Posts

Showing posts from January, 2018

ಭಕ್ತಿ ಇರಲಿ, ಭಯ ಬೇಡ.

ನಿನ್ನೆ ಸ್ನೇಹಿತನೊಬ್ಬ call ಮಾಡಿದ್ದ , ಪರಸ್ಪರ ಕುಶಲೋಪರಿ ವಿನಿಮಯದ ನಂತರ, ದೇವರ ಕುರಿತು ಒಂದು ಮಾತು ಕೇಳೋದಿತ್ತು ನಿನಗೆ ಅಂದ. ನಾ ಎನ್ ಶಾಣ್ಯಾ ಅದಿನೇಂತ ಕೇಳತೊ ಮಾರಾಯ ಅಂದೆ ನಾನು. ಏ ಹಂಗೇನಿಲ್ಲ, ನೀ ಅವೂ ...

ಹಣ್ಣಿನ ಕತಿ

ಒಂದು ಹಣ್ಣಿಗಿ ತಾನು ಗಿಡದಾಗ ಇರುವಸ್ಟು ದಿನಾನೂ ಗಿಡದ ಬೆಲೆ ಅದಕ್ಕ ಗೋತ್ತಿರಾಂಗಿಲ್ಲ. ಹಣ್ಣಾದ ಮರುಕ್ಷಣ ನಾ ಉದುರಿ ನೆಲಕ್ಕ ಬೀಳಬೇಕು, ಉಳಕೊಂತ -ಉಳಕೊಂತ  ಜಗತ್ತೆಲ್ಲ ಸುತ್ತಬೇಕು ಅಂತ ವಿಚಾರ ಮಾಡ್ತಿರ್ತದ. ಹಂಗ , ತನ್ನಿಚ್ಛೆಯಂಗ ಹಣ್ಣಾದ ಮರುಕ್ಷಣ ಗಿಡದಿಂದ ಜಾರಿ ನೆಲಕ ಬೀಳ್ತದ. ಬಿದ್ದ ಹಣ್ಣನ್ನ ಒಬ್ಬ ಬಂದು ಎತ್ತಿ, ಮೈಗಿ ಹತ್ತಿದ ಮಣ್ಣ ಒರಿಸಿ, ಒಂದು ಸ್ವಚ್ಛ ಬುಟ್ಯಾಗ ಇಟ್ಟ . ಹಣ್ಣಿಗಿ ಭಾಳ ಖುಷಿ ಆತು. ಆಮ್ಯಾಲ ಅಂವ ಹಣ್ಣಿನ ಬುಟ್ಟಿ ತಲಿ ಮ್ಯಾಲ ಹೊತ್ಕೊಂಡು ಸಿಟಿ ಮರ್ಕಟಿಗಿ ಬಂದ. ದಿನಾ ಅದೆ ಎಲಿ-ಹೂವ , ಗಾಳಿ -ಧೂಳ ನೋಡಿ ಬ್ಯಾಸ್ರಾಗೀತ್ತು ಹಣ್ಣಿಗಿ.  ಈ ದೊಡ್ಡ ಊರ, ಎತ್ತರ ಕಟ್ಟಡ ,  ನಮುನಿ - ನಮುನಿ ವಾಹನ, ಈ ಹೊಸಾ ಲೋಕ ನೋಡಿ ಭಾಳ ಅಂದ್ರ ಭಾಳ ಖುಷಿ ಆತು. ಗಿಡದಿಂದ ಜಾರಿ ಬಿದ್ದು ಛಲೊ ಮಾಡಿದ್ನೀ ಅಂತು . ಆತ ಮಾರುಕಟ್ಟೆಯಲ್ಲಿ ಮಾರಾಕ ಇಟ್ಟ. ಒಬ್ಬ ಗಿರಾಕಿ ಬಂದ , ಹತ್ತು ರೂಪಾಯಿ ಕೊಡ್ತೀನಿ ಕೊಡು ಅಂದ. ಮತ್ತೊಬ್ಬ ಬಂದ , ನಾ ಇಪ್ಪತ್ತು ಕೊಡ್ತೀನಿ ಕೊಡು ಅಂದ . ಹಣ್ಣಿಗಿ ಅಶ್ಚರ್ಯ, ಇವ್ರೆಲ್ಲಾ ನನಗ ಎಸ್ಟ್ ಕಿಮ್ಮತ ಕೊಡ್ತಾರಲ್ಲಾ ಅಂತ,  ಹಂಗ ಆನಂದ. ಮೂರನೇ ಗಿರಾಕಿ ಮೂವತ್ತು ರೂಪಾಯಿ ಕೊಟ್ಟು ಮನಿಗಿ ತಂದ. ಸಾಗವಾನಿ ಕಟಗಿದು ಡೈನಿಂಗ್ ಟೇಬಲ್ ಮ್ಯಾಲ, ಒಂದು ಬೆಳ್ಳಿ ಪ್ಲೇಟ್ ಒಳಗ ಈ ಹಣ್ಣಿಗಿ ಇಟ್ಟ . ಆ ಕ್ಷಣಕ್ಕ ಹಣ್ಣಿಗಿ ಆದ ಸಂತೋಷ ಹೇಳಾಕ ಅದಕ್ಕ ಪದಾನ ಇರ್ಲಿಲ್ಲ ,  ಅಟ್ಟು ಖುಷಿ...

