ಪ್ರೀತಿ ಅಂದ್ರೆ ಇಸ್ಟೇನಾ ?
ನಾನಾಗ puc 2nd year ಇದ್ದಿರಬಹುದು, ನಾನು ಪ್ರಶಾಂತ ಮತ್ತು ಗೈಬು ಗ್ಯಾಂಗ್ ಬಾವಡಿಯ ಕಪ್ರದ ಅಂಕಲ್ ಮನೆಯ ಮೇಲಿನ room ಲ್ಲಿ ಬಾಡಿಗೆ ಇದ್ದೆವು. ಎಲ್ಲರ ಹತ್ರ normal mobile ಇದ್ದು , ಆಗಿನ್ನೂ jio sim ಬಂದಿರಲಿಲ್ಲ, airtel sim ಇತ್ತು . ಅದು call rate ಜಾಸ್ತಿ ಇತ್ತು ಮತ್ತೂ msg ಕೂಡಾ free ಇರಲಿಲ್ಲ . ಅಂತಹ ಸಮಯದಲ್ಲಿ docomo ದವರು ಹೊಸಾ offer ಬಿಟ್ರು , call rate 10 ಪೈಸೆ ಮತ್ತು ದಿನಾ 100 sms free ಅಂತ . ಆಗ ಯಾರ್ಯಾರ ಹತ್ರ ಡಬಲ ಸಿಮ್ ಮೊಬೈಲ್ ಇತ್ತೋ ಅವರೆಲ್ಲ airtel ಜೊತೆ docomo ನೂ ತಗೊಂಡ್ರು . ಅದರಲ್ಲಿ ನನ್ನ room mate ಆದ ಪ್ರಶಾಂತ ಮತ್ತು ಗೈಬು ಕೂಡಾ .
ಮದ್ಯಾಹ್ನ ಕಾಲೇಜು ಅಭ್ಯಾಸ ಅಂತ ಆದ್ರೆ , ಸಂಜೆ 6 ಗಂಟೆಗೆ ಮೂವರು ರೂಮ್ ನಲ್ಲಿ ಒಂದು ತಾಸು ಹರಟೆಯ ರೂಡಿ ಇತ್ತು . docomo sim ತಗೊಂಡ ಮ್ಯಾಲ ಹೀಗೆ ಒಂದಿನ ಕೂತಾಗ ಪ್ರಶಾಂತ ಒಂದು ಕ್ರಿಮಿನಲ್ idea ಹೇಳಿದ ಗೈಬು ಗೆ. ಅದೇನ್ ಅಂದ್ರೆ ___ ತಮ್ಮ ತಮ್ಮ docomo ನಂಬರ್ ನ ಕೊನೆಯ 4 ಸಂಖ್ಯೆ ಗಳನ್ನ ಚೇಂಜ್ ಮಾಡಿ ಅಂದ್ರೆ ಮನಸಿಗೆ ಬಂದ 4 ಸಂಖ್ಯೆ ಸೇರಿಸಿ ಅದು 10 ಸಂಖ್ಯೆಯ docomo ನಂಬರ್ ಮಾಡಿ , ಆ ಅಪರಿಚಿತ ನಂಬರ್ ಗೆ ಹಾಯ್ ಅಂತ msg ಕಳಿಸೋದು . ನೋಡಿದವರು ಮರಳಿ call ಮಾಡಿದಾಗ , ಅದು ಹುಡುಗಿ ನಂಬರ್ ಆಗಿದ್ರೆ save ಮಾಡ್ಕೊಳೋದು , ಅಥವಾ ಹುಡುಗ ಅಂಕಲ್ ಆಂಟಿ ನಂಬರ್ ಆಗಿದ್ರೆ sorry by miss ಆಗಿ ಬಂತು ಅಂತ ಹೇಳಿ ಆ ನಂಬರ್ delete ಮಾಡೋದು .
ಕೇಳಿ ನಂಗೂ ಒಂಥರಾ ವಿಚಿತ್ರ ಅನಿಸ್ತು , ನೋಡೋಣ ಎನ್ ಮಾಡ್ತಾರೆ ಅಂತ ಕುತೂಹಲ ದಿಂದ ಕಾದೆ , ಈಡಿಯಟ್ಸ್ ಹೇಳಿದಂಗೆ ಮಾಡಿದ್ರು .
