ಜಿಂದಗಿ ಏಕ್ ನಶೆ ಹೈ
ದೇವರು ನನಗ ಕೊಟ್ಟೀರೊ ಒಂದ್ ವರ ಏನು ಅಂದ್ರೆ ನೈಟ್ ಟ್ಯಾಬ್ಲೆಟ್ ತಗೊಳಿಲ್ಲ ಅಂದ್ರೆ ನಿದ್ದೆ ಬರಲ್ಲ. ಆದ್ರೂ ಕೆಲವೊಮ್ಮೆ ಊಠ ಸರಿ ಆಗಿಲ್ಲ ಅಂದ್ರೆ, ಟೈಮ್ ಮೀರದ್ರೆ, ಇಲ್ಲ ಬೇರೆ ಊರಿಗೆ ಹೊಗಿದ್ರೆ ಮಿಸ್ಸ್ ಅಗತ್ತೆ. ಅವತ್ತು ಮಿನಿಮಮ್ ಬೆಳಗಿನ ಜಾವ ಮೂರರವರೆಗೆ ನಂದೆ ರಾತ್ರಿ. ಹಾಗೆ ನಿದ್ದೆ ಬರ್ತಿಲ್ಲ ಅಂತ ಯಾರಿಗೂ ಕಾಲ್ ಮಾಡಿ ಮೆಸೆಜ್ ಮಾಡಿ ತಲೆ ತಿನ್ನಲ್ಲ. ಕೆಲವು ಪುಸ್ತಕಗಳಿವೆ,ಯೊಗರಾಜ್ ಭಟ್ಟರ "ಮನಸಾರೆ" ದಂಥಹ ಸಿನಿಮಾಗಳಿವೆ, ನನ್ನದೆ ಆದ ಕೆಲ ನಗು ಅಳುವುಗಳೊಂದಿಗೆ ಇತ್ತಿಚೆಗೆ ಒಂದ್ ಮೀನು ಸಹ ಜೋತೆಯಾಗಿದೆ, ಸೊ ರಾತ್ರಿ ಸದ್ದಿಲ್ಲದೆ ಸತ್ತು ಹೋಗ್ತದೆ. ಇದೆಲ್ಲ ನಾನು ಯಾರದೊ ಸಿಂಪತಿಗೋಸ್ಕರ ಹೇಳ್ತಿಲ್ಲ, ಕಾರಣ ಇಷ್ಟೆ ಇವತ್ತೂ ಟ್ಯಾಬ್ಲೆಟ್ ಮಿಸ್ಸ್ ಆಗಿದೆ. ಮತ್ತೆ ಮನಸಾರೆ ಫಿಲಮ್ ನೋಡದೆ, ಮೀನಿನ ಜೊತೆ ಆಟ ಆಡದೆ, ಒಂದ್ ನಾಲ್ಕಾರ್ ಪುಟ ಪುಸ್ತಕನೂ ಓದದೆ, ಬಟ್ ಮೂರ್ ಗಂಟೆ ಆಯ್ತು ನಿದ್ದೆ ಬರ್ತಿಲ್ಲ. ಒಂದ್ ಬ್ಲಾಗ್ ಪೋಸ್ಟ್ ಬರೆದ್ರೆ ಆಯ್ತು ಅಂತ ಲ್ಯಾಪ್ ಟಾಪ್ ತಕ್ಕೋಂಡ್ ಕೂತಿದಿನಿ. ಪುರಾಣ ಸಾಕು ವಿಷ್ಯಕ್ ಬರ್ತಿನಿ ಓಕೆ .
ಐ ಪಿ ಎಲ್ ಮ್ಯಾಚ್ ನಡಿದಿರ್ತದೆ, ಫಸ್ಟ್ ಬ್ಯಾಟಿಂಗ್ ನವರು 140 ಇಲ್ಲ್ 160 ರನ್ ಗೆ ಆಲ್ ಔಟ್ ಆದ್ರೆ , ಸೆಕೆಂಡ್ ಬ್ಯಾಟಿಂಗ್ ನವರು ಅರಾಮಾಗಿ ಹೊಡಿತಾರೆ, ಗೆಲ್ತಾರೆ. ನೋಡೊಕೆ ಎನ್ ಕಿಕ್ ಇರ್ತದೆ ಹೇಳಿ. ಅದೆ , ಫಸ್ಟ್ ಬ್ಯಾಟಿಂಗನವರು 180 ಕ್ರಾಸ್ ಮಾಡಿ , ಸೆಕೆಂಡ್ ಬ್ಯಾಟಿಂಗನವರದು ಪವರ್ ಪ್ಲೆ ನಲ್ಲೆ ಎರಡ್ ವಿಕೆಟ್ ಬಿದ್ರೆ ? ಯಾರ್ ಗೆಲ್ತಾರೊ ಯಾರ್ ಸೊಲ್ತಾರೊ ಗೊತ್ತಿಲ್ಲ, ಬಟ್ ನೋಡೊರ್ಗೆ ಎಂಥ ಕಿಕ್ ಅಲಾ ?
