ನಡು ರಸ್ತೆಯಲ್ಲಿ ಕೆಡವಿ ಚೂರಿ ಚುಚ್ಚಿದ
ಶುಕ್ರವಾರ ಸಂಜೆ ಹೊತ್ತಿಗೆ ಎಲ್ಲ ಆ ವೀಡಿಯೊ ವೈರಲ್ ಆಗಿತ್ತು , ಸ್ನೇಹಿತ ನೊಬ್ಬ ನನ್ನ ಮೊಬೈಲ್ ಗೂ ಕಳಿಸಿದ್ದ. ದೇವರಾಣೆ ಹೇಳ್ತೀನಿ wrong turn ಅನ್ನೊ ಭಯಾನಕ ಇಂಗ್ಲಿಷ್ ಸಿನಿಮಾ ನೋಡಿದಾಗೂ ನನಗಷ್ಟ ಭಯ ಆಗಿರಲಿಲ್ಲ . ಸಿನಿಮಾ ನೋಡುವಾಗ ಎಷ್ಟೇ ಕ್ರೂರ ದೃಶ್ಯ ವಾದರೂ ಒಂದು ಕ್ಷಣಕ್ಕೆ ಭಯ ಅನಿಸಿದರೆ , ಅಥವ ಅಯ್ಯೊ ಅನಿಸಿದರೆ ಇನ್ನೊಂದು ಕ್ಷಣಕ್ಕೆ ಅದು ನಿಜಾನೆನೊ ? ಸಿನಿಮಾ ಅದು ಅಂತ ಸುಮ್ಮನಾಗ್ತಿವಿ. ಆದ್ರೆ ಇದು ಕಥೆ ಅಲ್ಲ, ಕಲ್ಪನೆ ಅಲ್ಲ, ಸಿನಿಮಾ ಅಲ್ಲ, ಸತ್ಯ . ಎಲ್ಲೋ ದೂರದ ದೇಶದಲ್ಲಿ ನಡೇದದ್ದಲ್ಲ, ಇಲ್ಲೆ ನಮ್ಮ ಕರ್ನಾಟಕದ ಮಂಗಳೂರ ನಲ್ಲಿ ನಡೆದದ್ದು. ಹಾಡ ಹಗಲು , ನಡು ರಸ್ತೆ , ಇಪ್ಪತ್ತರ ತರುಣಿ ಅಸಹಾಯಕಳಾಗಿ ಅಂಗಲಾಚತೀದ್ದಾಳೆ, ಆತ ಛೇ ಬೆಡ ಬಿಡಿ ಮುಂದಿನದು ಹೇಳೋಕ್ ಆಗ್ತಿಲ್ಲ .
ಮೊದಲಿನಿಂದಲೂ ಒಂದ್ ಮಾತ್ ಇದೆ . ಗಂಡು ಮುಳ್ಳ ಇದ್ದ ಹಾಗೆ , ಹೆಣ್ಣು ಬಟ್ಟೆ ಇದ್ದ ಹಾಗೆ . ಬಟ್ಟೆ ಮುಳ್ಳಿನ ಮೇಲೆ ಬೀಳಲಿ , ಇಲ್ಲ ಮುಳ್ಳು ಬಟ್ಟೆ ಮೇಲೆ ಬೀಳಲಿ , ಹರೀಯೋದು ಬಟ್ಟೆನೇ . ಸೊ ಬಟ್ಟೆ ತನ್ನನ್ನ ತಾನು ಕಾಪಾಡಿಕೊಳ್ಳವ ಜಾಣ್ಮೆ ಮತ್ತು ತಾಳ್ಮೆ ಹೊಂದಿರಬೇಕು, ಇಲ್ಲವಾದಾಗ ಈ ಥರದ ಅನಾಹುತಗಳು ಆಗ್ತವೆ .
