ಪ್ರೇಮಕ್ಕಿಲ್ಲದ ಜಾತಿ ಕಾಮಕ್ಕುಂಟೆ ?
ಆಕೆ ನನಗೆ ಸುಮಾರು ಆರು ವರ್ಷದಿಂದ ಗೊತ್ತು. ಚಿಕ್ಕ ವಯಸ್ಸಲ್ಲಿ ಮದುವೆ ಆಗಿತ್ತು. ಕುಡುಕ ಗಂಡ, ವಗ್ಗದ ವಾತಾವರಣ. ಬದುಕಿನ ಬಗ್ಗೆ ತಾನು ಕಟ್ಟಿಕೊಂಡ ಕನಸುಗಳ ಕೊಲ್ಲಲು ಮನಸಾಗದೆ ತವರಿಗೆ ವಾಪಸ್ ಆಗಿದ್ದಳು. ಗಂಡನ ಮನೆಯಿಂದ ಜಗಳ ಮಾಡಿ ತವರಿಗೆ ವಾಪಸ್ ಆದವರನ್ನ ಯಾರೂ ರತ್ನಗಂಬಳಿ ಹಾಸಿ ಬರಮಾಡಿಕೊಳ್ಳಲ್ಲ. ಒಂದಿಷ್ಟು ಪ್ರಶ್ನೆ. ಯಾಕೆ? ಏನು? ಕೆಲ ಗಂಡಸರು ಹಾಗೆ ಅಡ್ಜಸ್ಟ್ ಮಾಡ್ಕೋಬೇಕು ಅನ್ನೋ ತರ್ಕಹಿನ ಸಲಹೆ. ಸ್ವಲ್ಪ ದಿನದ ನಂತರ ತಾಯಿ ಸುಮ್ಮನಾಗಬಹು. ಆಕೆನೂ ಒಂದ್ ಹೆಣ್ಣು. ಆಕೆಗೆ ಗೊತ್ತು, ಹೆಣ್ಣಿನ ಕಷ್ಟ ಸಂಕಟ, ಕನಸು ಕಣ್ಣೀರು, ಬಯಕೆ ಬೇಸರಿಕೆ,. ಕೆಲ ಗಂಡಸರು ನಡೆದುಕೊಳ್ಳುವ ರೀತಿ ನೀತಿ ಎಲ್ಲವನ್ನೂ ನೋಡಿಕೊಂಡು ಬಂದವಳು. ಅಮ್ಮ ಸುಮ್ಮನಾದಳು. ಆದ್ರೆ ಅಪ್ಪನಿಗೆ ಮರ್ಯಾದೆಯ ಪ್ರಶ್ನೆ. ಆತನಿಗೆ ಮಗಳ ಕಷ್ಟ ಬೇಡ, ಕಣ್ಣೀರು ಬೇಡ. ಊರಲ್ಲಿ ಎರಡು ಜನ ಇಂಥವನ ಮಗಳು ಗಂಡನ ಬಿಟ್ಟು ಕೂತಿದ್ದಾಳೆ ಅಂತ ಅನ್ನಬಾರದು. ಅಪ್ಪ ದಿನ ಸಂಜೆ ಕುಡಿದು ಬಂದು ಶುರು ಮಾಡೋನು. ಹೋಗು ಗಂಡನ ಮನೆಗೆ, ಮರ್ಯಾದೆ ಪ್ರಶ್ನೆ. ದಿನ ಸಂಜೆ ಆದ್ರೆ ಇದೆ ರಗಳೆ ಮನೇಲಿ. ಹೋಗು ಅಂತ ಅಪ್ಪ, ಆತ ಸರಿಯಿಲ್ಲ ಹೋಗಲ್ಲ ಅಂತ ಮಗಳು.