ಒಂದ್ ಆಟದಲ್ಲಿ ಈ ಥರ ಕಿಕ್ ಹುಡುಕೊ ನಾವು, ನಮ್ಮ ಜೀವನದಲ್ಲಿ ದಿನನಿತ್ಯ ಎದುರಾಗೊ ಅದೆಷ್ಟೋ ಕಿಕ್ ಗಳನ್ನ ಅನ್ಯಾಯವಾಗಿ ಮಿಸ್ಸ್ ಮಡ್ಕೊತಿವಿ. ಎದುರಾಗೊ ಸಣ್ಣ ಪುಟ್ಟ ಸೋಲುಗಳಿಗೆ ಸುಸ್ತಾಗ್ತಿವಿ. ಒಳ್ಳೆ ಕಾಲೇಜ್ ಸಿಕ್ಕಿಲ್ಲ ಅಂತ, ಪರೀಕ್ಷೆ ಸರಿ ಆಗಿಲ್ಲ ಅಂತ, ರಿಜಲ್ಟ್ ಕಮ್ಮಿ ಆಯ್ತು ಅಂತ, ತಕ್ಕನಾದ ಜಾಬ್ ಸಿಕ್ಕಿಲ್ಲ ಅಂತ, ಅಷ್ಟೆ ಯಾಕೆ ಹುಡುಗಿ ಸಿಕ್ಕಿಲ್ಲ ಅಂತ ,ಸಿಕ್ರೆ ಒಪ್ಪಿಲ್ಲ ಅಂತ, ಇಪ್ಪತ್ತೆಂಟ ಆದ್ರೂ ಮದುವೆ ಆಗಿಲ್ಲ ಅಂತ, ಮದುವೆ ಆದ್ರು ಹೆಂಡತಿ ಹೊಂದ್ಕೊತಿಲ್ಲ ಅಂತ, ಒಂದಾ ? ಎರೆಡಾ ? . ಇದನ್ನೆ ಸ್ವಲ್ಪ ರಿವರ್ಸ್ ಆಗಿ ಹೇಳ್ತಿನಿ ಕೇಳಿ. ಇಪ್ಪತ್ಮೂರಕ್ಕೆ ಡಿಗ್ರಿ ಮುಗಿದು, ಇಪ್ಪತ್ತೈದಕ್ಕೆ ನೌಕ್ರಿ ಸಿಕ್ಕು, ಇಪ್ಪತ್ತೆಳಕ್ಕೆ ಮದುವೆ ಆಗಿ, ಮೂವತ್ತು ಅನ್ನುವಷ್ಟರಲ್ಲಿ ಒಂದೊ ಎರಡೊ ಮಕ್ಕಳ ತಂದೆ ಆದ್ರೆ, ಕಿಕ್ ಏನ್ ಬಂತು ಬದನೆಕಾಯಿ. ಅಡ್ವಾನ್ಸ್ ಆಗಿ ಕಥೆ ಬರೆದಿಟ್ಟು ನಮ್ ಸಿನಿಮಾ ನಾವೆ ಡೈರೆಕ್ಟ್ ಮಾಡ್ಕೊಂಡ ಹಾಗೆ . ಪರಿಕ್ಷೆ ಚನ್ನಾಗಿ ಆಗ್ಲಿಲ್ವಾ ? ಬಿಟ್ಟಾಕಿ . ನೆಕ್ಸ್ಟ್ ಟೈಮ್ ಚನ್ನಾಗ್ ಮಾಡ್ರಿ. ಬರೊ ಪರಿಕ್ಷೆಯನ್ನ ನಾನ್ ಚನ್ನಗಿ ಬರೆದು ಕಳೆದ ಸರ್ತಿಕಿಂತ ಹೆಚ್ಚಿನ ಮಾರ್ಕ್ಸ್ ತಗೊಬೇಕು ಅನ್ನೊ ಹಠದಲ್ಲಿ ಒನ್ ಹವರ್ ಎಕ್ಸ್ಟ್ರಾ ಓದೊಕೆ ಕೂಡ್ತಿರಲ್ಲ, ಅದರಲ್ಲಿರೊ ಕಿಕ್ಕೆ ಬೇರೆ.ಹೀಗೆ ಜೀವನದಲ್ಲಿ ಎದುರಾಗೊ ಪ್ರತಿ ಸೊಲಿನಿಂದ ಪಾಠ ಕಲಿತು ಅದನ್ನ ಮೆಟ್ಟಿ ನಿಲ್ಲೊ ಹಠಕ್ಕೆ ಬೀಳ್ತಿರಲ್ಲ ಅದರಂಥ ಕಿಕ್ ಮತ್ತೊಂದಿಲ್ಲ. ಗೆಲುವಲ್ಲಿ ಬರಿ ಖುಷಿ ಇದ್ರೆ , ಸೋಲಲ್ಲಿ ಕಿಕ್ ಇದೆ. ಸೊ, ಸೋಲಿನ ಪೆಟ್ಟು ತಿನ್ಬೇಕು ಮನುಷ್ಯ, ಆದ್ರೆ ಅದೆ ಸ್ಪೀಡ್ ಲ್ಲಿ ಎದ್ದು ನಿಲ್ಲೊ ಛಲ ತೋರಬೇಕು. ಯಾವತಾದ್ರೂ ನಿವು ಒಂದ್ ಹಾವನ್ನ ಹೊಡಿಯೊದು ನೋಡಿದ್ರೆ ನಿಮಗೆ ಬೇಗ ಹೊಳಿತದೆ. ಅದು ನೋಡಿ ಒಂದ್ ಎರಡು ಏಟಿಗೆ ನೆಲಕ್ಕೆ ಬೀಳಲ್ಲ. ಪ್ರತಿ ಏಟು ನೀವು ಹೊಡೆದಾಗ ಅದೆ ರಭಸದಲ್ಲಿ ಹೆಡೆ ಎತ್ತಿ ಭುಸ್ ಅನ್ನುತ್ತೆದೆ. ಯಾವಾಗ ನನಕಡೆಯಿಂದ ಸಾದ್ಯವಿಲ್ಲ ಅಂತ ಗೊತ್ತಾಗುತ್ತದೊ ಆಗ ನೆಲ ಕಚ್ಚುತ್ತೆ, ಆದ್ರೆ ಸಾವಿನ ಕೊನೆ ಕ್ಷಣದ ವರೆಗೂ ಹೋರಡುತ್ತದೆ ವಿನಹ , ಒಂದೆರಡು ಎಟಿಗೆ ಸಾಯಲ್ಲ .ಹಾಗೆ , ಫೇಲ್ ಆಗಬೇಕ, ಕೆಲಸ ಇಲ್ದೆ ಉಪವಾಸ ಅಲಿಬೇಕ, ಆದ್ರೆ ಸೋಲು ಕೊಡೊ ಎಟಿನಿಂದ ಎದ್ದು ನಿಲ್ಲೊ ಪ್ರಯತ್ನ ಮಾಡ್ತಿರಲ್ಲ, ಅದರಲ್ಲಿರೊ ಖುಷಿ ಐ ಮೀನ್ ಕಿಕ್ ಬೆರೆಲ್ಲೂ ಇಲ್ಲ. ಸಿಕ್ಕಿದ್ದೆ ಸಿರುಂಡೆ ಅಂತ ಕಣ್ಣಿಗೊತ್ಕೊಳ್ಳೊ ಅಲ್ಪತೃಪ್ತರಿಗೆ ಇದು ಅನುಭವಕ್ಕೆ ಬರಲ್ಲ. ಅಲ್ಪ ಸ್ವಲ್ಪ ಗೆಲುವು ದಕ್ಕಿಸಿಕೊಂಡರೂ, ಇನ್ನೂ ಎನರೆ ಇದಕ್ಕಿಂತ ಹೆಚ್ಚಿನದು ಸಾಧಿಸಬೇಕು ಅಂತ ಭುಸಗುಟ್ತಾರಲ್ಲ, ಅವರು ಜೀವನದ ಮತ್ತು ಜೀವನ ತಂದ್ದೊಡ್ಡುವ ಸೋಲುಗಳಲ್ಲಿನ ಸಂಪೂರ್ಣ್ ಕಿಕ್ ಅನುಭವಿಸ್ತಿರತಾರೆ. ಸೊ, ಸೋಲಿಗೆ ಹೆದರೆಬೇಡಿ, ಸಣ್ಣ ಪುಟ್ಟ ಗೆಲುವುಗಳಿಗೆ ನಿಮ್ಮ ಹೋರಾಟ ನಿಲ್ಲಿಸಬೇಡಿ. ಕೊನೆದಾಗಿ ಒಂದ್ ಹಿಂದಿ ಕವಿತೆ ಹೇಳ್ತಿನಿ ಕೇಳಿ....

"ಜಿಂದಗಿ ಏಕ್ ನಶೆ ಕೆ ಸಿವಾ ಕುಚ್ ನಹಿ
ತುಮ್ ಕೊ ಪೀನೆ ನ ಆಯೆ ತೊ ಮೈ ಕ್ಯಾ ಕರು"
ಸದಾ ಮತ್ತಲ್ಲೆ ತೆಲಾಡೊ ....ಸಿದ್ದು ತಾಂಬೆ.
ತುಮ್ ಕೊ ಪೀನೆ ನ ಆಯೆ ತೊ ಮೈ ಕ್ಯಾ ಕರು"
ಸದಾ ಮತ್ತಲ್ಲೆ ತೆಲಾಡೊ ....ಸಿದ್ದು ತಾಂಬೆ.
Super Ree
ReplyDeleteSuper anna
ReplyDeleteSo super sir
ReplyDelete