ಲವ್ ಈಸ್ ಬ್ಲೈಂಡ್ (kannada article)

ಮೊನ್ನೆ watsapp chat ಮಾಡುವಾಗ ತಂಗಿಯೋಬ್ಬಳು ಇಟ್ಟಿರೋ ಅಪರೂಪದ  dp ಯೊಂದು ಕಣ್ಣಿಗೆ ಬಿತ್ತು . ಆ photo ದಲ್ಲಿನ ಬರಹ ಹೀಗಿತ್ತು .
love is blind
ಅಂತಾರೆ ಏನಕ್ಕೆ ಗೊತ್ತಾ ?
ನಮ್ಮ ಮುಖ ನೋಡುವ
ಮುಂಚೆಯೇ ಅಮ್ಮ ನಮ್ಮನ್ನ
ಪ್ರೀತಿಸಲು ಶುರು ಮಾಡಿರುತ್ತಾಳೆ
ಅದು ಪ್ರೀತಿ ಅಂದ್ರೆ ..     ಅಂತ 


ಪಕ್ಕದಲ್ಲೋಂದು ಮುದ್ದಾದ ಮಗುವನ್ನ ತಬ್ಬಿಕೊಂಡ,  ಅಸ್ಟೆ ಮುದ್ದಾದ ತಾಯಿಯ ಚಿತ್ರ .ಮತ್ತೆ ಮತ್ತೆ ನೋಡಿದೆ ,  ಹಾಗೆ ಸೂಪರ್ dp ಅಂತ ಆ ತಂಗಿಗೆ msg ಮಾಡಿದೆ . ಎಸ್ಟು ಅದ್ಭುತ ಅಲ್ಲವಾ ತಾಯಿಯ ಮಮತೆ ಮಮಕಾರ ?
ತನ್ನ ಹೊಟ್ಟೆಯಲ್ಲಿ ಮಗುವೊಂದು ಮೂಡಿದರ ಸಣ್ಣ ಸೂಚನೆ ಸಿಕ್ಕ ಮರುಕ್ಷಣ ,  doctor ರಲ್ಲಿಗೆ  ಓಡಿ ಹೋಗುತ್ತಾಳೆ . doctor ಕನ್ಫರ್ಮ ಮಾಡಿ ಕಂಗ್ರೊಜುಲೇಶನ್ಸ ಹೇಳಿದಾಗ
             ಆಡು ಮಕ್ಕಳ ನೊಡಿ ಬೇಡಿತ ನನ ಜೀವ
              ಕೇಳಿದ್ದನೇನ ಶೀವರಾಯ ಹೊಟ್ಯಾಗ
               ಮುಡಿದನೆನ ಮಗರಾಯ
ಏಂಬ ಜನಪದ ತ್ರಿಪದಿ ಯಂತೆ ಅವಳಿಗಾಗೋ ಆನಂದ ಹೇಳ ತೀರದು . ಅವತ್ತಿನಿಂದ ಅವಳು ತಿನ್ನುವ ಪ್ರತಿಯೊಂದು ತುತ್ತು ಅನ್ನ ,  ಸೇವಿಸುವ ಔಷಧಿ ,  ಹಾಗೆ ದಿನಚರಿಯಲ್ಲಿ ಸಣ್ಣ ಪುಟ್ಟ ಬದಲಾವಣೆ ,  ಎಲ್ಲವೂ ಕಾಣದ ಆ ಕಂದನಿಗಾಗಿ . ಆ ಕರುಳ ಬಳ್ಳಿ ಕಪ್ಪಾಗಿದೆಯೋ  ಬೆಳ್ಳಗಿದೇಯೋ ,  ಕುಂಟಿದೇಯೋ ಕುರುಡಿದೇಯೋ ? ಊ ಹೂಂ ಒಂದೂ ಗೊತ್ತಿಲ್ಲ . ಗೊತ್ತಿರುವುದು ಇಸ್ಟೇ ,  ತನ್ನ ಮಗು , ತಾನದಕ್ಕೆ ನೀಡಬಹುದಾದ ಬೆಚ್ಚಿನೆಯ  ಭಾವ .
         ಕಂದ ಹುಟ್ಟುವಾಗ ಕುಂದ್ಯಾವಕ್ಕನ ಮಾರಿ
          ಕಂದ ಚಂಡಾಡಿ ಬರುವಾಗ ಆ ಮಾರಿ
