ಕೊಬ್ಬರಿ ಉಂಡಿ ಕತಿ

ಆಗ ನಾನು ಆರನೇ ತರಗತಿ ಯಲ್ಲಿ ಓದುತ್ತಿರಬಹುದು. ವಿಜಯಪುರದ ಹರಳಯ್ಯ ಹಾಸ್ಟೆಲ್ ನಲ್ಲಿದ್ದೆ. ಊರಿಂದ ಯಾರಾದರೂ ಬಂದರೆ ಬುತ್ತಿ ಕಟ್ಟಿ ಕಳಿಸೋರು. ರೊಟ್ಟಿ ಪಲ್ಯ, ಉಂಡಿ ಚುಡಾ ಹೀಗೆ ಚಿಕ್ ಮಕ್ಕಳಿಗೆ ಏನ್ ಬೇಕು ಅದೆಲ್ಲ. ಅದರಲ್ಲಿ ನಮ್ ಮಮ್ಮಿ ಕೊಬ್ಬರಿ ಉಂಡಿ ಮಾಡ್ತಿದ್ರು ಹಾಗೆ ಅದು ನನ್ ಫೆವರಿಟ್ ಕೂಡ. ಮನೆಯಲ್ಲಿ ಸ್ವಲ್ಪ ಕೊಬ್ಬರಿ ಜಮಾ ಆದರೆ ಅದನ್ನೇ ಕುಟ್ಟಿ ಸಕ್ಕರೆ ಬೆರೆಸಿ, ಉಂಡಿ ಕಟ್ಟಿ ಕಳಿಸೋರು. ಅವತ್ತು ಸಂಜೆ ಸುಮಾರು ಐದು ಗಂಟೆ ಆಗಿರಬಹುದು ಹಾಸ್ಟೆಲ್ ನಲ್ಲಿ ಒಂದು ಉಂಡಿ ತಗೊಂಡು ತಿಂತಾ ಕೂತಿದ್ದೆ. ನಮ್ಮೂರಿನವನೆ ಆದ ಒಬ್ಬ ಹುಡುಗ ನೋಡಿ ಬೇಡಿದ. ಅರ್ಧ ಉಂಡಿ ಕೊಟ್ಟೆ, ತಿಂದ. ಆತನಿಗೂ ರುಚಿ ಅನಿಸಿರಬಹು, ಆತ ನನ್ ಉಂಡಿ ಖರೀದಿಸಲು ಮುಂದಾದ. Sorry ಆತನ ಹೆಸರು ನೆನಪಿಲ್ಲ, ಬಟ್ ಅವನ ಅಡ್ಡೆ ಹೆಸರು ಬಾಳಗಿ ಅನ್ಸತ್ತೆ. ಆಗ್ ಚಿಕ್ ಮಕ್ಳು ನಾವು, ವೆವಹಾರ ಮಾಡೋಕೆ ದುಡ್ಡೇಲ್ಲಿಂದ ಬರತ್ತೆ. ಆತನ ಹತ್ರ ಒಂದು ಚಂದನೆಯ ಸ್ಕೂಲ್ ಬ್ಯಾಗ್ ಇತ್ತು, ನನಗೆ ಆಗ್ ಬ್ಯಾಗ್ ಇರಲಿಲ್ಲ, ಪ್ಲಾಸ್ಟಿಕ್ ಚೀಲದಲ್ಲಿ ಪುಸ್ತಕ್ ಇಡ್ತಿದ್ದೆ.
