ಪುಸ್ತಕವೆಂಬ ಪಂಚಾಮ್ರುತ

ದೆಶ ಸುತ್ತಬೇಕು ಕೋಶ ಓದಬೇಕು ಅಂತ ಒಂದ್ ಮಾತಿದೆ, ಏಕೆ ಗೊತಾ ?
ನಾವು ಇದ್ದಲ್ಲೆ ಇದ್ರೆ ಒಂದೆ ಜನಾಂಗ, ಒಂದೆ ಸಮಾಜ, ಒಂದೆ ಇತಿಹಾಸ, ಒಂದೆ ಆಚರಣೆ, ಒಂದೆ ಭಾಷೆ ಒಂದೆ ವೆಷದ ಕುರಿತು ಅರಿವಿರ್ತದೆ. ಆದ್ರೆ ದೇಶ ಸುತ್ತಿದ್ರೆ ಹೋಸ ಜನ, ಹೋಸ ಭಾಷೆ ಹೋಸ ವೇಷ, ಹೋಸ ಇತಿಹಾಸ ಹೋಸ ಆಚರಣೆ, ಒಂದೆ ಮಾತಲ್ಲಿ ಹೇಳೊದಾದ್ರೆ ನಾವು ಹೋಸ ಜಗತ್ತಿಗೆ ತೆರೆದುಕೋಳ್ತಿವಿ. ದೇಶ ಸುತ್ತೋದು ಎಲ್ರಿಗೂ ಸಾದ್ಯವಾಗ್ಲಿಕ್ಕಿಲ್ಲ, ಯಾಕಂದ್ರೆ ಇಚ್ಚಾಶಕ್ತಿಯ ಕೊರತೆ ಇರಬಹುದು, ಆರೊಗ್ಯ ಸಮಸ್ಯ ಇರಬಹುದು, ಹಣಕಾಸಿನ ತೊಂದರೆ ಇರಬಹುದು, ಇಲ್ಲ ಮನೆಯಲ್ಲಿ ಒಪ್ಪದಿರಬಹುದು. ಆದ್ರೆ ಪುಸ್ತಕ ಓದೊಕೆ ಎಲ್ಲರಿಂದ ಸಾದ್ಯವಿದೆ, ಓದೊ ಹವ್ಯಾಸ ಒಂದಿದ್ರೆ. ದೇಶ ಸುತ್ತೋದ್ರಿಂದ ಆಗುವ ಎಲ್ಲ ಉಪಗೋಗಗಳು ವಿವಿಧ ಭಾಗಗಳ, ಹಲವಾರು ಲೇಖಕರ ವಿಧ ವಿಧ ಪುಸ್ತಕ ಓದೊದ್ರಿಂದ ಆಗ್ತವೆ.
ಒಂದೊಳ್ಳೆ ಪುಸ್ತಕ ಜೊತೆಯಿದ್ರೆ ಒಬ ಒಳ್ಳೆ ಗೆಳೆಯ ಜೊತೆಯಿದ್ದ ಹಾಗಂತೆ.ಹೇಳಿದ್ದೆ ಹೇಳದ್ರೆ ಒಬ್ಬ ಗೆಳೆಯ ಬೋರ್ ಆಗಬಹುದು, ಮಾತಡಿದ್ದೆ ಮಾತಾಡದ್ರೆ ಒಬ್ಬ ಗೆಳತಿ ಬೋರ್ ಆಗಬಹುದು. ಹೇಗೆ ಗೊತ್ತಾ ?
ಒಬ್ಬಳು ಸುಂದರಿಯ ಮೇಲೆ ಲವ್ವಾಗಿರುತ್ತದೆ. ಮೊದಲಿನ ಹಾಗೆ ಚಿಟಿ ಬರೆದು ಪುಟ್ಟ ಮಕ್ಕಳ ಕೈಗೆ ಕೊಟ್ಟು, ಉತ್ತರಕ್ಕಾಗಿ ದಿನಗಟ್ಟಲೆ ಕಾಯುವ ಜಮಾನ ಇದಲ್ಲ. 4ಜಿ ಜನರೇಶನ್ ತುಂಬಾ ಸ್ಪೀಡ್. ಹೊತ್ತು ನೋಡಿ ಹತ್ತು ನಂಬರ್ ಡೈಲ್ ಮಾಡಿದರೆ  ಸಾಕು, ಅವಳ ಧ್ವನಿ ನಿಮ್ಮ ಕಿವಿಗೆ ನಿಮ್ಮ ಧ್ವನಿ ಅವಳ ಕಿವಿಗೆ. ಆ ಮಧುರ ಧ್ವನಿ ಕಿವಿಗೆ ಬೀಳ್ತಿದ್ದ ಹಾಗೆ ಎಂಥ ಹಿತ. ಇಡಿ ಜಗತ್ತಿನ ಖುಷಿಗಳೆಲ್ಲ ತಕ್ಕಡಿಯ ಒಂದು ಕಡೆಯಾದ್ರೆ, ಅವಳ ಮಾತು ನಗು ಒಂದು ಕಡೆ. ನಿಮಿಷ ಕ್ಷಣದಂತೆ ಕಳಿತದೆ, ತಾಸು ನಿಮಿಷದಂತೆ ಉರುಳ್ತದೆ, ಇಡಿ ದಿನ ಒಂದು ತಾಸಿನಂತೆ ಬದಲಾಗ್ತದೆ. ಆದ್ರೆ ಈ ಹಂಬಲ ಕುತೂಹಲ ತುಂಬ ದಿನ ಉಳಿಯಲ್ಲ, ದಿನ ಕಳೆದಂತೆ ಕಡಿಮೆ ಆಗ್ತಾ ಬರ್ತದೆ. ಕಾರಣ ಸಿಂಪಲ್ಲ್ , ಏನೂ ಉಳಿದಿರಲ್ಲ ಅಲ್ಲಿ ಮಾತಾಡೋಕೆ ಎಲ್ಲ ಮಾತಾಡಿ ಮುಗಿಸಿರ್ತಿವಿ (ಇದಕ್ಕಿಂತ ಹೆಚ್ಚಿಗೆ ವಿವರಿಸಿ ಹೇಳೊ ಅವಶ್ಯಕತೆ ಇಲ್ಲ ಅಲ್ವ ? ಫೈನ್)
ಆಮೇಲೆ,,,
ಅವಳ ಫೋನ್ ಬರುವಿಕೆಗಾಗಿ ಹಸಿರು ಬಟನ್ ಮೇಲೆ ಕೈಯಿಟ್ಟು ಕಾಯ್ತಾ ಕೂಡುತಿದ್ದೊರು, ಎರಡು ಮೂರು ರಿಂಗಿಗೆ ಕಾಲ್ ರಿಸೀವ್ ಮಾಡೋಕೆ ಶುರು ಮಾಡ್ತೀರಿ. ಕಾಲ್ ರಿಸೀವ್ ಮಾಡದ್ರೂ 10 ರಿಂದ 15 ನಿಮಿಷ ಮಾತಾಡಬೇಕಾದ್ರೆ ಸಾಕಾಗಿ ಬಿಡ್ತದೆ. ಒಂದಿನ, ಅಮ್ಮ ಊಠಕ್ ಕರಿತಿದಾಳೆ ಇಡು ಅಂತಿರಿ. ಎರಡನೆ ದಿನ, ಅಪ್ಪ ಬಂದ್ರು ಇಡು ಅಂತಿರಿ. ಮೂರನೆ ದಿನ ಬೈಕ್ ಮೇಲದಿನಿ ಮನೆಗ್ ಹೋಗಿ ಕಾಲ್ ಮಾಡ್ತಿನಿ ಅಂತಿರಿ. ಮೊದ ಮೊದಲು ಯಾವಾಗ ಕಾಲ್ ಮಾಡ್ತಾಳೆ ಅಂತ ಕಾಯ್ತಿದ್ದೋರು, ಇಗ (ಆಪ್ಟರ್ ಕ್ಲೈಮ್ಯಾಕ್ಸ್) ಯಾಕಪ್ಪ ಕಾಲ್ ಮಾಡ್ತಾಳೆ ಅಂತಿರಿ, ನಿಜಾ ಅಲ್ವಾ ?
ಹಾಗಂತ ತಪ್ಪು ಪ್ರೀತಿಯದಲ್ಲ, ಪ್ರೀತಿಯನ್ನ ನಾವು ನಡೆಸಿಕೊಳ್ಳುವಂತಹ ರೀತಿಯದ್ದು. ಹುಡುಗ ಹುಡುಗಿ ವಿಷಯದಲ್ಲಿ ಮಾತ್ರ ಹೀಗಾಗುತ್ತೆ ಅಂತಲ್ಲ. ಎಂಥಹ ಹಿಟ್ ಸಿನಿಮಾನೆ ಆಗಲಿ, ಮೊದಲ ಸಲ ನೋಡುವಾಗಿನ ಕುತೂಹಲ ಎರಡನೆ ಸಲ ನೋಡುವಾಗ ಇರಲ್ಲ. ಕಾಮಿಡಿ ಕಿಂಗ್ ಗಂಗಾವತಿ ಪ್ರಾಣೇಶ್ ರ ಜೋಕ್ ಕೇಳಿ ಮೊದಲ ಸಲ ನಕ್ಕಷ್ಟು ನೀವು ಎರಡನೆ ಸಲ  ನಗಲ್ಲ. ಕೆಲ ಯುವಕರಿಗೆ ವಿಪರೀತ ದೇವರ ಸಿನಿಮಾ ನೋಡುವ ಹುಚ್ಚಿರ್ತದೆ, ದರುಶನಕ್ಕಿಂತ ಮೊದಲಿದ್ದ ಎಕ್ಷೈಟ್ ಮೆಂಟ್ ನಂತರ ಉಳಿಯಲ್ಲ.


