ಜೀವನೋತ್ಸಾಹ ಅಂದ್ರೆ ಹಿಂಗಿರಬೇಕು

ಹೊದ  ಮಂಗಳವಾರ ಸ್ನೇಹಿತರೊಬ್ಬರ ಮನೆಯಲ್ಲಿ ಒಂದು ಸಣ್ಣ ಕಾರ್ಯಕ್ರಮವಿತ್ತು, ಸಂಜೆ ಊಟಕ ಹೇಳಿದ್ರು. ರಾತ್ರಿ ಒಂಬತ್ತು ಗಂಟೆ ಅಗೀರ್ಬೋದು ಊಟಾ ಮುಗಿಸಿ ಮನೆ ಹೊರಗಡೆ ಕೆಲ ಸ್ನೇಹಿತರೆಲ್ಲ ಮಾತಾಡ್ತಾ ಕೂತಿದ್ವಿ. ಮನೆಯಿಂದ ದೂರದಲ್ಲಿ ಒಂದು ಅಟೊ ಬಂದು ನಿಂತಿತು , ಅದರಿಂದ ಮತ್ತೆ ನಾಲ್ಕಾರು ಜನ ಹುಡುಗರು ಬಂದು ಮನೆ ಒಳಗೆ ಹೋದರು ಊಟಾ ಮಾಡೋಕೆ , ಎಲ್ಲರೂ ನಡ್ಕೊಂಡು ಬಂದ್ರು ಒಬ್ಬ ಮಾತ್ರ ತೆವಳುತ್ತ ಬಂದ , ರಾತ್ರೀಯಾಗೀತ್ತಲ್ಲ ಯಾರು ಅಂತ ಸರಿಯಾಗಿ ಕಾಣಲಿಲ್ಲ . ಹದಿನೈದ ರಿಂದ ಇಪ್ಪತ್ತು ನಿಮಿಷ ಆಗಿತ್ತು ಅವರೆಲ್ಲ ಊಟ ಮುಗಿಸಿ ಮತ್ತೆ ಆಟೊ ಕಡೆ ಹೊರಟಿದ್ರೆ ಅವರ ಹಿಂದೆ ಮತ್ತೆ ಒಬ್ಬ ತೆವಳುತ್ತ ಹೋಗ್ತಿದ್ದ. ನಾನು 8th ಇದ್ದಾಗ ನನ್ನ ಕ್ಲಾಸಮೇಟ ಒಬ್ಬ ಹೀಗೆ ಇದ್ದ. ನಾನಾಗ ಗ್ಯಾಂಗ್ ಬಾವಡಿಯ ಬೀಸೀಏಮ ಹಾಸ್ಟೆಲ್ನಲ್ಲಿದ್ದೆ, ಹಾಸ್ಟೆಲ್ ಪಕ್ಕ ಅವರ ಮನೆ ಇತ್ತು ಆತನ ಹೆಸರು ಭೀರು ಅಂತ . ಚಿಕ್ಕ ವಯಸ್ಸಲ್ಲಿ ಪೋಲಿಯೋ ಇಂದ ಆತನ ಕಾಲೇರಡು ಶಕ್ತಿ ಕಳಕೊಂಡಿದ್ದ ಕಾರಣ ಎಲ್ಲರಂತೆ ಎದ್ದು ನಡಿಯೋಕೇ ಆಗ್ತಿರಲಿಲ್ಲ, ಆತನದೋಂದು ಮೂರು ಗಾಲಿಯ ಸೈಕಲ್ ಇತ್ತು , ಬಲಗೈಯಿಂದ ಪೈಡಲ ತಿರುಗಿಸ್ತಾ ಎಡಗೈಯಿಂದ ಹ್ಯಾಂಡಲ್ ಬ್ಯಾಲೆನ್ಸ್ ಮಾಡ್ಕೊಂಡ್ ಬರ್ತಿದ್ದ . ಮನೆಯಿಂದ ಸ್ಕೂಲ್ ಗೆ ಬರೋವಾಗ ದಾರಿ ಇಳಿಜಾರ ಇತ್ತು ಯಿಜಿಯಾಗಿ ಬರ್ತಿದ್ದ , ವಾಪಸ್ ಹೋಗೋವಾಗ ದಿನ್ನೆ ಅಲ್ವಾ ಕೈಯಿಂದ ಪೈಡಲ ತೀರುಗೀಸೋದು ಕಸ್ಟ ಆಗ್ತಿತ್ತು. ಒಂದಿನ ನಾನೂ ಸ್ಕೂಲ್ ಇಂದ ಹಾಸ್ಟೆಲ್ ಕಡೆ ಹೊರಟಿದ್ದೆ ದಿನ್ನೇಯಲ್ಲಿ ಸೈಕಲ್ ಮುಂದೆ ಹೋಗ್ತಿರಲಿಲ್ಲ , ಸ್ವಲ್ಪ ಹಿಂದಿನಿಂದ ಸೈಕಲ್ ತಳ್ಳು ಅಂದ , ಹೂಂ ಆಯ್ತು ಅಂದು ತಳ್ಳಿದೆ , thanx ಅಂದು ಮನೆಗೆ ಹೊದ . ಅದಾದ ಮೇಲೆ ದಿನಾ ನಾನು ಅವನ ಸೈಕಲ್ ನಲ್ಲಿ ಅವನ ಪಕ್ಕ ಕೂತು ಸ್ಕೂಲ್ ಗೆ ಬರ್ತಿದ್ದೆ ,  ಅವನಿಗೆ ಸ್ವಲ್ಪ ಸುಸ್ತು ಅನಿಸಿದರೆ ನಾನ್ ಪೈಡಲ ತಿರುಗಿಸ್ತಿದ್ದೇ. ಕೇಲವೋಬ್ರು ನೋಡಿ ನಗ್ತಿದ್ರು ,  ನಾನ್ ಕೇರ್ ಮಾಡ್ತಿರಲಿಲ್ಲ, ಯಾಕಂದ್ರೆ ನಾನು ಜೋತೇಯಾದಾಗಿಂದ ಭೀರು ಮುಖದಲ್ಲಿ ಮೂಡಿರೋ ಮಂದಹಾಸ ನನಗೆ ಅದೆಲ್ಲ ಮರೇಸ್ತೀತ್ತು.ಮುಂದೆ ನಾನು 8th ಮುಗಿಸಿ 9th ಗೆ ಗಾಂಧಿ ಹೈಸ್ಕೂಲ್ ಯಿಂದ ಗೊರ್ಮೆಂಟ ಹೈಸ್ಕೂಲ್ ಗೆ ಹೋದೆ, ಭೀರು ಮತ್ತು ನನ್ನ ಸಂಪರ್ಕ ಕಟ್ ಆಗಿತ್ತು, ಮತ್ತೆ ಆತನನ್ನ ಮೀಟ್ ಆಗೋಕೆ ಆಗಿರಲಿಲ್ಲ. ಇವತ್ತು ಈತನನ್ನು ನೋಡಿ ಭೀರು ನೆನಪಾದ .
                    ಆಟೊ ಕಡೆ ಹೋಗ್ತಿದ್ದ ಒಬ್ಬನನ್ನು ಕರೆದು,  ಯಾರು ಅವರು ಅಂತ ಕೇಳಿದೆ. ಅವನು ಆಟೊ ಡ್ರೈವರ್ ಅಂದ . ಕುತೂಹಲ ತಡಿಲಿಲ್ಲ ಅವನ ಹೆಸ್ರ್ ಏನು ಅಂದೆ , ಅವನ ಬಾಯಿಂದ ಬಂದ ಉತ್ತರ ಭೀರು . ಹೌದಾ ಅಂತ ಎದ್ದು ಅವನ ಹಿಂದೆ ಓಡಿ ಹೋಗಿ ಭೀರು ಅಂತ ಕರೆದೆ ವಾಪಸ್ ನೋಡಿ ಸಿದ್ದು ಅಂದ . ಮಬ್ಬು ಕತ್ತಲು ಒಬ್ಬರ ಮುಖ ಒಬ್ಬರಿಗೆ ಸರಿಯಾಗಿ ಕಾಣ್ತಿರಲಿಲ್ಲ , ನನ್ ಗೊತ್ತ ಸಿಕ್ತು? ಅಂದೆ , ಹೂಂ ಹಾಸ್ಟೆಲ್ ಸಿದ್ದು ಅಲಾ ಅಂದ . ಹೂಂ ಎಂದು ಆತನ ಮುಂದೆ ಮಂಡಿಯೂರಿ ಕುಳಿತು ಮಾತು ಆರಂಭಿಸಿದೆ. ನಿಂದೇನಾ ಆಟೊ ಅಂತ ಕೇಳಿದೆ . ಹೂಂ , ಮನೇಲಿ ಬಡತನ 10th ವರೆಗೂ ಮಾತ್ರ ಓದಿದೆ ಮುಂದೆ ಓದೋಕೆ ಆಗಲಿಲ್ಲ. ಆಟೊ ಕಲಿತು ಲೋನ್ ಮಾಡಿ ಹೊಸ ಅಟೊ ತಗೊಂಡೆ , ಲೋನ್ ಮುಟ್ಟಿಸಿ ಕೈಯಲ್ಲಿ ಸ್ವಲ್ಪ ರೊಕ್ಕ ಆದಮೇಲೆ ಇನ್ನೊಂದ್ ಆಟೊ ಕೊಂಡೆ , ಅದನ್ನ ಬಾಡಿಗೆ ಬಿಟ್ಟಿನಿ ಇದು ನಾನ್ ಹೊಡಿತಿನಿ, ನಾನು ದಿನಾ ಐದರಿಂದ ಆರ್ ನೂರು ಡುಡಿತಿನಿ , ಮೂರು ನೂರು ಆಟೊ ಬಾಡಿಗೆ ಬರ್ತದ , ಮದುವೆ ಆಯ್ತು ಎರಡ್ ಗಂಡ ಮಕ್ಕಳ ಆದ್ರು. ದೇವರ ದಯೆ ಬದುಕು ಛಲೋ ನಡದದ ಅಂತ , ಉಸಿರ ಬಿಡದಂಗೇ ಒಂದೆ ಮಾತಲ್ಲಿ ಹೇಳ್ಬಿಟ್ಟ. ಆತ ಮಾತು ಹೇಳ್ತಿದ್ರೆ ಬೇಸ್ ವಾಯ್ಸ್ ನಲ್ಲಿ ಸುದೀಪ್ ಸಿನಿಮಾದ ಡೈಲಾಗ್ ಕೇಳದಂತೆ ಇತ್ತು. ಅಸ್ಟೊಂದು ಖುಷಿ ಉತ್ಸಾಹ ಅತನ ಮಾತಲ್ಲಿ. ದೇವರು ಅವನಿಗೆ ಬಡತನ ಕೊಟ್ಟಿದ್ದ ಅರೋಗ್ಯ ಕಿತ್ಕೋಂಡಿದ್ದ, ಕಾಲೇಜ್ ಕಲಿಕೆ ಸಹ ಆತನಿಗೆ ಮರೀಚಿಕೆ . ಆದರೂ ಕುಗ್ಗದೇ ಎದೆ ಗುಂದದೇ, ತನ್ನಲ್ಲಿ ಇರದರ ಬಗ್ಗೆ ಗೊಣಗದೆ, ಇರೊ ಸ್ವಲ್ಪ ಧರ್ಯವನ್ನ ಹೇಚ್ಚಿಸ್ಕೋಂದು, ಕಸ್ಟ ಪಟ್ಟು ಅಟೊ ಕಲ್ತು , ದುಡಿದು ಒಂದರಿಂದ ಎರಡು ಅಟೊ ಮಾಡಿ, ದೇವರು ನನಗೆ ತುಂಬಾ ಕಸ್ಟ ಕೊಟ್ಟ ಅಂತ ಬಯ್ಯದೆ, ನಗುತ್ತ ದೇವರ ದಯೆ ಬದುಕು ಚಂದ ಇದೆ ಅಂತಾನಲ್ಲ, ಅರೆ ಎಂಥ ಛಲ ಎಂಥ ಜೀವನೋತ್ಸಾಹ ರಿ ಅವನದು ಸೂಪರ್ . 
                       ನಾವಿಂದು ಟಿವಿ ಪೇಪರ್ ನಲ್ಲಿ ನೋಡ್ತೇವೇ ಕೇಲವೋಬ್ರು ಎಂಥ ಸಣ್ಣ ಸಣ್ಣ ವಿಷಯಕ್ಕೆ ಜಿಗುಪ್ಸೆಗೊಂಡು ಆತ್ಮ ಹತ್ಯೆ ಮಾಡ್ಕೋತಾರೆ. ಹುಡುಗಿ ಪ್ರೀತಿ ಒಪ್ಪಿಲ್ಲ ಅಂತ , ಮನೇಲಿ ಅಪ್ಪ ಬೈದರು ಅಂತ , sslc ಲಿ ಮಾರ್ಕ್ಸ್ ಕಡಿಮೆ ಬಂತು ಅಂತ , ಸಾಲ ಆಯ್ತು ಅಂತ , ತೀರ ಇತ್ತೀಚೆಗೆ 21 ವರ್ಷದ ಹುಡುಗಿ ಒಬ್ಳು ಅಪ್ಪ ಮೊಬೈಲ್ ಕೋಡ್ಸಿಲ್ಲ ಅಂತ ಆತ್ಮ ಹತ್ಯೆ ಮಾಡ್ಕೊಂಡಳು. ಛೇ ಇವರೆಲ್ಲರ ಮುಂದೆ ಭೀರು ನನಗೆ ಅವತ್ತು ಹೀರೊ ಥರ ಕಂಡ. ಕಸ್ಟ ಬಂತು ಅಂತ ಪ್ರಾಣ ಕಳಕೊಂಡರೆ ಕಸ್ಟ ತೀರುತ್ತಾ ? ಈಜಬೇಕು ಈಜಿ ಜಯಸಬೇಕು ಅನ್ನೊ ಹಿರಿಯರ ಮಾತು ಎಸ್ಟು ಸತ್ಯ ಅಲ್ವಾ. ಸೋತಾಗ ಮತ್ತೆ ಪ್ರಯತ್ನಿಸೋಣ, ಗೆದ್ದಾಗ ಸೆಲೆಬ್ರೇಟ್ ಮಾಡೋಣ. ಕೈಮೀರಿದರ ಬಗ್ಗೆ ಚಿಂತಿಸುತ್ತ ಕೂಡದೇ ಇರೊ ಅವಕಾಶವನ್ನ ಸದುಪಯೋಗ ಪಡಿಸಿಕೊಳ್ಳೋಣ, ಯಾಕಂದ್ರೆ ಮತ್ತೆ ಮತ್ತೆ ಹುಟ್ಟೋಕೆ ಹುಲ್ಲು ಕಡ್ಡಿಯಲ್ಲ ಮಾನವ ಜನ್ಮ.  ಏನಂತೀರಿ ?
ಅವತ್ತು ಭೀರು ನ ಮೀಟ್ ಆಗಿ ಮಾತಾಡ್ಸಿ ಬಂದಾಗಿಂದ ಮೈ ಮನಸಲ್ಲಿ ಒಂದು ಹೊಸ ಹುರುಪು ಬಂದಂತಾಗಿದೆ, ಪಾಪ ಅಂಗವಿಕಲವಿದ್ರೂ  ಅಸ್ಟೊಂದು ಖುಷಿ ಯಿಂದ ಜೀವನ ಸವೀತಾನೇ ಅಂದ್ರೆ , ಎಲ್ಲ ನೆಟ್ಟಗಿರೋ ನಮಗೇನು ದಾಡಿ ಅಲ್ವಾ . ಸಣ್ಣ ಪುಟ್ಟದಕ್ಕೇಲ್ಲ ಡಿಪ್ರೆಶ್ಶ ಆಗೋ ನಿಮ್ಮ ಸ್ನೇಹಿತರು ಯಾರದ್ರೂ ಇದ್ರೆ  ಈ ಲಿಂಕ್ ಶೇರ್ ಮಾಡಿ ______ನಿಮ್ಮ ಸ್ನೇಹಿತ ಸಿದ್ದು 
                  
                

Comments

  1. ಸ್ಪೂರ್ತಿದಾಯಕ ಕಥೆ,ಚೆನ್ನಾಗಿದೆ ಸರ್

    ReplyDelete
  2. Awesome mama, it's really helpful

    ReplyDelete
  3. Super bro.... one salute ur fnd for my side

    ReplyDelete
  4. ನಮ್ಮಲ್ಲಿರೋ ಸುಪ್ತಮನಸ್ಸನ್ನು ಕಲಕಿ ಜಾಗ್ರತಗೊಳಿರೋ ಅಂತ ಸಾರಿ ಸಾರಿ ಹೇಳೋ ನಿಮ್ಮ ಈ ಪ್ರಯತ್ನಕ್ಕೆ ಹೃದಯಪೂರ್ವಕ ವಂದನೆ ಮಿತ್ರಾ ......

    ReplyDelete
  5. Mast ಅಣ್ಣಾ ಸೂಪರ್

    ReplyDelete

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