ಗಂಡ ಮತ್ತು ಬಾಯ್ ಫ್ರೆಂಡ್ ಗೆ ಇರೊ ವ್ಯತ್ಯಾಸ ?
ಒಬ್ಬಳು ಹುಡುಗಿ ಒಬ್ಬ ಹುಡುಗನನ್ನ ಮದುವೆ ಆಗೋವಾಗ ಸಾಮನ್ಯವಾಗಿ ಒಂದಿಷ್ಟು ಅಂಶಗಳ ಬಗ್ಗೆ ವಿಚಾರಿಸ್ತಾರೆ . ಮೊದಲನೆಯದು ಜಾತಿ ಒಂದೆ ಇರಬೇಕು , ಇದಾದ ಮೇಲೆ ಮುಂದಿನ ಪ್ರಕ್ರಿಯೆ ಶುರು . ಇಲ್ಲ ಅಂದ್ರೆ ಮತ್ತೆ ಹೊಸ ಹುಡುಕಾಟ . ಜಾತಿ ಸರಿ ಹೊಂದಿತು ಅಂತ ಇಟ್ಕೊಳ್ಳಿ , ಹುಡುಗ ಎಷ್ಟ್ ಕಲ್ತೀದಾನೇ ? ಎನ್ ಕೆಲ್ಸ ಮಾಡ್ತಾನೆ ? ಸಂಬಳ ಎಷ್ಟು ? ಇರೊ ಮನೆ ಸ್ವಂತ ನಾ ಬಾಡಿಗೆ ನಾ ? ಚೂರು ಪಾರು ಆಸ್ತಿ ಇದೆಯಾ ಇಲ್ವಾ ? ಆಸ್ತಿ ಇದ್ರೂ ಅದರಲ್ಲಿ ಪಾಲುದಾರರು (ಸಹೋದರ ಸಹೋದರಿಯರು) ಎಷ್ಟ್ ಜನ ? ಇವುಗಳಲ್ಲಿ ಹುಡುಗ ಓಕೆ ಅಂತ ಅನಿಸಿದರೆ ಸಾಕು . ಅವನು ಒಳ್ಳೆಯವನಾ ? ಕೆಟ್ಟವನಾ ? ಕಪ್ಪಗಿದಾನಾ ? ಕುಳ್ಳಗಿದಾನಾ ? ಅಷ್ಟೋಂದ್ ಲೆಕ್ಕಕ್ಕ ಬರಲ್ಲ, ತಕ್ಕಮಟ್ಟಿಗೆ ಲಕ್ಷಣವಾಗಿದ್ದು ನೋಡೋಕೆ ಅರೋಗ್ಯಪೂರ್ಣವಾದ ಗಂಡಸು ಅಂತ ಅನಿಸಿದರೆ ಸಾಕು ನಿಖಾ ಪಕ್ಕ . ಇಷ್ಟೇ ಅಲಾ ಗಂಡು ಹುಡುಕೋ ಪ್ರಕ್ರಿಯೆ ?.
