ಪಾರ್ಟ್ 3 (S H Lover)

ಏನೊ ಅಭಿ ಅವಳ ಕಥೆ ಹೇಳ್ತೀನಿ ಅಂತ ಹೇಳಿದ್ದೆ , ಒಂದ್ ವಾರ ಮೇಲಾಯ್ತು ಪತ್ತೇನೇ ಇಲ್ಲ ಅಷ್ಟೋಂದ್ ಬೀಜೀ ನಾ ಅಂದ್ಲು ರಮ್ಯ .
ನಾನೇನ್ ಫ್ರೀ ನೆ  ಅದಿನಿ ರಮ್ಯ, ಬಟ್ ಲೋಫರ್ ನನ್ಮಗ ರೈಟರ್ ಸಿಗ್ತಿಲ್ಲ ಅಂದ ಅಭಿ.
ಹೌದಾ,  ಇರ್ಲಿ ಬಿಡು ಪಾಪ ಏನೊ ಕೆಲ್ಸ ಇರ್ಬೋದು .
ಅವನಿಗೇನ ಅಂಥ ಘನಂದಾರಿ ಕೆಲ್ಸ ಇರಲ್ಲ . ಮಿಡ್ಲ್ ಕ್ಲಾಸ್ ಫ್ಯಾಮಿಲಿ ಹುಡುಗ ಸಾವಿರ ಆಶೆ , ಸಾಕೋಕೆ ದುಡ್ಡ ಇರಲ್ಲ . ಹೇಂಗೂ ಐಪಿಎಲ್ ಶುರು ಆಗಿದೆ , ಸಾವಿರ ಎರಡ್ ಸಾವಿರ ಆಶೇಗೇ ಬೆಟ್ಟಿಂಗ್ ಆಡ್ತಿರಬಹುದು. 
ಹೌದಾ, ರೈಟರ್ ಅಂತೀಯ ? ಬೆಟ್ಟಿಂಗ್ ಎಲ್ಲ ಆಡ್ತಾರ  ಎಂದಳು ರಮ್ಯ ಆಶ್ಚರ್ಯದಿಂದ.
ಈ ನೈಂಟಿ ಪರ್ಸೆಂಟ್ ವೇದಾಂತಿಗಳದೆಲ್ಲ ಇದೆ ಕಥೆ , ನನ್ ಮಕ್ಳು ಹೇಳೋದ್ ಪುರಾಣ ತಿನ್ನೋದ ಬದನೆಕಾಯಿ. ಏನರ ಹಾಳಾಗಿ ಹೋಗ್ಲಿ ಬಿಡು , ಇವತ್ತು ಉಗದು ಕರ್ಕೊಂಡ್ ಬಂದ್ ಕೂಡ್ಸಿಸಿದಿನಿ, ಇವತ್ತ್ ಹೇಳಿ ಮುಗಿಸ್ತಿನಿ ಆಯ್ತಾ .
ಹೂಂ ಸರಿ .
ಅವಳ ಹೆಸರು ಪ್ರಿಯಾ ಅಂತ , ಕೈ ಕಾಲು , , , , ,
ಅಯ್ಯೊ ದೇವರೆ ಅದು ಅಗಲೇ ಹೇಳಿದಿಯ ಮುಂದಕ್ಕ ಹೇಳು .
