ಕೊನೆಯ ಪುಟ (second hand lover)
ಉತ್ತರ ಸಿಂಪಲ್ ಇದೆ ರಮ್ಯ . ಮನೇಲಿ ಒಂದ್ ನಾಯಿ ಮರಿ ನೊ ಬೆಕ್ಕಿನ ಮರಿ ನೊ ಸಾಕಿರತಿವಿ. ನಮಗೆ ಅದು ಬೇಕು ಅನಿಸಿದರೆ , ಅದು ಹೇಗಿದ್ರೂ ಏನ್ ಮಾಡದರೂ ಚಂದ ಅನ್ಸತ್ತೆ . ಬೆಳಗ್ಗೆ ಸ್ನಾನ ಮಾಡಿಸ್ತೀವಿ , ಅದರದೇ ಆದ ಬೇರೆ ಬಿಸ್ಕಿಟ್ ಕೊಡ್ತೀವಿ , ಮದ್ಯಾಹ್ನ ಟೈಮ ಪಾಸ್ ಗೆ ಮೈ ಉಜ್ಜತಿವಿ , ಇನ್ನೂ ಒಂದ್ ಹೆಜ್ಜೆ ಮುಂದೆ ಹೋಗಿ ಮಗು ಥರ ತಬ್ಬಿಕೊಂಡ ಮಲಗ್ತಿವಿ. ಆದರೆ ಯಾವಾಗ ಅದು ನಮಗೆ ಬೇಡ ಅನ್ಸತ್ತೋ ಆವಾಗಿನಿಂದ ಅದರ ಪ್ರತಿ ಮೂಮೆಂಟ್ ಕೂಡ ಹಿಂಸೆ ಅನ್ಸತ್ತೆ , ಸೀಟ್ ಬರಸತ್ತೇ, ಯಾಕಾದರೂ ತಂದೆ ಮನೆಗೆ ಅಂತ ಫೀಲ ಆಗತ್ತೆ.
ಅದೆ ನಾಯಿ , ಅದೆ ಮಾಲೀಕ , ಅದೆ ಮನೆ , ಅದೆ ರುಟಿನ ಬದುಕು . ವ್ಯತ್ಯಾಸ ಇಷ್ಟೇ , ಈಗೆ ಕೆಲ ದಿನಗಳ ಹಿಂದೆ ಚಿನ್ನ ರನ್ನ ಟಾಮಿ ಗಿಮಿ ಯಾಗಿದ್ದ ನಾಯಿ ಮರಿ ಈಗ , ಶುದ್ದ ಪೀಡೆ ಥರ ಕಾಣತ್ತೆ .
ಹಾಗೆ ಈ ಪ್ರೀತಿ ಮಾಡೊ ಹುಡುಗ ಹುಡುಗಿಯರಲ್ಲಿ ಎರಡು ಕಟಗೇರಿಯ ಜನರಿದ್ದಾರೆ. ಟೈಮ ಪಾಸ್ ಗಾಗಿ ಪ್ರೀತಿಸೋರು , ಬದುಕಿಗಾಗಿ ಪ್ರೀತಿಸೋರು . ಟೈಮ ಪಾಸ್ ಗಾಗಿ ಪ್ರೀತಿಸೋರು ಬದುಕಿನ ಬಗ್ಗೆ ಯೋಚಿಸಲ್ಲ , ಬದುಕಿಗಾಗಿ ಪ್ರೀತಿಸೋರು ಟೈಮ ಪಾಸ್ ಮಾಡಲ್ಲ . ನೈಂಟಿ ಪರ್ಸೆಂಟ್ ಮೋಸ ಮಾಡೋರು , ಮೋಸ ಹೋಗೋರು ಈ ಟೈಮ ಪಾಸ್ ಗಿರಾಕಿಗಳೇ .
ಎಲ್ಲ ಒಗಟು ಒಗಟಾಗಿದೆ . ನಾಯಿ ಕಥೆಗೂ , ಈ ಟೈಮ ಪಾಸ್ ಗೂ ಏನೊ ಅಭಿ ಸಂಭಂದ ? ಎಂದು ಕೇಳಿದಳು ರಮ್ಯ .
ಮತ್ತೆ ಮುಂದುವರೆಸಿದ ಅಭಿ .
