ವಾಟ್ಸಾಪ್ ಸ್ಟೇಟಸ್

ಈ ವಾಟ್ಸಾಪ್ ಸ್ಟೇಟಸ್ ಅನ್ನೋದು ಕೆಲವರಿಗಂತು  30x40 ಸೈಟ್ ನಷ್ಟೆ ಅಮೂಲ್ಯ ಮತ್ತು ಅನಿವಾರ್ಯವಾಗಿದೆ. ಕೆಲವೊಬ್ಬರು ತಮ್ಮ ಇಷ್ಟ ದೇವರ ಫೋಟೋ ಶೇರ್ ಮಾಡುತ್ತಾರೆ, ಕೆಲವರ ತಮ್ಮ ನೆಚ್ಚಿನ ನಟ ನಟಿಯರ ಫೋಟೋ ಅಥವಾ ವಿಡಿಯೋ ಶೇರ್ ಮಾಡುತ್ತಾರೆ, ಇನ್ನು ಕೆಲವರು ಸ್ಟೇಟಸ್ ಅಲ್ಲಿ ತಮ್ಮ ಭಾವನೆಗಳನ್ನು ಬರೆಯುವ ಮೂಲಕ ತಮ್ಮ ವೈರಿಗಳಿಗೆ ಅಥವಾ ತಮ್ಮ ಪ್ರೀತಿ ಪಾತ್ರರಿಗೆ ಏನೊ ಒಂದು ಸಂದೇಶ ರವಾನಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು, ಒಂದು ವಿಶೇಷವಾದ ಸ್ಥಳಕ್ಕೆ ಭೇಟಿ ಕೊಟ್ಟಾಗ ಆ ನೆನಪಿಗಾಗಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಶೇರ್ ಮಾಡ್ತಾರೆ, ಅಲ್ಲಿ ಸವಿದಂತ ವಿಶೇಷವಾದ ತಿಂಡಿ ತಿನಿಸುಗಳ ಬಗ್ಗೆ ಹಂಚಿಕೊಳ್ಳುತ್ತಾರೆ. ತಮ್ಮ ಪುಟ್ಟ ಮಕ್ಕಳಿಗೆ ವಿವಿದ ರೀತಿ ಅಲಂಕಾರ ಮಾಡಿ, ಬಗೆ ಬಗೆಯ ಭಂಗಿಯಲ್ಲಿ ಫೋಟೋ ತೆಗೆಸಿ, ಅದಕ್ಕೊಂದು ಚಂದನ ಹಾಡು ಜೋಡಿಸಿ ವಿಡಿಯೋ ಮಾಡಿ, ಸ್ಟೇಟಸ್ ಹಾಕೊದೆಂದರೆ ನಮ್ ಭಾರತಿ ಅಂತಹ ಎಳೆ ತಾಯಂದಿರಿಗೆ ಎಲ್ಲಿಲ್ಲದ ಖುಷಿ. ಇನ್ನು ಕೆಲವೊಬ್ಬರು ಸ್ಟೇಟಸ್ ಹಾಕ್ತಾರೆ ಅದಕ್ಕೂ ಅವರಿಗೂ ಸಂಬಂಧನೇ ಇರಲ್ಲ, ಎಲ್ಲರೂ ಹಾಕ್ತಾರೆ ನಮ್ದು ಒಂದಿರಲಿ ಅಂತ ಹಾಕ್ತಿರ್ತಾರೆ ಅಷ್ಟೇ. ವಾಟ್ಸಪ್ ಸ್ಟೇಟಸ್ ನ ವಾಸ್ತವ ಹೀಗಿರುವಾಗ, ಒಬ್ಬರು ಹಾಕಿದ ಒಂದು ವಾಟ್ಸಪ್ ಸ್ಟೇಟಸ್ ಯಿಂದ ಅವರ ಕ್ಯಾರೆಕ್ಟರ್ ಸರ್ಟಿಫಿಕೇಟ್ ಬರೆಯೋಕೆ ಸಾಧ್ಯನಾ? ಅಥವಾ ಆ ಪ್ರಯತ್ನ ಎಷ್ಟು ಸರಿ?