ಆಗ ಪರಿಚಯ ಆದವಳು ನನಗೆ. ಆಕೆ ಎದೆಯಲ್ಲಿ ದುಃಖ ಇತ್ತು, ನನ್ನೆದೆಯಲ್ಲಿ ಸಮಾಧಾನವಾಗಿ ಕೆರಳಿಸಿಕೊಳ್ಳೋ ಕಿವಿಗಳಿದ್ವು. ಆಗಾಗ ಕಾಲ್ ಮಾಡೋಳು, ಮನೆಯಲ್ಲಿ ನ ಜಗಳ, ಅಪ್ಪ ಬೈದ ಬೈಗುಳ, ಗಂಡನ ಮನೆಯಲ್ಲಿ ತನಗಾದ ಅನ್ಯಾಯ, ಎಲ್ಲ ಹೇಳೋಳು, ಅಳೋಳು. ನನಗೆ ತಿಳಿದಷ್ಟು ಹೇಳಿ ಸಮಾಧಾನ ಪಡಿಸ್ತಿದ್ದೆ.
ಒಳ್ಳೆ ಸ್ನೇಹಿತನಾಗಿದ್ದೆ, ಆತ್ಮೀಯ ಅಣ್ಣ ನಾಗಿದ್ದೆ, ಅದರಾಚೆಗೂ 23 ರ ಹರೆಯದ ಹೆಣ್ಣಿಗೆ ಗಂಡಿನ ಅವಶ್ಯಕತೆ ಇದೆ ಅಲ್ವಾ.
ಮನೆಯಲ್ಲಿ ಕೂತ್ರೆ ಬೇಸರ, ಆಚೆ ಕೆಲ್ಸಕ್ಕೆ ಅಂತ ಹೋದ್ರೆ ಟೈಮ್ ಪಾಸ್ ಆದ್ರೂ ಆಗತ್ತೆ, ಜೊತೆಗೆ ಖರ್ಚಿಗೆ ಒಂದಿಷ್ಟು ದುಡ್ಡು ಬರತ್ತೆ ಅಂತ, ಒಂದು ಅಯ್ಯಂಗಾರ್ ಬೇಕರಿಯಲ್ಲಿ ಹೊರಟಳು. ಹೀಗೆ ಒಂದು ಆರು ತಿಂಗಳು ಅಥವಾ ವರ್ಷ ಆಗಿರಬಹುದು. ಆದೊಮ್ಮೆ ಸಂಜೆ 5 ಗಂಟೆಗೆ ಡ್ಯೂಟಿ ಮುಗಿಸಿ ಮನೆಗೆ ಬರೋವಾಗ ಕಾಲ್ ಮಾಡಿದಳು. ಅಣ್ಣ ಒಂದ್ ವಿಷಯ ಹೇಳೋದಿತ್ತು ನಿನಗೆ ಅಂದ್ಳು. ಏನ್ ಹೇಳಮ್ಮ ಅಂದೆ.
ಸ್ವಲ್ಪ ಮುಜುಗರ ದಿಂದ ಮಾತು ಆರಂಭಸಿದಳು. ಅಣ್ಣ ನಾನ್ ಕೆಲ್ಸಕ್ಕೆ ಹೋಗೋ ಬೇಕರಿಯಲ್ಲಿ ಒಬ್ಬ ಹುಡುಗ ಪರಿಚಯ ಆಗಿದ್ದಾನೆ, ಒಳ್ಳೆ ಹುಡುಗ, ನನ್ನ ಮದುವೆ ಆಗ್ತೀನಿ ಅಂತಿದಾನೆ ಅಂದ್ಳು.