ನಾ ಹೇಳ್ತಿರೊದು ಇಷ್ಟೆ, ಜಗತ್ತಿನ ಎಂಥಹ ಖುಷಿಯೆ ಆಗಲಿ  ಎಂಥಹ ಕುತೂಹಲವೆ ಆಗಲಿ ಅದಕ್ಕೊಂದು ಆಯಸ್ಸಿದೆ, ಜೀವ ಉಳಿಸೊ ಮೆಡಿಸಿನ್ ಗೂ ಎಕ್ಸ್ಪೈರಿ ಡೇಟ್ ಇರೊ ಹಾಗೆ. ಆದರೆ ಒಂದು ಪುಸ್ತಕ (ಪುಸ್ತಕ ಅಂದ್ರೆ - ಮೋಹ ದಾಹ, ಕಾಡತಾವ ನೆನೆಪು, ರತಿ ಮನ್ಮಥ ದಂತಹ ಪೋಲಿ ಪುಸ್ತಕಗಳಲ್ಲ. ಒಳ್ಳೆ ಪುಸ್ತಕ) ದ ಒಡನಾಟ ಯಾವತ್ತೂ ಬೇಸರ ಆಗೊದಿಲ್ಲ, ಎಷ್ಟು ಸರ್ತಿ ಓದಿದರೂ ಬೋರ್ ಆಗೊದಿಲ್ಲ. ಕೆಲ ಲೇಖಕರ ವಿಷಯ ಆಯ್ಕೆ, ನಿರೂಪಣಾ ಶೈಲಿ, ಬಳೆಸುವ ಭಾಷೆ ಎಷ್ಟು ಆಪ್ತವಾಗಿರ್ತದೆ ಅಂದ್ರೆ, ಅವರ ಪುಸ್ತಕ ಓದ್ತಾ ಅವರ ಭಾವಚಿತ್ರ ನೆನಸಿಕೊಂಡ್ರೆ ಅವರು ನಮ್ಮ ಎದುರಿಗೆ ಕೂತು ಎಲ್ಲವನ್ನೂ ವಿವರಿಸ್ತಿದ್ದಾರೆನೊ ಅಂತ ಅನ್ನಿಸ್ತದೆ. ಅಂತಹ ಲೇಖಕರ ಪುಸ್ತಕ ಪಂಚಾಮ್ರುತ ಸವಿಯನ್ನ ಕೊಡ್ತದೆ.
ಪಂಚಾಮ್ರುತ ಅಂದ್ರೆ ಗೊತ್ತಲ್ಲ ? ದೇವಸ್ಥಾನಗಳಲ್ಲಿ, ಹಾಲು ಹಣ್ಣು ತುಪ್ಪ ಸಕ್ಕರೆ ಬೆರೆಸಿ ಅಭಿಶೇಕ ತಯಾರಿಸ್ತಾರಲ್ಲ ಅದು. ಒಮ್ಮೆ ಅದರ ಸವಿಯನ್ನ ನೆನೆಸಿಕೊಳ್ಳಿ, ಬಾಯಲ್ಲಿ ನೀರು ಬರ್ತದೆ ಅಲ್ವಾ ?  . ಒಂದೊಳ್ಳೆ ಪುಸ್ತಕ ಪಂಚಾಮ್ರುತ ಸವಿಯನ್ನ ಕೊಡ್ತದೆ ಟ್ರೈ ಮಾಡಿ ನೋಡಿ.
ನಾನೇನು ಜಾಸ್ತಿ ಓದಿದವನಲ್ಲ, ಸಾಹಿತ್ಯದ ಬಗ್ಗೆ ಆಳವಾದ ಅಧ್ಯಯನ ಮಾಡಿದವನೂ ಅಲ್ಲ. ಓದಿರೊ ಸ್ವಲ್ಪ ಓದೆ ಕೊಟ್ಟಿರೊ ಜಾಸ್ತಿ ಖುಷಿಯನ್ನ ನಿಮ್ಮ ಜೊತೆ ಹಂಚಿಕೊಂಡೆ ಅಷ್ಟೆ. ಪುಸ್ತಕ ಓದಿನ ಕುರಿತು  ನಿಮ್ಮ ಜೊತೆ ಹಂಚಿಕೊಡ ಈ ನನ್ನ ಅನಿಸಿಕೆ ನಿಮಗೆ ಇಷ್ಟ ಆಗಿದ್ರೆ, ಈ ಲಿಂಕನ್ನ್ ಇತರ್ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಪುಸ್ತಕ ಓದಿನ ಸವಿ ಹತ್ತಿಸಿ. & ಇತ್ತೀಚೆಗೆ ನೀವು ಯಾವುದಾದ್ರು ಹೋಸ ಪುಸ್ತಕ ಓದಿದ್ರೆ ನನಗೂ ತಿಳಿಸಿ, ನಾನೂ ಓದ್ತಿನಿ. ನಮಸ್ಕಾರ,,,,,
ನಿಮ್ಮ ಸ್ನೇಹಿತ __ ಸಿದ್ದು ತಾಂಬೆ.

Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