ಇತ್ತೀಚಿಗೆ ನನ್ ಜೀವನದಲ್ಲೇ ನಡೆದ ಒಂದ್ ಘಟನೆ ಹೇಳ್ತಿನಿ ಕೇಳಿ. ನಾನು ಮತ್ತೆ ಸ್ನೇಹಿತ ಶ್ರೀಧರ್ ಗುಲಬರ್ಗಾ ಹೋಗಿದ್ವಿ. ನೈಟ್ ಎಮರ್ಜನ್ಸಿ ಒಂದ್ ಪೇಶಂಟ್ ಶಿಫ್ಟ್ ಮಾಡೋದಿತ್ತು. ಕಾರಲ್ಲಿ ವಾಪಾಸ್ ಬರೋವಾಗ ಒಬ್ಬನೆ ಆಗ್ತೀನಿ ಜೊತೆ ಬರ್ರಿ ಅಂದ್ರು ಶ್ರೀಧರ್. ಪೇಶಂಟ್ ಕೂಡ ಪರಿಚಯಸ್ತರಿರೋದ್ರಿಂದ ಹುಂ ಅಂದು ಹೊರಟೆ. ನಾವು ಗುಲಬರ್ಗಾ ತಪುಪಿದಾಗ ನಸುಕಿನ ಮೂರ್ ಗಂಟೆ ಇರಬಹುದು. ಸ್ವಲ್ಪ ರೆಸ್ಟ್ ಮಾಡಿ ಬೆಳಗ್ಗೆ ಹೋದ್ರೆ ಆಯ್ತು ಅಂತ, ಅಲ್ಲೆ ಆಸ್ಪತ್ರೆ ಆವರಣದಲ್ಲಿ ಮಲ್ಕೊಂಡು ಬೆಳಗ್ಗೆ ಹೊರಟ್ವಿ ಬಿಜಾಪುರ್ ಕಡೆ. ಹೋದ ಕೆಲಸ ಓಕೆ ಆಗಿತ್ತು & ಸ್ವಲ್ಪ ನಿದ್ದೆ ನೂ ಆಗಿರೋದ್ರಿಂದ ಇಬ್ಬರೂ ಫುಲ್ ಫ್ರೆಷ್ ಮೂಡಲ್ಲಿ ಇದ್ವಿ. ಸಾಂಗ್ ರೆ ಹಾಕ್ರಿ ಕೇಳ್ಕೊಂಡು ಹೋಗೋಣ ಅಂದೆ. ಹೌದ, ಒಂದ್ ಒಳ್ಳೆ ಜಾನಪದ ಸಾಂಗ್ ಪ್ಲೆ ಮಾಡ್ತೀನಿ ಅಂದ್ರು ಶ್ರೀಧರ್. ಆಗ,  " ಬ್ಯಾಡ ಅಂತ ಬಿಟ್ಟೇನಿ ಸುಮ್ಮನ " ಸಾಂಗ್ ತುಂಬಾ ಟ್ರೆಂಡಿಂಗ್ ಲ್ಲಿ ಇತ್ತು. ಅದನ್ನ ಕೇಳ್ಕೊಂಡು ಅದರ ಜೊತೆ ನಾವೂ ಹಾಡಕೊಂಡು, ಒಂಚೂರು ಲಿರಿಕ್ ಗೆ ತಕ್ಕನಾಗೆ ಆಕ್ಟಿಂಗ್ ಮಾಡ್ಕೊಂಡ ಬರ್ತಿದ್ವಿ. ಮೊಬೈಲ್ ಲ್ಲಿ ವಿಡಿಯೋ ರಿಕಾರ್ಡ್ ಮಾಡೋಣ ಅಂದ್ರು ಶ್ರೀಧರ್. ಸರಿ ಮಾಡೋಣ ಅಂದೆ. ಅವರು ಕಾರ ಓಡಿಸ್ತಿದ್ದಾರೆ ನಾನು ಪಕ್ಕದಲ್ಲಿ ಕುತ್ಕೊಂಡು ಮೊಬೈಲ್  front camera on ಮಾಡದೆ. ಮತ್ತೆ ಮೊದಲಿಂದ ಆ ಹಾಡು ಚಾಲು ಮಾಡಿ ಕ್ಯಾಮರಾ ದಲ್ಲಿ ಅದಕ್ಕೆ ತಕ್ಕಂಗೆ ಬಾಯಿ ಬಡೆದ್ವಿ. ಅದು, tik tok ಅಥವಾ insta reels