ಲೇಡಿ ದೇವದಾಸ

ಬೈಕ್ ಮೇಲೆ ಹೊರಟಿದ್ದ ಶೇಖರನಿಗೆ ಜೇಬಲ್ಲಿದ್ದ ಮೊಬೈಲ್ ರಿಂಗ್ ಆದಂತೆ ಭಾಸವಾಯ್ತು. ಯಾರದಿರಬಹುದು ಅಂತ ಬೈಕ್ ಸೈಡ್ ಹಾಕಿ ನೋಡಿದರೆ,ನಂದಿನಿ ಕಾಲ್ ಮಾಡಿದ್ದಳು. ಮೀಟ್ ಆಗಿ ಹೋಗಿ ಇನ್ನೂ ಹತ್ತು ನಿಮಿಷ ಕಳೆದಿಲ್ಲ ಮತ್ಯಾಕೆ ಕಾಲ್ ಮಾಡಿದಳು ಅಂತ ಕಾಲ್ ರಿಸಿವ್ ಮಾಡಿ ಹಲೊ ಎಂದ.
ಹಲೊ ಎಲ್ಲಿದಿಯಾ ? ಇನ್ನೂ ಮುಗಿದಿಲ್ವಾ ಮೆರುಣಗಿ ? ಬೇಗ್ ಹೊಗು ರೂಮ್ ಗೆ ಅಂದಳು ನಂದಿನಿ.
ಇನ್ನೂ ಇಲ್ಲ, ನೀನು ಹೊದಿಯಾ ಮನೆಗೆ ? ಎಂಬ ಪ್ರಶ್ನೆ ಶೇಖರನದು.
ಗಾಂಧಿ ಚೌಕ್  ಸಿಟಿ ಬಸ್ ಸ್ಟ್ಯಾಂಡ್ ನಲ್ಲಿ ಅದಿನಿ, ಇನ್ನು ಬಸ್ ಬಂದಿಲ್ಲ ಎಂದು ಉತ್ತರಿಸಿದಳು.
ಸರಿ, ಬೈಕ್ ತಗೊಂಡು ಬರ್ಲಾ ಡ್ರಾಪ್ ಮಾಡೋಕೆ ?
ಬೇಡೆ, ಅದಕ್ಕಲ್ಲ ನಾನ್ ಕಾಲ್ ಮಾಡಿದ್ದು.
ಏನಮ್ಮ ನಿನ್ ಕಿರಿ ಕಿರಿ ? ಸುಮಾರು ಅರ್ಧ ಗಂಟೆ ಜೊತೆಲೆ ಇದ್ದೆ ಒಂದೂ ಮತಾಡಲಿಲ್ಲ. ಕಣ್ಣಿಂದ ನೆಲೆದ ಮೆಲೆ ರಂಗೋಲಿ ಬಿಡಿಸಿದ್ದೆ ಆಯ್ತು. ಬಿಟ್ಟಸ್ಥಳ ತುಂಬಿರಿ ಅನ್ನೊ ಹಾಗೆ ನಾನ್ ಕೇಳಿದಕ್ಕ ಮಾತ್ರ ಉತ್ರ ಕೊಟ್ಟು ಸುಮ್ಮನಾಗ್ತಿದ್ದೆ, ಇಗ ನೋಡದ್ರೆ ಫೋನ್ ಮಾಡಿ ತಲೆ ತಿಂತಿಯಾ, ಬರಿ ಇದೆ ಅಗೊಯ್ತು ನಿಂದು.
ನೀನ್ ಎದುರಿಗಿದ್ದಾಗ ಮಾತಾಡೊಕೆ ಭಯ, ಅದಕ್ಕೆ ಕಾಲ್ ಮಾಡದಾಗ ತಲೆ ತಿಂತಿನಿ.
