ಹಳೆ ಗರ್ಲ್ ಫ್ರೆಂಡ್ ನ್ನ ಬೈಬೇಡಿ ಪ್ಲೀಜ್
" ಹಳೆ ಗರ್ಲ್ ಫ್ರೆಂಡ್ ನ್ನ ಬೈಬೇಡಿ "
ಹೀಗೆ ಹೇಳಿದ ಜಗತ್ತಿನ ಮೊದಲ ಹುಡುಗ ಇರಬಹುದೆನೊ ನಾನು , ಯಾಕಂದ್ರೆ ಎಲ್ಲಿ ನೋಡಿದರಲ್ಲಿ ಎಲ್ಲ ಲವ್ ಫೇಲುವರ ಆದ ಹುಡುಗರ ಬಾಯಲ್ಲಿ ಬರೊ ಮಾತು ಅಂದ್ರೆ " ನನ್ನ ನಂಬಿಸಿ ಮೋಸ ಮಾಡದ್ಲು. ಬರ್ತಡೆ ಗೆ ಬಟ್ಟೆ ಕೊಡಿಸಿದಿನಿ , ಕಾಲೇಜ್ ಗೆ ಬುಕ್ಸ್ ಕೊಡಿಸಿದಿನಿ, ಕೇಳ್ದಾಗ ದುಡ್ಡ್ ಕೊಟ್ಟಿದೀನಿ, ಅವಳ ಫೇವರಿಟ್ ಹೀರೊ ಯಶ್ ಸಿನಿಮಾ ಫಸ್ಟ್ ಡೆ ಫಸ್ಟ್ ಶೋ ತೋರ್ಸಿದಿನಿ , ಹೆಸರಾಂತ ಹೋಟೆಲ್ ನಲ್ಲಿ ಡಿನ್ನರ್ ಗೆ ಕರ್ಕೊಂಡ್ ಹೋಗಿನಿ, ಇಷ್ಟ ದ ಪ್ಲೇಸ್ ಗೆ ಟ್ರಿಪ್ ಕರ್ಕೊಂಡ್ ಹೋಗಿದೀನಿ , ಹಾಕ್ಸಿರೋ ಮೊಬೈಲ್ ಕರೆನ್ಸಿ- ತಿನ್ಸಿರೋ ಪಾನಿ ಪೂರಿ ಲೆಕ್ಕ ಇಟ್ಟಿಲ್ಲ , ಇವಳಿಗಾಗಿ ಮನೇಲಿ ಜಗಳ ಮಾಡಿದೀನಿ , ಕೆಲ ಫ್ರೆಂಡ್ಸ್ ನ್ನ ದೂರ ಮಾಡ್ಕೊಂಡಿದಿನಿ, ಜೀವಕ್ಕಿಂತ ಹೆಚ್ಚು ಪ್ರೀತಿ ಮಾಡಿದೀನಿ", ಆದ್ರು ನನ್ನ ಬಿಟ್ಟು ದೂರ ಆದ್ಲು. ಉಫ್ ಒಂದಾ ಎರಡಾ ಹೀಗೆ ಬೆಳೀತಾ ನೆ ಹೋಗತ್ತೆ ಪಟ್ಟಿ .