ಓಕೆ ಇದರಲ್ಲಿ ಯಾವುದೆ ತಪ್ಪಿಲ್ಲ . ಒಬ್ಬ ಮಗಳನ್ನ ಮುದ್ದಿನಿಂದ ಸಾಕಿ ಇನ್ನೊಂದ್ ಮನೆಗೆ ಜೀವನ ಸವೀಯೋಕೇ ಕಳೆಸುವಾಗ ಪ್ರತಿ ತಂದೆ ತಾಯಂದಿರು ಮತ್ತು ಮಗಳು ತಗೆದುಕೊಳ್ಳುವಂತ ಜಾಣ್ಮೆಯ ಮತ್ತು ಜವಾಬ್ದಾರಿಯುತ ನಿರ್ಧಾರಗಳು ಇವು. ಆದರೆ ನನಗೆ ಕನ್ಫೂಜನ್ ಮತ್ತು ಕ್ಯೂರಿಯಾಸಿಟಿ ಇರೋದು ಈ ಪ್ರೀತ್ಸೊ ಹುಡುಗ ಹುಡುಗಿಯರು , ಒಬ್ಬರನೊಬ್ಬರು ಒಪ್ಪಿಕೊಳ್ಳುವ ಪ್ರಕ್ರಿಯೆಯಲ್ಲಿ. ಹೌದು , ಒಬ್ಬ ಹುಡುಗ ಒಬ್ಬಳು ಹುಡುಗಿಯನ್ನ ಪ್ರಪೋಸ್ ಮಾಡಿದಾಗ , ಅವಳು ಮೇಲಿನ ಈ ಯಾವ ಪ್ರಶ್ನೆಗಳನ್ನೂ ಕೇಳಲ್ಲ . ಒಂದು , sorry ನಾನ್ ಆ ಥರ ಹುಡುಗಿ ಅಲ್ಲ ಅನಬೇಕು. ಇಲ್ಲ, ನಿನ್ನ ಬಗ್ಗೆ ನನಗೆ ಆ ಥರ ಫೀಲಿಂಗ್ಸ್ ಇಲ್ಲ we are just friends ಅಂತ ಅನ್ಬೇಕು . ಕೊನೆದಾಗಿ, ಸಡನ್ ಆಗಿ ಕೇಳ್ದ್ರೆ ಹೆಂಗೆ ? ನನಗೆ ಯೋಚನೆ ಮಡೋಕೆ ಟೈಮ್ ಬೇಕು ಅಂತ ಹೇಳ್ತಾಳೆ ಅಷ್ಟೇ . ಈ ಬರಹವನ್ನ ಓದುತ್ತಿರುವವರಲ್ಲಿ ತುಂಬ ಜನ ಪ್ರೀತಿಯಲ್ಲಿ ಬಿದ್ದಿರಬಹುದು ಅಥವ ಯಾರನ್ನಾದರೂ ಪ್ರಪೋಸ್ ಮಾಡಿದವರೂ ಇರಬಹುದು . ಫ್ರ್ಯಾಂಕ್ ಆಗಿ ಹೇಳಿ , ಜಗತ್ತಿನ ಯವುದಾದರೂ ಹುಡುಗಿ ಒಬ್ಬ ಹುಡುಗ ತನಗೆ ಪ್ರಪೋಸ್ ಮಾಡಿದಾಗ , ಇರು ನಮ್ ಅಪ್ಪ ಅಮ್ಮ ಗೆ ಕೇಳಿ ಹೇಳ್ತೀನಿ ಅಥವ ಜಾತಕ ತೆಗೆಸಿ ನೋಡ್ತೀನಿ ಅಂತ ಅಂದಿದಾಳ ? ಇಲ್ಲ ಚಾನ್ಸೇ ಇಲ್ಲ , ಅದೆ ಯಾಕೆ ?
ಲಾಜಿಕ್ ಆಗಿ ಯೋಚನೆ ಮಾಡಿದಾಗ . ಮದುವೆ ವಿಷಯದಲ್ಲಿ ಅಷ್ಟೊಂದು ಎಚ್ಚರ ವಹಿಸೋರು ಪ್ರೀತಿ ವಿಷಯದಲ್ಲಿ ಇಲ್ಲ ಅಂದ್ರೆ . ಮದುವೆ ಗಂಡ ಹೆಂಡತಿ ಅನ್ನೊ ಸಂಭಂಧ ಜೀವನಪರ್ಯಂತ ಇರೋವಂತಹದ್ದು , ಈ ಪ್ರೀತಿ ಪ್ರೇಮಿ ಅನ್ನೊ ಸಂಭಂಧ ಅಲ್ಪಾಯುಷಿ ಅಂತನೆ ಅವರ ಲೆಕ್ಕಾಚಾರ ಅಲ್ವಾ ?
