ಸ್ಟೂಡೆಂಟ್ ಲೈಫ್ ಇಜ್ ಗೋಲ್ಡನ್ ಲೈಫ್ ಅಂತೆ ನಿಜಾನಾ ??

 ದಿನಾಲೂ ನಮ್ಮ ಮಾತಿನ ಮದ್ಯ ಅದೆಷ್ಟೊ ಗಾದೆ ಮಾತುಗಳು ಮತ್ತು ನಾಣ್ಣುಡಿಗಳು ಹರಿದಾಡ್ತವೆ. ಕೆಲವೋಂದು ಪ್ರಾಸಬದ್ದವಾಗಿ ಚಂದ ಇರ್ತವೆ, ಇನ್ನೂ ಕೆಲವೋಂದು ಅವುಗಳ ಅರ್ಥದಿಂದ ಚಂದ ಇರ್ತವೆ. ಇನ್ನ್ ಕೆಲವೋಂದು ಫೆಮಸ್ಸಾದ ವ್ಯಕ್ತಿ ಬಾಯಿಂದ ಬಂದಿದುದರ ಪರಿಣಾಮವಾಗಿ ಚಂದ ಅನಿಸ್ತವೆ. ಆದ್ರೆ ಅವುಗಳಲ್ಲಿನ ಸತ್ಯಾಂಶ ಎಷ್ಟು ಅನ್ನೊದನ್ನ ನಾವ್ಯಾರು ನೋಡಲ್ಲ. ಹೀಗೆ ನನಗೆ ಸ್ವಲ್ಪ ಜಾಸ್ತಿ ನೆ ಕಾಡಿದ್ದು ಅಂದ್ರೆ ಈ student life is golden life ಅನ್ನೊ ಸಾಲು. ಯಾಕಾಗಿ ಹೀಗ್ ಅಂದ್ರು ಅಂತ ಗೊತ್ತಿಲ್ಲ. ಒಕೆ, ಯಾವುದೆ ಚಿಂತೆ ಇರಲ್ಲ ,ತರೊದು ಬರೊದು ಮನೆ ಉಸಾಬರಿ ಏನೂ ಇರಲ್ಲ . ಬರಿ ಊಣ್ಣೋದು ತಿನ್ನೋದು ಅಭ್ಯಾಸ ಮಾಡೋದು, ಆಠ ಆಡೋದು  ಅಷ್ಟೆ ಇರ್ತದಲ್ಲ ಹೀಗಾಗಿ ವಿದ್ಯಾರ್ಥಿ ಜೀವನವನ್ನ ಬಂಗಾರದ ಜೀವನಕ್ಕೆ ಹೋಲಿಸಿ ಮಾತಾಡಿರಬಹುದು.
ಅದು ಯಾವಾಗ ನೀಜ ಅಂದ್ರೆ,,,  ಬೆಳಗ್ಗೆ ಅಮ್ಮ ಎಬ್ಬಿಸಿ, ಬ್ರಶ್ ಮಾಡಿಸಿ, ಬಿಸಿನೀರಿಂದ ಜಳಕ ಮಾಡಿಸಿ, ತಲೆ ಬಾಚಿ, ಇಷ್ಟವಾದ ತಿಂಡಿ ತಿನಿಸಿ, ಒಲ್ಲೆ ಒಲ್ಲೆ ಅಂದ್ರೂ ಮೇಲೆ ಒಂದ್ ಗ್ಲಾಸ್ ಹಾಲು ಕುಡಿಸಿ, ಮದ್ಯಾಹ್ನ್ ಊಠಕ್ಕೆ ಡಬ್ಬಿ ಕಟ್ಟಿ, ವ್ಯಾನ್ ನಲ್ಲಿ ಕೂಡಿಸಿ ಟಾಟಾ ಮಾಡಿ ಸ್ಕೂಲ್ ಗೆ ಕಳಿಸಿದಾಗ. ಮತ್ತೆ ಸ್ಕೂಲ್ ನಲ್ಲಿ ಮಿಸ್ಸ್ ಹೇಳೊ ಪಾಠ ಸಲಿಸಾಗಿ ಅರ್ಥ ಆಗಿ , ಪ್ರತಿ ಪರಿಕ್ಷೆ ಯಲ್ಲಿ ಉತ್ತಮ ಶೇಣಿಯಲ್ಲಿ ಪಾಸಾದಾಗ. ಹತ್ತನೆ ತರಗತಿಯಲ್ಲಿ ಉತ್ತಮ ಮಾರ್ಕ್ಸ್ ಬಂದಾಗ, ಇಷ್ಟವಾದ ಕಾಲೇಜ್ ನಲ್ಲಿ ಇಷ್ಟವಾದ ಕೋರ್ಸ್ ಸೇರಿದಾಗ. ಉಡೋಕೆ ಒಳ್ಳೆ ಬಟ್ಟೆ , ಓಡಾಡೊಕ್ ಒಂದ್ ಬೈಕು, ಖರ್ಚಿಗೆ ಸ್ವಲ್ಪ್ ಪಾಕೆಟ್ ಮನಿ, ಉತ್ತಮವಾದ ಸ್ನೇಹಿತರು, ಉತ್ತಮವಾಗಿ ಪಾಠ ಮಾಡೊ ಲೆಕ್ಚರರ್, ಅವರು ಹೇಳಿದನ್ನ ಅರ್ಥ ಮಾಡ್ಕೊಳ್ಳೊ ಬುದ್ದಿವಂತಿಕೆ ನಮ್ಮಲ್ಲಿದ್ದು, ಅದನ್ನ ಪರಿಕ್ಷೆಯಲ್ಲಿ ಸಾಬಿತು  ಪಡಿಸಿ ಒಳ್ಳೆ ರಿಜಲ್ಟ್ ಬಂದಾಗ, ಈ student life is golden life ಅಂತ ಅನ್ನಬಹುದೇನೊ.
ನನ್ನ ವಿದ್ಯಾರ್ಥಿ ಜೀವನ ಹೇಗಿತ್ತು ಗೊತ್ತಾ ?
ಹಾಸ್ಟೆಲ್ ನಲ್ಲಿ ಇರ್ತಿದ್ದೆ, ಬೆಳಗ್ಗೆ ಯಾರೂ ಎಬ್ಬಿಸಿಲ್ಲ ಅಂದ್ರೂ ಆರ್ ಗಂಟೆಗೆ ಎಚ್ಚರ ಆಗೋದು, ಬ್ರಶ್ ಮಾಡಿ ಸ್ಕೂಲ್ ಯುನಿಫಾರ್ಮ್ ಹಾಕೊಂಡು ರೆಡಿ ಅಗ್ತಿದ್ದೆ. ಜಳಕ ಮಾಡೋದು ವಾರಕ್ಕೆ ಎರಡು ಇಲ್ಲ ಮೂರ್ ಸರ್ತಿ ಅಷ್ಟೆ, ಯಾಕಂದ್ರೆ ಗೊರ್ಮೆಂಟ್ ಹಾಸ್ಟೆಲ್ ಬಿಸಿನೀರ ಇರ್ತಿರಲಿಲ್ಲ, ಬೆಳ್ ಬೆಳಗ್ಗೆ ತಣ್ಣನೆಯ ನೀರು ಅಗ್ತಿರಲಿಲ್ಲ. ಹಾಸ್ಟೇಲ್ ನಲ್ಲಿ ಬೆಳಗ್ಗೆ ಟಿಫಿನ್ ಗೆ ಒಗ್ಗರಣೆ ಅನ್ನ ಮಾಡೋರು, ಮಧ್ಯಹ್ನ ಊಠಕ್ಕೆ ತಂದೂರಿ ಗಾತ್ರದ ಚಪಾತಿ, ತಿಳಿ ಸಾರು, ಮೇಲೆ ಟಿಫಿನ್ ನಲ್ಲಿ ಮಿಕ್ಕಿದ ಒಗ್ಗರಣೆ ಅನ್ನ. ಮದ್ಯಹ್ನ್ ದ ಚಪಾತಿ ಖಾಲಿ ಆಗಿದ್ರೆ ಸಂಜೆ ಊಠಕ್ಕೆ ಬಿಸಿ ಚಪಾತಿ ಬೆಯೊದು, ಉಳಿದಿದ್ರೆ ರಾತ್ರಿ ಗೂ ಅವೆ ಚಪಾತಿ ತಿಳಿ ಸಾರು. ಹಾಸ್ಟೆಲ್ ವಾರ್ಡನ್ ಗೆ ಒಂದ್ ವಿಶದಲ್ಲಿ ಪುಣ್ಯ ಬರಬೇಕು, ಆಗಸ್ಟ್ ಹದಿನೈದು ಇಲ್ಲ ಜನೆವರಿ  ಇಪ್ಪಾತ್ತಾರು ಹೀಗೆ ಇದ್ದಾಗ ಸ್ವೀಟ್ ಮಾಡಿಸ್ತಿದ್ದ. ಇದು ಉಣ್ಣೋ ತಿನ್ನೋ ವಿಷಯ ಆಯ್ತು. ಇನ್ನೂ ಸ್ಕೂಲ್ ಮತ್ತೆ ಮಿಸ್ ಅವರ ವಿಚಾರಕ್ಕೆ ಬರೊದಾದ್ರೆ, ಚಂದ ಪಾಠ ಮಾಡ್ತಿದ್ರು, ಅರ್ಥ್ ಆಗ್ತಿತ್ತು. ಅದಕ್ಕೆ ರಿ  ಏಳನೆ ತರಗತಿ ಪಬ್ಲಿಕ್ ಪರಿಕ್ಷೆ ಯಲ್ಲಿ ಕಾಪಿ ಮಾಡದೆ ಫಸ್ಟ್ ಕ್ಲಾಸ್ ನಲ್ಲಿ ಪಾಸಾದೆ. ಈ ಹೈಸ್ಕೂಲ್ ನಲ್ಲಿ ಸಹಿತ ಉಣ್ಣೊ ಊಡೊ ವಿಚಾರ ದಲ್ಲಿ ಸ್ವಲ್ಪ ಏರು ಪೇರಿದ್ರೂ , ಅಭ್ಯಾಸದ ವಿಷಯದಲ್ಲಿ ಎಲ್ಲ ಚನಾಗೆ ಇತ್ತು. ಸರಿಯಾಗಿ ಓದ್ತಿದ್ದೆ ಬರಿತಿದ್ದೆ, ಹತ್ತನೆ ತರಗತಿಯಲ್ಲಿ ಫಸ್ಟ್ ಕ್ಲಾಸ್ ಆಗದೆಯಿದ್ರೂ ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗಿದ್ದೆ. ಆದ್ರೆ ಕಾಲೇಜ್ ನಲ್ಲಿ ನೋಡಿ ಪೂರ್ತಿ ಹಳಿ ತಪ್ಪಿದ್ದು. ಸೈನ್ಸ್ ಗೂ ನಮಗೂ ಆಗ್ತಿರಲಿಲ್ಲ, ಮನೆಯವರ ವತ್ತಾಯಕ್ಕೆ ಸೈನ್ಸ್ ಮಾಡದೆ. ಪಾಪ್ ಕಾಲೇಜ್ ನಲ್ಲಿ ಚನ್ನಾಗೆ ಪಾಠ ಮಾಡೋರು ಆದ್ರೆ ನಮ್ ತಲೆಗೆ ಒಂದೂ ಹೊಗ್ತಿರಲಿಲ್ಲ. ಹೀಗಾಗಿ  ಪಿ ಯು ಸಿ ಯಲ್ಲಿ ಮಾತೃ ಭಾಷೆ ಒಂದ್ ಬಿಟ್ಟು ಮಿಕ್ಕವು ಎಲ್ಲ ಫೆಲ್. ಊರಲ್ಲಿ ಮುಖ ತೋರ್ಸೊಕ್ ಆಗದೆ ಹೊಟೆಲ್ ನಲ್ಲಿ ಸಪ್ಲೈರ್ ಆಗಿ ಒಂದ್ ವರ್ಷ್ ಜೀವನ ತಗೆದೆ.