ನಾನೇನ್ ಹುಲಿನಾ ? ನಿಂಹನಾ ? ಭಯ ಪಡೋಕೆ. ತೂಕ ಮಾಡದ್ರೆ ಪಾವ್ ಕೇಜಿ ಇಲ್ಲ.
ಐ ನೊ , ನೀನ್ ಪಾವ್ ಕೇಜಿ ಇಲ್ದೆ ಇರಬಹುದು. ಆದ್ರೆ ನಿನ್ ಮಾತಲ್ಲಿ-ಮನಸಲ್ಲಿ ನಿನ್ ವ್ಯೆಕ್ತಿತ್ವದಲ್ಲಿ ಒಂದ್ ವೇಟ್ ಇದೆ, ಅದಕ್ಕೆ ಭಯಾ.
ಹಾಗೇನಿಲ್ಲಮ್ಮ, ಯಾರೊ ತಪ್ಪು ಮಾಹಿತಿ ಕೊಟ್ಟಿದಾರೆ ನನ್ ಬಗ್ಗೆ ನಿನಗೆ. ಅದಿರ್ಲಿ ವಿಷ್ಯಕ್ಕ ಬಾ ಎನ್ ಕಾಲ್ ಮಾಡಿದ್ದು?.
ಎಷ್ಟ್ ಜನ ಹುಡುಗಿರು ಕೈ ಕೊಟ್ಟಿದಾರೆ ನಿನಗೆ ?
ಯಾಕಮ್ಮ ಇಂಥ ಕರ್ಣ  ಕಠೋರ ಪದ ಬಳಕೆ ಈ ಬಾಲ ಬ್ರಹ್ಮಚಾರಿ ಮೇಲೆ .
ಹಲೊ ಬಾಸು ಅಷ್ಟೊಂದ್ ಬಿಲ್ಡಪ್ ತಗೊಬೇಡ, ತುಂಬ ಡೌಟ್ ಬಂದೆ ಕೇಳ್ತಿದಿನಿ. ನೀನು ನನಗೆ ಇಂದು ನಿನ್ನೆಯ ಪರಿಚಯ ಅಲ್ಲ, ಪಿ ಯು ಸಿ ಇದ್ದಾಗ್  ಇಂಗ್ಲಿಷ್ ಗ್ರಾಮರ್ ಕ್ಲಾಸ್ ಗೆ ಬರ್ತಿದ್ದೆ ನೆನಪಿದೆ ಅಲ್ವ ? ಅವಾಗಂದ ನೀನ್ ನನಗೆ ಗೊತ್ತು. ಬಡ ಕುಟುಂಬದಿಂದ ಬಂದ್ರೂ ಎಷ್ಟು ನೀಟಾಗಿ ಇರ್ತಿದ್ದೆ ಅವಾಗ. ಆದ್ರೆ ಇತ್ತೀಚೆಗೆ ನಾನು ಗಮನಿಸ್ತಿದಿನಿ, ಕಾಲಲ್ಲಿ ಸ್ಲಿಪ್ಪರು ಇಸ್ತ್ರಿ ಕಾಣದ ಪ್ಯಾಂಟ್ ಶರ್ಟು, ಸರಿಯಾಗಿ ಶೆವ್ ಮಾಡ್ಕೊಳ್ಳಲ್ಲ, ತೆಲೆಗೆ ಎಣ್ಣೆ ಹಚ್ಚಲ್ಲ ಹಚ್ಚಿದ್ರೂ ಬಾಚ್ಕೊಳ್ಳಲ್ಲ, ಹಳ್ಳಿ ಹೈದ ಪ್ಯಾಟೆಗ್ ಬಂದ ಅನ್ನೊ ಥರ ಗಾಬರಿಯಾಗಿರ್ತಿಯ. ಏನ್ ಸಮಾಚಾರ  ?
ಅಂಥದೇನಿಲ್ಲ, ಬಸ್ ಬಂತೇನು ನೋಡು, ಬೇಗ ಮನೆಗ್ ಹೋಗು ಲೇಟಾಗುತ್ತೆ.
