ಕ್ರಶ್ -ಲವ್ -ಬ್ರೇಕಪ

ಮೂರರಿಂದ ನಾಲ್ಕು ತಿಂಗಳು ಕಳೀತು ಅನ್ಸತ್ತೆ ನಾನು  ಕೊನೆಯ blog post ಮಾಡಿ , ಕಾರಣ ಮನೆಯಲ್ಲಿ ತಮ್ಮನ ಮದುವೆ ಇತ್ತು ಅಮೇಲೆ ಸ್ವಲ್ಪ ಆರೋಗ್ಯ ಕಾಡ್ತು , ಜೊತೆಗೆ ಸ್ವಲ್ಪ ಸೋಮಾರಿತನ . blog ನಾನು ಕಂಡಿದ್ದನ್ನ ಕೇಳಿದನ್ನ , ಕೆಲ ಸಮಯ ಸಂದರ್ಬದಲ್ಲಿ ನನಗೆ ಅನೀಸೀದನ್ನ ಹಂಚಿಕೊಳ್ಳುವ ಅತಿ ಅಪರೂಪದ ವೇದಿಕೆ . ನಾಲ್ಕು ನಿಂಗಳ ತುಂಬಾ ಮಿಸ್ಸ್ ಮಾಡ್ಕೊಂಡೆ ಅನಿಸ್ತಿದೆ. ok leave it , ಇವತ್ತು ಒಂದು ವಿಷಯದ ಬಗ್ಗೆ ಹೇಳೋದಿದೆ ಅದೇನ್ ಅಂದ್ರೆ "ಕ್ರಶ್ ಲವ್ ಬ್ರೇಕಪ ". ಈ ಇಪ್ಪತ್ತ್ ಎಂಟನೆ ವಯಸ್ಸಲ್ಲಿ ಇಂಥ ವಿಷಯ ಬಿಟ್ಟು ದೇಶೋದ್ಧಾರ ದಂಥ ವಿಚಾರ ನನ್ನಲಿ ಹೊಳಿತಿಲ್ಲ ಕ್ಷಮಿಸಿ , and ಈ ಲೇಖನ ಓದೋದರಿಂದ ನಿಮ್ಮ ಮನಸಿನ ಮೇಲೆ ಒಳ್ಳೆ ಪರಿಣಾಮ ಆಗದೇಯೀದರೂ ಕೆಟ್ಟ ಪರಿಣಾಮ ಆಗಲ್ಲ , ಆ ಗ್ಯಾರೆಂಟಿ ನಾನ್ ಕೊಡ್ತೇನೆ , ok ಶರು ಮಾಡೋಣ್ವಾ ?......
  ನಾನು ತುಂಬಾ ಸಲ ಪತ್ರಿಕೆಯಲ್ಲಿ ಓದೀದಿನಿ , tv news ನಲ್ಲಿ ಕೇಳಿದಿನಿ , ಅದೇನು ಅಂದ್ರೆ , , , ಹುಡುಗಿ ತನ್ನ ಪ್ರೀತಿಯನ್ನ ಒಪ್ಪಿಲ್ಲ ಅಂತ ಅವಳ ಮುಖಕ್ಕೆ ಆಸಿಡ್ ಹಾಕೋದು , ಅವಳನ್ನ ಕೊಲೆ ಮಾಡೋದು , ಇಲ್ಲ ಬೇರೆಯವರ ಮುಂದೆ ಅವಳ ಬಗ್ಗೆ ಇಲ್ಲ ಸಲ್ಲದನ್ನ ಮಾತಾಡೋದು, ಛೇ ಎಂಥ ಖೇದಕರ ಅಲ್ವಾ . ಇದೆಲ್ಲ ಪ್ರೀತೀನಾ ? ಹೀಗೆ ಮಾಡೋರಿಗೆ ಪ್ರೀತಿ ಪದದ ಅರ್ಥವಾದರೂ ಗೋತ್ತೀರುತ್ತಾ , ನೊ ಚಾನ್ಸ . ಅದೊಂದು ವಿಕ್ರುತ ಮನೋಭಾವದ ಲಕ್ಷಣ ಅಸ್ಟೆ .