ಸಾಲದು ಅಂತ ತೀರ್ಥ ಬಿಟ್ಕೊಂಡಾಗ , ರ . . . ಮು . . . ಸು . . . ಅನ್ನೊ ಎಲ್ಲ ನಾಮವಿಶೇಷಣಗಳ ಪ್ರಯೋಗ ನೂ ಆಗತ್ತೆ . ಕಂಡ ಕಂಡವರ ಮುಂದೆ ಅವಳ ಕ್ಯಾರೆಕ್ಟರ್ ಸರ್ಟಿಫಿಕೇಟ್ ಗೆ ಹೊಸ ಭಾಷೆ ಬರೀತೀರಿ . ಇದೆಲ್ಲ ಎಷ್ಟು ಸರಿ ಫ್ರೆಂಡ್ಸ್ ? ತಪ್ಪಲ್ವ ? ನಿಮ್ಮ ಕೋಪ ತಾಪ ತಪ್ಪು ಅಂತ ನಾನ್ ಹೇಳ್ತಿಲ್ಲ , ಆದ್ರೆ ಅದಕ್ಕೊಂದು ನೆಲೆ ಬೇಕಲ್ಲ, ಅರ್ಥ ಬೇಕಲ್ಲ. ಬಟ್ಟೆ ಕೊಡ್ಸಿರಿ ಬುಕ್ ಕೋಡ್ಸಿರಿ , ಊಟಾ ಮಾಡ್ಸಿರಿ ಸಿನಿಮಾ ತೋರ್ಸಿರಿ , ಅವಳನ್ನ ಖುಷಿ ಪಡ್ಸಿರಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿರಿ , ಓಕೆ . ಆದ್ರೆ ಅವಳಿಂದ ನಿಮಗೆ ಖುಷಿ ಸಿಕ್ಕಿಲ್ವ ? ಅವಳಿಂದ ನಿಮಗೆ ಪ್ರೀತಿ ಸಿಕ್ಕಿಲ್ವ ? ಒಮ್ಮೆ ಯೋಚಿಸಿ ನೋಡಿ .

ತನ್ನಷ್ಟಕ್ಕ ತಾನ್ ಅವಳು ಗೆಳತಿಯರ ಜೊತೆ ನಡ್ಕೊಂಡು ಬರುವಾಗ , ಅಪ್ಪಿ ತಪ್ಪಿ ಅವಳಿಗೆ ನೋಡಿ ಬೇಪ್ಪಾದಾಗ ಹೃದಯದ ಬಡಿತ ಏರಿಳಿತದಿಂದಾದ ಖುಷಿ . ಕ್ಲೀನ್ ಆಗಿ ಶೇವ್ ಮಾಡ್ಕೊಂಡು ಬಟ್ಟೆ ಗೆ ಇಸ್ತ್ರಿ ತಿಡಿಕೋಂಡು, ಅವಳು ಬರೊ ಸಮಯಕ್ಕಾಗಿ ಕಾಯ್ತಾ ಕೂಡೋ ಖುಷಿ. ಬೇಕು ಅಂತಾನೊ ಇಲ್ಲ ಆಕಸ್ಮಿಕ ನೊ ಅವಳು ನಿಮ್ಮ ಕಡೆ ನೋಡಿ ನಕ್ಕಾಗ ಸಿಗೊ ಖುಷಿ . ಅವಳಿಗೆ ಹೇಳದೆ ಕೇಳದೆ ನಿಮ್ಮ ಮನಸ್ಸಲ್ಲಿ ಅವಳ ಕುರಿತು ಹಣೇಯುವ ಕಲ್ಪನೆಗಳ ಖುಷಿ. ಒಪ್ಕೋತಾಳೋ ಇಲ್ವೋ ಅನ್ನೊ ತಳಮಳ ತರುವ ಖುಷಿ. I love U ಅನ್ನೊ ನಿಮ್ಮ ಮಾತಿಗೆ ಅವಳು, ನಾಳೆ ಯೋಚನೆ ಮಾಡಿ ಹೇಳ್ತೀನಿ ಅಂದಾಗ ರಾತ್ರಿಯಿಡಿ ನಿದ್ದೆ ಬರದೆ ನಾಳೆಗಾಗಿ ಕಾಯುವ ಖುಷಿ. ಒಪ್ಪಿದ ಮೇಲೆ ಅಬ್ಬ ಅನ್ನೊ ನಿಟ್ಟುಸಿರಲ್ಲಿ ಹಾರುವ ಖುಷಿ. ಒಂದೆ ಸಿಗರೇಟ್ ನಾಲ್ಕ ಜನರು ಬೈ ಟು ಸೇದುವಂತ ಸ್ನೇಹ ಇದ್ರೂ ನಾಳೆಯಿಂದ ಅವಳನ್ನ ನೋಡಬೇಡ ಅವಳು ನನ್ನ ಹುಡುಗಿ ಅಂತ ಬಿಲ್ಡಪ ಕೊಡೊ ಖುಷಿ, ಇವೆಲ್ಲ ಖುಷಿಗಳು ಅವಳಿಂದನೆ ಅಲ್ವಾ .
