ್ಲ ?
ಅವಳಿಗೂ ನಿನಗೂ (---) ಸಂಬಂಧ ಇದೆ ಅದಕ್ಕೆ msg ಮಾಡ್ತೀಯಾ , ಅದಕ್ಕೆ call ಮಾಡಿ ಮಾತಾಡ್ತೀಯಾ , ಅದಕ್ಕೆ ಅವಳು ಇಲ್ದಾಗ ನೋಂದ್ಕೋತಿಯ ಅಂದ್ರೆ ? ಎಂತಹ ವಿಚಾರಧಾರೆ ನಯ್ಯ ನಿಂದು,  ಮೈ ಫುಟ್.
ಮನುಷ್ಯ ಭಾವಜೀವಿ , ಮನುಷ್ಯರನ್ನ ಅಸ್ಟೆ ಅಲ್ಲ ಪ್ರಾಣಿ ಪಕ್ಷಿಗಳನ್ನೂ ಹಚ್ಚೀಕೋತಾನೆ . ಮನೆಯಲ್ಲಿ ಒಂದು ಬೆಕ್ಕು ಅಥವಾ ನಾಯಿ ಮರಿ ಸಾಕಿರ್ತಿವಿ, ದಿನಾ ಅದಕ್ಕೆ ಊಟಾ ಹಾಕೋದು , ಅದರ ಜೊತೆ ಆಟ ಆಡೋದು , ಅದಕ್ಕೆ ಟಾಮಿ ಜಿಮ್ಮಿ ಅಂತ ಹೆಸರಿಟ್ಟು ಕರಿಯೋದು . ಹೀಗೆ ಒಂದು ಬಾಂಧವ್ಯ ಬೆಳೆದಿರುತ್ತೇ.ಅದು ಕಾಣದಿದ್ದಾಗ ಎಸ್ಟೊಂದು ಚಡಪಡಿಸ್ತಿವಿ ,  ಅದು ಇಲ್ಲವಾದಾಗ ಒಬ್ಬ ಮನೆಯ ಸದಸ್ಯನ ಕಳಕೊಂಡ ರೀತಿ ಫೀಲ್ ಮಾಡ್ಕೊಂಡು ಕಣ್ಣೀರ ಹಾಕ್ತೀವಿ .  ಹಾಗಂತ , ಅದಕ್ಕೂ ನಿನಗೂ ಸಂಬಂಧ ಇದೆ ಅದಕ್ಕೆ ಅಳ್ತಿದಿಯಾ ಅಂದ್ರೆ . ಸ್ಟುಪಿಡ್ ಫೆಲೋ ಮೊದಲು ನಿನ್ನ ನೋಟ ಸರಿ ಮಾಡ್ಕೊ , ಆಗ ಜಗತ್ತು ಸುಂದರವಾಗಿ ಕಾಣುತ್ತೆ .
ಸ್ನೇಹಿತರೆ,  ನಮ್ಮ ಸ್ನೇಹ ಸಂಬಂಧ ನಿರ್ಮಲವಾಗಿದೆ ಅನ್ನೊ ನಂಬಿಕೆ ನಮಗೀದ್ದರೇ ಅಸ್ಟೆ ಸಾಕು. ತಾನು ಕಳ್ಳ ಪರರ ನಂಬ ಎಂಬಂತಹ ಮನಸ್ತಿತಿಯವರ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ . ಯಾರದೋ ಮಾತಿಗೆ ನಿಮ್ಮ ಮಧುರ ಸಂಬಂಧಗಳನ್ನ ದೂರ ಮಾಡ್ಕೋಬೇಡಿ .  ರಾತ್ರಿ ಮಲಗಿರೋರು ಬೆಳಗ್ಗೆ ಎದ್ದೇಳ್ತೀವಾ ಅನ್ನೊ ನಂಬಿಕೆ ಇಲ್ಲ , ಸೊ ಇರುವಸ್ಟು ದಿನಾ ನಾವು ನಮ್ಮವರು ಎಂದು ನಂಬಿದ ಜೀವಗಳೋಡನೆ ಅನೋನ್ಯವಾಗಿ ಬದುಕೋಣ,  ಏನಂತೀರಿ ?
ನಿಜ ಅನಿಸಿದರೆ ಈ ಲಿಂಕ್ ಇತರರಿಗೂ ಶೇರ್ ಮಾಡಿ .___ಸಿದ್ದು
          

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ವಾಟ್ಸ್ ಅಪ್ &ಇಂಟರ್ನೆಟ್ ಇರದೆ ಇರಬಹುದಾ ?