ಡೀಪ್ ಆಗಿ ಲವ್ ಮಾಡ್ತಿರೋರು ಇದನ್ನ ಓದಿದರೆ , ನಿಮಗೆ ಸಿಟ್ ಬರಬಹುದು ಫ್ರೆಂಡ್ಸ್ , ಆದ್ರೆ ನಾನ್ ಹೇಳ್ತಿರೋದು ಸುಳ್ಳಲ್ಲ . ಮದುವೆಯಾದರೆ ಇವನನ್ನೇ ಅಂತ ಪ್ರೀತ್ಸೊರು ನೂರಕ್ಕೆ ಒಬ್ರು ಇಬ್ರೂ ಅಷ್ಟೇ . ಉಳಿದ 98% ಎಲ್ಲ ಟೈಮ್ ಪಾಸ್ ಗಿರಾಕಿಗಳೇ . ನೋಡದೆ, ಕೇಳದೆ , ಅನುಭವಿಸದೆ ಯಾವುದನ್ನೂ ನಾನು ಅಂದಾಜಿಸಿ ಬರೀಯೋದೀಲ್ಲ. ಒಬ್ಬ ನನ್ನ ಆತ್ಮೀಯ ಸ್ನೇಹಿತನಿದ್ದ . ಅವನ ಹುಡುಗಿ ಮಾಡಿದ ಮೋಸದ ಬಗ್ಗೆ ಹೇಳ್ತಿದ್ದ. "ನನಗೆ ಅಕಿ ಏನೆ ಅಂದ್ರೂ ಅಷ್ಟ್ ತ್ರಾಸ್ ಆಗ್ತಿರಲಿಲ್ಲ ರಿ ಸಿದ್ದು, ನಿಮ್ ಜಾತಿಯವರು ನಮ್ ಮನಿಗಿ ಬಂದ್ರ ಪ್ಲೇಟ್ ಹೊರಗ್ ಇಡ್ತಾರ ಹೀಗಿರುವಾಗ ಮದುವೀಗಿ ಹೆಂಗ ಓಪ್ಕೋತಾರ ಅಂತ ನಮ್ ಜಾತಿ ಬಗ್ಗೆ ಕೀಳಾಗಿ ಮಾತಾಡ್ತಾಳ ರಿ" ಅಂತ ಬಿಕ್ಕಿ ಬಿಕ್ಕಿ ಅಳ್ತಿದ್ದ. ನಾನ್ ಒಂದ್ ಮಾತ್ ಹೇಳದೆ ಆತನಿಗೆ. ನೆಲ ಒಂದೆ ಕೇರಿ ಶಿವಾಲಯಕ್ಕೆ, ಜಲ ಒಂದೆ ಸ್ನಾನ ಶೌಚಕ್ಕೆ. ಜಾತಿ ಬಗ್ಗೆ ಅಷ್ಟ ಹಚ್ಚೀಕೋಬೇಡ. ನೀನು ಪ್ರಪೋಸ್ ಮಾಡ್ದಾಗ ಅಕಿ ಜಾತಿ ಕೇಳಿಲ್ಲ , ನೀನು ಆಕೆಗೆ ಬಟ್ಟೆ ಪುಸ್ತಕ ಮೊಬೈಲ್ ಕೋಡಿಸುವಾಗ ಜಾತಿ ಕೇಳಿಲ್ಲ , ಅನುವು ಆಪತ್ತಿಗೇ ದುಡ್ಡು ಕೊಟ್ಟಾಗ ಜಾತಿ ಕೇಳಿಲ್ಲ , ವಾರಗಟ್ಲೆ ನಿನ್ ಜೊತೆ ಟೂರ್ ಮಾಡುವಾಗ ಜಾತಿ ಕೇಳಿಲ್ಲ , ಅಷ್ಟೇ ಯಾಕೆ ನೀನು ಲಾಡ್ಜ್ ಗೆ ಕರೆದಾಗ ಬಂದು ನಿನ್ ಪಕ್ಕ ಮಲ್ಕೊಳ್ಳುವಾಗ ಜಾತಿ ಕೇಳಿಲ್ಲ. ಮದುವೆ ಆಗೋಣ ಬಾ ಅಂದಾಗ ನಿನ್ ಜಾತಿ ಬಗ್ಗೆ ಕೀಳಾಗಿ ಮಾತಾಡ್ತಾಳೆ ಅಂದ್ರೆ, ಇದೆಲ್ಲವುಗಳ ಆಚೆ ಆಕೆಗೆ ನಿನ್ ರಿಲೇಶನ್ಷಿಪ ಬೇಡ ಅನ್ಸಿದೆ. ನಿನ್ನ ಸಂಭಂಧ ಕಡಕೊಳ್ಳಕೆ ಅದೊಂದು ನೆಪ ಅಷ್ಟೇ ಆಕೆಗೆ . ಆಕೆ ಆಶೆ ಬಿಟ್ಬಿಡು ನಿನ್ ಲೈಫ್ ನಿನ್ ನೋಡ್ಕೋ ಅಂದೆ . ಮುಂದೆ ಸ್ವಲ್ಪ ದಿನದಲ್ಲೇ ಆತ ತನ್ನ ಅಕ್ಕನ ಮಗಳ ಜೊತೆ ಎಂಗೇಜಮೆಂಟ್ ಮಾಡ್ಕೊಂಡ .