ಇನ್ನೂ ಬಸ್ ಬಂದಿಲ್ಲ, ಬಂದ್ ಮೇಲ್ ನಾನ್ ಹೋಗ್ತಿನಿ. ಬಟ್ ನೀ ಎನೇನೊ ಮಾತಾಡಿ ಮಾತ್ ಮರೆಸ್ಬೇಡ. ನಾನು ಆಗಾಗ ನಿನ್ನ ಫೆಸ್ ಬುಕ್ ಪೋಸ್ಟ್ ವಾಟ್ಸಪ್ಪ ಸ್ಟೇಟಸ್ ನೋಡ್ತಿನಿ, ಕವನ ಬರೆದಿದ್ದೆ ಬರೆದಿದ್ದು ಹುಡುಗಿಯರನ್ನ ಬೈದಿದ್ದೆ ಬೈದಿದ್ದು ಅಲಾ.
ಓಹೊ ಇದಾ ವಿಷ್ಯ ? ಈಗ ಅರ್ಥ ಆಯ್ತು, ನಾನು ಹುಚ್ಚನ ಥರ ಆಗಿದಿನಿ ಅನ್ನೊದಕ್ಕಿಂತ ಹುಡುಗಿಯರನ್ನ ಬೈಯ್ಯೊ ಥರ ಕವನ ಬರೆದು ಪೋಸ್ಟ್ ಮಾಡಿದಕ್ಕೆ ಈ ಪ್ರಶ್ನೆ ಹುಟ್ಟಿದ್ದು ಅಲ್ವಾ ? ಎಂಬ ವಾದ ಶೇಖರನದು
ಹಂಗೇನಿಲ್ಲ ಎರಡಕ್ಕೂ ಸೇರಿಸೆ ಈ ಪ್ರಶ್ನೆ ಹುಟ್ಟಿದ್ದು. ಎಂಬ ಸಮುಜಾಯಿಸಿ ನಂದಿನಿಯದ್ದು.
ಕವಿತೆ ಬರಿಯೋಕೆ ನಿನಗ್ಯಾರು ಬೇಡ ಅಂದಿದ್ದು ಕೋತಿ ? ನೀನು ನಿಂದ್ ಬರಿಬೇಕು ತಾನೆ ?  ಕವಿತೆ ಬರಿಯೋಕೆ ಬರಲ್ಲ ಅದಕ್ಕೆ ಈ ಹೊಟ್ಟೆ ಊರಿ.
ದೋಸ್ತ್ ಒಂದ್ ಮಾತ್ ಹೇಳ್ತಿನಿ ಕೇಳು,,
ಹೇಳಮ್ಮ,,
ನಮಗೂ ಕವಿತೆ ಬರಿಯೋಕ್ ಬರುತ್ತೆ ,, ಆದ್ರೆ ಯಾಕ್ ಬರಿಯಲ್ಲ ಗೊತ್ತಾ ? ನಿಮ್ಮ ಲೈಫ್ ನಲ್ಲಿ ಬಂದು ಹೋದ ಹುಡುಗಿಯರ ಸಂಖ್ಯೆ ಜಾಸ್ತಿ ಆದಷ್ಟು ಫ್ರೆಂಡ್ ಸರ್ಕಲ್ ನಲ್ಲಿ ನಿಮ್ ಹವಾ ಜಾಸ್ತಿ ಆಗ್ತಾ ಬರ್ತದೆ. ಆದ್ರೆ ನಮ್ ಲೈಫ್ ಲ್ಲಿ ಬಂದು ಹೋದ್ ಹುಡುಗರ ಸಂಖ್ಯೆಜಾಸ್ತಿ ಆದಷ್ಟು ನಮ್ದು ಬರಿ ಫ್ರೆಂಡ್ ಸರ್ಕಲ್ ನಲ್ಲಿ ಅಲ್ಲ ಮನೆ ಮನೆತನದಲ್ಲೂ ಕಡಿಮೆ ಆಗ್ತಾ ಬರ್ತದೆ. ಹುಡುಗರು ಗಡ್ಡ ಬಿಟ್ಕೊಂಡು ಕುಡ್ಕೊಂಡು ಸ್ಯಾಡ್ ಸಾಂಗ್ ಹಾಡ್ತಾ ಹೊರಟರೆ ಅಯ್ಯೊ ಪಾಪ ಅಂತಾರೆ, ಆದ್ರೆ ನಾವು ಬೇರೆ ವಿಷಯಕ್ಕೆ ಸ್ವಲ್ಪ ಮೂಡ್ ಆಫ್ ಆದ್ರೂ ನಮ್ಮ ಹೆಜ್ಜೆ ಮೇಲೆ ಅನುಮಾನ ಪಡ್ತಾರೆ. ಒಂದೆ ಮಾತಲ್ಲಿ ಹೇಳೊದಾದ್ರೆ ಹುಡುಗರಿಗೆ  ಕಿರಿಟ ಇಡ್ತಾರೆ ಹುಡುಗಿಯರಿಗೆ ಕ್ಯಾರೆಕ್ಟರ್ಲೆಸ್ಸ್ ಅಂತಾರೆ. ಅದಕ್ಕೆ ಈ ಕಥೆ ಕಾದಂಬರಿ ಕವನ ಬರಿಯೊ ಕಾಂಟ್ರ್ಯಾಕ್ಟ್ ನಿಮಗೆ ಬಿಟ್ಟು ತೆಪ್ಪಗಿದಿವಿ. ಹಾಗಂದ ಮಾತ್ರಕ್ಕೆ ಮಹಿಳಾ ಲೆಖಕರು ಇಲ್ಲ ಅಂತಲ್ಲ ಇದಾರೆ, ಎಲ್ಲೊ ಒಬ್ರು ಪ್ರೀತಿ ಪ್ರೆಮ ವಿರಹದ ಬಗ್ಗೆ ಬರೆದರೆ ಹೆಚ್ಚಿನವರು ಮನೆ ಸಂಸಾರ ದ ಬಗ್ಗೆ ಬರಿತಾರೆ. ಯಾಕಂದ್ರೆ ಇಲ್ಲಿ ಲೈಫ್ ಚೊಂಬ್ ಆಗಿರ್ತದೆ(ಎಲ್ಲರ ಲೈಫು ಹೀಗೆ ಅಂತಲ್ಲ) ಗಂಡನ ಮನೇಲಿ ಅದ್ರೂ ಖುಷಿಯಾಗಿರಬೇಕಲ್ಲ.  90% ಗಂಡಸರಿಗೆ "ತಾನು ಶ್ರೀಕ್ರಿಷ್ಣ ಆದ್ರೂ ಪರವಾಗಿಲ್ಲ ಆದ್ರೆ ಹೆಂಡತಿ ಮಾತ್ರ ಸೀತೆ' ನೆ ಆಗಿರಬೇಕು.
ನಂದಿನಿಯ ಸುಧೀರ್ಗ ಮಾತಿನ ನಂತರ, ಹೀಗೂ ಉಂಟಾ ? ಏಂದು ಅಶ್ಚರ್ಯ ವ್ಯೆಕ್ತಪಡಿಸಿದ ಶೆಖರ.