ಆಗ ಅವನು, ನಿನಗೆ ನನ್ ಬ್ಯಾಗ್ ಕೊಡ್ತೀನಿ, ನಿನ್ನ ಎಲ್ಲ ಕೊಬ್ಬರಿ ಉಂಡಿ ಕೊಡ್ತೀಯಾ ಅಂದ. ತಕ್ಷಣಕ್ಕೆ ನನಗೆ ಖುಷಿ ಆಯ್ತು. ಬಡೂರು ನಾವು, ಆಗ ದುಡ್ಡ ಕೊಟ್ಟು ಅಂತ ಬ್ಯಾಗ್ ತಾಳ್ಳೋಕೆ ಆಗ್ತಿರಲಿಲ್ಲ, ಸಿಕ್ಕಿದ್ದೇ ಚಾನ್ಸು ಅಂತ ಹುಂ ಅಂದೆ. ನನ್ ಹತ್ರ ಐದಾರು ಉಂಡಿ ಇದ್ದು ಕೊಟ್ಟೆ, ಆತ ತನ್ನ ಬ್ಯಾಗ್ ಖಾಲಿ ಮಾಡಿ ಕೊಟ್ಟ. ಒಂದ ಐದ್ ನಿಮಿಷ ಆಯ್ತು ಅಮ್ಮ ನೆನಪಾಗಿ ಬಿಟ್ಲು, ನನಗೆ ಇಷ್ಟ ಅಂತ ಅಮ್ಮ ನನಗೋಸ್ಕರ ಉಂಡಿ ಮಾಡಿ ಕಟ್ಟಿದ್ದಾರೆ, ನಾನು ಮಾರತಿದೀನಿ ಅಲಾ ಅನಿಸ್ತು. ಮಾರ್ತಿದೀನಿ ಅನ್ನೋದಕ್ಕಿಂತ  ಅಮ್ಮನ ನೆನಪು, ಅಮ್ಮನ ಪ್ರೀತಿ, ಅಮ್ಮನ ಕಾಳಜಿ, ಅಮ್ಮನೇಡೇಗಿನ ಆ ಅಟ್ಯಾಚ್ಮೆಂಟ್ ಬಿಟ್ ಕೊಡ್ತಿದಿನಿ ಏನೊ ಅನಿಸ್ತು. ಮತ್ತೆ ಆತನಿಗೆ ಕರೆದು, ನಿನ್ ಬ್ಯಾಗ್ ತಗೋ ನನ್ ಉಂಡಿ ನನಗೆ ವಾಪಸ್ ಕೊಡು ಅಂದೆ, ಅವನು ಇಷ್ಟೆ ಮುಖ ಮಾಡಿ ವಾಪಾಸ್ ಕೊಟ್ಟ. ಒಂದ ಉಂಡಿ ಅವನಿಗೆ ಹಾಗೆ ಫ್ರಿ ಕೊಟ್ಟೆ. ಉಂಡಿ ವಾಪಸ್ ಪಡೆದ ಮೇಲೆ ಏನೊ ಸಮಾಧಾನ, ಅಮ್ಮ ನನ್ ಜೊತೆಗೆ ಇದಾರೇನೋ ಅನ್ನೋ ಅನುಭವ. 
ಇದೆಲ್ಲ ಯಾಕ್ ಹೇಳ್ತಿದೀನಿ ಅಂದ್ರೆ, ನಮ್ ಲ್ಯಾಬ್ ನಲ್ಲಿ ಮೊನ್ನೆ ಒಂದ ಘಟನೆ ನಡೀತು. ತಾಯಿ ವಯಸ್ಸಿನ ಹೆಣ್ಮಗಳು. ತಿಂಗಳಿಗೊಮ್ಮೆ ನಮ್ ಲ್ಯಾಬ್ ಗೆ ಶುಗರ್ ಟೆಸ್ಟ್ ಮಾಡಿಸೋಕೆ ಬರ್ತಾರೆ. ಸುಮಾರು ಎರಡು ವರ್ಷದಿಂದ ನನಗೆ ಪರಿಚಯ ಅವರು, ಲ್ಯಾಬನಲ್ಲಿ ಯಲ್ಲರಿಗಿಂತ ನನಗೆ ಸ್ವಲ್ಪ ಜಾಸ್ತಿ ಹಚ್ಕೊಂಡಿದ್ದಾರೆ. ನಾನು ಒಳ್ಳೆ ಹುಡುಗ ಅನ್ನೋ ಹುಸಿ ನಂಬಿಕೆ ಅವರದು. ಹಾಗೆ ಪ್ರತಿ ಸರ್ತಿ ಬರೋವಾಗ ಮನೆಯಲ್ಲಿ ಏನಾದ್ರೂ ಸ್ಪೆಷಲ್ ತಿಂಡಿ ಮಾಡಿದ್ದರೆ ನನಗೊಂದ್ ಚೂರು ತಂದು ಕೊಡ್ತಾರೆ. ಮೊನ್ನೆ ಅವರು ಬಂದಾಗ ನಾನು ಲ್ಯಾಬ್ ನಲ್ಲಿ ಇರಲಿಲ್ಲ ಆಚೆ ಹೋಗಿದ್ದೆ. ಅವರು ಕಾಲ್ ಮಾಡಿದರು.
ಸಿದ್ದು ಎಲ್ಲಿದೀಯ ನಾನ ಲ್ಯಾಬ್ ಗೆ ಬಂದೀನಿ, ನಿನಗೆ ಕೊಡೋಕೆ ಒಂದಿಷ್ಟು ಮನುಕ್ ತಂದೀನಿ ಅಂದ್ರು. ಆಂಟಿ ನಾ ಹೊರಗಡೆ ಅದಿನಿ ರಿ ಸ್ವಲ್ಪ್ ಲೇಟ ಆಗ್ತದ, ಅಲ್ಲೇ ಲ್ಯಾಬ್ ನಲ್ಲಿ ಕೊಟ್ಟು ಹೊಗರಿ, ನಾ ಆಮೇಲ್ ಇಸ್ಕೊತಿನಿ ಅಂದೆ. ಅದಕ್ಕ ಅವರು, ಇಲ್ಲ ಅಪ್ಪಿ ಲ್ಯಾಬ್ ನಲ್ಲಿ ನಾಲ್ಕೈದು ಜನ ಅದಾರ ಅವರ ಕಡೆ ಕೊಟ್ರ ನೀ ಬರೋಷ್ಟೊತ್ತಿಗೆ ಎಲ್ಲ ತಿಂದ್ ಖಾಲಿ ಮಾಡಿ ಬಿಡ್ತಾರ, ನಿನಗೆ ಉಳಿಯಲ್ಲ ಆಮೇಲೆ. ಲೇಟ ಆದ್ರೂ ಪರವಾಗಿಲ್ಲ ಬಾ, ನಾ ವೇಟ್ ಮಾಡ್ತೀನಿ ಅಂದ್ರು. ಅವರ ಪ್ರೀತಿಗೆ ಏನ್ ಹೇಳಬೇಕು ಗೊತ್ತಾಗ್ಲಿಲ್ಲ, ಅವತ್ತು ಅಮ್ಮ ಮತ್ತೆ ಆಕೆ ನನಗಾಗಿ ಮಾಡಿ ಕೊಡ್ತಿದ್ದ ಕೊಬ್ಬರಿ ಉಂಡಿ ನೆನಪಾಯ್ತು. ಸರಿ ಆಂಟಿ ಬರ್ತೀನಿ ರಿ ಒಂದು ಹತ್ತು ನಿಮಿಷ ಅಂತ ಕಾಲ್ ಕಟ್ ಮಾಡಿದೆ.
ನಾನ್ ಆಮೇಲ್ ಬಂದೆ ಎರಡ್ ನಿಮಿಷ ಮಾತಾಡದೆ, ಹೊರಗಡೆ ಕರೆದು ಮನುಕ್ ಪಾಕೆಟ್ ಕೊಟ್ರು, ಅವರ ಹೊಲದಲ್ಲಿ ಬೆಳೆದ ದ್ರಾಕ್ಷಿ ದು ಇರಬಹುದು ಸ್ವಲ್ಪ ಜಾಸ್ತಿ ಇದ್ದು. ಒಮ್ಮೆ, ಜಾಸ್ತಿ ಇವೆ ಲ್ಯಾಬ್ ನಲ್ಲಿ ಎಲರಿಗೂ ಸ್ವಲ್ಪ ಸ್ವಲ್ಪ ಕೊಡೋಣ ಅನಿಸ್ತು. ಮತ್ತೊಮ್ಮೆ, ಬೇಡ ನನಗೋಸ್ಕರ ತಂದಿದ್ದಾರೆ ಅಂತ ಅನಿಸ್ತು. ಯಾರಿಗೂ ಕೊಡಲಿಲ್ಲ ಎಲ್ಲ ರೂಮ್ ಗೆ ತಂದು ದಿನ ಸ್ವಲ್ಪ ಸ್ವಲ್ಪ ಒಬ್ಬನೇ ತಿಂದು ಖಾಲಿ ಮಾಡಿದೆ. ಎಷ್ಟು ಸ್ವಾರ್ಥಿ ನಾನು ಅನ್ಸತ್ತೆ ಅಲಾ ನಿಮಗೆ.