ಪ್ರೀತಿ, ಮದುವೇಯಂಥ ವಿಷಯದಲ್ಲಿ ಎಷ್ಟು ಎಚ್ಚರ ವಹಿಸಿದರೂ ಕಮ್ಮಿಯೇ . ಯಾಕಂದ್ರೆ ಅವು ಒಂದೆರಡು ದಿನದ ಬಾಂಧವ್ಯಗಳಲ್ಲ , ಜೀವದ ಜೋಡಿಗಳು. ಒಬ್ಬ ಹುಡುಗ ಒಬ್ಬಳು ಹುಡುಗಿಗೆ ಪ್ರಪೋಸ್ ಮಾಡ್ತಾನೆ . ಆಕೆ , ನನಗೆ ಎರಡ್ ದಿನ ಟೈಮ್ ಬೇಕು ಸಡನ್ ಆಗಿ ಈಗೆ ಏನೂ ಹೇಳೋಕ್ ಅಗಲ್ಲ ಅಂತಾಳೆ . ಒಂದಿಲ್ಲ ಎರಡ್ ದಿನ ಅಷ್ಟೇ , ಮೂರನೇ ದಿನಕ್ಕೆ ಬಂದು I love you too ಅಂತಾಳೆ . ಕೇವಲ ಎರಡ್ ದಿನದಲ್ಲಿ ಒಬ್ಬ ವ್ಯಕ್ತಿ ಬಗ್ಗೆ ಅತನ ವ್ಯಕ್ತಿತ್ವದ ಬಗ್ಗೆ , ಆತನ ಚರಿತ್ರೆ ಬಗ್ಗೆ ಆತನ ಚಾರಿತ್ರ್ಯದ ಬಗ್ಗೆ ತಿಳ್ಕೊಳೋಕ ಸಾದ್ಯಾನಾ . ಒಬ್ಬ ವ್ಯಕ್ತಿಯನ್ನ ನೀವ್ ನೋಡ್ತೀರ ಅಂದ್ರೆ , ನಿಮ್ಮ ದೃಷ್ಟಿಗೆ ಹೇಗೆ ಕಾಣ್ತಿದಾನೊ ಹಾಗೆ ನೋಡ್ತೀದಿರಾ ವಿನಹ ಅವನಿದ್ದ ಹಾಗೆ ನೋಡೋಕ ಸಾದ್ಯ ಇಲ್ಲ. ಹೇಗೆ ಅಂತೀರಾ , ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸಿಟ್ಟು ಸೆಡವು , ಕೋಪ ತಾಪ , ಕ್ರೌರ್ಯ ಕರುಣೆ , ಮೋಸ ಮಮಕಾರ ಎಲ್ಲ ಗುಣಗಳು ಇರ್ತಾವೆ. ಒಬ್ಬರಲ್ಲಿ ಸಿಟ್ಟ್ ಜಾಸ್ತಿ , ಒಬ್ಬರಲ್ಲಿ ಕರುಣೆ ಜಾಸ್ತಿ , ಹೀಗೆ ಪರ್ಸಂಟೇಜ ಹೆಚ್ಚು ಕಮ್ಮಿ ಇರಬಹುದು , ಆದ್ರೆ ಎಲ್ಲ ಗುಣಗಳೂ ಓಬ್ಬನಲ್ಲಿ ಅಡಕವಾಗಿರುತ್ತವೇ, ಸಮಯ ಸಂದರ್ಬನುಸಾರ ಆಚೆ ಬರ್ತವೆ . ಹೀಗಿರುವಾಗ ಅದ್ಹೇಗೆ ಒಬ್ಬ ವ್ಯಕ್ತಿಯನ್ನ ಒಳ್ಳೆಯವ ಕೆಟ್ಟವ ಅನ್ನೊ ಪಟ್ಟ ಕಟ್ಟುತಿರಿ ?
