ಲಲಿತಾ
ಅದೊಮ್ಮೆ ಲಲೀತಕ್ಕ ಜೊತೆ ಚಾಟ್ ಮಾಡುವಾಗ , ಇರಲಿ ಅಕ್ಕ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅಂತೆ, ನನಗೂ ಒಂದ್ ಕಾಲ ಬರ್ತದೆ ಅಂದೆ . ಅದಕ್ಕವಳು ನನಗೆ ಅತ್ತೆ ಆಗೊ ಯೋಗ ಇಲ್ಲ ಯಾಕಂದ್ರೆ ನನಗೆ ಗಂಡ ಮಕ್ಕಳು ಇಲ್ಲ ಅಂದ್ಲು . ಹೌದು ಲಲೀತಕ್ಕ ಗೆ ಇರೋದು ಒಂದ್ ಹೆಣ್ಣು ಮಗು ಅಷ್ಟೆ , ಅದಾದ ಮೇಲೆ ಗಂಡ ಹೆಂಡತಿ ನಡುವೆ ಒಂದು ಸಣ್ಣ ಕಲಹ ಆಗಿ ನಾಲ್ಕು ವರ್ಷದಿಂದ ಬೇರೆ ಬೇರೆ ಇರೊ ವಿಷ್ಯ ಒಮ್ಮೆ ಅಕ್ಕ ನೆ ನನ್ ಮುಂದೆ ಹೇಳಿದ್ರು . ನಾನೂ ನನಗೆ ಪರಿಚಯ ಇರೊ ಒಬ್ಬ ಸ್ವಾಮೀಜಿ ಹತ್ರ ಹೋಗಿ, ಗಂಡ ಹೆಂಡತಿ ಇಬ್ಬರು ಮತ್ತೆ ಕೂಡಿ ಇರೊ ಹಾಗೆ ಏನರೇ ಮಾಡಿ ಅಂದು ಒಂದು ಯಂತ್ರ ಮಾಡ್ಕೊಂಡ್ ತಂದು ಅಕ್ಕನ್ಗೇ ಕೊಟ್ಟಿದ್ದೇ. ಅದೂ ವರ್ಕೋಟ ಆಗಿರಲಿಲ್ಲ . ಒಬ್ಳೆ ಇರ್ತಿದ್ಲು ಆಗಾಗ ಕಷ್ಟ ಸುಖ ಹಂಚಿಕೊತೀದ್ಲು .
ಈ ಅತ್ತೆ ವಿಷ್ಯ ಬಂದಾಗ ನಾನಂದೆ , ಗಂಡ ಮಕ್ಕಳು ಇಲ್ಲ ಅಂತ ಯಾಕಂತಿಯ ? ನಾನ್ ಇದ್ದೀನಲ್ಲ . ನಾಳೆಯಿಂದ ನಾನ್ ನಿನಗೆ ಅಕ್ಕ ಅನ್ನೊ ಬದಲು ಅಮ್ಮ ಅಂತೀನಿ , ನನ್ ಮದುವೆ ಆದಾಗ ನನ್ ಹೆಂಡತಿ ನಿನಗೆ ಸೊಸೆ ಆಗ್ತಾಳೆ , ಸಿಂಪಲ ನಿನ್ ಅತ್ತೆ ಆಗ್ತೀಯ ಅಂದೆ, ಸಣ್ಣ ದ್ವನಿಯಲ್ಲಿ ನಕ್ಕು ಸುಮ್ಮನಾಗಿದ್ಲು. ಒಂಟಿಯಾಗಿ ಇರ್ತಿದ್ರೂ ಸಂಯಮ ಮತ್ತು ಶಿಸ್ತಿನ ಹೆಣ್ಣು ಮಗಳು . ನನ್ನ ಗಮನಕ್ಕೆ ಬಂದ ಹಾಗೆ ಯಾವತ್ತೂ ಅಳತೆ ಮೀರಿ ನಡೆದವಳಲ್ಲ.
ಅವಳಿಗೆ ವಿಪರೀತ ಪುಸ್ತಕ ಓದೊ ಹುಚ್ಚು , ಪುಸ್ತಕ ಕೊಂಡು ಓದುವಷ್ಟು ಅರ್ಥಿಕವಾಗಿ ಸದ್ರುಢಳಲ್ಲ. ನಂದು ಲೈಬ್ರರಿ ಕಾರ್ಡ್ ಇತ್ತು ಆಗಾಗ ನಾನ್ ಲೈಬ್ರರಿಯಿಂದ ತಂದ ಪುಸ್ತಕ ಓದಿ ಅವಳಿಗೂ ಕೊಡ್ತಿದ್ದೆ . ಲಲೀತಕ್ಕ ಗೆ ರವಿ ಬೆಳಗೆರೆ ಯವರ ಬಾಟಮ್ ಐಟಮ್ ಮತ್ತು ಯಂಡಮೂರಿ ವೀರೇಂದ್ರನಾಥ ರವರ ಸಸ್ಪೆನ್ಸ್ ಕಾದಂಬರಿ ಗಳು ಅಂದ್ರೆ ಅಚ್ಚು ಮೆಚ್ಚು. ಅದೊಮ್ಮೆ ನಾನು ಲೈಬ್ರರಿ ಗೆ ಪುಸ್ತಕ ತರೋಕೆ ಹೊದಾಗ ಅಕ್ಕ ಹೇಳಿದ ಪುಸ್ತಕ ಸಿಕ್ಕಿರಲಿಲ್ಲ , ಬೇರೆ ಪುಸ್ತಕ ತಂದಿದ್ದೆ . ಆ ಕುರಿತು msg ಮಾಡದೆ . ಆಗ ಒಂದ್ ರಿಪ್ಲೈ ಬಂತು "ನನ್ನ ನಿನ್ನ ವಿಷಯ ಮನೇಲಿ ಗೊತ್ತಾಗಿದೆ ನಾಳೆಯಿಂದ cll msg ಏನೂ ಮಾಡಬೇಡ" ಅಂತ . ನನಗೆ ಆಶ್ಚರ್ಯ ಎನ್ ಗೊತ್ತಾಗಿದೆ ಮನೇಲಿ ? ಇಷ್ಟ ದಿನ ಮುಚ್ಚಿಡುವಂತ ವಿಷ್ಯ ಏನು ? . ಹೆಚ್ಚು ಕಮ್ಮಿ ಎರಡು ವರ್ಷದಿಂದ ಪರಿಚಯ ಅವರು ನನಗೆ . ನಾನು ಲ್ಯಾಬ್ ಟೆಕ್ನಿಶಿಯನ್ ಇದ್ದ ಹಾಸ್ಪಿಟಲ್ ನಲ್ಲಿ ಅವರು ಸ್ಟಾಫ್ ನರ್ಸ್ . ನಮ್ಮ ಇಡಿ ಎರಡು ವರ್ಷದ ಮೊಬೈಲ್ ಮೆಸೇಜ್ ಹಿಸ್ಟರಿ ಹುಡಕದ್ರೆ ನಿಮಗೆ ಸಿಗೋದು ಊಟಾ , ತಿಂಡಿ , gm , gn , ಯಾವ್ ಪುಸ್ತಕ ಓದಿದೆ? ಎಂಬಿತ್ಯಾದಿ ಮೆಸೇಜ್ ಗಳೆ ಹೊರತು ಒಂದಿನಾನೂ ನಾವ್ ಸಿನಿಮಾ ಪಾರ್ಕು ಅಂತ ಮಾತಾಡಿಲ್ಲ .