ಫ್ರೆಂಡ್ಸ್ ಎಲ್ಲ ಸೇರಿದಾಗ ಬೈ ಟು ಸಿಗರೇಟ್ ಹೊಡಿತೀವಿ, ಒಬ್ಬರು ಇನ್ನೊಬ್ಬರ ಬಿಯರ್ ಶೇರ್ ಮಾಡ್ಕೊಂಡು ಕುಡೀತೀವಿ. ಆದ್ರೆ ಯಾರಾದ್ರೂ ನನಗೆ ಅಂತ ಏನಾದ್ರೂ ಕೊಟ್ರೆ ಅದರ ಜೊತೆಗೆ ಭಾವನಾತ್ಮಕ ಸಂಬಂಧ ಶುರುವಾಗಿ ಬಿಡ್ತದೆ ನನಗೆ, ಅದನ್ನ ಯಾರಿಗೂ ಕೊಡಲ್ಲ,. ಹೀಗೆ ಕೋಲವೊಂದು ವಿಷಯದಲ್ಲಿ ತುಂಬ ಭಾವುಕ ಮತ್ತು ಸ್ವಾರ್ಥಿ ನಾನು.
ನನ್ ಹತ್ರ ಈಗ್ಲೂ ಒಂದಿಷ್ಟು ಪೆನ್ ಮತ್ತೆ ಕಿ ಚೈನ್ ಮತ್ತೆ ಇತರೆ ಒಂದಿಷ್ಟು ಗಿಫ್ಟ್ ಐಟಂ ಇವೆ, ಸ್ನೇಹಿತರು ನನಗೆ ಅಂತ ಕೊಟ್ಟಿದ್ದು. ಅವನ್ನು ಯೂಸ್ ಸಹ ಮಾಡಿಲ್ಲ, ಯಾರಿಗೂ ಕೊಟ್ಟಿಲ್ಲ ಹಾಗೆ ಜೋಪಾನ ವಾಗಿ ಇಟ್ಟಿದ್ದೀನಿ. ಅವೆಲ್ಲ ಆಗಾಗ ನೋಡ್ತಿದ್ರೆ ಅವರೆಲ್ಲ ಈಗ್ಲೂ ನನ್ ಜೊತೆಗೆ ಇದಾರೆ ಅನ್ಸತ್ತೆ.ಆಚಾನಕ್ಕಾಗಿ ಅವು ಮಿಸ್ ಆದ್ರೆ, ಅವರನ್ನ ಕಳ್ಕೊಂಡಷ್ಟೇ ಸಂಕಟ ಆಗತ್ತೆ. ಆಗಾಗ ನೋಡಿ, ಕೈಯಲ್ಲಿ ಹಿಡಿದು ಖುಷಿ ಪಟ್ಟು ಮತ್ತೆ ಹಾಗೆ ಜೋಪಾನ ವಾಗಿ ಇಡ್ತೀನಿ.
ಕ್ಷಮಿಸಿ ಕೆಲ ವಿಷಯದಲ್ಲಿ ನಾನು ಸ್ವಾರ್ಥಿ ಮತ್ತೆ ತುಂಬ ಭಾವುಕ. ನನಗೆ ಅಂತ ಆತ್ಮೀಯರು ಕೊಟ್ಟ, ತಿಂಡಿ ಇರ್ಬೋದು, ಬಟ್ಟೆ ಇರ್ಬೋದು, ವಾಚ್ ಇರ್ಬೋದು, ಕಿ ಚೈನ್ ಇರ್ಬೋದು, ಪೆನ್ ಇರ್ಬೋದು, ಅವನ್ನ ಯಾರಿಗೂ ಕೊಡಲ್ಲ, ಅವೆಲ್ಲ ನನಗೆ ಮತ್ತು ನನಗೆ ಮಾತ್ರ..
ಇನ್ನೂ ಕೆಲವೊಂದು ವಿಷಯ ಹೇಳೋದ್ ಇದೆ, ಇವತ್ತಿಗೆ ಇಷ್ಟ ಸಾಕು, ಮತ್ತೆ ಇನ್ನೊಮ್ಮೆ ಉಳಿದದನ್ನ ಮಾತಾಡೋಣ by....
ನಿಮ್ಮ ಸ್ವಾರ್ಥಿ.. ಸಿದ್ದು.

Comments

  1. Wow Anna super Anna jii nangu tumba KUSHI aitu because ivath swlpa mood upset agitu odidamele samadan aitu

    ReplyDelete

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