ಒಬ್ಬ ಹುಡುಗ ಒಬ್ಳು ಹುಡುಗೀನ ಈಸ್ಟ ಪಡೋದು ತಪ್ಪಲ್ಲ , ಪ್ರೀತ್ಸೊದು ತಪ್ಪಲ್ಲ , ಆದರೆ ಪ್ರೀತಿಯ ಅರ್ಥ ಗೊತ್ತಿಲ್ಲದೇ ಆ ಹೆಸರಲ್ಲಿ ನಡೆಸೋ ಅಚಾತುರ್ಯ ಇದೆಯಲ್ಲ ಅದು ತಪ್ಪು . ಹೇಗೆ ಅಂತೀರಾ ? ನಾಲ್ಕಾರು ಜನ ಹುಡುಗರು ಲೋಕಾರೂಢಿ ಮಾತಾಡ್ತಾ ಕುತಿರೋದನ್ನ ನೀವು ಸೂಕ್ಷ್ಮವಾಗಿ ಗಮನಿಸಿ , ಅಲ್ಲಿ ಎಲ್ಲರೂ ತಮ್ಮ ತಮ್ಮ ಡ್ರೀಮ ಗರ್ಲ್ ಬಗ್ಗೆ ಮಾತಾಡ್ತಿರ್ತಾರೆ . ಐಶ್ವರ್ಯ ಥರ ಬೆಳ್ಳಗ ಇರಬೇಕು , ಶಿಲ್ಪಾ ಶೆಟ್ಟಿ ಥರ ತೆಳ್ಳಗ ಇರಬೇಕು, ಅವಳ ಥರ ಸ್ಮೈಲ್  ಇರಬೇಕು ಇವಳ ಥರ ಸ್ಟೈಲ್ ಇರಬೇಕು ಹಾಗೆ ಹೀಗೆ ಅಂತ . ಅವರ ಇಚ್ಛೆಯ ಹುಡುಗಿ ಕಾಣಿಸಿದ ಮೇಲೆ ಶುರು ಅವಳ ಹಿಂದೆ ಸುತ್ತಾಡೊದು , ಎದುರಿಗೆ ಬಂದು ಸ್ಮೈಲ್ ಕೊಡೋದು , ಕೊನೆಗೊಂದಿನ ಅವಳ ನಂಬರ್ ಕೇಳೋದು, hi , , hello , , gm , , gn , , ಅಂತ msg ಮಾಡೋದು , ಅವಳೂ ಫ್ರೆಂಡ್ಲಿಯಾಗಿ reply ಮಾಡದ್ರೆ ಏನೇನೋ ಕಲ್ಪನೆ ಮಾಡ್ಕೊಳ್ಳೋದು. ಅವಳೂ ನನ್ನನ್ನ ಈಸ್ಟ ಪಡ್ತಿದಾಳ ಅದಕ್ಕೆ ನನ್ msg ಗೆ reply ಮಾಡ್ತಿದಾಳೆ ಅಂತ ಅವ್ರಿಗೆ ಅವರೆ  ಡಿಸೈಡ್ ಮಾಡ್ಕೊಳ್ಳೋದು. ಅದೊಂದು ದಿನ ಹೋಗಿ ಪ್ರಪೋಸ್ ಮಾಡೋದು , ಅವಳು hey sorry ನಾನು ಯಾವತ್ತೂ ನಿನ್ನ ಆ ಥರ ನೋಡಿಲ್ಲ , ಅಂತ ಇರೋದನ್ನೆ ಹೇಳ್ದಾಗ , ಮೇಲೆ ಹೇಳಿದ ಹಾಗೆ ಆಸಿಡ್ ಕೊಲೆ ಫೇಕ್ ಗಾಸಿಪ್  ಶುರು. ಅರೆ ಎಂಥ ಸ್ಟುಪಿಡಿಟಿ ಅಲ್ವಾ ಇದು, ಇದರಲ್ಲಿ ಏನಾದರೂ ಮ್ಯಾಚುರಿಟಿ ಇದೇನಾ ?ನೊ,  ಹುಚ್ಚು ವಯಸ್ಸಿನ ಹುಂಬುತನ ಅಸ್ಟೆ . ನನಗೆ ಆ ಥರ ಕಲರ್ ಇರೋಳು ಬೇಕು ಈ ಥರ ಫಿಗರ್ ಇರೋಳು ಬೇಕು ಅಂತ ಆಶೆ ಪಟ್ಟು ಪ್ರಪೋಸ್ ಮಾಡ್ತಾರಲ್ಲ, ಬಂದ ತಕ್ಷಣ ಹೂಂ ಅನ್ನೋಕೆ  ಹುಡುಗೀರೆಲ್ಲ ಬಿಟ್ಟಿ ಬೀದ್ದೀದಾರಾ? ಒಬ್ಳು ಹುಡುಗಿಗೆ,  ನನಗೆ ಸಲ್ಮಾನ್ ಥರ ಫಿಟ್ ಇರೋನು ಬೇಕು ಶಾರುಕ್ ಥರ ಸ್ಮಾರ್ಟ್ ಇರೋನು ಬೇಕು ಅಂತ ಆಶೆ ಇಲ್ದೇಯಿದ್ದರೂ, ಕೊನೆ ಪಕ್ಷ ಕೊನೆವರೆಗೂ ನನ್ನ ಪ್ರೀತಿ ವಿಶ್ವಾಸದಿಂದ ನೋಡ್ಕೋಳ್ಳೋನು ಬೇಕು, ಕಸ್ಟದಲ್ಲಿ ಜೊತೆ ನಿಂತು  , ನೋಂದಾಗ ಸಂತೈಸಿ, ಕುಗ್ಗೀದಾಗ ಧೈರ್ಯ ಹೇಳಿ ಮುನ್ನಡೇಸೋನು ಬೇಕು  ಅಂತ ಮಿನಿಮಮ್ ಎಕ್ಸ್ಪೆಕ್ಟೇಶನ್ ಆದ್ರೂ ಇರುತ್ತೆಅಲ್ವಾ . ಅಂತಹ ಕ್ವಾಲಿಟಿ ನಿಮ್ಮಲ್ಲಿ ಇದ್ರೆ ಓಪ್ಕೋತಾರೇ ಇಲ್ಲ ಅಂದ್ರೆ ಇಲ್ಲ ಅಂತಾರೆ ಅಸ್ಟೆ,  ಅವರ ಭಾವನೆಗಳಿಗೂ ಬೆಲೆ ಕೊಡಬೇಕು ತಾನೆ . .