ಹೌದಾ ?? ಸರಿ . ನಾವೇನು ಒಂದೆ ಊರಲ್ಲಿ ಹುಟ್ಟಿದವರಲ್ಲ , ಒಂದೆ ಓಣಿಲಿ ಆಡಿ ಬೆಳೆದವರಲ್ಲ, ಒಂದೆ ಕಾಲೇಜ್ ನಲ್ಲಿ ಓದಿದವರಲ್ಲ , ಅಷ್ಟೇ ಯಾಕೆ ಒಂದೆ ಆಫೀಸ್ ಲ್ಲಿ ಕೆಲ್ಸ ಮಾಡದವರೂ ಅಲ್ಲ . ಅವಳ ಪರಿಚಯ ಆಗಿದ್ದು ರಾಂಗ್ ನಂಬರ್ ಕಾಲ್ ಮುಖಾಂತರ. ಇತ್ತೀಚಿನ 90% ಹುಡುಗ ಹುಡುಗಿಯರ ನಡುವೆ ನಡೆಯುವಂತೆ ನಮ್ಮ ನಡುವೆ ಸಹ ಒಂದು ನಾಟಕೀಯ ಬೆಳವಣಿಗೆ ನಡೆದಿತ್ತು. ಮೊದ ಮೊದಲು ಹಾಯ್ ಬಾಯ್ ಯಿಂದ ಶುರುವಾದ ಫೋನ್ ಸಂಬಾಷಣೆ, ಊಟಾ ತಿಂಡಿ ವಿಚಾರಿಸಿ , ಓದು ಉದ್ಯೋಗದ ಬಗ್ಗೆ ಅರಿತು , ಒಬ್ಬರ ಮುಖ ಒಬ್ಬರು ನೋಡುವ ಮುಂಚೆ ನೆ ಆಕೆಯಿಂದ ಪ್ರೇಮನಿವೇದನೆ  ನನ್ನಿಂದ ಒಪ್ಪಿಗೆ ಗೆ ಬಂದು ನಿಂತಿತ್ತು . ಇಬ್ಬರ ಊರು ಬೇರೆ ಬೇರೆ , ಆದ್ರೆ ನಾನು ಡ್ಯೂಟಿ ಮಾಡ್ತಿದ್ದ ಊರಿಗೆ ಆಕೆ ಕಾಲೇಜ್ ಗೆ ಬರ್ತಿದ್ದ ವಿಷಯ ನಮ್ಮ ಮೊದಲ ಭೇಟಿಯಲ್ಲಿ ತಿಳಿದಿತ್ತು. ಕಾಲೇಜ್ ಹುಡುಗಿ , ಡ್ಯೂಟಿ ಮಾಡೊ ಹುಡುಗ, ಸೆಳೆಯೋಕೆ ಆಕೆಯಲ್ಲಿ ಸೌಂದರ್ಯ ಇತ್ತು , ಖರ್ಚಿಗೆ ನನ್ ಪರ್ಸಲ್ಲಿ ದುಡ್ಡಿತ್ತು , ಇನ್ನೇನ ಬೇಕು ಈ ಅಧುನಿಕ ಪ್ರೇಮಿಗಳಿಗೆ . ಹೀಗಾಗೇ ಪಾರ್ಕಲ್ಲಿ ಕದ್ದು ಮುಚ್ಚಿ ಆಗ್ತಿದ್ದ ನಮ್ಮ ಭೇಟಿ ಕೆಲವೆ ದಿನಗಳಲ್ಲಿ ಧೈರ್ಯವಾಗೇ  ಲಾಡ್ಜ್  ಮೆಟ್ಟಿಲೇರಿ ಬಂದಿತ್ತು .
ಅಯ್ಯೊ ಪಾಪಿ, ಪಾಪ ಆ ಚಿಕ್ ಹುಡುಗಿಗೆ ಮರಳು ಮಾಡಿ ಕಷ್ಟ ಕೊಟ್ಟೆ ಅನ್ನು, ಎನ್ನುತ್ತ ಸ್ವಲ್ಪ ಸಿಟ್ಟಾದಾಳು  ರಮ್ಯ .
ಅದು ನೀನ್ ಭ್ರಮೆ ರಮ್ಯ. ಉಳುಮೆ ಮಾಡಿದಷ್ಟೂ ಹದವಾಗುತ್ತೇ ಭೂಮಿ , ಸುಸ್ತಾಗೋನು ರೈತ ಎನ್ನುತ್ತ ಮುಗುಳ್ನಕ್ಕ ಅಭಿ .
B grade film story ಇದ್ದಂಗ ಇದೆಯಲ್ಲೋ ನೀನ್ love story.  ಕರ್ಮ, ಮುಂದುವರೆಸು .
ಸತ್ಯ ಅಲ್ವ ಹಂಗೆ ,  ಸ್ವಲ್ಪ ಹಿಂಸೆ ಅನ್ಸತ್ತೆ . ಚನ್ನಾಗಿಲ್ಲ ಅಂತ ನಮ್ ಮಗೂನ , ನಮ್ ಮಗು ಅಲ್ಲ ಅನ್ನೋಕ ಆಗುತ್ತಾ ? ಇಲ್ಲ ಅಲ್ವ . ಹಾಗೆ ನಮ್ಮ ಕರ್ಮಗಳು ಸಹಿತ , ಒಳ್ಳೇದೋ ಕೆಟ್ಟದ್ದೋ ಅದು ನಾವು ಮಾಡಿದ್ದು ಅಂದ ಮೇಲೆ ನಮ್ಮದೇ . ಅದನ್ನ ಒಪ್ಪಿಕೊಳ್ಳೋಕೆ  ಧೈರ್ಯ ಬೇಕು. ನಾನೆ ಒಪ್ಕೋತಿದಿನಿ ಕೇಳೋಕ ನಿಂದೆನು .
ಆಯ್ತು ಬಿಡು ಮಾರಾಯ , ಒಂದ್ ಕೇಳ್ದ್ರೆ ವೇದಾಂತಿ ಥರ ನಾಲ್ಕ ಉತ್ತರ ಹೇಳ್ತೀಯ . ಓಕೆ ಜಾಸ್ತಿ ಕೋರಿಬೇಡ ಮುಂದಕ್ಕ ಹೇಳು .
ದಾಟ್ಸ ಗುಡ್ , ಕೇಳು . . .
ನಾವು ಪ್ರೀತ್ಸೊ ಹುಡುಗಿಯರಲ್ಲಿ ಹಲವಾರು ರೀತಿಯ ಹುಡುಗಿಯರು ಇರ್ತಾರೆ . ಹುಡುಗನ ಅಂದ ಚಂದ ನೋಡಿ ಪ್ರೀತ್ಸೊರು , ಇಲ್ಲ ತನ್ನ ಹತ್ರ ಅಂದ ಚಂದ ಇದೆ ಅಂತ ಪ್ರೀತ್ಸೊರು. ದುಡ್ಡಿಗಾಗಿ ಪ್ರೀತ್ಸೊರು, ಇಲ್ಲ  ದುಡ್ಡು ಕೊಟ್ಟು  ಪ್ರೀತ್ಸೊರು . ದೈಹಿಕ ಆಶೇಗಾಗೀ ಪ್ರೀತ್ಸೊರು , ಭಾವದ ಖುಷಿಗಾಗಿ ಪ್ರೀತ್ಸೊರು, ಇಲ್ಲ  ಸುಂದರ ಬದುಕಿನ ಸಮೃದ್ದಿಗಾಗಿ ಪ್ರೀತ್ಸೊರು . ಆದ್ರೆ ಅವಳು ತನ್ನ ಮೋಹಕ ಮಾತಿನ ಜಾಲ ಬೀಸಿ, ಮಾದಕ ಸೌಂದರ್ಯ ಮುಂದಿಟ್ಟು , ನನ್ನ ಸೇರಿ ಒಟ್ಟು ಮೂರು ಹುಡುಗರ ಜೊತೆ ಟಚ್ ನಲ್ಲಿ ಇದ್ಲು . ಅವಳು ನಮಗೆ ಕೊಡೊ ಪ್ರತಿ ಖುಷಿ ಗೂ , ಕಾಲೇಜ್ ಫೀ , ಬುಕ್ಸ್ ಬಟ್ಟೆ , ವಾಚು ಮೊಬೈಲ್ ರೂಪದಲ್ಲಿ ಬಡ್ಡಿ ಸಮೇತ ನಮ್ಮಿಂದ ವಸೂಲಿ ಮಾಡ್ತಿದ್ಲು . ಪ್ರತಕ್ಷ ಕಂಡರೂ ಪ್ರಮಾಣಿಸಿ ನೋಡು ಅಂತಾರೆ , ಆದರೆ ಪ್ರತಕ್ಷ ಕಂಡ ಮೇಲೆ ಪ್ರಮಾಣಿಸಿ ನೋಡೋ ಅವಶ್ಯಕತೆ ಇಲ್ಲ ಅನಿಸ್ತು ನನಗೆ .