ಗುಡ್, ಅದಕ್ಯಾಕ್ ಅಷ್ಟೊಂದು ಭಯ ಪಟ್ಟು ಹೇಳ್ತಿದಿಯ. ಮನಸಿಗೂ ಗಂಡ ಬೇಕು, ದೇಹಕ್ಕೂ ಗಂಡ ಬೇಕು. ಸಾಮಾಜಿಕ ಭದ್ರತೆಗೂ ಗಂಡ ಬೇಕು, ಶುಭ ಕಾರ್ಯಗಳಲ್ಲಿ ಚಾಜ ಮಾಡೋಕು ಮುತ್ತೈದೆ ಅನ್ನೋ ಪಟ್ಟ ಬೇಕು. ಅಷ್ಟೇ ಯಾಕೆ ಗಂಡ ಇಲ್ದೊಳು ಅಂದ್ರೆ ಹಬ್ಬ ಹರಿದಿನ ಅರಿಶಿಣ ಕುಂಕುಮ ಕ್ಕೂ ನಿನ್ನ ಯಾರೂ ಕರಿಯಲ್ಲ. ಚಿಕ್ಕ ವಯಸ್ಸಲ್ಲಿ ಅಪ್ಪ ಬೆರಳ್ ಹಿಡಿದು ನಡೆಸ್ತಾನೆ, ಬೆಳಿತಾ ಬೆಳಿತಾ ಅಣ್ಣ ತಮ್ಮ ಜೊತೆಯಾಗ್ತಾರೆ, ಕಾಲಕ್ರಮೇಣ ಗಂಡನ ಕಿರು ಬೆರಳು ಬೇಕು. ಬಳ್ಳಿಗೆ ಕಾಯಿ ಯಾವತ್ತೂ ಭಾರ ಅಲ್ಲ, ಹಾಗಂತ ಜೀವನ ಪೂರ್ತಿ ಅಪ್ಪನ ಬೆರೆಳು ಹಿಡಿದು ನಡಿಯೋಕ ಆಗಲ್ಲ. ಬರಿ ಪ್ರೇಮ ಕಾಮ ಕ್ಕೆ ಅಷ್ಟೇ ಅಲ್ಲ ಅದರಾಚೆಗೂ ಒಂದ್ ಹೆಣ್ಣಿಗೆ ಒಂದು ಗಂಡಿನ ಅವಶ್ಯಕತೆ ತುಂಬ ಇದೆ, ಹುಡುಗ ಒಳ್ಳೆಯವನು ಚನ್ನಾಗಿ ನೋಡ್ಕೋತಾನೆ ಅನ್ನೋ ಭರವಸೆ ಇದ್ರೆ ಆಗು ಮದುವೆ ಅಂದೆ. ಹುಂ ಅಣ್ಣ ಮನೆಯಲ್ಲಿ ಹೇಳ್ತಿನಿ ಅಂತ ಕಾಲ್ ಕಟ್ ಮಾಡಿದಳು.
ಮನೆಯಲ್ಲಿ ಹೇಳಿದರೆ ಜಾತಿ ಸಮಸ್ಯ. ಹುಡುಗಿ ಕಮ್ಮಿ ಜಾತಿಯಂತೆ, ಹುಡುಗ ಜಾಸ್ತಿ ಜಾತಿಯಂತೆ. ದೇವರಾಣೆ ನಾನ್ ಜಾತಿ ನಂಬಲ್ಲ, ಯಾರಾದ್ರೂ ನನ್ನ ಪ್ರೀತಿಯಿಂದ ಅಣ್ಣ ತಮ್ಮ ಅಂತ ಕರೆದರೆ, ಅವರ ಕಣ್ಣಲ್ಲಿನ ಪ್ರೀತಿ ಅವರ ಮಾತಲ್ಲಿನ ಮಮತೆ ಕಾಣ್ತದೆ ಹೊರತು, ಅವರ ಹಿಂದಿನ ಜಾತಿ ನನಗೆ ಕಾಣಲ್ಲ, ಅದರ ಗೋಜಿಗೂ ನಾನ್ ಹೋಗಲ್ಲ.