ಅದರಲ್ಲೂ ಹುಡುಗಿಯರ ನಂಬಿಕೆಗಳೆ ವಿಚಿತ್ರ. ನನ್ನದೇ ಒಂದ್ ಉದಾಹರಣೆ ಹೇಳ್ತೀನಿ ಕೇಳಿ . ಒಬ್ಳು xyz ಹುಡುಗಿ , ಪರಿಚಯ ಸ್ನೇಹ , ಸಣ್ಣ ಸಲುಗೆ ಒಂದಿಷ್ಟು ಮಾತು . ನಂತ್ರ ಒಂದಿನ ಫೋನ್ ಮಾತಾಡುವಾಗ ನಮ್ಮದು ನಿಮ್ಮದು ಕಾಸ್ಟ್ ಒಂದೆ ಇದ್ರ ನಾ ನಿಮ್ಮನ್ನೇ ಮದುವೆ ಆಗ್ತಿದ್ದೇ ಅಂದ್ಲು. ಅಂಥದು ನನ್ನಲ್ಲೇನೀದೆ ಅಂತ ಕೇಳದೆ . ನೀವ್ ತುಂಬ ಒಳ್ಳೇವರು ಯಾವುದೂ ಕೆಟ್ಟ ಹ್ಯಾಬಿಟ್ ಇಲ್ಲ , ಹಾಗೆ ಹೀಗೆ ಅಂತ ಅಂದ್ಲು . ಓಕೆ , ಒಂದ್ ಪ್ರಶ್ನೆ ಕೇಳ್ತೀನಿ . ನಾನ್ ಸಿಗರೇಟ್ ಸೇದತೀನೊ ಇಲ್ಲೋ ಅಂದೆ . ಅಯ್ಯೊ ಎಂತಹ ಮಾತು , ನೀವ್ ಸಿಗರೇಟ್ ಸೇದಲ್ಲ , ನಾನ್ ನಿಮ್ಮನ್ನ ನಾಲ್ಕ ವರ್ಷದಿಂದ ಬಲ್ಲೆ ಅಂದ್ಲು . ಗಾಡ್ ಪ್ರಾಮಿಸ್ ಅವತ್ತು ಅವಳ ಜೊತೆ ನಾನ್ ಮಾತಾಡ್ತಾ ಕುಳಿತಾಗ , ಬಲಗೈಯಲ್ಲಿ ಮೊಬೈಲ್ ಇದ್ರೆ ಎಡಗೈಯಲ್ಲಿ ಅರ್ಧ ಸುಟ್ಟ ಸಿಗರೇಟ್ ಇತ್ತು. ಇದರರ್ಥ ಸಿಗರೇಟ್ ಸೇದೋದು ಒಳ್ಳೇದೋ ಕೆಟ್ಟದ್ದೋ ಅಂತ ನಾನ್ ಚರ್ಚೆ ಮಾಡ್ತಿಲ್ಲ , ಹುಡುಗಿಯರು ನಂಬೋ ನಂಬಿಕೆಗಳ ಬಗ್ಗೆ ಮಾತಾಡ್ತೀದಿನಿ.
ಸೊ , ಅವರಿಬ್ಬರ ನಡುವೆ ನಿಜವಾಗಿ ಎನ್ ನಡೆದಿದೆ ನನಗ್ ಗೊತ್ತಿಲ್ಲ . ಆದ್ರೆ ಮಾದ್ಯಮಗಳಲ್ಲಿ ಬಿತ್ತರವಾದ ಸುದ್ದಿ ಪ್ರಕಾರ , ಆತ ಡ್ಯಾನ್ಸ್ ಟೀಚರ್ . ಈಗೆ ಮೂರು ವರ್ಷಗಳ ಹಿಂದೆ ಅವಳು ಡ್ಯಾನ್ಸ್ ಕಲಿಯಲು ಅವನ ಕ್ಲಾಸ್ ಗೆ ಜಾಯ್ನ ಆಗ್ತಾಳೆ. ಇಬ್ಬರ ನಡುವೆ ಪರಿಚಯ , ಪರಿಚಯದಿಂದ ಸಣ್ಣ ಸಲುಗೆ , ಸಲುಗೆಯಿಂದ ಪ್ರೀತಿ . ಇಬ್ಬರೂ ಪರಸ್ಪರ ಒಪ್ಪಿ ಮೂರು ವರ್ಷಗಳ ಕಾಲ ಪ್ರಿತಿಸಿಕೋಂಡಿದ್ದಾರೆ. ಹೀಗೆ ಎಲ್ಲವೂ ಚನ್ನಾಗಿರುವಾಗ ಇತ್ತೀಚೆಗೆ ಮಂಗಳೂರ ಲ್ಲಿ ರೌಡಿಗಳ ಮದ್ಯ ಒಂದು ಗ್ಯಾಂಗ್ ವಾರ್ ನಡಿಯತ್ತೆ, ಅದರಲ್ಲಿ ಆತ ಕೂಡ ಭಾಗಿಯಾಗಿದ್ದ . ವಿಷಯ ತಿಳಿದ ಆಕೆ, ನಿನ್ ಸರಿಯಿಲ್ಲ ರೌಡಿ , ನನಗಾಗಲ್ಲ , ಹಾಗೆ ಹೀಗೆ ಅಂತ ಕ್ಯಾತೆ ತಗೇದಿದ್ದಾಳೆ. ಆತ ಒಪ್ಪಿಸಲು ಪ್ರಯತ್ನಿಸಿದರೂ ಆಕೆ ಬ್ರೇಕಪ ವಿಷಯ ತಗೇದಾಗ ಈ ದುರ್ಘಟನೆ ನಡೆದಿದೆ .
