" ಹಳೆ ಗರ್ಲ್ ಫ್ರೆಂಡ್ ನ್ನ ಬೈಬೇಡಿ " ಹೀಗೆ ಹೇಳಿದ ಜಗತ್ತಿನ ಮೊದಲ ಹುಡುಗ ಇರಬಹುದೆನೊ ನಾನು , ಯಾಕಂದ್ರೆ ಎಲ್ಲಿ ನೋಡಿದರಲ್ಲಿ ಎಲ್ಲ ಲವ್ ಫೇಲುವರ ಆದ ಹುಡುಗರ ಬಾಯಲ್ಲಿ ಬರೊ ಮಾತು ಅಂದ್ರೆ " ನನ್ನ ನಂಬಿಸಿ ಮೋಸ ಮಾಡದ್ಲು. ಬರ್ತಡೆ ಗೆ ಬಟ್ಟೆ ಕೊಡಿಸಿದಿನಿ , ಕಾಲೇಜ್ ಗೆ ಬುಕ್ಸ್ ಕೊಡಿಸಿದಿನಿ, ಕೇಳ್ದಾಗ ದುಡ್ಡ್ ಕೊಟ್ಟಿದೀನಿ, ಅವಳ ಫೇವರಿಟ್ ಹೀರೊ ಯಶ್ ಸಿನಿಮಾ ಫಸ್ಟ್ ಡೆ ಫಸ್ಟ್ ಶೋ ತೋರ್ಸಿದಿನಿ , ಹೆಸರಾಂತ ಹೋಟೆಲ್ ನಲ್ಲಿ ಡಿನ್ನರ್ ಗೆ ಕರ್ಕೊಂಡ್ ಹೋಗಿನಿ, ಇಷ್ಟ ದ ಪ್ಲೇಸ್ ಗೆ ಟ್ರಿಪ್ ಕರ್ಕೊಂಡ್ ಹೋಗಿದೀನಿ , ಹಾಕ್ಸಿರೋ ಮೊಬೈಲ್ ಕರೆನ್ಸಿ- ತಿನ್ಸಿರೋ ಪಾನಿ ಪೂರಿ ಲೆಕ್ಕ ಇಟ್ಟಿಲ್ಲ , ಇವಳಿಗಾಗಿ ಮನೇಲಿ ಜಗಳ ಮಾಡಿದೀನಿ , ಕೆಲ ಫ್ರೆಂಡ್ಸ್ ನ್ನ ದೂರ ಮಾಡ್ಕೊಂಡಿದಿನಿ, ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡಿದೀನಿ", ಆದ್ರು ನನ್ನ ಬಿಟ್ಟು ದೂರ ಆದ್ಲು. ಉಫ್ ಒಂದಾ ಎರಡಾ ಹೀಗೆ ಬೆಳೀತಾ ನೆ ಹೋಗತ್ತೆ ಪಟ್ಟಿ . ಸಾಲದು ಅಂತ ತೀರ್ಥ ಬಿಟ್ಕೊಂಡಾಗ , ರ . . . ಮು . . . ಸು . . . ಅನ್ನೊ ಎಲ್ಲ ನಾಮವಿಶೇಷಣಗಳ ಪ್ರಯೋಗ ನೂ ಆಗತ್ತೆ . ಕಂಡ ಕಂಡವರ ಮುಂದೆ ಅವಳ ಕ್ಯಾರೆಕ್ಟರ್ ಸರ್ಟಿಫಿಕೇಟ್ ಗೆ ಹೊಸ ಭಾಷೆ ಬರೀತೀರಿ . ಇದೆಲ್ಲ ಎಷ್ಟು ಸರಿ ಫ್ರೆಂಡ್ಸ್ ? ತಪ್ಪಲ್ವ ? ನಿಮ್ಮ ಕೋಪ ತಾಪ ತಪ್ಪು ಅಂತ ನಾನ್ ಹೇಳ್ತಿಲ್ಲ , ಆದ್ರೆ ಅದಕ್ಕೊಂದು ನೆಲೆ ಬೇಕಲ್ಲ, ಅರ್ಥ ಬೇಕಲ್ಲ. ಬಟ್ಟೆ ಕೊಡ್ಸಿರಿ ಬುಕ್ ಕೋಡ್ಸಿರಿ , ಊಟ...