ಆಕೆ ನನಗೆ ಟೈಮ ಪಾಸ್ ಗಾಗೇ ಪ್ರೀತಿಸಿದಳು . ಮೊದ ಮೊದಲು ಆಕೆಗೆ ನಾನು ಬೇಕಾಗಿದ್ದೇ, I mean ಇಷ್ಟ ಆಗಿದ್ದೆ. ನನ್ನ ಸಾಂಗತ್ಯದಲ್ಲಿ ಖುಷಿ ಇದೆ ಅನ್ಸಿತ್ತು , ಹೀಗಾಗಿ ನನ್ನ ಸನಿಹ ಬೇಕು ಅನ್ಸಿತ್ತು ಅವಳಿಗೆ . ಆಗ , ನಾಯಿಗೆ ಬಿಸ್ಕೆಟ್ ಹಾಕಿ ಮೈ ಉಜ್ಜಿ , ತಬ್ಬಿ ಮಲಗೊ ರೀತಿ , ನನ್ನ ಜೊತೆ ಚಾಟ್ ಮಾಡದಳು , ಸಿನಿಮಾ ಪಾರ್ಕು ಅಂತ ಸುತ್ತಿದಳು , ಒಂದೆ ಮಾತ್ ಗೆ ಒಪ್ಪಿ ಲಾಡ್ಜ್ ಗ ಬಂದು ಇದು ರಾತ್ರಿ ನಾ ? ಹಗಲ ? ಅಂತ ನಾನೆ ಅಶ್ಚರ್ಯ ಪಡೋ ಹಾಗ್ ಮಾಡದ್ಲು . ನನ್ನೆಲ್ಲ ಕೀಟಲೆ ಗಳನ್ನ ಸಹಿಸ್ಕೋಂಡಳು . ಆದ್ರೆ , ಯಾವಾಗ ನಾನು ಬೇಡ ಅನೀಸೀದೇನೋ , ನಾನು ಬೋರ್ ಅಂತ ಅನೀಸೀತೋ , ಆವಾಗಿಂದ ನನ್ನ ಪ್ರತಿ ನಡೆ ನುಡಿ ಅಕೆಗೆ ಇರಿಟೇಟ್ ಆಗೋಕೆ ಶುರು ಆಯ್ತು . ಅದೆ ಹುಡುಗ , ಅದೆ ಹುಡುಗಿ , ಅದೆ ಮಾತು , ಅದೆ ಪ್ರೀತಿ . ಆದ್ರೆ ಕೆಲ ದಿನಗಳ ಹಿಂದೆ ನಾನು ಅವಳಿಗೆ ಸಿಕ್ಕ ವರ , ಈಗ ಬೆನ್ನಿಗೆ ಬಿದ್ದ ಬೇತಾಳದ ಥರ ಕಾಣ್ತೀನಿ .
ಅದೆಲ್ಲ ಓಕೆ ಅಭಿ , ಇಷ್ಟ ಇಲ್ಲ ಅಂದ್ರೆ ಇಲ್ಲ ಅಂತ ಹೇಳಬೇಕು ತಾನೆ ಅವಳು . ಮನೇಲಿ ಒಪ್ಪಲ್ಲ , ಜಾತಿ ಹೋಂದಲ್ಲ ಅಂತೆಲ್ಲ ಡ್ರಾಮಾ ಯಾಕೆ .
ನೋಡ್ ರಮ್ಯ , ನಾವು ಬೋರ್ ಅನಿಸಿದಾಗ , ಇನ್ನೊಂದು ನೆಲೆ ಬೇಕು ಅನಿಸಿದಾಗ , ನಮ್ಮಲ್ಲಿ ನ ಕೊರತೆಗಳ ಪತ್ತೆ ಹಚ್ಚೋಕ ಶುರು ಮಾಡ್ತಾರೆ . ನೆಪ ಬೇಕಲ್ಲ ಗಂಟು ಬಿಡಿಸಿಕೊಳ್ಳೋಕೆ . ಆಗ ಯವುದಾದರೂ ಒಂದ್ ನೂನ್ಯತೇ ಸಿಕ್ಕೇ ಸಿಗತ್ತೆ ಪ್ರತಿಯೋಬ್ಬರಲ್ಲೀ . ಯಾಕಂದ್ರೆ ಎಲ್ಲ ರೀತಿಯಿಂದ ಫಿಟ್ ಇರೊ ಹುಡುಗನನ್ನ ಇನ್ನೂ ಆ ಭಗವಂತ ರೆಡಿ ಮಾಡಿಲ್ಲ . ದೈಹಿಕವಾಗಿ ಇರಬಹುದು , ಮಾನಸಿಕವಾಗಿ ಇರಬಹುದು , ಶೈಕ್ಷಣಿಕವಾಗಿ ಇರಬಹುದು , ಆರ್ಥಿಕವಾಗಿ ಇರಬಹುದು , ಯಾವುದರಲ್ಲಿ ಯಾದರೂ ಒಂದ್ ಕಮ್ಮಿ ಇದ್ದೆ ಇರತ್ತೆ . ಎಲ್ಲ ರೀತಿಯಿಂದ ಹುಡುಗ ಫಿಟ್ ಆಗಿ ಬ್ರಹ್ಮನ ಕಣ್ ತಪ್ಪಿಸಿ ಭೂಮಿಗೆ ಬಂದಿದಾನೆ ಅಂದ್ರೂ , ಇಲ್ಲಿ ಹೆಜ್ಜೆಗೊಂದು ಜಾತಿ , ಬೀದಿಗೊಂದು ಆಚರಣೆ , ಊರಿಗೊಂದು ನೀತಿ . ಯಾವ್ದೂ ಸಿಕ್ಕಿಲ್ಲ ಅಂದ್ರೆ ಅದೆ ಜಾತಿ ಮುಂದೆ ಇಟ್ಕೊಂಡ್ ಆಟ ಆಡ್ತಾರೆ .
ಅಂದ್ರೆ ಅವಳು ನಿನ್ನ ರಿಜೆಕ್ಟ್ ಮಾಡಿದ್ದು ಟೈಮ್ ಪಾಸ್ ಪ್ರೀತಿಯ ಕಾರಣಕ್ಕಾಗಿಯೇ ಹೊರತು , ಈ ಜಾತಿ ಅಂತಸ್ತು ಎಲ್ಲ ಒಂದ್ ನೆಪ ಅಷ್ಟೇ ಅಂತಾನಾ ? ಎಂದು ಕೇಳಿದಳು ರಮ್ಯ .
ಎಸ್ ನೂರಕ್ಕೆ ನೂರಾ ಒಂದ್ ಪರ್ಸೆಂಟ್ ಸತ್ಯ, ನಾವು ಬೇಕು ಅನಿಸಿದರೆ ಎಲ್ಲವನ್ನ ದಾಟಿ ಬರ್ತಾರೆ . ಬೇಡ ಅನಿಸಿದರೆ ಸಿಕ್ಕಿರೋ ಕಾರಣ ಮುಂದೆ ಇಟ್ಕೊಂಡು ದೂರ ಆಗ್ತಾರೆ . ಆಗ ನಮ್ ಪಾಡು ನಾಯಿ ಪಾಡು .
ಹೌದಾ , ಸೊ ಸ್ಯಾಡ . ಸಾರಿ ಅಭಿ ಹಳೇದೆಲ್ಲ ಕೆದಕಿ ನಿನಗೆ ಬೇಜಾರ್ ಮಾಡದೆ . ಇಟ್ಸ್ ಓಕೆ ರಮ್ಯ , ನೊ ಪ್ರಾಬ್ಲಮ್ . ಕ್ಷಣ ಕಾಲ ಇಬ್ಬರ ನಡುವೆ ಗಾಢವಾದ ಮೌನ . ನಂತರ ಮೌನ ಮುರಿದ ರಮ್ಯ
ಓಕೆ , ಆಗಿದ್ದ ಆಯ್ತು ಸಮಧಾನ ಮಾಡ್ಕೋ, ಎಲ್ಲ ಹುಡುಗ ಹುಡುಗಿಯರೂ ಹೀಗೀರಲ್ಲ ಬಟ್, ಇರೊ ಕೇಲವರಲ್ಲೇ ನಮ್ಮನ್ನ ತಗಲಾಕೊಂಡರೆ ಕಷ್ಟ . ಅದೆಲ್ಲವನ್ನ ಮೆಟ್ಟಿ ನಾವು ನಮ್ಮ ಬದುಕನ್ನ ಕಟ್ಟಿಕೊಬೇಕು .
ಸೊ , ನನ್ನ ನಿನ್ನ ಮದುವೆ ವಿಷಯ ಮನೇಲಿ ಯಾವಾಗ ತಿಳಿಸ್ತೀಯ ?
ಯಾಕೊ ಬೇಡ ಅನಿಸ್ತಿದೆ ರಮ್ಯ , ಇದನ್ನ ಇಲ್ಲಿಗೆ ಬೀಟ್ ಬಿಡೋಣ , ಎಂದ ಅಭಿ .
