ಸೆಕೆಂಡ್ ಹ್ಯಾಂಡ್ ಲವರ್
ಸಂಜೆ ಐದರ ಸಮಯ , ಉದ್ಯಾನ ವನದ ತುಂಬ ಹರಡಿದ ಕೆಂಪು ಕಿರಣಗಳ ನಡುವೆ ಹಾರಾಡುವ ಹಕ್ಕಿಗಳು, ಹಕ್ಕಿಗಳ ರೆಕ್ಕೆಗಳ ಲಯಕ್ಕೆ ತಾಳ ಹಾಕುವ ತಂಗಾಳಿ , ಇಂತಹ ಅಹ್ಲಾದಕರವಾದ ವಾತವರಣ ಇದ್ದರೂ ಕಲ್ಲು ಬೆಂಚಿನ ಮೇಲೆ ಒಂಟಿಯಾಗಿ ಕುಳಿತ ಅಭಿ ಯ ಮುಖದಲ್ಲಿ ಕಾರ್ಮೋಡದ ಕತ್ತಲು ಆವರಿಸಿತ್ತು . ರಮ್ಯ ಳಿಗಾಗಿ ಮತ್ತು ಅವಳು ಹೊತ್ತು ತರುವ ಸಂದೇಶಕ್ಕಾಗಿ ಕಾಯುತ್ತಿದ್ದ . ನಿನ್ನೆ ಅವಳಿಗೆ ಲವ್ ಪ್ರಪೋಸ್ ಮಾಡಿದ್ದ , ಅವಳು ನಾಳೆ ಯೋಚನೆ ಮಾಡಿ ಹೇಳ್ತೀನಿ ಅಂದಿದ್ಲು . ಓಡೋ ಕಾಲ ಜಾರಲೇಬೇಕು ಸಮಯ ಸರೀಯಲೇಬೇಕು ರಮ್ಯ ಬಂದ್ಲು . ಕುತೂಹಲ ದಲ್ಲಿ ಕೇಳಿದ ಅಭಿ ಏನ್ ಯೋಚನೆ ಮಾಡದೆ ??
ಹೂಂ , ಕಾಲ್ ಪಿಕ್ ಮಾಡೋಕೆ ಯಾಕ್ ಲೇಟು , ಮೆಸೇಜ್ ಗೆ ಯಾಕ್ ರಿಪ್ಲೈ ಮಾಡಿಲ್ಲ , ಸ್ಲೀವ್ ಲೆಸ್ಸ್ ಉಡಬೇಡ , ಹೇರ್ ಫ್ರೀ ಬಿಡಬೇಡ ಅಂತ ಸಣ್ಣ ಪುಟ್ಟ ವಿಷಯಕ್ಕೆ ಜಗಳ ಮಾಡಲ್ಲ ಅಂದ್ರೆ ಓಕೆ , ಇಲ್ಲ ಅಂದ್ರೆ ಇಲ್ಲ ಅಂದ್ಲು .
ಮುಗುಳ್ನಕ್ಕ ಅಭಿ ಹೇಳಿದ
ಅಯ್ಯೊ ಹುಚ್ಚಿ ಅದನೆಲ್ಲ ಅಬ್ಸರ್ವಮಾಡಿ ಅಷ್ಟಕ್ಕೇಲ್ಲ ತಲೆ ಕೆಡಿಸ್ಕೊಳ್ಳುವಷ್ಟು ಪೇಷನಸು ಟೈಮು ಎರಡೂ ನನಗಿಲ್ಲ . ನನಗ್ ಗೊತ್ತು ಈಗಾಗಲೇ ನೀನ್ ನೋಂದಿದಿಯ . ಮತ್ತೆ ನಿನ್ನ ನೋಯೀಸಲ್ಲ . ಏಳೇಳು ಜನ್ಮಕ್ಕೂ ನೀನ್ ಜೊತೆ ಇರ್ತೀನಿ ಅಂತ ಸಿನಿಮಾ ಡೈಲಾಗ್ ಎಲ್ಲ ಹೊಡಿಯಲ್ಲ ಬಟ್ ಸಿಕ್ಕಿರೋ ಈ ಜನ್ಮದಲ್ಲಿ ಏಳೇಳು ಜನ್ಮಕ್ಕ ಆಗುವಷ್ಟು ಪ್ರೀತಿ ಕೊಡ್ತೀನಿ ಸರೀನಾ .