ಇಲ್ಲಿ ತಪ್ಪು ಇಬ್ಬರದೂ ಇದೆ. ಆತನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ನಂಬಿದ್ದು ಆಕೆಯ ತಪ್ಪು , ಆಕೆ ನಂಬಿದ ನಂಬಿಕೆಯ ಉಳಿಸಿಕೊಳ್ಳದ್ದು ಆತನ ತಪ್ಪು .
ಇದನ್ನ ತಾಳ್ಮೆಯಿಂದ ಓದುತ್ತೀರೋ ನನ್ನೆಲ್ಲ ಅಕ್ಕ ತಂಗಿಯರಿಗೆ ಒಂದ್ ಕಿವಿ ಮಾತ್ ಹೇಳೋಕೆ ಇಷ್ಟ ಪಡ್ತೇನೇ ಕೇಳಿ . ಯಾರನ್ನೂ ಅಷ್ಟು ಸುಲಭವಾಗಿ ನಂಬಬೇಡಿ, ನಂಬಿ ಸಲುಗೆಯ ಸವಿ ತೋರಿಸಬೇಡಿ. ಒಬ್ಬ ಹುಡುಗ ಒಮ್ಮೆ ನಿಮ್ಮ ನಶೇಗೇ ಒಳಪಟ್ಟರೆ ಆತನಿಂದ ಬಿಡಿಸಿಕೊಳ್ಳೋದು ತುಂಬ ಕಷ್ಟ . ಯಾಕಂದ್ರೆ ನಿಮ್ಮ ಪೋಲಿ ಮಾತು, ಮೋಹಕ ನಗು, ಸಣ್ಣ ಪುಟ್ಟ ಸ್ಪರ್ಶ ಪ್ರತಿಯೊಂದೂ ಆತನಿಗೆ ನಶೆಯೇ . ಹುಟ್ಟುತ್ತಾ ಯಾರೂ ಗರ್ಲ್ ಫ್ರೆಂಡ್ ಸಾಂಗತ್ಯದಲ್ಲಿ ಬೆಳೆದಿರಲ್ಲಿ , ಆದ್ರೆ ವಯೋಸಹಜವಾಗಿ ಬಂದ ಅವಕಾಶಕ್ಕೆ ಅಡಿಕ್ಟ್ ಆಗಿರ್ತಾರೆ. ಗಾಂಜಾ , ಅಫೀಮು ನಂಥ ಡ್ರಗ್ಸ್ ಗೆ ಅಡಿಕ್ಟ್ ಆದೋರೀಗೆ ಹೊರ ತರೋಕೆ ಕೆಲ ಆಸ್ಪತ್ರೆ ಮತ್ತು ಮೆಡಿಸಿನ್ ಗಳಿವೆ . ಆದ್ರೆ ಈ ಲವ್ ಗೆ ಅಡಿಕ್ಟ್ ಆದೋರೀಗೇ ಆಚೆ ತರೋಕೆ ಯಾವ್ ಮೆಡಿಸಿನೂ ಇಲ್ಲ .