ಇದು ನನ್ನ ವಿದ್ಯಾರ್ಥಿ ಜೀವನದ ಚಿತ್ರಣ. ಸ್ವಲ್ಪ ಪರಿಶಿಲಿಸಿ ಹೇಳಿ ನೋಡೊಣ ಗೋಲ್ಡ್ ಎಷ್ಟಿದೆ ಸಿಲ್ವರ್ ಎಷ್ಟಿದೆ ಅಂತ. ಇದೆಲ್ಲ ನಾನು ನಿಮ್ಮ ಸಿಂಪತಿಗೋಸ್ಕರ ಹೇಳ್ತಿಲ್ಲ, ನನ್ನ ಮಾತಿನ ಅರ್ಥ ಏನು ಅಂದ್ರೆ . ಜೀವನದ ಯಾವುದೆ ಅವಧಿಯಾಗಲಿ, ಅದು  ಬಾಲ್ಯ ಇರಬಹುದು, ಯವ್ವನ ಇರಬಹುದು , ದುಡಿಯೊ ಅವಧಿ ಇರಬಹುದು, ವೈವಾಹಿಕ ಜೀವನ ಇರಬಹುದು, ಇಲ್ಲ ಮುಪ್ಪು ಇರಬಹುದು, ಯಾವುದೆ ಅವಧಿಯಾಗಲಿ ತಕ್ಕಮಟ್ಟಿಗಿನಿ ಅನುಕೂಲಗಳಿದ್ರೆ ಮಾತ್ರ ಗೋಲ್ಡನ್ ಲೈಫ್ ಅನ್ನಬಹುದು. ಓದುವಾಗ ಓದು ತಲೆಗೆ ಹತ್ತಲಿಲ್ಲ ಅಂದ್ರೆ, ಹಾಗೂ ಹೀಗೂ ಡಿಗ್ರಿ ಮುಗಿಸಿದ ಮೇಲೆ ಕೆಲೆಸ ಸಿಕ್ಕಿಲ್ಲ ಅಂದ್ರೆ, ಕೆಲಸ ಸಿಕ್ಕಿದ್ರೂ ಬಾಸ್ ಕಿರಿ ಕಿರಿ ಇದ್ರೆ, ಮಾತಲ್ಲಿ ಇದ್ರೆ ಮಕ್ಳು ರೀತಿಯಲ್ಲಿ ಇದ್ರೆ ಹೆಂಡತಿ ಅನ್ನೊ ಮಾತಿದೆ, ಹಾಗೆ ತಾಳ ತಪ್ಪಿದ ಹೆಂಡತಿ ಇದ್ರೆ, ಹೋಗ್ಲಿ ಅತ್ಲಾಗೆ ಹೆಂಡತಿ ಕರೆಕ್ಟ್ ಆಗೆ ಇದ್ರೂ, ಗಂಡ ಕುಡದು ಬಂದು ಸಂಶಯ ಮಾಡಿ ದಿನ ಜಗಳ ತಗಿತಿದ್ರೆ, ಇನ್ನೂ ಮುಪ್ಪಿನ ಕಾಲಕ್ಕೆ ಸಾಕಿ ಬೆಳೆಸಿದ ಮಕ್ಕಳೆ ಮನೆಯಿಂದ ಆಚೆ ಹಾಕಿದರೆ, ಎಲ್ಲಿ ಗೋಲ್ಡು ಎಲ್ಲಿ ಸಿಲ್ವರು ??.
ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೆಳೆಯುತ್ತ ಹೋಗತ್ತೆ. ಆಗ್ಲೆ ಹೇಳಿದಿನಿ ಕೊನೆದಾಗಿ ಮತ್ತೊಮ್ಮೆ ಹೇಳೊದ್ ಏನಂದ್ರೆ, ನಮ್ಮ ಜೀವನದ ಯಾವುದೆ ಘಟ್ಟ ಆಗಿರಲಿ, ತಕ್ಕಮಟ್ಟಿಗಿನ ಅನುಕೂಲತೆಗಳಿದ್ರೆ ಮಾತ್ರ ಆ ಲೈಫು ಗೋಲ್ಡನ್ ಲೈಫು ಇಲ್ದಿದ್ರೆ ಎಲ್ಲ ಚೊಂಬೆ.
ಪುರ್ತಿ ಓದಿದ ಮೇಲೆ ನಾನ್ ಹೆಳಿದ್ದು ಕರೆಕ್ಟ್ ಅನಿಸಿದರೆ ,ಎರಡ್ ಲೈನ್ ರಿಪ್ಲೈ ಕಳಿಸಿ ಸಾದ್ಯ ಆದ್ರೆ.
ಕಾಯ್ತಿರ್ತಿನಿ ನಿಮ್ಮ ಸ್ನೇಹಿತ ಸಿದ್ದು.ತಾಂಬೆ. 

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