ಏನ್ ಸರಿನೊ ಏನೊ . ಅವನೂ ಆವತ್ತು ಹೀಗೆ ಅಂದಿದ್ದ , ಎಂದು ಮೆಲು ಧ್ವನಿಯಲ್ಲಿ ಮಾತು ಮುಂದುವರೆಸಿದಳು ರಮ್ಯ .
ಮದ್ಯಮ ವರ್ಗದ ಕುಟುಂಬ ದಿಂದ ಬಂದ ಹುಡುಗಿ ನಾನು. ಕಾಲೇಜ್ ನಲ್ಲಿ ಬುದ್ದಿವಂತೆ, ಅಂದ ಚಂದದಲ್ಲಿ ಅಷ್ಟಕ್ಕಷ್ಟೇ . ಒಳ್ಳೆ ಮನಸಿತ್ತು , ಎಲ್ಲ ಹುಡಿಗಿಯರಿಗೆ ಇರೊ ಹಾಗೆ ನನಗೂ ಸಣ್ಣ ಪುಟ್ಟ ಆಶೆಗಳಿದ್ವು. ಯಾರದ್ರೂ ಬಂದು ಪ್ರಪೋಸ್ ಮಾಡಬೇಕು, ಇಲ್ಲ ಇಲ್ಲ ಅಂದು ಒಪ್ಕೋಬೇಕು , ಹುಚ್ಚಿ ಥರ ಆತನನ್ನ ಪ್ರೀತಿಸಬೇಕು , ಮನೆಯಲ್ಲಿ ಓಪ್ಸಿ ಅವನ ಜೊತೆ ಸಪ್ತಪದಿ ತುಳಿಬೇಕು , ಏಕ್ಸೇಟ್ರ ಏಕ್ಸೇಟ್ರ . ಆದ್ರೆ ಒಳಗಿರೋ ಒಳ್ಳೆ ಮನಸು ಯಾರಿಗೆ ಕಾಣ್ಸತ್ತೆ ಹೇಳು. ಅವರಿಗೆ ಬೇಕಾಗಿದ್ದು ವನಪು ವಯ್ಯಾರ. ಅವರಿಗೆ ಕಾಣಿಸೋದು ನನ್ ಹತ್ರ ಇರಲಿಲ್ಲ, ನನ್ ಹತ್ರ ಇರೋದು ಅವರಿಗೆ ಕಾಣಿಸಲಿಲ್ಲ , ಸೊ ಮಾಸ್ಟರ ಡಿಗ್ರಿ ವರೆಗೂ ಓದಿದರೂ ಒಬ್ಬೆ ಒಬ್ಬ ಹುಡುಗನನ್ನ ನಾನು ಇಷ್ಟ ಪಡೋದು ದೂರದ ಮಾತು ಸಲುಗೆಯಿಂದ ಮಾತನಾಡಿಸೀರಲೀಲ್ಲ ಸಹಿತ . ನನ್ನ ಓದು ನಾನು ಕೆಲ ನನ್ನ ಗೆಳತಿಯರು ಅಷ್ಟೇ ನನ್ನ ಪ್ರಪಂಚ.