ರಮ್ಯ ಗೆ ಶಾಕ್ , ನಿನ್ನೆವರೆಗೂ ತಾನಾಗಿಯೇ ಕಾಡಿ ಬೇಡಿ ಪ್ರಪೋಸ್ ಮಾಡಿದ್ದ ಅಭಿ , ಇದ್ದಕ್ಕಿದ್ದ ಹಾಗೆ ಬೇಡ ಅಂತಿದಾನೇ .
ಯಾಕೆ ಅಭಿ ಏನಾಯ್ತು ? ಎಂದು ಕೇಳಿದಳು ರಮ್ಯ ಮೆಲು ಧ್ವನಿಯಲ್ಲಿ .
ನನ್ ಕಥೆ ನೀನ್ ಕೇಳಿದಿಯ , ನೀನ್ ಕಥೆ ನಾನ್ ಕೇಳಿದಿನಿ . ನಾಳೆ ಮದುವೆ ಆದ ಮೇಲೆ , ಏನೊ ಸಣ್ಣ ಪುಟ್ಟ ಕಲಹ ಬಂದಾಗ, ನೀನೇನ್ ಮಹಾ ನೀನ್ ಬಗ್ಗೆ ನನಗ್ ಗೊತ್ತಿಲ್ವ ? ಅಂತ ನಾ ನಿನಗ ಅನ್ನೋದು , ನೀ ನನಗ ಅನ್ನೋದು ಇದೆ ಆಗತ್ತೆ ಲೈಫು .
ಹಾಗಲ್ಲ ಅಭಿ , ಆಗ ನಮ್ಮಿಬ್ಬರಿಗೂ ಅರಿಯದ ಮನಸು , ಆತುರದ ವಯಸ್ಸು . ಸತ್ಯ ಯಾವುದು ಸುಳ್ಳು ಯಾವುದು ಅಂತ ಅರಿಯದೆ ಅಪ್ಪಿಕೊಂಡಿದ್ವಿ . ಆದ್ರೆ ಈಗ ಹಾಗಲ್ಲ , ಬೆಳೆದಿವಿ ಬಲ್ತಿವಿ , ಸತ್ಯ ಯಾವುದು ಸುಳ್ಳು ಯಾವುದು ಅಂತ ಗುರುತಿಸುವಷ್ಟು ಪ್ರಭುದ್ದರಾಗಿದಿವಿ . ಸೊ ನೀನ್ ಮೇಲೆ ನನಗೆ ನಂಬಿಕೆ ಇದೆ , ನೀನ್ ಜೊತೆ ಖುಷಿಯಾಗಿ ಇರ್ತೀನಿ ಅನ್ನೊ ವಿಶ್ವಾಸ ಇದೆ . ಅದೆ ನಂಬಿಕೆ ವಿಶ್ವಾಸ ನಿನಗೆ ನನ್ ಮೇಲೂ ಇದ್ರೆ , ಮದುವೆ ಆಗೋಣ ಇಲ್ಲದಿದ್ದರೆ ಬೇಡ ಎಂದಳು .
ಮಾತು ಮುಗಿಸಿ ಎದ್ದು ಹೊರಟಿದ್ದ ಅಭಿ ವಾಪಸ್ ಬಂದು , ರಮ್ಯ ಳನ್ನ ತಬ್ಬಿಕೊಳ್ಳುವ ಮೂಲಕ ಒಪ್ಪಿಗೆ ಸೂಚಿಸಿದ್ದ . ಮುಳುಗೋ ಸೂರ್ಯ ಒಂದ್ ಕ್ಷಣ ನಿಂತು ಮುದ್ದಾದ ಜೋಡಿಯ ನೋಡಿ ನಕ್ಕಿದ್ದ .
_ಶುಭಂ_
#ತುಂಬ ಕಾಯ್ಸಿದಿನಿ ಕ್ಷಮೆ ಇರಲಿ & ತಾಳ್ಮೆಯಿಂದ ಕಾಯ್ದು , ನೆಕ್ಷ್ಟ್ ಪಾರ್ಟ್ ಯಾವಾಗ ಅಂತ ಕೇಳಿ ಬರೆಸಿಕೊಂಡು ಓದಿದ ಎಲ್ಲರಿಗೂ ಧನ್ಯವಾದಗಳು
ಸಿದ್ದು . ತಾಂಬೆ
Super
ReplyDeleteSuper
ReplyDelete