ಈ ಪ್ರೀತಿಯಲ್ಲಿ ಬಿದ್ದ ಹುಡುಗರಲ್ಲಿ ಅನೇಕ ಥರದ ಹುಡುಗರಿದಾರೇ . ಕೆಲವೊಬ್ಬರು ತಮ್ಮಷ್ಟಕ್ಕ ತಾವು ಒಬ್ಬ ಹುಡುಗಿಯನ್ನ ಮನಸಲ್ಲಿ ಇಟ್ಕೊಂಡು ಪ್ರೀತಿಸ್ತಾರೆ ಆಕೆಗೆ ಹೇಳೋದಿಲ್ಲ ಕೂಡಾ. ಕೆಲವೊಬ್ಬರು ಹೇಳ್ತಾರೆ , ಟೈಮ್ ಪಾಸ್ ಗಾಗಿ ಅಷ್ಟೇ ಮದುವೆ ಗೀದುವೇ ಇಲ್ಲ . ಕೆಲವೊಬ್ಬರು ಮದುವೆ ಅಂತ ಆದ್ರೆ ಇವಳನ್ನೇ ಅಂತ ಫಿಕ್ಸ ಆಗ್ತಾರೆ . ಮೊದಲನೆ ವರ್ಗದವರಿಂದ ನಿಮಗೆ ಯಾವ ತೊಂದ್ರೆ ಇಲ್ಲ , ಅವರ ಪಾಡಿಗೆ ಅವರು ಇರ್ತಾರೆ . ಇನ್ನು ಎರಡನೇ ವರ್ಗದವರಿಂದ ಕೂಡಾ ನಿಮಗೆ ತೊಂದ್ರೆ ಇಲ್ಲ , ಅವರು ಟೈಮ್ ಪಾಸ್ ಗಾಗಿ ನಿಮ್ ಹಿಂದೆ ಸುತ್ತುತೀರುತ್ತಾರೆ , ಮದುವೆ ವಿಷಯ ತಗೇದ್ರೇ ನಿಮಗಿಂತ ಮುಂಚೆ ಅವರೆ ಓಡಿ ಹೋಗ್ತಾರೆ . ಇನ್ನು ನಿಮಗೆ ಸಮಸ್ಯೆ ಇರೋದು ಮದುವೆ ಆದ್ರೆ ಇವಳನ್ನೇ ಅಂತ ಪ್ರೀತಿಸ್ತೀರತಾರಲ್ಲ ಅವರಿಂದ. ನಿಮಗೂ ಅವರಿಗೂ ಸರಿ ಹೋದ್ರೆ ಹೋಯ್ತು ನೊ ಪ್ರಾಬ್ಲಮ್ , happy ending . ಆದ್ರೆ ಮದ್ಯದಲ್ಲಿ ಏನಾದರೂ ಪ್ರಾಬ್ಲಮ್ ಆಗಿ ಬ್ರೇಕಪ ಮಾಡ್ಕೊತೀನಿ ಅಂದ್ರೆ ನೊ ಚಾನ್ಸ್ , ತುಂಬ ಕಷ್ಟ . ಅವರು ತಾವೂ ಬದುಕಲ್ಲ , ನಿಮ್ಮನ್ನೂ ಬದೂಕಕ್ಕ ಬಿಡಲ್ಲ . ಅಮಾಯಕ ಹುಡುಗಿಯ ಮೇಲೆ ಆಸಿಡ್ ದಾಳಿ, ಪ್ರಿಯತಮ ನಿಂದ ಪ್ರೇಯಸಿಗೆ ಚೂರಿಯಿಂದ ಈರೀತ ಅಂತ ಟೀವಿ ಲಿ ನ್ಯೂಜ಼ ಆಗೊ ಮುಂಚೆ ಎಚ್ಚೆತ್ತಕೊಳ್ಳಿ .
ವಿವರಣೆ ಸ್ವಲ್ಪ ಲಾಂಗ್ ಆಯ್ತು , ತಾಳ್ಮೆಯಿಂದ ಓದಿದಕ್ಕೆ ಥ್ಯಾಂಕ್ಸ್ . & ಸದ್ಯಕ್ಕ ಇಷ್ಟ ಸಾಕು ಮತ್ತೆ ನೆಕ್ಷ್ಟ್ ಬ್ಲಾಗ್ ನಲ್ಲಿ ಸಿಗ್ತೀನಿ ಬೈ . .
ಸಿದ್ದು . ತಾಂಬೆ .
😊 👍
ReplyDeleteNice
ReplyDeleteAnna swlpa varshgal hinde ne nin sikidre Nan life tumba chennagi iratittu Anasateti 🥲
ReplyDelete