ಮಾಡ್ತಾರಲ್ಲ ಹಂಗ ಆಯ್ತು & ಸ್ವಲ್ಪ ವಿಡಿಯೋ ಚನ್ನಾಗಿಯೂ ಬಂತು. ಅದನ್ನ ಇಬ್ಬರೂ ಸ್ಟೇಟಸ್ ಲ್ಲಿ ಹಾಕೊಂಡ್ವಿ. ನೂರಾರು ಜನ ನೋಡದ್ರು, ಎಲ್ರು 😊,,😄,,👌,, ಥರದ ಸ್ಮೈಲಿ ಕಳಿಸೋ ಮೂಲಕ ತಮ್ಮ ಮೆಚ್ಚುಗೆಯನ್ನ ವ್ಯಕ್ತಿಪಡಿಸಿದರು. ನಮ್ ಫ್ರೆಂಡ್ ಲವರ್ ಇದಾರೆ ಒಬ್ರು. (ಅವರದು ಒಂಥರ ಪ್ರೀತಿ, ಅದು ಏನರೆ ಇರಲಿ ಬಿಡಿ ಅದು ಅವರವರ ವಯಕ್ತಿಕ)  ಆ ಮಹಾತಾಯಿ ನನ್ ಸ್ಟೇಟಸ್ ನೋಡಿದಾಳೆ, ಏನೂ react ಮಾಡಿಲ್ಲ. ನಂತ್ರ ನಮ್ ಫ್ರೆಂಡ್ ಗೆ ಕಾಲ ಮಾಡಿ, ಏನದು ನೀಮ್ ಫ್ರೆಂಡ್ ಸಿದ್ದು ಹಿಂತಾ ಸ್ಟೇಟಸ್ ಇಟ್ಟಾನ. ನೀವೆಲ್ಲ ಫ್ರೆಂಡ್ಸ್ ಹಂಗೆ ಏನ್ ಅಂದಾಳ. ಏನಕ್ಕೆ ಅಂದ್ರೆ. ಆ ಹಾಡಿನ ಪಲ್ಲವಿಯ ಕೊನೆಯ ಸಾಲು " ನಿನ್ ಗಂಡನಕ್ಕಿಂತ ನಿನ್ನೆ ಮೈಯ ಮೊದಲ ನಾ ಮುಟ್ಟೆನ " ಅಂತ ಇದೆ. ಆ ಸಾಲು ಸ್ವಲ್ಪ ಅಸಹ್ಯ ಅನಿಸಿರಬೇಕು ಆ ಸುಶೀಲ್ ಸುಸಂಸ್ಕೃತ ಹೆಣ್ಣುಮಗಳಿಗೆ. 
ಆಕೆ ಅಂದ ಮಾತನ್ನ ನಮ್ ಫ್ರೆಂಡ್ ಫೋನ್ ಮಾಡಿ ನನಗೆ ಹೇಳಿದ, ಶಾರದಾ ಹಿಂಗ್ ಅಂದ್ಲು ಅಂತ.
ನನಗೇನೂ ಸಿಟ್ ಬರಲಿಲ್ಲ, ಸ್ವಲ್ಪ ನಗು ಬಂತು. ಏನಕ್ಕೆ ಅಂದ್ರೆ, ಒಂದು watsapp ಸ್ಟೇಟಸ್ ನಿಂದ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನ ಅಳಿತಾರಲ್ಲ ಎಷ್ಟ್ ಬುದ್ದಿವಂತರು ಅಂತ.
ನಾನು ಆಗಾಗ ಸಿದ್ದೇಶ್ವರ ಸ್ವಾಮೀಜಿ ಅವರ ಫೋಟೋ ಹಾಕ್ತಿರ್ತೀನಿ dp ಅಥವಾ ಸ್ಟೇಟಸ್ ಲ್ಲಿ, 

Comments

Post a Comment

Popular posts from this blog

ಲೇಡಿ ದೇವದಾಸ

ಲವ್ ಈಸ್ ಬ್ಲೈಂಡ್ (kannada article)