ಓದು ಮುಗಿಸಿ ಕೆಲಸಕ್ಕೆ ಸೇರ್ಕೊಂಡೆ . ಹೊಸ ಜಾಗ ಹೊಸ ಜನ ಹೊಸ ವಾತವರಣ . ಮೊದಲೇ ಸ್ವಲ್ಪ ಸಂಕೋಚ ಸ್ವಭಾವದವಳು ನಾನು, ಯಾರ್ ಜೊತೆ ನೂ ಹೆಚ್ಚು ಮಾತಾಡುತ್ತಿರಲಿಲ್ಲ, ಹೀಗಿರುವಾಗ ಪರಿಚಯ ಆದವನು ಅದೆ ಅಫೀಸ್ ನಲ್ಲಿ ಕೇಲಸ ಮಾಡುತ್ತಿದ್ದ ನನ್ನ ಸೀನಿಯರ್ ರಂಜನ್. ಅವರು ಸರಿ ಇಲ್ಲ ಇವರು ಸರಿ ಇಲ್ಲ , ಅವರ ಜೊತೆ ಮಾತಾಡಬೇಡ ಇವರ ಜೊತೆ ಮಾತಾಡ್ಬೇಡ, ಮೊದಲೇ ನೀನು ಮುಗ್ದ ಹುಡುಗಿ ನಿನಗ ಏನೂ ಗೊತ್ತಾಗಲ್ಲ ಅಂತಿದ್ದ. ದಿನ ಕಳಿತಿದ್ದ ಹಾಗೆ ತುಂಬ ಹತ್ತಿರವಾದ. ನಾನ್ ಖುಷಿಯಲ್ಲಿದ್ರೆ ಏನ್ ಸಮಾಚಾರ ಫುಲ್ ಮಿಂಚತಿದಿಯಾ ಅಂತಿದ್ದ , ನಾನ್ ಡಲ್ ಆಗಿದ್ರೆ , ಯಾಕೆ ಏನಾಯ್ತು ? ಯಾರಾದ್ರೂ ಏನರೇ ಅಂದ್ರಾ ? ಅಂತಿದ್ದ . ಆಲಮೋಸ್ಟ ಎಲ್ಲ ಹೆಂಗಸರಿಗೆ ಅದೊಂದು ಕೆಟ್ಟ ಚಾಳಿ. ಏನು ಅಂದ್ರೆ ಕೆಲವೊಮ್ಮೆ ಮನೇಲಿ ಅಪ್ಪ ಅಮ್ಮ ನೆ ಸಿಟ್ಟಲ್ಲಿ ಹೊಗೆ ಬಾರೆ ಅಂತ ಏಕ್ ವಚನದಲ್ಲಿ ಕರೆದ್ರೆ ಸೀಟ್ ಮಾಡ್ಕೋತೀವಿ . ಆದ್ರೆ ಒಬ್ಬ ಸಮ ವಯಸ್ಸಿನ ಗಂಡಸು ಸಲುಗೆಯಿಂದ ಏಕ್ ವಚನದಲ್ಲಿ ಮಾತಾಡಿಸಿದರೆ ಹಿರಿ ಹಿರಿ ಹೀಗ್ತೀವೀ. ಅವನೂ ನನ್ನನ್ನ ಹಾಗೆ ಏಕ ವಚನದಲ್ಲೇ ಕರೀತಿದ್ದ, ಕೆಲವೊಮ್ಮೆ ಆತ ಸೀಟ್ ಮಾಡ್ಕೊಂಡು ಸಲುಗೆಯಿಂದ ಬೈತಿದ್ರೆ, ಆ ಮಾತುಗಳ ಕೇಳೋದರಲ್ಲೇ ಒಂದ್ ಹಿತ. ಒಂದ್ ಆರು ತಿಂಗಳಲ್ಲೇ ಆರು ವರ್ಷದ ಹಳೆ ಫ್ರೆಂಡ್ಸ್ ಥರ ಮೂವ್ ಮಾಡ್ತಿದ್ದ .
ಆದ್ರೆ , , , , , , ಹೋಗ್ಲಿ ಬಿಡು ಅದು ಮುಗಿದು ಹೊದ ಅದ್ಯಾಯ . ಹಳೆಯ ಗಾಯದ ಥರ ಕೆರೆದಷ್ಟು ದೊಡ್ಡದಾಗುತ್ತೇ, ಹಿಂಸೆ ಅನ್ಸತ್ತೆ . . . . . . . . ಎಂದು ಮೌನವಾದಳು ರಮ್ಯ .
ಅಲ್ಲ , ಅಷ್ಟೋಂದ್ ಕ್ಲೋಜ್ ಆಗೀದ್ದೋರು ಏನಾಯ್ತು ಸಡನ್ ಆಗಿ . ನೀನ್ ಏನಾದ್ರೂ ಏಕ್ಸಪೇಕ್ಟ ಮಾಡದಿಯ ಅವನ ಕಡೆಯಿಂದ ? ಎಂದು ಪ್ರಶ್ನಿಸಿದ ಅಭಿ .