ಆದ್ದರಿಂದ ಆ ಕ್ಷಣ ಕ್ಕೆ ನಂಗ್ ಒಂದ್ ವಿಷ್ಯ ಗೊತ್ತಾಯ್ತು , ಈ msg ಬಂದಿದ್ದು ಲಲೀತಕ್ಕ ಮೊಬೈಲ್ ನಿಂದ ಇರ್ಬೋದು ಬಟ್ ಈ ಥರ msg ಮಾಡಿದ್ದು ಅವಳಲ್ಲ ಅಂತ . ಅದಕ್ಕೆ ಸಡನ್ ಆಗಿ ಕಾಲ್ ಮಾಡಿದೆ. ಹಲೋ ಯಾರು ಅಂತಿದಂಗೇ ಆ ಕಡೆಯಿಂದ ಗಂಡಸೊಬ್ಬನ ಧ್ವನಿ , ಲಲೀತಕ್ಕ ಇಲ್ವಾ ? ಅಂದೆ ನಾನು . ಇಲ್ಲ ರಾಂಗ್ ನಂಬರ್ ಅಂತ ಆತ ಕಾಲ್ ಕಟ್ ಮಾಡದ . ನನಗೇನು ಅದು ಹೊಸ ದ್ವನಿಯಲ್ಲ ಅವರ ಅಣ್ಣನ ಧ್ವನಿ ಆಗಿತ್ತು . ಆತನೂ ನನಗೆ ಪರಿಚಯ . ಎಷ್ಟು ಅಂದ್ರೆ , ಒಂದ್ ಕ್ವಾಟರ್ ನಲ್ಲಿ ಅರ್ಧ ಅರ್ಧ ಕುಡೀತಾ ದುರ್ಗಾ ಬಾರ್ & ರೆಸ್ಟೋರೆಂಟ್ ನಲ್ಲಿ ಇಡಿ ಸಂಜೆ ಕಳಿತೀದ್ದೋರು . ನಾನು ಮತ್ತೆ ಅವರ ಅಣ್ಣನ ನಂಬರ್ ಗೆ ಕಾಲ್ ಮಾಡದೆ , ಎನ್ ಅಣ್ಣ ಹಿಂಗೆಲ್ಲ msg ಮಾಡ್ತೀಯ , ಅವರ ಮೊಬೈಲ್ ನಿನ್ ರಿಸೀವ್ ಮಾಡಿ ರಾಂಗ್ ನಂಬರ್ ಅಂತೀಯ . ನೀನ್ ತಿಳ್ಕೊಂಡ ಹಾಗೆ ಏನೂ ಇಲ್ಲ , ಒಂದ್ ವೇಳೆ ನಿಂಗೆ ಡೌಟ್ ಬಂದಿದ್ರೆ ನೀನೆ ಡೈರೆಕ್ಟ್ ಆಗಿ ನನಗೆ ಕಾಲ್ ಮಾಡಿ , ನಮ್ ತಂಗಿ ಜೊತೆ ಮಾತಾಡ್ಬೇಡ msg ಮಾಡಬೇಡ ಅಂದ್ರೆ ನಾನ್ ಕೇಳಲ್ವ ? ಅಂದೆ . ಅದೆಲ್ಲ ಬಿಡು ನಾಳೆಯಿಂದ ಕಾಲ್ msg ಏನೂ ಮಾಡಬೇಡ , ಒಂಟಿ ಹೆಣ್ಮಗಳಿಗೆ msg ಕಾಲ್ ಮಾಡಿ ತಲೆ ಕೇಡಿಸ್ತಿಯ ಗೊತ್ತ ಆಗಲ್ಲ ನಿನಗ ಅಂದ. ಇನ್ನೂ ಏನೇನೋ ಮಾತಾಡದ ಆತ ಅದೆಲ್ಲಿ ಇಲ್ಲಿ ಬರೆಯೋದು ಸೂಕ್ತ ಅಲ್ಲ . ಆ ಕ್ಷಣ ಕ್ಕೆ ದೇವರಾಣೆ ನನಗೆ ಸೀಟ್ ಬರಲಿಲ್ಲ ನಗು ಬಂತು ಆತನ ಮಾತ ಕೇಳಿ . ಇಷ್ಟೆಲ್ಲ ಆಪ್ಷನ್ ಇತ್ತಾ ? ನನಗೆ ಅನಿಸ್ತು . ವಯಸಲ್ಲಿ ಮಾತ್ರ ಆತ ದೊಡ್ಡೋನು ಅನ್ಕೊಂಡಿದ್ದೆ , ಆದ್ರೆ ವಿಚಾರ ವಿವೇಚನೆಯಲ್ಲೂ ಆತ ದೊಡ್ಡೋನು ಅಂತ ನನಗ ಆವತ್ತೆ ಗೊತ್ತಾಗಿದ್ದು . ದೊಡ್ಡೋರು ಹತ್ರ ನನ್ನಂಥ ಸಣ್ಣೋರು ಎನ್ ಮಾತಾಡೋದು ಅಂತ, ಸರಿ ರಿ ನಾಳೆಯಿಂದ ಕಾಲ್ msg ಏನೂ ಮಾಡಲ್ಲ ಅಂತ ಹೇಳಿ ಕಾಲ್ ಕಟ್ ಮಾಡದೆ ನಾನೆ . ಒಂದ್ ವಾರ ಲಲೀತಕ್ಕ ಗೆ ಕಾಲ್ ಮಾಡಲಿಲ್ಲ msg ಮಾಡಲಿಲ್ಲ ಅಷ್ಟೇ ಯಾಕೆ ಭೇಟಿ ಸಹ ಆಗಲಿಲ್ಲ ನಾನು . ಒಂದ್ ವಾರದ ನಂತ್ರ ಅಕ್ಕ ನೆ ಕಾಲ್ ಮಾಡದ್ಲು , sorry ಅಪ್ಪಿ ಅಂತ ಅಳ್ತಿದ್ದಳು. ಇಟ್ಸ ಓಕೆ ಅಕ್ಕ ನಾನೇನು ಅನ್ಕೊಂಡಿಲ್ಲ ಅಳಬೇಡ ಅಂದೆ . ಒಂದ್ ಮಾತ್ ಹೇಳದೆ ಲಲೀತಕ್ಕ ಗೆ , ನೋಡ್ ಅಕ್ಕ ನಾನೇನು ರಾಮಕೃಷ್ಣ ಪರಮಹಂಸ , ಸ್ವಾಮಿ ವಿವೇಕಾನಂದ ಅಂತ ನನ್ ಬಗ್ಗೆ ನಾನ್ ಹೇಳ್ಕೋಳ್ಳಲ್ಲ , ವಯೋಸಹಜ ಆಶೆ ನನ್ನಲ್ಲೂ ಇವೆ ಆದ್ರೆ , ಬಾಯಿ ತುಂಬ ಅಣ್ಣ ತಮ್ಮ ಅಂತ ಕರಿಯೋ ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಟಿಯಿಂದ ನೋಡುವಷ್ಟು ಅಯೋಗ್ಯ ನಾನಲ್ಲ , ಅದು ಈ ಜನ್ಮದಲ್ಲಿ ಸಾದ್ಯನೂ ಇಲ್ಲ . ನಾವು ಹೇಗಿದ್ರೂ ನೋಡೋರ ದೃಷ್ಟಿ ಗೆ ಕೆಟ್ಟದಾಗೆ ಕಾಣತ್ತೆ , ನಿನ್ನಷ್ಟಕ್ಕ ನೀನಿರು ನನ್ನಷ್ಟಕ್ಕ ನಾನೀರ್ತೀನೀ ಅಂದು ಕಾಲ್ ಕಟ್ ಮಾಡದೆ . ಮನೆ ಬಿಟ್ಟು ಬಿಜಾಪುರ ಗೆ ಬಂದು 15 ವರ್ಷ ಆಯ್ತು , ಕುಟುಂಬ ದಿಂದ ದೂರ ಇರ್ತೀನಿ, ಇಲ್ಲಿ ಯಾರಾದರೂ ಪ್ರೀತಿಯಿಂದ ಮಾತಾಡ್ಸಿ ಒಂದ್ ತುತ್ತ ಅನ್ನ ಹಾಕದ್ರೇ ಅದೆ ನನಗೆ ಎಂಟನೆ ಅದ್ಭುತ, ಹೀಗಾಗೇ ಹೆಣ್ಣು ಗಂಡು ಸಣ್ಣವರು ದೊಡ್ಡವರು ಅನ್ನದೆ ಹಚ್ಕೊಂಡ ಮಾತಾಡ್ತಿನಿ. ಲಲೀತಕ್ಕ ಬಿಟ್ಟು ಹತ್ತಾರು ಜನ ಫ್ರೆಂಡ್ಸ್ ಇದ್ದಾರೆ ಅನೇಕ ಜನ ಹೆಣ್ಣು ಮಕ್ಳು ನನ್ನ ಅಣ್ಣ ತಮ್ಮ ಅಂತ ಹಚ್ಕೋಂದಿದಾರೇ, ಈವರೆಗೂ ಯಾರೂ ನನಗೆ ಬಟ್ಟ ಮಾಡಿರಲಿಲ್ಲ, ಹೀಗಾಗಿ ಸ್ವಲ್ಪ ಬೇಜಾರ್ ಆಯ್ತು . ಇದೆಲ್ಲ ಆದ ಒಂದ್ ವಾರಕ್ಕೆ
ಯಾವುದೊ ಒಂದ್ ಅರ್ಜೆಂಟ್ ಕೆಲಸದ ಮೇಲೆ ಊರಿಗೆ ಹೋಗಿದ್ದೆ, ಬರುವಾಗ ಮನಸಲ್ಲಿ ಒಂದ್ ನಿಶ್ಚಯ ಮಾಡದೆ. ಬಿಜಾಪುರ ಕ್ಕ ಹೊದ ತಕ್ಷಣ ನಂಬರ್ ಚೇಂಜ್ ಮಾಡಬೇಕು, ಅಪ್ಪನಿಗೆ ಮತ್ತೆ ಸವಿತಕ್ಕ ಗೆ ನಂಬರ್ ಕೊಟ್ಟು ಎಲ್ಲರಿಂದ ದೂರ ಇದ್ದ ಬಿಡಬೇಕು ಅಂತ. ಸಿಟ್ಟಿನಿಂದ ಅಲ್ಲ ನನ್ನಿಂದ ಇನ್ನೊಬ್ಬರಿಗೆ ಕಳಂಕ ಅಂಟಬಾರದು ಅಂತ ಅಷ್ಟೆ . ಬಿಜಾಪುರ ತಲುಪೋಕೇ ಇನ್ನೂ ಒಂದ್ ಹತ್ತ ನಿಮಿಷ ಇತ್ತುಆಗ ಇನ್ನೋರ್ವ ತಂಗಿ ದೀಪಾ ಕಾಲ್ ಮಾಡದ್ಲು, ಅಣ್ಣ ಡೆಲಿವರಿ ಗೆ ಅಂತ BLD ಹಾಸ್ಪಿಟಲ್ ಕ ಬಂದಿನಿ, HB ಕಡಿಮೆ ಇದೆ ಬ್ಲಡ್ ಅರೇಂಜ್ ಮಾಡಬೇಕು ಅಂತೀದಾರೆ , ಎನ್ ಮಾಡೋದು ಅಂತ ಗೊತ್ತಾಗ್ತಿಲ್ಲ, ನನಗಿಲ್ಲಿ ಯಾರೂ ಪರಿಚಯ ಇಲ್ಲ ಅಂದ್ಲು. ಸರಿ ನಾನ್ ಬರ್ತೀನಿ ಇರು ಅಂತ ಬಸ್ ಇಳಿದವನೆ ಸೀದಾ BLD ಹಾಸ್ಪಿಟಲ್ ಕಡೆ ಓಡಿದ್ದೇ , ಎನ್ ಮಾಡಕ್ಕ ಆಗಲ್ಲ ಮ್ಯಾನುಫ್ಯಾಕ್ಚರ ಡಿಫೇಕ್ಟ. ಆದ್ರೆ ಇದೆಲ್ಲ ಆಗಿ ಎರಡು ವರ್ಷ ಆಗ್ತಾ ಬಂತು ಲಲೀತಕ್ಕ ಗೆ

ಒಂದೆ ಒಂದ್ msg ಮಾಡಿಲ್ಲ .
ಸಿದ್ದು ತಾಂಬೆ
Comments
Post a Comment