ಆಹಾ,, ಮಳ್ಳ ಮಳ್ಳ ಮಂಚಕ್ಕ ಕಾಲೇಸು ಅಂದ್ರೆ ಮೂರರ ಮೇಲೆ ಮತ್ತೊಂದು ಇರ್ಬೋದು ಅನ್ನೊ ಹಾಗ್ ಆಡಬೇಡ. ನಿನಗ ಗೊತ್ತಿಲ್ವ ಇದು ? ತಿಂಗಳಿಗೊಂದು ಪುಸ್ತಕ, ವಾರಕ್ಕ್ ಎರಡು ಮ್ಯಾಗ್ಜಿನ್, ದಿನಕ್ಕೆ ಮೂರು ಪತ್ರಿಕೆ ಓದ್ತೀಯ. ನಿನಗ ಗೊತ್ತಿಲ್ಲದಿರೋದ್ ಏನು. ಎಲ್ಲ ನನ್ ಬಾಯಿಂದ ನೆ ಬರ್ಲಿ ಅಂತ ಸುಮ್ನೆ ಡೌ ಮಾಡಬೇಡ.
ಸಿಟ್ಟಿದ್ರೆ ಬಂದು ನಾಲಕ್ ಹೊಡದು ಹೋಗು ಈ ಥರ ಕಿಂಡಲ್ ಮಾಡಬೇದ ತಾಯಿ. ಬ್ಯಾಟಿಂಗ್ (ಓದು ಬರಹ) ಮಾಡ್ತಿವಿ ಇಲ್ಲಂತ ಅಲ್ಲ, ಆದ್ರೆ ನೀ ಹೇಳ್ತಿರೊ ಸ್ಟ್ರೈಕ್ ರೇಟ್ ಲ್ಲಿ ಅಲ್ಲ. ಎಲ್ಲಿಂದಾನೊ ಶುರುವಾಗಿ ಎಲ್ಲಿಗೊ ಬಂತು ಮಾತು ಇಟ್ಸ್ ಓಕೆ, ಇಷ್ಟೋಂದು ರೊಚ್ಚಿಗೆದ್ದು ಮಾತಾಡ್ತಿದಿಯ ಅಂದ್ರೆ ನಿಂದೂ ಫ್ಲ್ಯಾಶ್ ಬ್ಯಾಕ್ ಇರೊ ಹಾಗಿದೆ ? .
ಯಾಕೆ ನಿಂಗ್ ಗೊತ್ತಿಲ್ವ ? ನನ್ನ ಮತ್ತು ರಾಘು ವಿಷಯ.
ಹಾಯ್ ಬಾಯ್ ಇದೆ ಅಂತ ಗೊತ್ತಿತ್ತು, ಬಟ್ ಹಲೊ ಹವ್ ಆರ್ ಯು ವರೆಗೂ ಬಂದಿದೆ ಅಂತ ಗೊತ್ತಿರಲಿಲ್ಲ. ಸರಿ ಚನ್ನಾಗೆ ಇದ್ರೆಲ್ಲ ಇಬ್ರೂ, ಎನಾಯ್ತು ಸಡನ್ನಾಗಿ ?
ನೋಡು ಶೆಖರ, ಲವ್ವಲ್ಲಿ ಬಿದ್ದಿರೊ 100% ಹುಡುಗರಲ್ಲಿ 50% ಹುಡುಗರಿಗೆ ಪ್ರೀತಿ ಅಂದ್ರೆ ಏನು ಅಂತಾನೆ ಗೊತ್ತಿರಲ್ಲ. ಬಿಕೌಜ್ ಅವರಿಗೆ ಕಾಣಿಸೊದು ಬರಿ ನಮ್ಮ ಕರ್ಲಿ ಹೆರ್ -ಕಲರ್ ಲಿಪ್, ನೀಟಾಗಿರೊ ಹುಬ್ಬು-ಕ್ಯೂಟಾಗಿರೊ ಶೇಪು. ಅದರಾಚೆ ನಮಗೂ ಒಂದ್ ಮನೆ ಮನೆತನ ಮನಸ್ಸು, ಆ ಮನಸ್ಸಲ್ಲಿ ನೋವು ನಲಿವು - ಬೇಕು ಬೇಡಗಳಿಂದ ಕೂಡಿದ ನಮ್ಮದೆ ಆದ ವ್ಯೆಕ್ತಿತ್ವ ಇರ್ತದೆ ಅಲ್ವ?. ದಿನ ಕಳೆದಂತೆ ಅಂದ ಚಂದದಲ್ಲಿ ಏರುಪೇರಾಗಬಹುದು, ಆದರೆ ಅಂತರಂಗ ಯಾವತ್ತೂ ಬದಲಾಗಲ್ಲ. ಅಂದ ಚಂದ ನೋಡಿ ಪ್ರೀತ್ಸೊ ಹುಡುಗ ಊಠ ಮುಗಿಯೊವರೆಗು ಜೊತೆ ಇರ್ತಾನೆ, ಅಂತರಂಗ ಅರಿತು ಪ್ರೀತ್ಸೊ ಹುಡುಗ ಚಟ್ಟದವರೆಗೂ ಜೊತೆ ನಡೀತಾನೆ. ರಾಘು ನನ್ನ ಜತೆ ನಾಲಕ್ ವರ್ಷ ಹೆಜ್ಜೆ ಹಾಕದ್ರೂ, ಆತ ಪ್ರೀತ್ಸಿದ್ದು ಆರಾಧಿಸಿದ್ದು ನನ್ನ ವನಪು ವಯ್ಯಾರ ನೆ ಹೊರತು ಅಂತರಂಗ ಅರಿಯೊ ಸಣ್ಣ ಪ್ರಯತ್ನ ಕೂಡಾ ಮಾಡಲಿಲ್ಲ. ಹೀಗಾಗೆ ಅವನೊಬ್ಬ ಮನಸಿನ ಮನೆಗೆ ಬಂದು ಉಂಡೆದ್ದು  ಹೋದ ಅಥಿತಿ ಆದನೆ ಹೊರತು, ಸದಾ ಮನೆಯಲ್ಲಿ ಇರೊ ಸಂಗಾತಿ ಆಗಲಿಲ್ಲ. ಎಂದು ಮಾತು ಮುಗಿಸಿದ ನಂದಿನಿಯ ಧ್ವನಿ ಸಣ್ಣದಾಗಿತ್ತು.
ಸ್ವಾರಿ ನಂದಿನಿ ಇಷ್ಟೆಲ್ಲ ಆಗಿದೆ ಅಂತ ಗೊತ್ತಿದ್ರೆ ನಿಜವಾಗ್ಲೂ ನಾನೇನೂ ಕೇಳ್ತಿರಲಿಲ್ಲ.
ಇಟ್ಸ್ ಓಕೆ ಶೇಖರ,, ನಾನ್ ಸ್ವಾರಿ ಕೇಳಬೇಕು ನಿನಗೆ. ಪಾಪ ಚಿಕ್ಕ ಹುಡುಗ ನೀನು, ಅಥಿತಿ ಊಠ ಅಂತ ಎನೆನೊ ಮಾತಾಡ್ದೆ.
ಚಿಕ್ಕ್ ಹುಡುಗಾನಾ ? ಹಲೊ ನಂಗೆ 28 ವರ್ಷ ನಿಂಗೆ 24 .
ವಯಸಲ್ಲಿ ನೀನು ದೊಡ್ಡೊನು ಇರ್ಬೋದು ಆದ್ರೆ ವೈವಾಹಿಕ ಜೀವನದಲ್ಲಿ ನಾನ್ ದೊಡ್ಡೊಳು ಅಲ್ವಾ ?
ಓ,,, ಹಂಗಾ ?
ಹೂಂ ಹಂಗೆನೆ.  ಅದೆಲ್ಲ ಬಿಡಪ್ಪ, ನಾನೆನೊ ಮದುವೆ ಮಗು ಅಂತ ಒಂದ್ ರೇಂಜ್ ಗೆ ಅರಾಮಾಗಿದಿನಿ. ನಿಂದ್ ಹೇಳು.
