Posts

Showing posts from March, 2022

ಐತಾರ ಸಂತಿ (ಕಿರು ಲೇಖನ)

ನಾವು ಸಣ್ಣವರಿದ್ದಾಗ ನಮ್ಮೂರಲ್ಲಿ ರವಿವಾರಕ್ಕೊಮ್ಮೆ, ಊರ ಅಗಸಿಯಲ್ಲಿ ದೊಡ್ಡ ಸಂತೆ ಸೇರ್ತಿತ್ತು. ಆ ರೂಢಿ ಈಗ್ಲೂ ಇರ್ಬೋದು. ಅದನ್ನ ನಮ್ ಊರ್ ಕಡೆ ಆಡೋ ಭಾಷೆಯಲ್ಲಿ ಐತಾರ ಸಂತಿ, ಐತಾರ ಸಂತಿ ಅಂತ ಕರೀತಿದ್ರು. ಈ ಸಂತೆಯ ವಿಶೇಷತೆ ಏನು ಅಂದ್ರೆ ನಮ್ಮ ದಿನನಿತ್ಯದ ಜೀವನ ಉಪಯೋಗಕ್ಕೆ ಬೇಕಾದ ಎಲ್ಲ ಸರಕು ಸಾಮಗ್ರಿಗಳು ಒಂದೆ ವೇದಿಕೆಯಡಿ ದೊರಕತಿತ್ತು. ಬಟ್ಟೆ ಬ್ಯಾಗ್ ಚಪ್ಲಿ ಯಿಂದ ಹಿಡಿದು, ಉಪ್ಪು ಖಾರ ಕಾಯಿಪಲ್ಲೇ ವರೆಗೂ ಎಲ್ಲ. ಊರಲ್ಲಿ ಪ್ರತಿ ಏರಿಯಾಗೊಂದು ಕಿರಾಣಿ ಅಂಗಡಿ, ಕೆಲವೆಡೆ ಸ್ಟೇಷನರಿ, ಮತ್ತೆ ಕೆಲವೆಡೆ ಬಟ್ಟೆ ಅಂಗಡಿ ಎಲ್ಲ ಇದ್ರೂ, ನಮಗೆ ಬೇಕಾದಾಗ ಒಂದ್ ಸಿಗ್ತಿತ್ತು, ಇನ್ನೊಂದು ಸಿಗ್ತಿರಲಿಲ್ಲ. ಆದ್ರೆ ಈ ಐತಾರ ಸಂತೆಲಿ ಇದಿಲ್ಲ ಅನ್ನೊ ಹಾಗಿಲ್ಲ ಎಲ್ಲ ಸಿಗ್ತಿತ್ತು. ಹೀಗಾಗಿ ಶ್ರೀಮಂತರು ಬಡೂರು ಅನ್ನೊ ಭೇದಯಿಲ್ದೆ, ಪ್ರತಿ ಮನೆಯಿಂದ ಒಬ್ಬೊಬ್ರು ಹೋಗಿ, ತಮಗೆ ಶಾಕ್ತಾನುಸಾರ ಸಂತಿ ತರ್ತೀದ್ರು. ಇತ್ತೀಚಿನ ವರ್ಷಗಳಲ್ಲಿ ಈ ಮಾಲ್ ಗಳ ಹಾವಳಿ ಶುರು ಆದಾಗಿನಿಂದ ಸಂತೆಗಳ ಸಂಖ್ಯೆ ಕಡಿಮೆ ಆಗ್ತಾ ಬರ್ತಿದೆ. ಸರಿ ಸ್ವಲ್ಪ ಮುಂದಕ್ಕ ಹೋಗೋಣ. ಈಗ ಎಲ್ರು ಬಿಜಿ, ಬಿಜಿ.. ಪ್ರತಿದಿನ ಮಾರ್ಕೆಟ್ ಗೆ ಹೋಗೋಕ್ ಆಗಲ್ಲ. ವಾರಕ್ಕೆ ಒಮ್ಮೆ ಈ ಸಂತೆಗೊ ಅಥವಾ ಮಾಲ್ ಗೊ ಹೋಗ್ತೀರಾ ಅಂತ ಇಟ್ಕೊಳ್ಳಿ. ನಿಮಗೆ ಏನೇನ್ ಬೇಕೋ ಎಲ್ಲ ತಗೋತೀರಿ, ಒಂದೋ ಎರಡೋ ಬ್ಯಾಗ್ ತುಂಬಿಕೊಂಡು ಮನೆಗ್ ಬರ್ತೀರಿ. ಮನೆಗ್ ಬಂದ್ ತಕ್ಷಣ ನಿರೋ ಅಥವಾ ಚಾ ನೊ ಕುಡಿದು ಮಾಡ