ಈಗ ಹೇಳು ರಮ್ಯ. ಪಾಪ ಪುಟ್ಟ ಹುಡುಗಿ ಅಂತೀಯ ? ಪ್ರೀತಿ ಅಂತೀಯ ? ಪ್ರಣಯ ಅಂತೀಯ ? ಅರಿಯದ ವಯಸ್ಸಿನ ಆತುರ ಅಂತೀಯ ? ಇಲ್ಲ ಪ್ರಿ ಪ್ಲ್ಯಾನ್ ಡ ಹಾದರ ಅಂತೀಯ ?
ರಮ್ಯ ಬಾಯಿಂದ ಒಂದೂ ಮಾತು ಹೊರ ಬರಲಿಲ್ಲ , ಮೌನ ಹೊದ್ದು ಸುಮ್ಮನೆ ಕೂತು ಬಿಟ್ಟಳು .
ಮತ್ತೆ ಮುಂದುವರೆಸಿದ ಅಭಿ .
ಇಷ್ಟೆಲ್ಲ ಅವಳ ಬಗ್ಗೆ ಗೊತ್ತದ ಮೇಲೂ ಮನಸು ಅವಳಿಗಾಗಿ ಹಾತೋರೀತೀತ್ತು , ಅವಳು ಕಾಲ್ ರಿಸೀವ್ ಮಾಡಿಲ್ಲ ಅಂದ್ರೆ , msg ಗೆ ರಿಪ್ಲೈ ಬಂದಿಲ್ಲ ಅಂದ್ರೆ , ನಾಲ್ಕಾರು ದಿನದಗಟ್ಟಲೆ ಅವಳು ಮೀಟ್ ಆಗದಿದ್ದರೆ ಮನಸು ನೀರಿಂದ ತೆಗೆದ ಮೀನಿನಂತೆ ಹೊರಳಾಡತಿತ್ತು. ಅದು ಅವಳೆಡೆಗೆ ಇರೊ ಅಕರ್ಷಣೆ ನೊ ? ಪ್ರೀತಿ ನೊ ? ಹೂಚ್ಚೋ ? ವಯೋಸಹಜ ಹಂಬಲವೋ ? ಗೊತ್ತಿಲ್ಲ . ಅದಕ್ಕೆ ಅವಳಿಗೊಂದ ಚಾನ್ಸ ಕೊಟ್ಟೆ . ಆಗಿದ್ದ ಆಯ್ತು , ಇನ್ ಮುಂದೆ ಆದ್ರೂ ಸರಿಯಾಗಿರು ನಿನ್ನ ಮದುವೆ ಆಗ್ತೀನಿ ಅಂದೆ. ಇನ್ನಿಬ್ಬರು ಹುಡುಗರಲ್ಲಿ ಒಬ್ಬನನ್ನ ಮೀಟ್ ಆಗಿ , ಇನ್ ಮುಂದೆ ಅವಳ ತಂಟೆಗೆ ಬರದಂತೆ ವಿನಂತಿಸಿದ್ದೆ.  ಅವಳ ಹತ್ರ ಇರೊ ಒಂದ್ ಮೊಬೈಲ್ ಎರಡ್ ಸಿಮ್ ಕಾರ್ಡ್ ತಗೊಂಡು ಹೊಸ ಮೊಬೈಲ್ ಕೊಡಿಸಿದ್ದೇ. ಇಲ್ಲಿವರೆಗೂ ಸರಿಯಾಗೆ ಇದ್ಲು , ಆದ್ರೆ ಮದುವೆ ವಿಚಾರ ಎತ್ತಿದಾಗ ನನ್ನಿಂದ ಡಿಸ್ಟೇನ್ಸ ಮೇಂಟೇನ ಮಾಡೋಕೆ ಶುರು ಮಾಡದ್ಲು . ನನ್ ನಂಬರ್ ರಿಜೆಕ್ಟ್ ಲಿಸ್ಟ್ ಲ್ಲಿ ಇಟ್ಳು , ಬೇರೆ ನಂಬರ್ ಯಿಂದ ಕಾಲ್ ಮಾಡದ್ರೆ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡಳು.