ಏನಿಲ್ಲ... ಹೋದ್ ವಾರ್ ಕಾಲಿಗೆ ನಾಯಿ ಕಡಿದಿದೆ,, ಅದಕ್ಕೆ ಮೂರು ತಿಂಗಳು ಕಟಿಂಗ್ ದಾಡಿ ಮಾಡ್ಕೋಬೇಡ ಅಂದಿದಾರೆ ಅಷ್ಟೆ. ಎಂದು ನಕ್ಕ ಶೆಖರ. ಕೆಲ ಕ್ಷಣ ಇಬ್ಬರ ನಡುವೆ ನಗು. ಅದಾದ ಮೆಲೆ.
ಹೊಗೊ ಕೋತಿ ಇದೆ ಆಯ್ತು ನಿಂದ್ ಬರೆ. ಎಲ್ರುದೂ ಕಥೆ ಕೇಳ್ತಿಯ , ನೀನ್ ಮಾತ್ರ ಯಾರ್ ಜೊತೆನೂ ಮನಸ್ಸ ಬಿಚ್ಚಿ ಮಾತಾಡಲ್ಲ. ನನ್ನಂಥವರು ಧೈರ್ಯ ಮಾಡಿ ಕೇಳದ್ರೆ ನಾಯಿ ಕಡಿತು ನರಿ ಕಡಿತು ಅಂತ ಜೋಕ್ ಮಾಡಿ ನಗಸ್ತಿಯ. ಫ್ರೆಂಡ್ ಅಂತಹ ಅಣ್ಣ - ಅಣ್ಣನಂತಹ ಫ್ರೆಂಡ್ ಸಿಕ್ಕಿದಕ್ಕೆ ಐ ಎಮ್ ಲಕ್ಕಿ ಬ್ರೊ, ಲವ್ ಯು.
ಲವ್ ಯು ಟೂ ಮಾ.
ಸರಿ ಬಸ್ ಬಂತು ನಾನ್ ಮನೆಗ್ ಹೊಗ್ತೀನಿ & ನನಗೆ ಕವಿತೆ ಬರಿಯೊಕೆ ಬರಲ್ಲ ಅಂದಿಯಲ್ಲ ? ರಾಘು  ಕುರಿತು ತುಂಬ ಬರೆದಿದ್ದಿನಿ ಆದ್ರೆ ಎಲ್ಲು ಪಬ್ಲೀಶ್ ಮಾದಿಲ್ಲ. ಅದರಲ್ಲಿ ನಿನಗೆ ಒಂದು ವಾಟ್ಸಪ್ಪ್ ಮಾಡ್ತೀನಿ ಓದು.
ಓಕೆ ಎಂದು ಕಾಲ್ ಕಟ್ ಮಾಡಿದ ಶೆಖರ. ಆನಂತರ ನಂದಿನಿ ಯಿಂದ ಒಂದ್ ಕವಿತೆ ಬಂತು ವಾಟ್ಸಪ್ಪ್ ಗೆ.
                  ಕ್ಷಮೆ ಕೇಳಬೇಡ ಗೆಳೆಯ
                  ನಾ ನಿನ್ನ ಮನ್ನಿಸಲಾರೆ   
                  ಒಡೆದದ್ದು ಕೈಬಳೆಯಲ್ಲ, ಹ್ರುದಯ
                  ಕಳೆದದ್ದು ಕಾಲ್ ಚೈನಿನ ಗೆಜ್ಜೆಯಲ್ಲ, ಮನಸ್ಸು
                  ಕಣ್ಣಿಂದ ಜಾರಿ ಹೋದದ್ದು ಕಂಬನಿಯಲ್ಲ
                  ನಿನ್ನ ಮೇಲಿನ ನಂಬಿಕೆ...................


ನಿರುಪಣೆ :- ಸಿದ್ದು ತಾಂಬೆ


Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)