      ದಿನನಿತ್ಯ ನಮ್ಮ ಜೀವನಲ್ಲಿ ಅದೇಸ್ಟೋ ಜನ ಪರಿಚಯ ಆಗ್ತಾರೆ , ಸ್ನೇಹಿತರಾಗತಾರೇ , ನಮ್ಮ ಅದೇಸ್ಟೋ ಕಸ್ಟಗಳಿಗೆ ಅವರ ಕೈಲಾದಸ್ಟು ಸಹಾಯ ಮಾಡಿ ನಮ್ಮ ಮುಖದಲ್ಲಿ ಒಂದು ನಗು ಚೀಮ್ಮಲು ಕಾರಣರಾಗ್ತರೇ. ಅಂತಹ ಒಂದು ಕೇರ್ ಮಾಡೋವಂಥಹ ಸಂಗಾತಿ ಬೇಕು ಅಂತ ಎಲ್ಲರಿಗೂ ಅನಿಸೋದು ಸಹಜ , ಪ್ರೀತಿ ಮೋಳೆಯೋದು ತಪ್ಪಲ್ಲ , ಆದ್ರೆ ಅವರ ಮನಸಲ್ಲಿ ನಮ್ಮ ಬಗ್ಗೆ ಎಂತಹ ಭಾವನೆ ಇದೆ ಅಂತ ತಿಳಿದು ಮುಂದುವರೆಯೋದು ಸೂಕ್ತ ಅನ್ನೋದು ನನ್ನ ಭಾವನೆ. sorry ನಾನು ಆ ಥರ ಅಲ್ಲ , we are just ಫ್ರೆಂಡ್ ಕಣೋ ಅಂದಾಗ, ಅವಳ ಭಾವನೆಗಳಿಗೆ ಬೆಲೆ ಕೊಟ್ಟು ಅವಳನ್ನ ಗೌರವಿಸೋದು, ಎಂದಿನಂತೆ ಅವಳೊಂದಿಗೆ ನಿರ್ಮಲ ಸ್ನೇಹ ಮುಂದುವರಿಸೋದು,  ನಮ್ಮೊಂದಿಗೆ ಇದ್ದಸ್ಟು ದಿನ ನಮ್ಮ ಸಣ್ಣ ಪುಟ್ಟ ಖುಷಿಗೆ ಕಾರಣ ಆದ ಅವಳನ್ನ  ಕ್ರೂತದ್ನ್ಯತೆಯಿಂದ ಕಾಣೋದು ಮ್ಯಾಚುರ್ಡ ಮೈಂಡ್ ಮತ್ತು ಮಾನವೀಯತೆ, ಏನಂತೀರಿ ??
             ಹಾಳು ಮೂಳು ಸಿನಿಮಾ ನೋಡಿ,  ನಿಮ್ಮಸ್ಟಕ್ಕೇ ನೀವೆ ಹುಚ್ಚು ಕಲ್ಪನೆ ಕಟ್ಟಿಕೊಂಡು , ವಿರುದ್ದ ತೀರ್ಪು ಬಂದಾಗ, ನಿಮ್ಮ ಮನಸು ಘಾಸಿ ಮಾಡಿಕೊಳ್ಳುವದಲ್ಲದೇ  ಇನ್ನೊಬ್ಬರ ಜೀವದ ಜೊತೆ ಚಲ್ಲಾಟ ಆಡೋ ಮುಂಚೆ ಯೋಚಿಸಿ ಹೆಜ್ಜೆ ಇಟ್ಟರೆ, ಹುಡುಗ ಹುಡುಗಿಯರ ಸ್ನೇಹ ಸೌಹಾರ್ದತೆ ಗೆ ಇನ್ನಸ್ಟು ಗೌರವ ಬರುತ್ತೆ , ಜೊತೆಗೆ ಹಲವಾರು ಅನಾಹುತಗಳ ಆಗೋದೂ ತಪ್ಪುತ್ತೆ ಅಲ್ವಾ ?
ನಿಜಾ ಅನಿಸಿದರೆ ಈ ಲಿಂಕ್ ಇತರ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ , , , . thank U ನಿಮ್ಮ ಸ್ನೇಹಿತ ಸಿದ್ದು .

Comments

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