ಇನ್ನು ಪ್ರೀತಿ ವಿಷಯಕ್ಕೆ ಬರೋದಾದ್ರೆ.
ಕೆಲವೊಮ್ಮೆ ಮನೇಲಿ ಅಪ್ಪ ಅಮ್ಮನ ಮಾತೆ ಕೆಳದವಳು, ನೀವ್ ಹೇಳದರಿ ಅಂತ ತನ್ನ ಲೈಫ್ ಸ್ಟೈಲ್ ನಲ್ಲಿ ಕೊಂಚ ಬದಲಾವಣೆ ಮಾಡ್ಕೋತಾಳಲ್ಲ ಅದು ಏನು? ನೀವ್ ಪಾರ್ಕ್ ಗೆ ಕರೆದಾಗ ಇರಸುಮುರಸಾದ್ರು ನಿಮಗೆ ಬೇಜಾರ್ ಆಗಬಾರದು ಅಂತ ಮೈಗೆ ಮೈ ತಾಗಿಸಿ ಕುಡ್ತಾಳಲ್ಲ ಏನದು ? ಮನೇಲಿ ಏನರೇ ಸ್ಪೆಷಲ್ ತಿಂಡಿ ಮಾಡ್ದಾಗ ಡಬ್ಬಿ ಕಟ್ಕೊಂಡು ಬಂದು ತನ್ನ ಕೈಯ್ಯಾರ ತುತ್ತ ಮಾಡಿ ತಿನ್ನಿಸ್ತಾಳಲ್ಲ ಅದು ಏನು ? ನಿಮ್ಮ ಬರ್ತಡೆ ಗೆ ರಾತ್ರಿ ಹನ್ನೆರಡಕ್ಕೆ ಫಸ್ಟ್ ಕಾಲ್ ಮಾಡಿ ವಿಷ ಮಾಡೋದಲ್ಲದೇ , ಕೂಡಿಸಿಟ್ಟ ತನ್ನ ಪಾಕೆಟ್ ಮನಿಯಿಂದ ಚಂದನೆಯ ಗಿಪ್ಟ್ ಕೋಡ್ತಾಳಲ್ಲ ಏನದು ? ಸಣ್ಣ ಸಣ್ಣ ಜಗಳ ಆದಾಗ ಪುಟ್ಟ ಮಗುವಿನ ಹಾಗೆ ಬಿಕ್ಕಿ ತನ್ನ ತಪ್ಪು ಇರದಿದ್ರೂ ಸಾರಿ ಕೇಳ್ತಾ ನಿಮ್ಮ ಮಾತಗಾಗಿ ಹಾತೊರಿತಾಳಲ್ಲ ಅದು ಏನು ? ಸಂಶಯಗೊಂಡ ಅಮ್ಮ ತಿವಿದರೂ, ಅಪ್ಪ ಮಾತ್ ಬಿಟ್ಟರೂ, ತಮ್ಮ ತಂಗಿ ಡಿಸ್ಟೇನ್ಸ ಮೇಂಟೇನ ಮಾಡಿದರೂ , ನಿಮಗಾಗಿ ಒಂದಿಷ್ಟು ಟೈಮ್ ಮೀಸಲಿಡತಾಳಲ್ಲ ಏನದು ? ಊರ ಜಾತ್ರೇಲಿ, ಜನ ನೋಡ್ತಾರೆ ಬಿಡು ಅಂತ ಕೈ ಬಿಡಿಸಿಕೊಂಡರೂ, ತೊಟ್ಟಿಲ ಚಕ್ರದಲ್ಲಿ ಕೂತಾಗ ಭಯದ ನೆಪ ಮಾಡಿ, ಗಟ್ಟಿಯಾಗಿ ತಬ್ಬಿಕೊಂಡು ಜನೇವರಿಯ ಕೊರಿಯೊ ಚಳಿಗೆ ಹೊಸ ಅರ್ಥ ಕೊಡ್ತಾಳಲ್ಲ ಅದು ಏನು ? ಗಂಡಿನ ಕಡೆಯವರು ನೋಡೋಕೆ ಬಂದಾಗ , ಗಂಡಿನಲ್ಲಿ ಎಲ್ಲ ಕ್ವಾಲಿಟಿ ಇದ್ರೂ ರಿಜೆಕ್ಟ್ ಮಾಡಿ ಮಾರನೆ ದಿನ ನಿಮ್ ಹತ್ರ ಬಂದು ನಿನಿಲ್ದೇ ನಾನಿರಲ್ಲ ಅಂತ ಅಳ್ತಾಳಲ್ಲ ಏನದು ? ಎಲ್ಲವೂ ಪ್ರೀತೀನೆ ಅಲ್ವಾ ? ನಿಮ್ ಮೇಲೆ ಪ್ರೀತಿ ಇರದಿದ್ರೆ ಇದೆಲ್ಲ ಸಾದ್ಯನಾ ? ಸ್ವಲ್ಪ ಯೋಚನೆ ಮಾಡಿ ನೋಡಿ .
ನಿಮ್ಮನ್ನ ಮದುವೆ ಆಗಲಿಲ್ಲ, ಬಿಟ್ಟ ಹೋದ್ಲು ಓಕೆ . ಇಷ್ಟೆಲ್ಲ ನಿಮ್ಮನ್ನ ಹಚ್ಚಿಕೊಂಡ ಹುಡುಗಿ ನಿಮ್ಮಿಂದ ದೂರ ಆಗ್ತಾಳೆ ಅಂದ್ರೆ ಅದಕ್ಕೊಂದು ಬಲವಾದ ಕಾರಣ ಇರ್ಬೋದಲ್ಲ. ಜಾತಿ ಕಾರಣ ಇರಬಹುದು, ಅಂತಸ್ತಿನ ಕಾರಣ ಇರಬಹುದು , ಚಿಕ್ಕ ವಯಸಲ್ಲೇ ಸೋದರ ಮಾವನ ಮಗನ ಹೆಸರಿಟ್ಟ ಕಾರಣ ಇರಬಹುದು , ಅಡ್ಡ ಹಾದಿ ಹಿಡಿತೀದಿಯಾ ಅಂತ ಅಮ್ಮ ಗುಡಗಿರಬಹುದು , ನಾನ್ ಹೇಳಿದ ಹುಡುಗನ ಜೊತೆ ಮದುವೆ ಆಗಲಿಲ್ಲ ಅಂದ್ರೆ ವಿಷ ಕುಡೀತೀನಿ ಅಂತ ಅಪ್ಪ ಹೆದರಿಸಿರಬಹುದು, ಮುಂತಾದವು ಇರ್ತವೆ ಬಿಡಿ ನನಗ ಗೊತ್ತಿರೋದು ಇಷ್ಟೆ . ಒಂದ್ ವೇಳೆ ನಿಮ್ಮನ್ನ ಮೋಸ ಮಾಡಬೇಕು , ಬಿಟ್ಟ ಹೋಗಬೇಕು, ಅಂತ ಅವಳ ಮನಸಲ್ಲಿ ಇದ್ರೆ_ನಿಮಿಷ ಲೆಕ್ಕದಲ್ಲಿ ನಿಮಗಾಗಿ ಹಂಬಲಿಸಿ,ಗಂಟೆ ಲೆಕ್ಕದಲ್ಲಿ ನಿಮ್ ಜೊತೆ ಫೋನ್ ನಲ್ಲಿ ಮಾತಾಡಿ, ದಿನದ ಲೆಕ್ಕದಲ್ಲಿ ನಿಮ್ಮ ಜೊತೆ ಸುತ್ತಾಡ್ತಾ ವರ್ಷ ಕಳೆಯೋ ದರ್ದು ಅವಳಿಗೆನಿದೆ ?. ಪ್ರೀತಿಯ ನಾಟಕ ಆಡಿ, ಆಮೇಲೆ ದೂರ ಆಗಿ, ನಿಮ್ಮನ್ನ ಕೋರಗೀಸಬೇಕು ಅಂತ ಸ್ಕೆಚ್ ಹಾಕೋಕೆ , ನೀವೇನು "ಓಂ" ಸಿನಿಮಾದ ಶಿವರಾಜಕುಮಾರ ಅಲ್ಲ , ಅವಳು ಪ್ರೇಮಾ ಅಲ್ಲ, ನಿಮ್ ನಡುವೆ ಯಾವ ಹಳೆ ದುಷ್ಮನಿ ಇಲ್ವೆ ಇಲ್ಲ , ಇಬ್ಬರ ಮದ್ಯ ಇರೋದ್ ಒಂದೆ ಅದು ಅರಿಯದೆ ಆದ ಮರೆಯದಂತ ಪ್ರೀತಿ ಮಾತ್ರ.
ಅರ್ಥ ಮಾಡ್ಕೊಳ್ಳಿ ಉತ್ತರ ಸಿಗ್ತದೆ. ಪ್ರೀತಿ ದೂರ ಆಗಿದಕ್ಕೆ ಒಬ್ಬ ಗಂಡಸಾಗಿ ನಿಮಗೆ ಇಷ್ಟೊಂದು ದುಃಖ ಆಗಿರಬೇಕಾದರೆ, ಹೇಳಿ ಕೇಳಿ ಹೆಣ್ಣು ಕರಳು ಅದು ನೆಮ್ಮದಿಯಿಂದ ಇರ್ತದಾ ? ಚಾನ್ಸೇ ಇಲ್ಲ . ಅನಿವಾರ್ಯದ ಆಟಕ್ಕೆ ದಾಳ ಆಗಿರ್ತಾಳೆ ಅಷ್ಟೆ . ದಿನಾಲೂ ನಿಮ್ಮ ನೆನಪ ಆಗದೆ ಇರ್ಬೋದು , ಆದ್ರೆ ನಿಮ್ಮ ನೆನಪೆ ಆಗದಂತ ಬದುಕು ಅವಳಿಗೂ ಸಾದ್ಯವಿಲ್ಲ .
ಅದಕ್ಕೆ ನಾನ್ ಹೇಳಿದ್ದು ಹಳೆ ಗರ್ಲ್ ಫ್ರೆಂಡ್ ನ್ನ ಬೈಬೇಡಿ ಅಂತ . . .
ನಿಮಗೆ ನನ್ನ ಅನಿಸಿಕೆ ಸರಿ ಅನಿಸಿದರೆ , ಈ ಲಿಂಕ್ ನ್ನ ಇತರ ನಿಮ್ಮ ದೇವದಾಸ್ ಸ್ನೇಹಿತರಿಗೆ ಶೇರ್ ಮಾಡಿ . ನಮಸ್ಕಾರ ____ ನಿಮ್ಮ ಸ್ನೇಹಿತ , ಸಿದ್ದು ತಾಂಬೆ .
Super Bro nice article..
ReplyDeletethank U ಅಪ್ಪಿ
Delete