ಇದೆಲ್ಲ ಯಾಕ್ ಹೇಳ್ತಿದೀನಿ ಅಂದ್ರೆ. ನೀವೂ ಪ್ರೀತಿಸಿ ತಪ್ಪಲ್ಲ . ಆದ್ರೆ ಆಕೆ ನಿಮ್ಮ ಪ್ರೀತಿಗೆ ಎಷ್ಟು ಅರ್ಹಳು ? ಮತ್ತು ಆಕೆ ನಿಮ್ಮ ಪ್ರೀತಿಯನ್ನ ಕೊನೆವರೆಗೂ ಕಾಪಾಡ್ತಾಳ ? ಅಂತ ಯೋಚಿಸಿ ಮುಂದುವರೆಯಿರಿ. ಯಾಕೆ ಅಂತ ಅಂದ್ರೆ. ಪ್ರೀತಿ ಅಂದ್ರೆ ಬರಿ ಬರ್ತಡೆಗೊಂದು ಗಿಫ್ಟು , ವಾರಕ್ಕೊಂದು ಸಿನಿಮಾ , ಬೋರಾದಾಗ ಟೂರು ಅಷ್ಟೇ ಅಲ್ಲ . ಪ್ರೀತಿ ಅಂದ್ರೆ ಜೀವನದುದ್ದಕ್ಕೂ ಸಾಗುವ ನಿರಂತರ ನಡಿಗೆ. ಅದು ಅರ್ದದಲ್ಲೇ ನಿಂತ್ರೆ ಅದಕ ಪ್ರೀತಿ ಅನ್ನಲ್ಲ . ಇದಕ್ಕಿಂತ ಹೆಚ್ಚಿಗೆ ನಾನ್ ಎನ್ ಹೇಳಲಿ ಮುಂದಕ್ಕೆ ನಿಮಗೆ ಗೊತ್ತಾಗ್ತದೆ .
ಸತ್ಯ ಪ್ರೀತಿಗೆ ಶುಭವಾಗಲಿ ___ ಸಿದ್ದು . ತಾಂಬೆ .
ಪ್ರೀತಿಸಿದ್ದೆ ಆದರೆ ಆ ಜೀವವನ್ನು ಕೊನೆಯ ತನಕವೂ ಪ್ರೀತಿಸಬೇಕು....ಇಲ್ಲವಾದರೆ ಕಣ್ಣೆತ್ತಿಯೂ ನೋಡಬಾರದು......ಪ್ರೀತಿಗೆ ಸಾವಿಲ್ಲಾ.......ಪ್ರೀತಿ ಕುರುಡು ಅಲ್ಲಾ......ನಕಲಿ ಪ್ರೇಮಿಗಳೇ ಪ್ರೀತಿ ಸುಳ್ಳು, ಕುರುಡು ಎಂದು ಹಲುಬುತ್ತಾರೆ ಅಷ್ಟೇ......
ReplyDeleteWow super brother
ReplyDelete