ಅವನ ಮಕಕಿಷ್ಟು , ಎಲ್ಲರ ಲವ್ ಸ್ಟೋರಿ ಲಿ ಹುಡುಗ ಹುಡುಗಿಗೆ ಖರ್ಚ್ ಮಾಡ್ತಾನೆ . ಆದ್ರೆ ನನ್ ಸ್ಟೋರಿ ಲಿ ಎಲ್ಲ ಉಲ್ಟಾ . ರೆಸ್ಟೋರೆಂಟ್ ಗೆ ಹೋದ್ರೆ ಬಿಲ್ ನಾನ್ ಕೊಟ್ಟಿದೀನಿ , ಸಿನಮಾ ಕ ಹೋದ್ರೆ ಟಿಕೇಟ್ ನಾನ್ ತೆಗಿಸಿದಿನಿ, ವಾಚ್ ಕೋಡ್ಸಿದಿನಿ , ಮೊಬೈಲ್ ಕೋಡ್ಸಿದಿನಿ , ಬಟ್ಟೆ ಶೂ ಸಹಿತ. ಆತನ ಅಂಡರ್ ವೇರ್ ಒಂದ್ ಬಿಟ್ಟು. ಸಾಲದಕ್ಕೆ ಆಗಾಗ ಕಾಸೂ ಕೇಳ್ತಿದ್ದ . ಇಲ್ಲ ಅನ್ನೋಕ ಆಗ್ತಿರಲಿಲ್ಲ . ಕೊಟ್ಟಿಲ್ಲ ಅಂದ್ರೆ , ಎಲ್ಲಿ ಸೀಟ್ ಮಾಡ್ಕೊಂಡು ನನ್ ಜೊತೆ ಮಾತಾಡೋದೆ ಬಿಡ್ತಾನೇನೋ ಅನ್ನೊ ಭಯ, ಕೊಡ್ತಿದ್ದೆ. ಯಾಕಂದ್ರೆ ಅಷ್ಟು ಅಡಿಕ್ಟ್ ಆಗಿ ಬಿಟ್ಟಿದ್ದೆ ಆತನ ಮಾತಿಗೆ . ಒಂದಿಷ್ಟ್ ವಾಪಸ್ ಕೊಟ್ಟಿದಾನೆ ಕೆಲವೊಂದಿಷ್ಟು ಮನ್ನಾ ಆಗಿದೆ. ಅವತ್ತು ರವಿವಾರ ರಜೆ ಮನೇಲೀದ್ದೇ . ಮದ್ಯಾಹ್ನ ಕಾಲ್ ಮಾಡಿದ . ನಿನ್ನನ್ನ ನೋಡಬೇಕು ಅನಿಸ್ತಿದೆ , ನೀನ್ ಜೊತೆ ಮಾತಾಡಬೇಕು ಅನಿಸ್ತಿದೆ ಸೀಗ್ತೀಯ ಅಂದ . ಸರಿ ಯಾವ್ ಪಾರ್ಕು ಅಂದೆ . ಪಾರ್ಕ್ ನಲ್ಲಿ ಬೇಡ ಸೆಕ್ಯುರಿಟಿ ಕಾಟ ಮಾತಾಡೋಕ ಆಗಲ್ಲ , ನಮ್ ಫ್ರೆಂಡ್ ದು ಲಾಡ್ಜ್ ಇದೆ ನೀನ್ ಹೂಂ ಅಂದ್ರೆ ಒಂದ್ ರೂಮ್ ಬುಕ್ ಮಾಡ್ತಿನಿ ಅಂದ . ಅವನೇನು ನನ್ನ ಹನಿಮೂನ್ ಕ ಕರೀತೀಲ್ವಲ್ಲ ಮಾತಾಡೋಕೆ ಸೊ ಹೂಂ ಅಂದೆ .