ಅವತ್ತು ಇಬ್ರೂ ಮಿನಿಮಮ್ 8 ರಿಂದ 10 ನಂಬರ್ ಗಳಿಗೆ msg ಮಾಡದರು. ಕೆಲ ನಂಬರ್ ರಿಂದ ತಕ್ಷಣ call ಬಂತು ಕೇಲವೋಬ್ಬರು ತಾಸು ಬಿಟ್ಟು ಇಲ್ಲ ಮರುದಿನ call ಮಾಡಿ ವಿಚಾರಿಸಿದರು . ಇವರು ಪ್ರಿ ಪ್ಲಾನ್ ಪ್ರಕಾರ ಎರಡು ದಿನದಲಿ ತಲಾ ಒಂದೊಂದು ಹುಡುಗಿ ನಂಬರ್ save ಮಾಡ್ಕೊಂಡ್ರು .
ಮುಂದೆ ಏನಾಯ್ತು ಅಂದ್ರೆ , ದಿನಾ ಆ ಹುಡುಗಿ ಯರಿಗೆ gm-gn ಅಂತ msg ಮಾಡ್ತಿದ್ರು . ಮುಂದೆ ಹಾಯ್ ಹಲ್ಲೋ ವರೆಗೂ ಬಂದು ಒಂದು ತಿಂಗಳಲ್ಲಿ call ಮಾಡಿ ಮಾತಾಡೋಕೆ ಶುರು ಮಾಡದರು. ಹೆಸರು ಊರು ಅಭ್ಯಾಸ ಹವ್ಯಾಸ ಎಲ್ಲವುಗಳ ವಿನಿಮಯದ ಆಯ್ತು . ಮತ್ತೆ ಒಂದಿನ ಇಬ್ರೂ ಗುಸು ಗುಸು ಅಂತ ಮಾತಾಡ್ತ ನೋಡೋಣ ಇವತ್ತ್ ಲವ್ ಪ್ರಪೋಸ್ ಮಾಡೋಣ ಅಂದ್ರು . ಅಲಾ ಇವರ ಇನ್ನೂ ಏನೇನ್ ಮಾಡ್ತಾರ ನೋಡಬೇಕು ಅಂದ್ಕೊಡು ಕೂತ್ರೆ, ಗೈಬು ತನ್ನ ಹುಡುಗಿಗೆ call ಮಾಡೇ ಬಿಟ್ಟ . ಮೊದಲು ಅದು ಇದು ಮಾತಾಡಿ ಅಮೇಲೆ I love you ಅಂದ , ಅವಳು ಮರು ಮಾತಾಡದೇ ಹೂಂ ಅಂದ್ಲು . ಏನೊ ಗೆದ್ದ ಖುಷಿ ಯಲ್ಲಿ ತೇಲಿದ ಗೈಬು . ಪ್ರಶಾಂತ ಕೂಡಾ ಅವನ ಹಾಗೆ ಮಾಡಬೇಕು ಅಂತ ಅವನ ಹುಡುಗಿಗೆ call ಮಾಡಿ love U ಅಂದ . ಅವಳು ಬೈದು call cut ಮಾಡಿ , ಇವನ ನಂಬರ್ block ಮಾಡಿ ಬಿಟ್ಲು . ಪ್ರಶಾಂತ ಮುಖ ಸಪ್ಪೆ ಮಾಡಿ ನಿಂತಿದ್ರೆ , ನಾನೂ ಗೈಬು ಬಿದ್ದು ಬಿದ್ದು ನಕ್ಕಿದ್ವಿ idea ಕೊಟ್ಟವನದೇ plof ಆಯ್ತು ಅಂತ .
ಇದರಿಂದ ನನಗೇನೂ ಅನಿಸಿರಲಿಲ್ಲ , ಎಡಬಿಡಂಗಿ ಮನಸು ಹೊಸಾ ವೆ ನಲ್ಲಿ ಹುಡುಗಿ ನ ಸೆಲೆಕ್ಟ್ ಮಾಡಿ ಪ್ರೀತಿಸಿದರು . ಆದ್ರೆ ನಂಗೆ ಕಾಡಿರೋದು ಈ story ಯ ಕ್ಲೈಮಾಕ್ಸ್ . ಅದೇನು ಹೇಳ್ತೀನಿ ಕೇಳಿ . ... ಗೈಬು ತನ್ನ ಪ್ರೀತಿ ಒಪ್ಕೊಂಡ ಹುಡುಗಿ ಜೊತೆ ದಿನಾ call ಮಾಡಿ ಮಾತಾಡ್ತಿದ್ದ ನಗ್ತೀದ್ದ , ಅವಳು ಬೇಗ call ಪಿಕ್ ಮಾಡಿಲ್ಲ ಅಂದ್ರೆ ಬೇಜಾರ್ ಆಗ್ತಿದ್ದ , ತುಂಬಾ ಹಚ್ಕೋಂದಿದ್ದ ಅವಳಿಗೆ . K ಇದು normal . ಒಂದಿನ ಅವನಿಗೆ ಅವಳನ್ನ ನೋಡೋ ಆಶೆ ಆಗಿ , ನಿನ್ನ ನೋಡಬೇಕು ಅನಿಸ್ತಿದೆ ನನ್ನ adress ಗೆ ಒಂದು ನಿನ್ನ ಫೋಟೋ ಪೋಸ್ಟ್ ಮಾಡಿ ಕಳಿಸು ಅಂದ . ಯಾಕಂದ್ರೆ ಆಗ selfy ತಗೆದು send ಮಡೋಕೆ ಸ್ಮಾರ್ಟ್ ಫೋನ್ ಆಗಲಿ watsapp ಆಗಲಿ ಇರಲಿಲ್ಲ . ಅವಳೂ ಹೂಂ ಅಂದ್ಲು , ನಾವಿರೋ room adress ಗೆ 5 ದಿನದ ನಂತ್ರ ಅವಳ ಫೋಟೋ ಬಂದು ತಲುಪಿತು .