         ಕುಂದಲ್ಹರಳಾಗಿ  ಹೊಳೆದಾವ
ಏಂಬ ತ್ರಿಪದಿ ಯ ಸಾಲಿನಂತೆ ,  ಕಂದ ಹುಟ್ಟಿ ಬರುವಾಗೀನ ನೋವು ,  ಅವನ ಆಟದಿ ಮರೆತು ನಗುವ ತಾಯಿಯ ಪ್ರೀತಿ ಕುರುಡಲ್ಲದೆ  ಮತ್ತೇನು ?
ಆದರೆ ನಾವಿಂದು ಹರೆಯದಲ್ಲಿ ಆಗುವ ವಿರುದ್ಧ ಲಿಂಗದೆಡೆಗಿನ ಸೆಳೆತ ಮಾತ್ರ ಪ್ರೀತಿ ಎಂದು ನಮ್ಬೀದ್ದೇವೇ . ಆ  ನಮ್ಬೀಕೇಯಲ್ಲಿ ನಮ್ಮ ನಮ್ಬೀದ ತಂದೆ ತಾಯಿಗಳ ನಮ್ಬೀಕೇಗೇ ಘಾಸಿ ಮಾಡುತಿದ್ದೇವೆ . ಇದರ ಅರ್ಥ ಹರೆಯದಲ್ಲಿ ಆಗುವ ಪ್ರೀತಿ ತಪ್ಪೆಂದು ಅಲ್ಲ . ಬಾಳ ಬಂಡಿಯ ನೊಗ ಎಳೆಯಲು ಸಂಗಾತಿ ಬೇಕು . ಆದರೆ ಆ ಭರದಲ್ಲಿ ಬದುಕು ನೀಡಿದವರ ನಿರ್ಲಕ್ಷ ಆಗಬಾರದಸ್ಟೇ . ಇಂದು ಹಲವಾರು ಪತ್ರಿಕೆಗಳಲ್ಲಿ ಓದುತ್ತೇವೆ ,  tv ಲಿ ನೊಡುತ್ತೇವೆ , ನಾಲ್ಕು ವರ್ಷ ದಿಂದ ನಾವು ಪರಸ್ಪರ ಪ್ರೀತೀಸುತೀದ್ದೇವೆ ,  ಮನೆಯವರು ಓಪ್ಪುತ್ತಿಲ್ಲ,  ನಾವು ಸಾಯುತ್ತೇವೆ ಎಂದು . ಎರಡು ಇಲ್ಲ ನಾಲ್ಕು ವರ್ಷ ಗಳಿಂದ ಪ್ರೀತಿಸುವ ಹುಡುಗಿಯನ್ನ ಬಿಟ್ಟಿರಲಾಗದ ನಾವು , ನಾವು ಹುಟ್ಟುವ ಮುಂಚೆಯೇ ನಮ್ಮನ್ನು ಪ್ರೀತೀಸುವ ತಂದೆ ತಾಯಿಗಳು ನಮ್ಮನ್ನು ಹೇಗೆ ಬಿಟ್ಟಿದ್ದಾರು ಅನ್ನೊ ಸಣ್ಣ ಅಲೋಚನೆ ಯೂ  ಮಾಡುವುದಿಲ್ಲ . ಪ್ರೀತಿಯ ಸುಳಿಗೆ ಸಿಲುಕಿ ,  ಮಗನೊ ಅಥವಾ ಮಗಳೋ  ಮನೆ ಬಿಟ್ಟು ಓಡಿ ಹೊದಾಗ ,  ಹೆತ್ತವರು ಅನುಭವಿಸುವ ಅವಮಾನ -ಸಂಕಟ ದ ಕುರಿತು ಯಾವ ಪತ್ರಿಕೆ ಯವರೂ ಬರೆಯಲ್ಲ . ಅಥವಾ ಪ್ರಾಣ ಕಳೆದುಕೊಂಡಾಗ ,  ಇದ್ದೂ ಸತ್ತಂತೆ ಬದುಕುವ ತಂದೆ ತಾಯಿಗಳ ಬದುಕಿನ ಘೋರ ಚಿತ್ರಣ ಯಾವ ಚಾನೆಲ್ ನವರೂ ತೋರೀಸಲ್ಲ . ಎಂಥ ವಿಪರ್ಯಾಸ ಅಲ್ಲವಾ ??_____ಸಿದ್ದು

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಪುಸ್ತಕವೆಂಬ ಪಂಚಾಮ್ರುತ