ಲಾಡ್ಜ್ ರೂಮ್ , ಮಂದ ಬೆಳಕು , ಬೇಕಿದ್ದಷ್ಟು ಹತ್ತಿರ , ಸಾಕಾಗುವಷ್ಟು ಏಕಾಂತ . ಸ್ಟುಪಿಡ್ , ಮಾತಾಡೋಣ ಬಾ ಅಂತ ಕರೆದು ಮೈ ಮೇಲೆ ಕೈ ಹಾಕೋಕ ಬಂದ . ಸ್ವಲ್ಪ ಮುಜುಗರ ಅನಿಸ್ತು ಸೀಟ್ ಏನ್ ಬರಲಿಲ್ಲ . ಕೂಲ್ ಆಗೆ ಹೇಳದೆ , ಯಾಕಿಷ್ಟು ಅವಸರ ಮದುವೆ ಆದ ಮೇಲೆ ಎಲ್ಲ ಇದ್ದಿದ್ದೇ ಅಂದೆ .
ಮದುವೆ ನಾ ? ಯಾರಗೇ ? ಅಂದ .
ಮತ್ಯಾರ ಗೆ ನನಗೆ ನಿನಗೆ ಅಂದೆ .
sorry ಅದು ಒಂದ್ ಪ್ರಾಬ್ಲಮ್ ಆಗಿದೆ ಮೊನ್ನೆ ಮನೇಲಿ ಅಂತ , ಮಾತು ತಡವರಿಸಿದ
ಏನದು ಅಂದೆ .
ಮೊನ್ನೆ ನಿನ್ನ ವಿಷಯ ಪ್ರಸ್ತಾಪ ಮಾಡದೆ ಮನೇಲಿ. ನೋಡೋಣ ಫೋಟೋ ಇದ್ರೆ ತೋರ್ಸು ಅಂದ್ರು ಮಮ್ಮಿ . ಹೇಗೂ ಮೊಬೈಲ್ ನಲ್ಲಿ ನೀನ್ ಫೋಟೋ ಇತ್ತಲ್ಲ ತೋರಿಸಿದೆ .
ಸ್ವಲ್ಪ ಕಪ್ಪಗಿದಾಳೆ ಹಡುಗಿ, ಅಷ್ಟೋಂದ್ ಲಕ್ಷಣ ನೂ ಇಲ್ಲ ಮುಖದ ಮೇಲೆ . ಬೇಡ ಬೇರೆ ನೋಡೋಣ ಅಂದ್ರು ಮಮ್ಮಿ , ಅಂದ .
ಬಿಪಿ ಮಷಿನ್ ನಲ್ಲಿರೋ ಪಾದರಸದ ಥರ ಒಮ್ಮೆ ಸರ್ರ ಅಂತ ಸೀಟ್ ತಲೆಗ ಏರ್ತು . ಶುರು ಮಾಡದೆ ಸಂಸ್ಕೃತ. ಇದೆಲ್ಲ ಯಾಕ್ ನನಗೆ ಹೇಳಿಲ್ಲ? , ಮನೇಲಿ ಬೇಡ ಅಂದ ಮೇಲೂ ಯಾಕ್ ನನಗೆ ಲಾಡ್ಜ್ ಗೆ ಕರೇಸ್ದೇ ? ಹೇಗೂ ಸಿಕ್ಕಿದಾಳೆ ಬಕ್ರ ಉಂಡೆದ್ದು ಹೋಗೋಣ ಅಂತಾನಾ ? ಮಜಾ ಮಾಡೋಕೆ ಕಪ್ಪಗಿದ್ರೂ ನಡಿಯತ್ತೆ , ಕುಳ್ಳಗಿದ್ರೂ ನಡಿಯತ್ತೆ , ಆದ್ರೆ ಮದುವೆಗೆ ತೆಳ್ಳಗೆ ಬೆಳ್ಳಗೆ ಇರೊ ಸುಂದರಿನೇ ಬೇಕು ಅಲಾ ? ಥೂ ನಿಮ್ ಜನ್ಮಕ್ಕ ಇಷ್ಟು ಅಂತ ಉಗದು ಎದ್ದು ಹೊರಗಡೆ ಬರ್ತಿದ್ದೆ . . . . . . . . . . .
ಮುಂದುವರೆಯುತ್ತದೆ . . . ನಿರೀಕ್ಷಿಸಿ . . . .
ಸಿದ್ದು ತಾಂಬೆ
Comments
Post a Comment