ಕುತೂಹಲ ದಿಂದ ಕಾಯ್ದ ಗೈಬು ನಿರಾಶನಾದ , ಯಾಕೋ ಅಂತ ಕೇಳದೆ , ಅವಳ ಫೋಟೋ ತೋರಿಸಿ ಅವಳು ನಾನು ನಿರೀಕ್ಷೆ ಮಾಡಿದಸ್ಟ್ ಚಂದ ಇಲ್ಲ ಅಂದ . ನಾನೂ ಆ ಫೋಟೋ ನೋಡಿದೆ ಪರ್ವಾಗಿಲ್ಲಾ ಅನಿಸ್ತು , ತೀರಾ ಅಸ್ಟು ಕುರೂಪಿ ಇರಲಿಲ್ಲ ಅವಳು .
ಅಳಲು ನೋಡೋಕೆ ಚಂದ ಇಲ್ಲ ಅನ್ನೊ ಒಂದೆ ಕಾರಣಕ್ಕೆ ಅವಳಿಗೆ call mag ಮಾಡೋದನ್ನ ಬಂದ ಮಾಡದ , ಅವಳಾಗೇ call ಮಾಡಿದರೂ rcv ಮಾಡಲಿಲ್ಲ , ಅವಳು ಮತ್ತೆ ಮತ್ತೆ call ಮಾಡಿದಾಗ ಕಿರಿ ಕಿರಿ ಅನಿಸಿ ಆ docomo sim ಮುರಿದು ಒಗೆದೆ ಬಿಟ್ಟ . ತಿಂಗಳ ಗಟ್ಟಲೆ ರನ್ನ ಚಿನ್ನ ಅಂತ ಮಾತಾಡಿದ ಅವಳನ್ನ , ನೋಡೋಕೆ ಚಂದ ಇಲ್ಲ ಅನ್ನೊ ಒಂದೆ ಕಾರಣಕ್ಕೆ ಮರೆತ. ನನಗಾಗ ಮಾತಾಡೋಕೆ ಮಾತೇ ಇರಲಿಲ್ಲ, ದಂಗಾಗಿ ನಿಂತೆ . ಪ್ರೀತಿ ಅಂದ್ರೆ ಅಂದ ಚಂದ ವನಪು ವಯ್ಯಾರ ಇಸ್ಟೇನಾ , ಅದರಾಚೆಗೆ ಏನೂ ಇಲ್ವ ಅನಿಸ್ತು . ಛೇ ಎಂಥ ವಿಚಿತ್ರ ಅಲ್ವಾ ಸ್ನೇಹಿತರೆ ??
ನೀವೂ ಯಾರನ್ನಾದರೂ ಪ್ರೀತಿಸಿದ್ರೆ ಯಾಕೆ ಅವರನ್ನ ಇಸ್ಟ ಪಟ್ಟಿರಿ, ಅವರಲ್ಲಿ ನಿಮಗೆ ಎನ್ ಇಸ್ಟ ಆಯ್ತು ಅಂತ ನಾಲ್ಕು ಸಾಲುಗಳು ನನಗೆ ಬರೆದು ಕಳಿಸಿ ( watsapp 9900139965 )
ಪ್ರೀತಿ ಅಂದ್ರೆ ಏನು ಹೇಗೆ ಅಂತ ತಿಳಿಯುವ ಸಣ್ಣ ಕುತೂಹಲ ಅಸ್ಟೆ , ಅನ್ಯತಾ ಭಾವಿಸಬೇಡಿ plz .
.............ನಿಮ್ಮ ಗೆಳೆಯ ಸಿದ್ದು .
Superb Anna ninu nin prati matinallu sikkapatte artha iratavu great 👍
ReplyDelete