ಬಿ ಹ್ಯಾಪಿ

ಬೈಕ್ ನಂಬರ ಪ್ಲೇಟ್ ಮೇಲೆ ಬರೆದಂತ ಚುಟುಕು ಸಾಲುಗಳನ್ನ, ಆಟೊ ಹಿಂದೆ ಬರೆದ ಭಗ್ನಪ್ರೇಮ ನಿವೇದನೆಗಳನ್ನ,  ಸಿಟಿ ಬಸ್ ನಲ್ಲಿ ಬರೆದ ಗಾದೆ ಮಾತುಗಳನ್ನ,  ಅಚ್ಚರಿಯಿಂದ ನೋಡೋದು ಈಸ್ಟ್ ಆದವನ್ನ ಬರೆದು ಇಟ್ಕ...

ಲವ್ ಈಸ್ ಬ್ಲೈಂಡ್ (kannada article)

Image
ಮೊನ್ನೆ watsapp chat ಮಾಡುವಾಗ ತಂಗಿಯೋಬ್ಬಳು ಇಟ್ಟಿರೋ ಅಪರೂಪದ  dp ಯೊಂದು ಕಣ್ಣಿಗೆ ಬಿತ್ತು . ಆ photo ದಲ್ಲಿನ ಬರಹ ಹೀಗಿತ್ತು . love is blind ಅಂತಾರೆ ಏನಕ್ಕೆ ಗೊತ್ತಾ ? ನಮ್ಮ ಮುಖ ನೋಡುವ ಮುಂಚೆಯೇ ಅಮ್ಮ ನಮ್ಮನ್ನ ಪ್ರೀತಿಸಲು ಶುರು ಮಾಡಿರುತ್ತಾಳೆ ಅದು ಪ್ರೀತಿ ಅಂದ್ರೆ ..     ಅಂತ  ಪಕ್ಕದಲ್ಲೋಂದು ಮುದ್ದಾದ ಮಗುವನ್ನ ತಬ್ಬಿಕೊಂಡ,  ಅಸ್ಟೆ ಮುದ್ದಾದ ತಾಯಿಯ ಚಿತ್ರ .ಮತ್ತೆ ಮತ್ತೆ ನೋಡಿದೆ ,  ಹಾಗೆ ಸೂಪರ್ dp ಅಂತ ಆ ತಂಗಿಗೆ msg ಮಾಡಿದೆ . ಎಸ್ಟು ಅದ್ಭುತ ಅಲ್ಲವಾ ತಾಯಿಯ ಮಮತೆ ಮಮಕಾರ ? ತನ್ನ ಹೊಟ್ಟೆಯಲ್ಲಿ ಮಗುವೊಂದು ಮೂಡಿದರ ಸಣ್ಣ ಸೂಚನೆ ಸಿಕ್ಕ ಮರುಕ್ಷಣ ,  doctor ರಲ್ಲಿಗೆ  ಓಡಿ ಹೋಗುತ್ತಾಳೆ . doctor ಕನ್ಫರ್ಮ ಮಾಡಿ ಕಂಗ್ರೊಜುಲೇಶನ್ಸ ಹೇಳಿದಾಗ              ಆಡು ಮಕ್ಕಳ ನೊಡಿ ಬೇಡಿತ ನನ ಜೀವ               ಕೇಳಿದ್ದನೇನ ಶೀವರಾಯ ಹೊಟ್ಯಾಗ                ಮುಡಿದನೆನ ಮಗರಾಯ ಏಂಬ ಜನಪದ ತ್ರಿಪದಿ ಯಂತೆ ಅವಳಿಗಾಗೋ ಆನಂದ ಹೇಳ ತೀರದು . ಅವತ್ತಿನಿಂದ ಅವಳು ತಿನ್ನುವ ಪ್ರತ...