ಹುಡುಗಿ ಯವರ ಮನೆಯಲ್ಲಿ ಒಪ್ಪಿಸೋಕೆ ಆರ್ ತಿಂಗಳು ಕಳಿತು. ಇನ್ನು ಹುಡುಗನ ಮನೆಯವರು ಒಪ್ಪಿದರೆ ಮದುವೆ. ಅಷ್ಟರಲ್ಲಿ ಆಕೆ ಪ್ರೆಗ್ನೆಟ್ ಆದ್ಳು. ಆಗ ಶುರು ಅದು ನೋಡಿ ಫ್ರೆಂಡ್ ಸರ್ಕಲ್ ನಲ್ಲಿ ಮಾತುಗಳು. ಛಿ ಏನಿದು ಅಸಹ್ಯ, ಇನ್ನೂ ಮದುವೆ ಆಗಿಲ್ಲ ಆಗ್ಲೇ? ಅಂತ ಒಬ್ರು. ಅವರ ಜಾತಿಯಲ್ಲಿ ಅದೆಲ್ಲ ಕಾಮನ್ ಬಿಡು ಅಂತ ಒಬ್ರು.
ನಾನಂದೆ, ಛಿ ಅಂತೀರಾ ಓಕೆ, ಅಸಹ್ಯ ಅಂತೀರಾ ಓಕೆ, ಅದು ನಿಮ್ಮ ನಿಮ್ಮ ವಿವೇಚನೆಗೆ ಬಿಟ್ಟಿದ್ದು. ನಡುವೆ ಜಾತಿ ಯಾಕ್ ಬಂತು??. ಅವರಲ್ಲಿ ಉತ್ತರ ಇಲ್ಲ.
ಇದಾಗಿ ಒಂದ್ ವಾರ ಕಳೆದಿರಲಿಲ್ಲ. ನಮ್ ಗ್ರೂಪ್ ಲ್ಲಿ ಒಬ್ಬಳು ದೊಡ್ಡ ಜಾತಿಯ ಹುಡುಗಿ, ಪ್ರೀತಿ ಪ್ರೇಮ ಅಂತ, ಮನೆಯಲ್ಲಿನ ಒಂದಿಷ್ಟು ದುಡ್ಡು ಬಂಗಾರ ತಗೊಂಡು ಓಡಿ ಹೋದ್ಳು.
ಆಗ ಯಾರ್ ಬಾಯಲ್ಲೂ ಮಾತಿಲ್ಲ. ನಾನೂ ಏನೂ ಮಾತಾಡಲಿಲ್ಲ ಮೌನವಾಗಿ ನಕ್ಕು ಸುಮ್ಮನಾದೆ. ನನ್ನ ಮೌನದ ಅರ್ಥ ಇಷ್ಟೇ. ಪ್ರತಿಯೊಂದರಲ್ಲೂ ಮೇಲು ಕೀಳು ಅಂತ ಜಾತಿ ಎಳೆದು ತರಬೇಡಿ.
ಸರ್ಕಾರಿ ನೌಕರಿ ಗೆ ಮೀಸಲಾತಿ ಇಟ್ಟಂಗೆ, ಪ್ರೇಮ್ ಕಾಮ ಕ್ಕೆ ಮೀಸಲಾತಿ ಮಾಡೋಕ್ ಅಗತ್ತ??
ಹೇಳ್ತಾ ಹೋದ್ರೆ ಇನ್ನೂ ಉದ್ದ ಆಗತ್ತೆ, ಇಲ್ಲಿಗೆ ಸಾಕು.
ಕೊನೇದಾಗಿ ಒಂದ್ ಮಾತು.
ಪ್ರೇಮಕ್ಕಿಲ್ಲದ ಜಾತಿ ಕಾಮಕ್ಕುಂಟೆ ?
ಇಷ್ಟ ಆದ್ರೆ ಒಂದ್ msg ಹಾಕಿ ಸೂಪರ್ ಅಣ್ಣ ಅಂತ, ಅಸಹ್ಯಗೇಡಿ ನನ್ ಮಗ ಏನ್ ಬರೀತಾನೆ ಅಂತ ಅನಿಸಿದರೆ, ಮನಸಲೇ ಬೈದ ಬಿಡಿ msg ಮಾಡಬೇಡಿ 😄.
By.. Siddu Tambe.
Nija sir.correct agi helidira
ReplyDeleteThank u 😊
DeleteYallarigu nin tara olle yochane gale barabeku Anna ..adru super bro niu 👏
ReplyDelete