ಹಣ್ಣಿನ ಕತಿ

ಒಂದು ಹಣ್ಣಿಗಿ ತಾನು ಗಿಡದಾಗ ಇರುವಸ್ಟು ದಿನಾನೂ ಗಿಡದ ಬೆಲೆ ಅದಕ್ಕ ಗೋತ್ತಿರಾಂಗಿಲ್ಲ. ಹಣ್ಣಾದ ಮರುಕ್ಷಣ ನಾ ಉದುರಿ ನೆಲಕ್ಕ ಬೀಳಬೇಕು, ಉಳಕೊಂತ -ಉಳಕೊಂತ  ಜಗತ್ತೆಲ್ಲ ಸುತ್ತಬೇಕು ಅಂತ ವಿಚಾರ ಮಾಡ್ತಿರ್ತದ. ಹಂಗ , ತನ್ನಿಚ್ಛೆಯಂಗ ಹಣ್ಣಾದ ಮರುಕ್ಷಣ ಗಿಡದಿಂದ ಜಾರಿ ನೆಲಕ ಬೀಳ್ತದ.
ಬಿದ್ದ ಹಣ್ಣನ್ನ ಒಬ್ಬ ಬಂದು ಎತ್ತಿ, ಮೈಗಿ ಹತ್ತಿದ ಮಣ್ಣ ಒರಿಸಿ, ಒಂದು ಸ್ವಚ್ಛ ಬುಟ್ಯಾಗ ಇಟ್ಟ . ಹಣ್ಣಿಗಿ ಭಾಳ ಖುಷಿ ಆತು. ಆಮ್ಯಾಲ ಅಂವ ಹಣ್ಣಿನ ಬುಟ್ಟಿ ತಲಿ ಮ್ಯಾಲ ಹೊತ್ಕೊಂಡು ಸಿಟಿ ಮರ್ಕಟಿಗಿ ಬಂದ. ದಿನಾ ಅದೆ ಎಲಿ-ಹೂವ , ಗಾಳಿ -ಧೂಳ ನೋಡಿ ಬ್ಯಾಸ್ರಾಗೀತ್ತು ಹಣ್ಣಿಗಿ.  ಈ ದೊಡ್ಡ ಊರ, ಎತ್ತರ ಕಟ್ಟಡ ,  ನಮುನಿ - ನಮುನಿ ವಾಹನ, ಈ ಹೊಸಾ ಲೋಕ ನೋಡಿ ಭಾಳ ಅಂದ್ರ ಭಾಳ ಖುಷಿ ಆತು. ಗಿಡದಿಂದ ಜಾರಿ ಬಿದ್ದು ಛಲೊ ಮಾಡಿದ್ನೀ ಅಂತು .
ಆತ ಮಾರುಕಟ್ಟೆಯಲ್ಲಿ ಮಾರಾಕ ಇಟ್ಟ. ಒಬ್ಬ ಗಿರಾಕಿ ಬಂದ , ಹತ್ತು ರೂಪಾಯಿ ಕೊಡ್ತೀನಿ ಕೊಡು ಅಂದ. ಮತ್ತೊಬ್ಬ ಬಂದ , ನಾ ಇಪ್ಪತ್ತು ಕೊಡ್ತೀನಿ ಕೊಡು ಅಂದ . ಹಣ್ಣಿಗಿ ಅಶ್ಚರ್ಯ, ಇವ್ರೆಲ್ಲಾ ನನಗ ಎಸ್ಟ್ ಕಿಮ್ಮತ ಕೊಡ್ತಾರಲ್ಲಾ ಅಂತ,  ಹಂಗ ಆನಂದ. ಮೂರನೇ ಗಿರಾಕಿ ಮೂವತ್ತು ರೂಪಾಯಿ ಕೊಟ್ಟು ಮನಿಗಿ ತಂದ. ಸಾಗವಾನಿ ಕಟಗಿದು ಡೈನಿಂಗ್ ಟೇಬಲ್ ಮ್ಯಾಲ, ಒಂದು ಬೆಳ್ಳಿ ಪ್ಲೇಟ್ ಒಳಗ ಈ ಹಣ್ಣಿಗಿ ಇಟ್ಟ . ಆ ಕ್ಷಣಕ್ಕ ಹಣ್ಣಿಗಿ ಆದ ಸಂತೋಷ ಹೇಳಾಕ ಅದಕ್ಕ ಪದಾನ ಇರ್ಲಿಲ್ಲ ,  ಅಟ್ಟು ಖುಷಿ ಪಟ್ಟತು, ಗಿಡಕ್ಕ ಮರೀತು .
ಸ್ವಲ್ಪ ಹೊತ್ತಿನ ಮ್ಯಾಲ. ರೊಕ್ಕ ಕೊಟ್ಟ ಎನ್ ತಂದಿದ್ನಲ್ಲ ಅಂವ, ಹಣ್ಣಿಗಿ ಕೊಯ್ದು ತೀನ್ಬೇಕಂತ ಕೈಯಾಗ ಹಿಡದು ಚಾಕು ಚುಚ್ಚದ. ಅವಾಗ ಹಣ್ಣಿಗಿ ಎದಿ ವಡದಂಗೈತು. ಗಿಡ -ಟೊಂಗೆ, ಎಲಿ -ಹೂವ ಎಲ್ಲಾ ನೆನಪಾದ್ವು, ಆದ್ರ ದಾರಿ ಭಾಳ ದೂರ ಬಂದಿತ್ತು. ಚುಚ್ಚಬ್ಯಾಡೋ ಚುಚ್ಚಬ್ಯಾಡೋ ಅಂತ ಹಣ್ಣ ಚೀರಾಕತ್ತು. ನೀವೆಲ್ಲ ಕೊಡೊ ಪ್ರೀತಿ ಗೌರವದ ಹಿಂದ ಹಸಿವ ಅದ ಅಂತ ಗೊತ್ತಿದ್ದಿದ್ರ, ನಾ ಗಿಡ ಬಿಟ್ಟು ಕೆಳಗ ಇಳಿತಿರ್ಲೀಲ್ಲ ಅಂತು . ಹೊಟ್ಟಿ ಹಸಿದು ಕೈಯಾಗ ಹಣ್ಣ ಹಿಡಿದವನಿಗಿ ಅದರ ಅರಚಾಟ ಎಲ್ಲಿ ಕೇಳಬೇಕು.? ಹಣ್ಣಿನ ಕತಿ ಮುಗೀತು .
ನಿಮಗ ಇಷ್ಟ ಆದ್ರ ಇತರರಿಗೂ ಹಂಚ್ರಿ , ಅವರೂ ಹಣ್ಣಿನ ಸವಿ ಸವಿಲಿ ...__ಸಿದ್ದು ತಾಂಬೆ 

Comments

Post a Comment

Popular posts from this blog

ಆರು ತಿಂಗಳ ಆಯಸ್ಸಿನ ಪ್ರೀತಿ..

ಲವ್ ಈಸ್ ಬ್ಲೈಂಡ್ (kannada article)

ಲೇಡಿ ದೇವದಾಸ