ಅದೊಮ್ಮೆ ನೇರ ಅವಳ ಕಾಲೇಜ್ ಹತ್ರ ಹೋಗಿ , ಕ್ಲಾಸ್ ಬಿಡೊವರೆಗೆ ಕಾಯ್ದು ಮೀಟ್ ಆಗಿ ಕಾರಣ ಕೇಳಿದ್ದೆ . ಮೊದಲು , ಮನೇಲಿ ಓಪ್ತಿಲ್ಲ ಅಂದ್ಲು , ನಾನ್ ಮನೆಗ್ ಬಂದು ಮೀಟ್ ಆಗ್ತೀನಿ ಅಂದೆ . ಬೇಡ ಸ್ಟೇಟಸ್ ಸರಿ ಹೋಗಲ್ಲ ಅಂದ್ಲು , ಗಂಡಸು ನಾನು ಕಷ್ಟ ಪಟ್ಟು ದುಡೀತಿನಿ ನಿನಗೆ ಪಂಚಾಮೃತ ಬಡಿಸದೆಯಿದ್ದರೂ ಉಪವಾಸ ಅಂತೂ ಮಲಗಿಸಲ್ಲ ಅಂದೆ. ಆದ್ರೂ ಬೇಡ , ಕಾಸ್ಟ್ ಬೇರೆ ಬೇರೆ ಇದೆ ಅಂದ್ಲು. ಜಾತಿ ವಿಷಯ ಬಂದಾಗ ಸುಮ್ಮನಾದೆ, ಏನ್ ಹೇಳಲಿ ಅವಳಿಗೆ ?
ಮನೇಲಿ ಓಪ್ತಿಲ್ಲ ಅಂದ್ಲು , ಓಪ್ಪಿಸ್ತಿನಿ ಅಂದೆ . ಬಡತನ ಅಂದ್ಲು, ದುಡ್ಡು ಸಾಕ್ತೀನಿ ಅಂದೆ . ಜಾತಿ ಅಂದ್ಲು ಏನ್ ಹೇಳಲಿ ??
ಪ್ರಪೋಸ್ ಮಾಡುವಾಗ ಮನೇಲಿ ಅಪೋಜ ಮಾಡಲಿಲ್ಲ , ಥೇಟರ್ ಪಾರ್ಕು ಸುತ್ತೋವಾಗ ಸ್ಟೇಟಸ್ ಅಡ್ಡ ಬರಲಿಲ್ಲ , ಲಾಡ್ಜ್ ಗೆ ಬಂದು ಮಟ ಮಟ ಮದ್ಯಾಹ್ನ ಬೆತ್ತಲಾದಾಗ ಜಾತಿ ಬೇರೆ ಅನಿಸಲಿಲ್ಲ , ಮದುವೆ ವಿಷಯ ಬಂದಾಗ ಯಾಕೆ ಇದೆಲ್ಲ ಅಂತ ಜೋರಾಗಿ ಚೀರಬೇಕು ಅನ್ಕೊಂಡೆ . ಬೇಡ use ಇಲ್ಲ ಅನಿಸ್ತು , ಸುಮ್ಮನಾದೆ .
ಉತ್ತರ ನನಗೆ ಗೊತ್ತಿತ್ತು, ಪ್ರಶ್ನೆ ಅವಳಿಗೆ ಕೇಳಿ ಏನ್ ಫಲ .
ಉತ್ತರ ನಿನಗ ಗೊತ್ತಿತ್ತಾ ? ಏನದು ? ಎಂದು ಕೇಳಿದಳು ಆಶ್ಚರ್ಯ ದಿಂದ ರಮ್ಯ .
ಭಾರವಾದ ಧ್ವನಿಯಲ್ಲಿ ಮುಂದುವರೆಸಿದ ಅಭಿ .

ಮುಂದುವರೆಯುತ್ತದೆ . . . ನಿರೀಕ್ಷಿಸಿ . . . .

ಸಿದ್ದು . ತಾಂಬೆ .

 

Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